ಆಂಗ್ಲರು ಗೆಲ್ಲೋಕೆ ಚಾನ್ಸೇ ಇಲ್ವಾ – ರಾಜ್ ಕೋಟ್ ನಲ್ಲಿ ರಾಜ ಯಾರು?  

ಆಂಗ್ಲರು ಗೆಲ್ಲೋಕೆ ಚಾನ್ಸೇ ಇಲ್ವಾ – ರಾಜ್ ಕೋಟ್ ನಲ್ಲಿ ರಾಜ ಯಾರು?  

ತವರಿನಲ್ಲಿ ಕಳೆದ 6 ವರ್ಷಗಳಿಂದ ಸತತ 16 ಟಿ20 ಸರಣಿಗಳಲ್ಲಿ ಅಜೇಯವಾಗಿ ಉಳಿದಿರುವ ಭಾರತ ತಂಡ, ಇದೀಗ ಮತ್ತೊಂದು ಸರಣಿ ಜಯದ ದಾಖಲೆ ಬರೆಯೋಕೆ ಸರ್ವಸನ್ನದ್ಧವಾಗಿದೆ. ರಾಜ್​ಕೋಟ್​ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ 3ನೇ ಟಿ20 ಪಂದ್ಯವನ್ನು ಆಡಲಿರುವ ಭಾರತ, ಸರಣಿ ಕೈಶವಕ್ಕೆ ಕಣ್ಣಿಟ್ಟಿದೆ. 5 ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದಿರುವ ಭಾರತ, ಇನ್ನೂ 2 ಪಂದ್ಯ ಬಾಕಿ ಇರುವಾಗಲೇ ಸರಣಿಯನ್ನು ವಶಪಡಿಸಿಕೊಳ್ಳೋ ಟಾರ್ಗೆಟ್ ಇಟ್ಕೊಂಡಿದೆ. ಅದ್ರಲ್ಲೂ ಎಟಿ ಮೇಲೆಯೇ ಎಲ್ಲರ ಕಣ್ಣಿದೆ. ಅಂದ್ರೆ ಅಭಿಷೇಕ್ ಶರ್ಮಾ ಮತ್ತು ತಿಲಕ್ ವರ್ಮಾ ಮ್ಯಾಚ್ ವಿನ್ನರ್ಸ್ ಆಗ್ತಾರಾ ಅನ್ನೋ ಕ್ಯೂರಿಯಾಸಿಟಿ ಹುಟ್ಟಿದೆ.

ಇದನ್ನೂ ಓದಿ : ಆಡದ ರೋHITಗೆ ಕಾಮೆಂಟ್ರಿ ಡೊಂಕು – ಇನ್ನೆಷ್ಟು ಕುಂಟು ನೆಪ ಬೇಕಿತ್ತು?

ಅಭಿಷೇಕ್ ಶರ್ಮಾ ಮತ್ತು ತಿಲಕ್ ವರ್ಮಾ. ಟೀಂ ಇಂಡಿಯಾದ ಸೂಪರ್ ಸ್ಟಾರ್ ಪ್ಲೇಯರ್ಸ್. ಕೊಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆದಿದ್ದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅಬ್ಬರಿಸಿ ಬೊಬ್ಬಿರಿದಿದ್ರು. 34 ಎಸೆತಗಳಲ್ಲೇ 79 ರನ್ ಸಿಡಿಸಿ ಹೀರೋ ಆಗಿದ್ರು. ಇನ್ನು ಚೆನ್ನೈನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ತಿಲಕ್ ವರ್ಮಾ ಬ್ಯಾಟಿಂಗ್ ಬೊಂಬಾಟ್ ಆಗಿತ್ತು. ಟೀಂ ಇಂಡಿಯಾ ಪರ ಯಾವೊಬ್ಬರೂ ಕೂಡ ಸಾಥ್ ನೀಡದೇ ಇದ್ರೂ ಏಕಾಂಗಿಯಾಗಿ ಹೋರಾಟ ನಡೆಸಿ ಪಂದ್ಯವನ್ನ ಗೆಲ್ಲಿಸಿಕೊಟ್ಟಿದ್ರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗಿಳಿದ ತಿಲಕ್ ವರ್ಮಾ ಅಜೇಯಾ 72 ರನ್ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹೀಗಾಗಿ ಇಂದಿನ ಪಂದ್ಯದಲ್ಲೂ ಇವ್ರಿಬ್ಬರ ಮೇಲೆಯೇ ಎಲ್ಲರ ಚಿತ್ತ ನೆಟ್ಟಿದೆ. ತಿಲಕ್ ವರ್ಮಾ ಅವರು ಸತತ ನಾಲ್ಕು ಇನ್ನಿಂಗ್ಸ್‌ಗಲ್ಲಿ ಒಮ್ಮೆಯೂ ಔಟ್ ಆಗಿಲ್ಲ. ಈ ವೇಳೆ ಅವರು 107, 120, 19 ಹಾಗೂ 72 ರನ್ ಸಿಡಿಸಿ ಒಮ್ಮೆಯೂ ಔಟ್ ಆಗದೆ 318 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್‌ನಲ್ಲಿ ಒಂದು ಬಾರಿಯೂ ಔಟ್ ಆಗದೆ ಅತೀ ಹೆಚ್ಚು ರನ್ ಗಳಸಿದ ಆಟಗಾರ ಎಂಬ ದಾಖಲೆ ಅವ್ರ ಪಾಲಾಗಿದೆ. ಸೋ ಇಂದಿನ ಪಂದ್ಯದಲ್ಲಿ ಮತ್ತೊಮ್ಮೆ ಔಟ್ ಆಗದೆ ಅಬ್ಬರಿಸ್ತಾರೆ ಅಂತಾ ಅಭಿಮಾನಿಗಳೂ ಕಾಯ್ತಿದ್ದಾರೆ.

