ದೇವರ ಮುಡಿಗೆ ಜೀವಮಾನ ಸಾಧನೆ ಗರಿ – ಸಚಿನ್ ತೆಂಡೂಲ್ಕರ್ ಜರ್ನಿಯೇ ರೋಚಕ   

ದೇವರ ಮುಡಿಗೆ ಜೀವಮಾನ ಸಾಧನೆ ಗರಿ – ಸಚಿನ್ ತೆಂಡೂಲ್ಕರ್ ಜರ್ನಿಯೇ ರೋಚಕ   

16ನೇ ವಯಸ್ಸಲ್ಲೇ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಸಚಿನ್ ಬರೀ ಬ್ಯಾಟರ್ ಆಗಿಯಷ್ಟೇ ಬೆಳೆಯಲಿಲ್ಲ. ಕೋಟಿ ಕೋಟಿ ಅಭಿಮಾನಿಗಳ ಮನಸ್ಸಲ್ಲೂ ನೆಲೆಯೂರಿದ್ದಾರೆ. ಕ್ರಿಕೆಟ್ ಪ್ರಿಯರಿಂದ ದೇವರ ಪಟ್ಟವೂ ಸಿಕ್ಕಿದೆ. 24 ವರ್ಷ ಕ್ರಿಕೆಟ್ ಆಡಿದ ಸಚಿನ್ ಒಂದು ಯುಗವನ್ನೇ ಸೃಷ್ಟಿಸಿದ್ದರು. ಹೀಗೆ ಇಂದಿಗೂ ಎಂದಿಗೂ ಎಂದಿಂದಿಗೂ ಕ್ರಿಕೆಟ್ ಲೋಕದ ಸುಲ್ತಾನನಾಗಿ ಕಾಣುವ ಸಚಿನ್​ಗೆ ಈಗ ಬಿಸಿಸಿಐನಿಂದ ಸಿಕೆ ನಾಯ್ಡು ಜೀವಮಾನದ ಸಾಧನೆ ಪ್ರಶಸ್ತಿ ಘೋಷಣೆಯಾಗಿದೆ.

ಇದನ್ನೂ ಓದಿ : PAK ಬಣ್ಣ ಬಯಲಿಗೆಳೆದ ಪತ್ರಿಕೆ – ಗಬ್ಬೆದ್ದ ಮೈದಾನಗಳಲ್ಲೇ ICC ಟೂರ್ನಿ

ಫೆಬ್ರವರಿ 1 ರಂದು ಅಂದರೆ ಇವತ್ತು ಬಿಸಿಸಿಐ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಜೀವಮಾನ ಸಾಧನೆ ಪ್ರಶಸ್ತಿಗೆ ಭಾಜನರಾಗಲಿದ್ದಾರೆ. ಮುಂಬೈನಲ್ಲಿರುವ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚಿನ್​ ತೆಂಡೂಲ್ಕರ್​ಗೆ ಬಿಸಿಸಿಐ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಿದೆ. ಕಳೆದ ವರ್ಷ ನಡೆದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರವಿಶಾಸ್ತ್ರಿ ಮತ್ತು ಮಾಜಿ ಅನುಭವಿ ವಿಕೆಟ್‌ಕೀಪರ್ ಫಾರೂಕ್ ಇಂಜಿನಿಯರ್ ಕರ್ನಲ್ ಸಿಕೆ ನಾಯುಡು ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ಸಚಿನ್ ಈ ಹಿಂದೆ ಭಾರತದ ಅತ್ಯುನ್ನತ ಗೌರವವಾದ ಭಾರತ ರತ್ನವನ್ನು ಪಡೆದಿದ್ದಾರೆ. ಅಲ್ದೇ ಅರ್ಜುನ್ ಪ್ರಶಸ್ತಿ, ಖೇಲ್ ರತ್ನ, ಪದ್ಮಶ್ರೀ, ಪದ್ಮವಿಭೂಷಣ ಮತ್ತು ಮಹಾರಾಷ್ಟ್ರ ಭೂಷಣ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಹಾಗೆಯೇ ಐಸಿಸಿ ಮತ್ತು ಬಿಸಿಸಿಐ ಕೂಡ ಸಚಿನ್‌ಗೆ ಹಲವು ಕ್ರೀಡಾ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

