ಒಬ್ಬನಿಗಾಗಿ ಕಾದು ಕುಳಿತ PAK.. ಟೀಂ ಅನೌನ್ಸ್ ಗೂ ಭಯ – ಚಾಂಪಿಯನ್ಸ್ ಟ್ರೋಫಿ ಆಡೋರೇ ಇಲ್ವಾ?

ಒಬ್ಬನಿಗಾಗಿ ಕಾದು ಕುಳಿತ PAK.. ಟೀಂ ಅನೌನ್ಸ್ ಗೂ ಭಯ – ಚಾಂಪಿಯನ್ಸ್ ಟ್ರೋಫಿ ಆಡೋರೇ ಇಲ್ವಾ?

ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು 8 ರಾಷ್ಟ್ರಗಳು ಭಾಗವಹಿಸಲಿವೆ. ಎ ಗುಂಪಿನಲ್ಲಿ ಬಾಂಗ್ಲಾದೇಶ, ಭಾರತ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳಿವೆ. ಹಾಗೇ ಬಿ ಟೀಮ್​ನಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಸೌತ್ ಆಫ್ರಿಕಾ ಟೀಮ್​ಗಳಿವೆ. ಫೆಬ್ರವರಿ 19ರಿಂದ ಟೂರ್ನಿ ಆರಂಭವಾಗಲಿದ್ದು, ಮಾರ್ಚ್ 9ಕ್ಕೆ ಫೈನಲ್ ಫೈಟ್ ನಡೆಯಲಿವೆ. ಅಲ್ಲಿಗೆ ಐಸಿಸಿಯ ಹೈವೋಲ್ಟೇಜ್ ಟೂರ್ನಿ ಆರಂಭಕ್ಕೆ ಉಳಿದಿರೋದು ಜಸ್ಟ್ 3 ವಾರಗಳಷ್ಟೇ. ಈಗಾಗ್ಲೇ 7 ತಂಡಗಳು ಅನೌನ್ಸ್ ಆಗಿದ್ರೂ ಪಾಕಿಸ್ತಾನ ಮಾತ್ರ ಟೀಮ್ ಅನೌನ್ಸ್ ಮಾಡಿಲ್ಲ. ಅದೂ ಕೂಡ ಒಬ್ಬ ಆಟಗಾರನಿಗಾಗಿ ಹಿಂದೇಟು ಹಾಕ್ತಿದೆ ಅನ್ನೋದೇ ದುರಂತ.

ಇದನ್ನೂ ಓದಿ : ಚಾಂಪಿಯನ್ಸ್ ಟ್ರೋಫಿಗೆ ಬುಮ್ರಾ ಬದಲಿಗೆ ಸಿರಾಜ್ – ಇದಕ್ಕೇನಾ WARM UP ಮ್ಯಾಚ್?

