ಕುಂಭಮೇಳ ಹೆಸರಲ್ಲಿ ದೋಚೋರೇ ಬಾಸ್ ಲಗಾಮು ಹಾಕೋರು ಯಾರು ಇಲ್ವಾ?
ಸಾಮಾನ್ಯರಿಗೆ ಬೇಡ್ವಾ ಪವಿತ್ರ ಸ್ನಾನ?
ಕುಂಭಮೇಳ ಬಡವರಿಗೆ ಸಿಗದ ಚಿನ್ನದಂತೆ ಆಗಿದೆ.. ಪ್ರತಿಯೊಬ್ಬರು ಕೂಡ ನಾನು ಕುಂಭ ಮೇಳಕ್ಕೆ ಹೋಗಬೇಕು ಪವಿತ್ರಸ್ನಾನ ಮಾಡಬೇಕು ಅನ್ನೋ ಬೆಟ್ಟದಷ್ಟು ಕನಸು ಹೊಂದಿರುತ್ತಾರೆ. ಆದ್ರೆ ಕುಂಭ ಮೇಳಕ್ಕೆ ಬಡವರಿಗೆ ದೂರದ ಮಾತಾಗಿದೆ. ಬಡವರು ಮಾತ್ರವಲ್ಲ, ಮಧ್ಯಮ ವರ್ಗದವರಿಗೆ ಕೂಡ ಹೋಗೋಕೆ ಆಗದ ಸ್ಥಿತಿಯಿದೆ. ಅದಕ್ಕೆ ಕಾರಣ, ಗಗನಕ್ಕೇರಿರುವ ಬೆಲೆ.. ನಾವು ಹಬ್ಬದ ಟೈಂನಲ್ಲಿ ಬಸ್ ರೇಟ್ ಡಬರ್ ಆದ್ರೆ ಅಯ್ಯೋ ಏನ್ ರೇಟ್ ಮಾಡಿದ್ದಾರೆ.. ಊರಿಗೆ ಹೋಗೋದ್ ಹೇಗೆ ಅಂತ ಯೋಚನೆ ಮಾಡ್ತಿವಿ.. ಆದ್ರೆ ಕುಂಭ ಮೇಳಕ್ಕೆ ಹೋಗುವವರಿಗೆ ವಿಮಾನಯಾನ ಬಿಗ್ ಶಾಕ್ ನೀಡಿದೆ. ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿನಡೆಯುತ್ತಿರುವ ಮಹಾಕುಂಭ ಮೇಳದಲ್ಲಿಭಾಗಿಯಾವು ಉತ್ಸಾಹದಲ್ಲಿರುವವರಿಗೆ ಪ್ರಯಾಣದರದ ಆಘಾತ ತಟ್ಟಿದೆ. ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿವಿಮಾನ ಟಿಕೆಟ್ ದರವು ಕೇವಲ 10-15 ದಿನದಲ್ಲೇ ಶೇ.500-600ರಷ್ಟು ಹೆಚ್ಚಾಗಿದೆ! ಬೆಂಗಳೂರು, ಚೆನ್ನೈ, ಮುಂಬಯಿ, ದಿಲ್ಲಿಸೇರಿ ಹಲವು ನಗರಗಳಿಂದ ಪ್ರಯಾಗರಾಜ್ಗೆ ತೆರಳುವ ಟಿಕೆಟ್ ದರವನ್ನು ವಿಮಾನಯಾನ ಸಂಸ್ಥೆಗಳು ಐದಾರು ಪಟ್ಟು ಹೆಚ್ಚಿಸಿರುವುದು ಯಾತ್ರಿಕರ ಆಕ್ರೋಶಕ್ಕೂ ಕಾರಣವಾಗಿದೆ. ಇನ್ನು, ಫೆಬ್ರವರಿ 26ರಂದು ಮಹಾಕುಂಭ ಮೇಳ ಸಮಾರೋಪ ನಡೆಯಲಿದ್ದು , ಅಲ್ಲಿಂದ ವಾಪಸಾಗುವ ಟಿಕೆಟ್ ದರವನ್ನು ಕೂಡ ಆರೇಳು ಪಟ್ಟು ಹೆಚ್ಚಿಸಲಾಗಿದೆ.
