ಸ್ಟೂಡೆಂಟ್ ಜೊತೆ ಟೀಚರ್ ಮ್ಯಾರೇಜ್! ಪ. ಬಂಗಾಳದಲ್ಲಿ ನಿಜಕ್ಕೂ ನಡೆದಿದ್ದೇನು?
ಶಿಕ್ಷಕಿ ಯಡವಟ್ಟಿಗೆ ಇದೆಂಥಾ ಶಿಕ್ಷೆ?
ನೀವು ಈಗಾಗಲೇ ಈ ವಿಡಿಯೋವನ್ನ ನೋಡಿ ಇರ್ತೀರಾ.. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್‌ನಲ್ಲಿರೋ ವಿಡಿಯೋವಿದು.. ಶಾಲೆಯಲ್ಲೇ ಅದು ಶಿಕ್ಷಕಿ ವಿದ್ಯಾರ್ಥಿಯನ್ನ ಮದುವೆ ಆಗೋ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಇದನ್ನ ನೋಡಿದ್ರೆ ಜನ ಕ್ಯಾಕರಿಸಿ ಉಗಿಯುತ್ತಿದ್ದಾರೆ.. ಈಗಲೇ ಹೀಗಾದ್ರೆ ಮುಂದೆ ಹೇಗೆ ಅನ್ನೋದ್ರ ಬಗ್ಗೆ ಯೋಚನೆ ಮಾಡುತ್ತಾ ವಿಡಿಯೋವನ್ನ ಸಖತ್ ವೈರಲ್ ಮಾಡುತ್ತಿದ್ದಾರೆ. ಅಂದಹಾಗೇ ಪಶ್ಚಿಮ ಬಂಗಾಳ ರಾಜ್ಯದ ಹರಿಂಗರ್ ಕ್ಯಾಂಪಸ್‌ನಲ್ಲಿರುವ ಮೌಲಾನಾ ಅಬುಲ್ ಕಲಾಂ ಆಜಾದ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ ತರಗತಿಯಲ್ಲಿ ವಿವಾಹ ಸಮಾರಂಭ ನಡೆಯಿತು. ಸರಿ, ಮದುವೆಯಾಗಿದೆ ಎಂದು ಅಷ್ಟು ಸುಲಭವಾಗಿ ತಳ್ಳಿಹಾಕೋಕೆ ಆಗಲ್ಲ.. ಏಕೆಂದರೆ ಆ ಮದುವೆ ನಡೆದಿದ್ದು ವಿದ್ಯಾರ್ಥಿ ಮತ್ತು ಮುಖ್ಯ ಶಿಕ್ಷಕರಿಗೆ.. ಈ ವಿಚಿತ್ರ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ರಣಜಿಯಲ್ಲೂ KL ಆವರೇಜ್ ಸ್ಕೋರ್ – ಕಳಪೆ ಫಾರ್ಮ್ Or ರೆಸ್ಟ್ ಬೇಕೋ?
ಮದುವೆಗೆ ಇಬ್ಬರು ಸಾಕ್ಷಿಗಳ ಸಹಿಯೊಂದಿಗೆ ವಿಶ್ವವಿದ್ಯಾಲಯದ ಪ್ಯಾಡ್‌ನಲ್ಲಿ ಗಂಡ ಮತ್ತು ಹೆಂಡತಿಯ ಲಿಖಿತ ಒಪ್ಪಂದವಿದೆ ಅನ್ನೋದೇ ಇಲ್ಲಿ ಇಂಟ್ರಸ್ಟಿಂಗ್.. ಮದುವೆಯಂತ ವಿದ್ಯಾರ್ಥಿ ಮದುಮಗನಂತೆ ಶಿಕ್ಷಕಿ ವಧುವಿನಂತೆ ಅಲಂಕರಿಸಿ ಹಿಂದೂ ಸಂಪ್ರದಾಯದಂತೆ ಎಲ್ಲಾ ವಿಧಿವಿಧಾನಗಳನ್ನು ಅನುಸರಿಸಲಾಗಿದೆ.. ಮದುವೆಗೆ ಅವರೊಬ್ಬರೇ ಅಲ್ಲ.. ಅಲ್ಲಿ ಓದುತ್ತಿರುವ ವಿದ್ಯಾರ್ಥಿಗಳು, ಶಿಕ್ಷಕರೂ ಪಾಲ್ಗೊಂಡಿದ್ದರು. ಆಗ ವಿದ್ಯಾರ್ಥಿಯು ತನ್ನ ಮುಂದೆ ಮದುಗಳಾಗಿದ್ದ ಮುಖ್ಯ ಶಿಕ್ಷಕರ ಹಣೆಗೆ ಸಿಂಧೂರವನ್ನು ಹಚ್ಚಿದ್ದಾನೆ.. ಮಂಡಿಯೂರಿ ಕುಳಿತು ವಧುವಿಗೆ ಗುಲಾಬಿ ಹೂವನ್ನು ನೀಡಿದ್ದಾನೆ.. ಅದನ್ನು ತೆಗೆದುಕೊಳ್ಳುವಾಗ ಮುಖ್ಯ ಶಿಕ್ಷಕರು ನಾಚಿ ನೀರಾಗಿದ್ದಾರೆ. ಅಲ್ಲದೇ ಅಲ್ಲಿದ್ದ ಎಲ್ಲಾ ಶಿಕ್ಷಕರು ಕೂಡ ಚಪ್ಪಾಳೆಯನ್ನ ಹೊಡೆದಿದ್ದಾರೆ..