24 ವರ್ಷಗಳ ಸುದೀರ್ಘ ಅಂತರಾಷ್ಟ್ರೀಯ ಕ್ರಿಕೆಟ್​ ಅವಧಿಯಲ್ಲಿ ಸಚಿನ್ ತೆಂಡೂಲ್ಕರ್ ಹಲವರ ದಾಖಲೆಗಳನ್ನ ಪುಡಿಗಟ್ಟಿದ್ದಾರೆ. ಕ್ರಿಕೆಟ್​​ನಲ್ಲಿ ಅತಿ ಚಿಕ್ಕ ವಯಸ್ಸಿಗೇ ಕಣಕ್ಕೆ ಇಳಿದ ಸಚಿನ್ 175 ಟೆಸ್ಟ್​ ಕ್ಯಾಪ್​ಗಳನ್ನು ಧರಿಸಿದ ಅಸಾಮಾನ್ಯ ಆಟಗಾರ. ಮಾಸ್ಟರ್ ಬ್ಲಾಸ್ಟರ್ ತಮ್ಮ ಮೊದಲ ODI ಪಂದ್ಯವನ್ನು 1989 ರಲ್ಲಿ ಆಡಿದರು. ಆ ನಂತ್ರ 2011 ರ ವಿಶ್ವಕಪ್ ಗೆಲ್ಲುವವರೆಗೂ ಸಚಿನ್ ಭಾರತಕ್ಕಾಗಿ ಆಡಿದರು. 22 ವರ್ಷ 91 ದಿನಗಳ ದೀರ್ಘ ವೃತ್ತಿಜೀವನವನ್ನು ಯಾವುದೇ ಆಟಗಾರನಿಗೆ ಮುರಿಯುವುದು ಸುಲಭವಲ್ಲ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕಗಳ ಶತಕ ಬಾರಿಸಿದ ವಿಶ್ವದ ಏಕೈಕ ಆಟಗಾರ ಸಚಿನ್ ತೆಂಡೂಲ್ಕರ್. 100 ಶತಕಗಳನ್ನು ಗಳಿಸುವ ಮೂಲಕ ಸಚಿನ್ ಒಂದು ದೊಡ್ಡ ಇತಿಹಾಸವನ್ನು ಸೃಷ್ಟಿಸಿದ್ದಾರೆ, ಅಲ್ಲಿ ಯಾವುದೇ ಬ್ಯಾಟ್ಸ್‌ಮನ್ ಅವರನ್ನು ತಲುಪುವುದು ತುಂಬಾ ಕಷ್ಟ. ಇನ್ನು ವಿರಾಟ್ ಇಲ್ಲಿಯವರೆಗೆ 81 ಶತಕಗಳನ್ನು ಗಳಿಸಿದ್ದಾರೆ ಮತ್ತು ಇನ್ನೂ 19 ಶತಕಗಳು ಬಾಕಿ ಇವೆ. ಕೊಹ್ಲಿಗೆ ಇಂತಹ ದೊಡ್ಡ ಸಾಧನೆ ಮಾಡುವುದು ಸುಲಭವಲ್ಲ. ಹಾಗೇ ಕ್ಯಾಲೆಂಡರ್ ವರ್ಷದಲ್ಲಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಒಟ್ಟು 200 ಟೆಸ್ಟ್ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಇದನ್ನೂ ಕೂಡ ಬ್ರೇಕ್ ಮಾಡೋದು ಕಷ್ಟ ಇದೆ.

ಇನ್ನು ಸಚಿನ್ ಭಾರತದ ಪರ 1 ಟಿ20ಐ, ದಾಖಲೆಯ 200 ಟೆಸ್ಟ್ ಮತ್ತು 463 ಏಕದಿನ ಅಂದರೆ ಒಟ್ಟಾರೆಯಾಗಿ 664 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಟೆಸ್ಟ್‌ನಲ್ಲಿ 15,921 ರನ್, ಏಕದಿನದಲ್ಲಿ 18,426 ರನ್ ಗಳಿಸಿ ದಾಖಲೆ ಬರೆದಿದ್ದಾರೆ. ಸಚಿನ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕ ಸಿಡಿಸಿದ ದಾಖಲೆ ಕೂಡ ಇದೆ. ಈ ಕಾರಣಕ್ಕಾಗಿಯೇ ಬಿಸಿಸಿಐ ಅವರಿಗಾಗಿ ಈ ದೊಡ್ಡ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. 2013 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಮಾಸ್ಟರ್ ಬ್ಲಾಸ್ಟರ್ ತಮ್ಮ ವೃತ್ತಿ ಬದುಕಿನಲ್ಲಿ ಮುರಿಯಲಾಗದಂತಹ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಕ್ರಿಕೆಟ್ ಆಡೋದನ್ನ ಬಿಟ್ಟು ದಶಕವೇ ಕಳೆದ್ರೂ ಇಂದಿಗೂ ಸಚಿನ್​ರನ್ನ ಆರಾಧಿಸೋ ಕೋಟಿ ಕೋಟಿ ಫ್ಯಾನ್ಸ್ ಇದ್ದಾರೆ. ಇದೀಗ ಬಿಸಿಸಿಐನ ಜೀವಮಾನ ಸಾಧನೆ ಪ್ರಶಸ್ತಿ ಸಿಕ್ಕಿರೋದು ಅವ್ರು ಸಾಧನೆಗೆ ಮತ್ತೊಂದು ಗರಿಯಾಗಲಿದೆ.

Shantha Kumari

Leave a Reply

Your email address will not be published. Required fields are marked *