ವಿಮಾನ ಟಿಕೆಟ್ ಬೆಲೆಯೇರಿಕೆ ಹಿನ್ನೆಲೆಯಲ್ಲಿ ಡಿಜಿಸಿಎ ಮಧ್ಯಪ್ರವೇಶಿಸಿತ್ತು. ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳ ಜತೆ ಜ. 23ರಂದೇ ಸಭೆ ನಡೆಸಿ, ನ್ಯಾಯಯುತ ಬೆಲೆ ನಿಗದಿಪಡಿಸಿ ಎಂದು ಸೂಚಿಸಿತ್ತು. ಹಾಗೆಯೆ, ಪ್ರಯಾಗರಾಜ್ಗೆ ಹೆಚ್ಚುವರಿಯಾಗಿ 81 ವಿಮಾನಗಳು ತೆರಳಲು ಅನುಮತಿ ನೀಡಿತ್ತು. ಇದರೊಂದಿಗೆ ಪ್ರಯಾಗರಾಜ್ಗೆ ತೆರಳುವ ವಿಮಾನಗಳ ಸಂಖ್ಯೆಯೇನೋ 132ಕ್ಕೆ ಏರಿಕೆಯಾಗಿದೆ. ಆದರೆ, ವಿಮಾನಯಾನ ಸಂಸ್ಥೆಗಳು ಸಿಂಗಲ್ ಟ್ರಿಪ್ ಹಾಗೂ ರೌಂಡ್ ಟ್ರಿಪ್ನ ಬೆಲೆಯನ್ನು ಐದಾರು ಪಟ್ಟು ಹೆಚ್ಚಿಸಿವೆ. ಮಹಾಕುಂಭ ಮೇಳದಲ್ಲಿ ವಿಶೇಷ ಪೂಜೆ, ಆಚರಣೆಗಳು ನಡೆಯುವ ಹಿನ್ನೆಲೆಯಲ್ಲಿಯೂ ಬೆಲೆಯೇರಿಕೆ ಮಾಡಲಾಗಿದೆ. ಫೆ.3ರಂದು ಬಸಂತ ಪಂಚಮಿ, ಫೆ.12ರ ಮಾಘಿ ಪೂರ್ಣಿಮೆ, ಫೆ.26ರ ಮಹಾ ಶಿವರಾತ್ರಿ ವೇಳೆಯಂತೂ ಪ್ರಯಾಗರಾಜ್ಗೆ ತೆರಳಲು, ಅಲ್ಲಿಂದ ವಾಪಸಾಗಲು ವಿಮಾನ ಟಿಕೆಟ್ ಬೆಲೆ ಮತ್ತಷ್ಟು ಏರಿಕೆ ಮಾಡಲಾಗಿದೆ. ಕುಂಭಮೇಳಕ್ಕೆ ತೆರಳುವವರು ಒಂದೆರಡು ದಿನಗಳಲ್ಲಿ ವಾಪಸ್ ಬರುವ ಯೋಜನೆ ಹೊಂದಿರುವುದರಿಂದ, ಮುಂದಿನ 2-3 ದಿನಗಳಲ್ಲಿ ರಿಟರ್ನ್ ಟಿಕೆಟ್ ದರವನ್ನು ತೀವ್ರವಾಗಿ ಹೆಚ್ಚಿಸಲಾಗಿದೆ. ವಿಮಾನಯಾನ ಸಂಸ್ಥೆಗಳು ಲಾಭ ಮಾಡಿಕೊಳ್ಳಲು ಹೊರಟಿವೆ. ಇದನ್ನು ಪ್ರಯಾಣಿಕರು ಕೂಡ ಖಂಡಿಸಿದ್ದಾರೆ.