ವರದಿಗಳ ಪ್ರಕಾರ ಪಾಕಿಸ್ತಾನದ ಕ್ರಿಕೆಟ್ ಮಂಡಳಿ ಟೀಂ ಅನೌನ್ಸ್ ಮಾಡೋಕೆ ಇಷ್ಟು ಟೈಂ ತಗೊಳ್ತಿರೋದು ಒಬ್ಬ ಆಟಗಾರನಿಗಾಗಿ ಅನ್ನೋ ಮಾಹಿತಿ ಇದೆ. ಆತನೇ 22 ವರ್ಷದ ಯಂಗ್ ಬ್ಯಾಟರ್ ಸೈಮ್ ಅಯೂಬ್. ಜನವರಿ ಮೊದಲ ವಾರ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್​ಟೌನ್​ನಲ್ಲಿ ನಡೆದ ಟೆಸ್ಟ್ ಕ್ರಿಕೆಟ್​ನಲ್ಲಿ ಫೀಲ್ಡಿಂಗ್ ವೇಳೆ ಇಂಜುರಿಯಾಗಿದ್ರು. ಬೌಂಡರಿಯಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಆಯ ತಪ್ಪಿ ಬಿದ್ದು ಅವ್ರ ಪಾದದ ಮೂಳೆ ಮುರಿದಿತ್ತು. ಈ ವೇಳೆ ನಿಲ್ಲೋಕೂ ಕೂಡ ಅವ್ರಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಪಂದ್ಯದ ಅರ್ಧದಲ್ಲೇ ಹೊರ ಬಂದಿದ್ರು. ಚಿಕಿತ್ಸೆಗಾಗಿ ಅಲ್ಲಿಂದ ಅವ್ರನ್ನ ನೇರವಾಗಿ ಲಂಡನ್​ಗೆ ಕಳಿಸಲಾಗಿತ್ತು. ಇನ್ನೂ ಕೂಡ ಚೇತರಿಸಿಕೊಳ್ತಿದ್ದು, ಫಿಟ್​ನೆಸ್ ರಿಪೋರ್ಟ್​ಗಾಗಿ ಪಿಸಿಬಿ ಎದುರು ನೋಡ್ತಿದೆ. ಇದೇ ಕಾರಣಕ್ಕೆ ಟೀಮ್ ಅನೌನ್ಸ್​ನ ಡಿಲೇ ಮಾಡ್ತಿರೋ ಮಾಹಿತಿ ಹೊರಬಿದ್ದಿದೆ. ಸೈಮ್ ಅಯೂಬ್ ಅವರ ಪಾದಕ್ಕೆ ಆಗಿರುವ ಗಾಯ ಗುಣವಾಗಲು ಹೆಚ್ಚು ಸಮಯ ಬೇಕಾಗುತ್ತದೆ ಎಂದು ತಜ್ಞ ವೈದ್ಯರೇ ತಿಳಿಸಿದ್ದಾರೆ. ಅಲ್ದೇ ಕ್ರಿಕೆಟ್‌ ಆಡಲು ಆತುರ ಪಡದಂತೆ ಸೂಚನೆ ನೀಡಿದ್ದಾರೆ. ಒಂದು ವೇಳೆ ರಿಕವರಿಗೂ ಮುನ್ನವೇ ಅಂಗಳಕ್ಕೆ ಇಳಿದಿದ್ದೇ ಆದಲ್ಲಿ ಇವರ ಗಾಯ ಮತ್ತಷ್ಟು ಹದಗೆಡಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇಲ್ಲೀವರೆಗೂ ಎರಡ್ಮೂರು ವಾರಗಳಲ್ಲಿ ರಿಕವರ್ ಆಗ್ತಾರೆ ಅಯೂಬ್ ಅಂಗಳಕ್ಕೆ ಬರ್ತಾರೆ ಅಂತಾ ಕಾಯ್ತಿದ್ದ ಪಿಸಿಬಿಗೆ ಆಘಾತವೇ ಎದುರಾಗಿದೆ. ಈ ಬಗ್ಗೆ ಮಾತ್ನಾಡಿರುವ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾದದ ಗಾಯದಿಂದಾಗಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಿಂದ ಯುವ ಆರಂಭಿಕ ಆಟಗಾರ ಸೈಮ್ ಅಯೂಬ್ ಅವರನ್ನು ಹೊರಗಿಟ್ಟಿದ್ದೇವೆ. ಈ ತಿಂಗಳ ಆರಂಭದಲ್ಲಿ ಕೇಪ್‌ಟೌನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ದಿನದಂದು ಸೈಮ್ ಅವರ ಪಾದದ ಮೂಳೆ ಮುರಿದಿತ್ತು. ಸೈಮ್ ಭವಿಷ್ಯದ ಬಗ್ಗೆ ಯಾವುದೇ ರಿಸ್ಕ್ ತಗೊಳ್ಳೋಕೆ ಆಗಲ್ಲ. ವೈದ್ಯರೊಂದಿಗೆ ಪ್ರತಿದಿನ ಸಂಪರ್ಕದಲ್ಲಿದ್ದು ವಿಚಾರಿಸುತ್ತೇವೆ. ಚಾಂಪಿಯನ್ಸ್ ಟ್ರೋಫಿಗಾಗಿ ನಾವು ಅವರ ಭವಿಷ್ಯದ ವೃತ್ತಿಜೀವನವನ್ನು ಡೇಂಜರ್​ಝೋನ್​ಗೆ ತಳ್ಳೋದಿಲ್ಲ. ಅವರು ನಮ್ಮ ಆಸ್ತಿ ಮತ್ತು ನಾವು ಅವರಿಗೆ ಸಂಪೂರ್ಣವಾಗಿ ಫಿಟ್ ಆಗಲು ಎಷ್ಟು ಸಮಯ ಬೇಕಾದರೂ ಕೊಡುತ್ತೇವೆ. ಚಾಂಪಿಯನ್ಸ್ ಟ್ರೋಫಿಯಿಂದ ಅವ್ರನ್ನ ಹೊರಗಿಡ್ತೇವೆ ಅಂತಾ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಹೇಳಿದ್ದಾರೆ.

Shantha Kumari

Leave a Reply

Your email address will not be published. Required fields are marked *