ಬಟ್ ಕ್ಯಾಪ್ಟನ್ ಆದ್ಮೇಲೆ ಮಂಕಾಗಿರೋ ಸೂರ್ಯ ಇವತ್ತು ಹೇಗೆ ಆಡ್ತಾರೆ ಅನ್ನೋ ಕುತೂಹಲವೂ ಇದೆ. ಸಂಜು ಸ್ಯಾಮನ್ ಕೂಡ ಸ್ಥಿರ ಪ್ರದರ್ಶನ ಬೇಕಿದೆ. ಆಲ್ರೌಂಡರ್ ನಿತೀಶ್ ರೆಡ್ಡಿ ಗಾಯಗೊಂಡು ಹೊರಬಿದ್ದಿರುವ ಕಾರಣ, ಅವರ ಬದಲು ತಂಡ ಕೂಡಿಕೊಂಡಿರುವ ಶಿವಂ ದುಬೆಗೆ ಅವಕಾಶ ಸಿಗಲಿದೆ. ಧೃವ್ ಜುರೆಲ್ ಹಾಗೂ ರಮಣ್‌ದೀಪ್‌ ಸಿಂಗ್‌ಗೆ ಸಹ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಈ ಪಂದ್ಯದಲ್ಲೂ ಭಾರತ 4 ಸ್ಪಿನ್ನರ್‌ಗಳನ್ನು ಆಡಿಸೋ ಸಾಧ್ಯತೆ ಇದೆ. ರಾಜ್‌ಕೋಟ್‌ನ ಪಿಚ್ ಸಾಮಾನ್ಯವಾಗಿ ಸ್ಪಿನ್ ಸ್ನೇಹಿಯಾಗಿರಲಿದ್ದು, ಬ್ಯಾಟರ್‌ಗಳಿಗೂ ಅನುಕೂಲಕಾರಿಯಾಗಿರಲಿದೆ. ರಾಜ್‌ಕೋಟ್‌ನ ನಿರಂಜನ್ ಷಾ ಸ್ಟೇಡಿಯಂನಲ್ಲಿ ಭಾರತ ತಂಡ ಒಟ್ಟು 5 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದಿದ್ದರೆ, ಒಂದು ಪಂದ್ಯದಲ್ಲಿ ಸೋಲು ಕಂಡಿದೆ. ಸೋ ಈ ಪಂದ್ಯದಲ್ಲೂ ಭಾರತವೇ ಗೆಲುವಿನ ಫೇವರೆಟ್ ಟೀಂ ಎನಿಸಿಕೊಂಡಿದೆ.

ಇನ್ನು ಭಾರತದಲ್ಲಿ ಇಂಗ್ಲೆಂಡ್ ತಂಡ ರನ್ ಗಳಿಸೋಕೆ ಒದ್ದಾಡ್ರತಿದೆ. ಜೋಸ್ ಬಟ್ಲರ್ ಹೊರತುಪಡಿಸಿ ಇನ್ಯಾವ ಬ್ಯಾಟರ್‌ಗೂ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಂತು ರನ್ ಗಳಿಸೋಕೆ ಸಾಧ್ಯವಾಗ್ತಿಲ್ಲ. ಲಿವಿಂಗ್‌ಸ್ಟೋನ್, ಬ್ರೂಕ್, ಡಕೆಟ್, ಸಾಲ್ಟ್ ಮೇಲೆ ನಿರೀಕ್ಷೆ ಇದೆ. ಈಗಾಗ್ಳೇ ಪ್ಲೇಯಿಂಗ್ 11 ಕೂಡ ಅನೌನ್ಸ್ ಆಗಿದ್ದು ಗೆಲುವಿನ ಖಾತೆ ತೆರೆಯೋಕೆ ಹವಣಿಸ್ತಿದ್ದಾರೆ. ರಾಜ್​ಕೋಟ್​ನ ನಿರಂಜನ್ ಶಾ ಮೈದಾನದಲ್ಲಿ ನಡೆಯಲಿರುವ 3ನೇ ಟಿ20 ಪಂದ್ಯದ ಟಾಸ್ ಪ್ರಕ್ರಿಯೆ​​ ಭಾರತೀಯ ಕಾಲಮಾನ ರಾತ್ರಿ 6.30 ಕ್ಕೆ ನಡೆಯಲಿದೆ. ಇನ್ನು ಪಂದ್ಯವು ರಾತ್ರಿ 7 ಗಂಟೆಯಿಂದ ಶುರುವಾಗಲಿದೆ.

Shantha Kumari

Leave a Reply

Your email address will not be published. Required fields are marked *