ಉದಾಹರಣೆಗೆ, ಬೆಂಗಳೂರಿನಿಂದ ಪ್ರಯಾಗರಾಜ್ಗೆ ತೆರಳಬೇಕು ಎಂದರೆ ಒಂದು ಟಿಕೆಟ್ ಬೆಲೆಯು 19 ಸಾವಿರ ರೂ. ಇದೆ. ಆದರೆ, ಪ್ರಯಾಗರಾಜ್ನಿಂದ ಬೆಂಗಳೂರಿಗೆ ಆಗಮಿಸಲು 45 ಸಾವಿರ ರೂ. ತೆರಬೇಕಾಗಿದೆ. ಜನವರಿ 29ರಂದು ಪ್ರತಿಷ್ಠಿತ ಸಂಸ್ಥೆಯೊಂದರ ವಿಮಾನಯಾನದ ದರ ಗರಿಷ್ಠ 62,447 ರೂ. ವರೆಗೂ ಇದೆ. ಇನ್ನು ಫೆಬ್ರುವರಿಯಲ್ಲಿ ಪ್ರಯಾಗರಾಜ್ನಿಂದ ಮರಳುವ ವಿಮಾನಗಳ ಪ್ರಯಾಣ ದರವಂತೂ ವಿಪರೀತ ಏರಿಕೆಯಾಗಿದೆ. ಫೆ.20ರಂದು ಪ್ರಯಾಗ್ರಾಜ್ನಿಂದ ಬೆಂಗಳೂರಿಗೆ ಬಹುತೇಕ ವಿಮಾನಯಾನ ಸಂಸ್ಥೆಗಳ ದರ 33,000 ರೂ.ಗಳಿಂದ 55,000 ರೂ. ಇದೆ. ಇದೇ ಮಾರ್ಗದ ಪ್ರಯಾಣ ದರಗಳು ಮಾರ್ಚ್ನಲ್ಲಿ ಸರಾಸರಿ 6,816 ರೂ.ಗಳಿಂದ 7,012 ರೂ. ಇದೆ. ದೆಹಲಿ-ಪ್ರಯಾಗ್ರಾಜ್ ವಿಮಾನಗಳ ಏರ್ ಟಿಕೆಟ್ ದರಗಳು ಭಾರಿ ಏರಿಕೆ ಕಂಡಿವೆ. ಪ್ರಯಾಗ್ರಾಜ್ಗೆ ವಿಮಾನ ಟಿಕೆಟ್ ದರವು 21,000 ರೂಪಾಯಿಗಿಂತ ಹೆಚ್ಚಿದೆ. ಮುಂಬೈಯಿಂದ ಪ್ರಯಾಗ್ರಾಜ್ ಟಿಕೆಟ್ಗಳ ಬೆಲೆ 22,000 ರೂಪಾಯಿಯಿಂದ 60,000 ರೂಪಾಯಿವರೆಗೆ ಇದೆ. ಮಹಾಕುಂಭ ಮೇಳ ಮುಗಿಯುವವರೆಗೆ ಸುಮಾರು 45 ಕೋಟಿ ಜನ ಭೇಟಿ ನೀಡುವ ಸಾಧ್ಯತೆ ಇದೆ. ದಿನೇದಿನೆ ಕೋಟ್ಯಂತರ ಯಾತ್ರಿಕರು ಪ್ರಯಾಗರಾಜ್ಗೆ ಆಗಮಿಸುತ್ತಿದ್ದಾರೆ. ವಿಮಾನಗಳಲ್ಲಿ ಆಗಮಿಸುವವರು, ತೆರಳುವವರ ಸಂಖ್ಯೆಯೂ ಜಾಸ್ತಿಯಾಗಿದೆ. ವಿಮಾನಯಾನ ಸಂಸ್ಥೆಗಳು ಇದನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಯಾತ್ರಿಕರು ಆಕ್ರೋಶ ವ್ಯಕ್ತಪಡಿಸುವಂತಾಗಿದೆ.. ಈ ಕುಂಭ ಮೇಳಕ್ಕೆ ತುಂಬಾ ಶ್ರೀಮಂತರು ಹೋಗಲ್ಲ, ತುಂಬಾ ಬಡವರು ಕೂಡ ಹೋಗಲ್ಲ.. ಮಧ್ಯಮ ವರ್ಗದವರು ಹೆಚ್ಚಾಗಿ ಹೋಗ್ತಾರೆ. ತಮ್ಮ ದುಡಿಮೆಯಲ್ಲಿ ಒಂದಿಷ್ಟು ಬಜೆಟ್ ಹಾಕಿ ಎಲ್ಲೆಲ್ಲಿ ಎಷ್ಟು ಖರ್ಚು ಆಗುತ್ತೆ ಅನ್ನೋದನ್ನ ಲೆಕ್ಕಹಾಕಿ ಕುಂಭಮೇಳಕ್ಕೆ ಹೋಗಬೇಕು ಅಂತಾ ಅಂದ್ಕೊತ್ತಾರೆ. ಆದ್ರೆ ಈ ವಿಮಾನದ ಟಿಕೆಟ್ಗೆ 50 ರಿಂದ 60 ಸಾವಿರ ಇರೋದ್ರಿಂದ ಕಂಭಮೇಳಕ್ಕೆ ಇವರು ಅಷ್ಟೆಲ್ಲಾ ಖರ್ಚು ಮಾಡಿ ಹೋಗಬೇಕಾ ಅಂತ ತಲೆಕೆಡಿಸಿಕೊಂಡು ಕುಳಿತಿದ್ದಾರೆ. ಹೀಗಾಗಿ ಕುಂಭ ಮೇಳಕ್ಕೆ ಹೋಗುವ ಕನಸು ಕನಸಾಗಿಗೇ ಉಳಿಯುತ್ತಿದೆ. ಕೇವಲ ವಿಮಾನ ಅಂತಲ್ಲ, ಪ್ರಯಾಗ್ ರಾಜ್ನಲ್ಲಿರೋ ಹೋಟೆಲ್ಗಳ ಬೆಲ ಕೂಡ ಡಬರ್ ತ್ರಿಬಲ್ ಆಗಿದೆ.. ಈ ಹಿಂದೆ ಒಂದು ಹೋಟೆಲ್ ರೂಂ ನಿಮ್ಗೆ 5 ಸಾವಿರಕ್ಕೆ ಸಿಗುತ್ತಿದ್ರೆ, ಈಗ ಅದ್ರ ಬೆಲೆ 20 ರಿಂದ 25 ಸಾವಿರದಷ್ಟಾಗಿದೆ.. ಅಲ್ಲಿ ಸಿಗೋ ಊಟದ ರೇಟ್ ಕೂಡ ಹೆಚ್ಚಾಗಿದೆ.. ಹೀಗಾಗಿ ರೂಂ ವಿಮಾನ, ಊಟ ಅಂತ ಲೆಕ್ಕಹಾಕಿ ಹೋಗೋರಿಗೆ ಬೆಲೆ ಏರಿಕೆ ಬಿಗ್ ಶಾಕ್ ನೀಡಿದಂತೆ ಆಗಿದೆ. ಒಂದಕ್ಕೆ 4-5 ಪಟ್ಟು ಕೊಡುವಂತೆ ಆಗಿದೆ. ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎನ್ನುವಂತೆ , ಕುಂಭಮೇಳದ ಹೆಸರಲ್ಲಿ ಬೆಲೆ ಏರಿಸಿ ದುಡ್ಡು ಮಾಡಿದವನೇ ಜಾಣ ಎನ್ನುವಂತಾಗಿದೆ.. ಇವರಿಗೆ ಯಾರೂ ಕೂಡ ಹೇಳುವವರು ಕೇಳುವವರು ಇಲ್ಲದಂತಾಗಿದೆ. ಇನ್ನೂ ಕುಂಭ ಮೇಳೆ ಒಂದು ತಿಂಗಳುಗಳ ಕಾಲ ನಡೆಯಲಿದ್ದು, ಆದಷ್ಟು ಬೇಗ ಇದಕ್ಕೆ ಸರ್ಕಾರಗಳು ಬ್ರೇಕ್ ಹಾಕೋ ಕೆಲಸ ಮಾಡಬೇಕಿದೆ..