ಆದರೆ ಇದನ್ನೆಲ್ಲಾ ನೋಡಿ ಇವರಿಬ್ಬರೂ ನಿಜವಾಗಲೂ ಮದುವೆಯಾಗಿದ್ದಾರೆ ಎಂದುಕೊಂಡರೆ ತಪ್ಪು.. ಅಂದ್ಹಾಗೆ ಇವರಿಬ್ಬರೂ ನಿಜಕ್ಕೂ ಮದುವೆ ಆಗಿದ್ದಾರಾ ಎಂದರೆ ಇಲ್ಲ ಎಂದು ವಿವಿ ಹೇಳಿದೆ. ಇದು ಒಂದು ನಾಟಕ ಅಂತ ಹೇಳಲಾಗುತ್ತಿದೆ. ನಾಟಕದ ರೂಪದಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸುವ ಉದ್ದೇಶದಿಂದ ಇದನ್ನು ತಮಾಷೆಗಾಗಿ ಮಾಡಲಾಗಿದೆ ಎಂದು ಮಹಿಳಾ ಶಿಕ್ಷಕಿ ಹೇಳಿದ್ದಾರೆ. ವಿಡಿಯೋ ವೈರಲ್ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ವಿವಿ, ಇದೊಂದು ಪ್ರಾಜೆಕ್ಟ್ಗೆ ಸಂಬಂಧಿಸಿದ ನಾಟಕ ಅಷ್ಟೇ. ನಾಟಕ ರೂಪದಲ್ಲಿ ಮಕ್ಕಳಿಗೆ ಮಾನಸಿಕ ಶಿಕ್ಷಣ ಕೊಡಿಸುವ ಉದ್ದೇಶದಿಂದ ಇದನ್ನು ತಮಾಷೆಯಾಗಿ ಮಾಡಲಾಗಿದೆ ಎಂದು ವಿವಿ ಹೇಳಿದೆ. ಕೆಲವರು ಉದ್ದೇಶಪೂರ್ವಕವಾಗಿ ನಾಟಕದ ಒಂದು ಭಾಗವನ್ನು ಮಾತ್ರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಘಟನೆ ಕುರಿತು ಉನ್ನತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ವಿವಾದ ಸೃಷ್ಟಿಯಾಗಿರುವುದರಿಂದ ಸಮಿತಿಯು ತನ್ನ ವರದಿಯನ್ನು ಸಲ್ಲಿಸುವವರೆಗೆ ಪ್ರಾಧ್ಯಾಪಕಿಗೆ ಕಡ್ಡಾಯ ರಜೆಯ ಮೇಲೆ ತೆರಳುವಂತೆ ಸೂಚಿಸಲಾಗಿದೆ. ತನಿಖಾ ಸಮಿತಿಯು ವಿವಿಧ ವಿಭಾಗಗಳ ಮೂವರು ಮಹಿಳಾ ಅಧ್ಯಾಪಕರನ್ನು ಒಳಗೊಂಡಿದೆ. ಅವರು ನೀಡಿದ ವರದಿಯ ನಂತರ ಇದು ಸಂಪೂರ್ಣವಾಗಿ ಶೈಕ್ಷಣಿಕ ಚಟುವಟಿಕೆ ಆಗಿದೆಯೇ ಹಾಗೂ ಶಿಸ್ತು ಕ್ರಮದ ಅಗತ್ಯವಿದೆಯೇ ಎಂಬುದನ್ನು ನಿರ್ಧರಿಸುತ್ತೇವೆ ವಿವಿ ಹೇಳಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಕಳೆದೆರಡು ದಿನಗಳಿಂದ ಸಖತ್ ಸುದ್ದಿಯಲಿದೆ. ಬೆಳ್ಳಗೆ ಇರೋದ್ ಅಲ್ಲ ಹೇಗೆ ಹಾಲಲ್ಲ ಅಂತ ಹೇಳ್ತಾರೋ ಹಾಗೇ ಸೋಷಿಯಲ್ ಮೀಡಿಯಾದಲ್ಲಿ ಬರೋದೆಲ್ಲ ನಿಜವಲ್ಲ.. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯವನ್ನ ಕಮೆಂಟ್ ಮೂಲಕ ತಿಳಿಸಿ. ನಮಸ್ಕಾರ..