ವಿಕ್ಕಿ ಸೋಲಿಗೆ ಭವ್ಯಾ ಕಾರಣ..! – ಹೊರಬಂದ್ಮೇಲೆ ಚಿಕ್ಕ ಹುಡುಗಿಯಾದ್ಲಾ?
ಭವ್ಯಾ ಲವ್ ಗೆ ವಿಕ್ಕಿ ಫುಲ್ ಸ್ಟಾಪ್..!

ಬಿಗ್‌ಬಾಸ್ ಮನೆಯಲ್ಲಿ ಭವ್ಯಾ ಎಲ್ಲೋ ಅಲ್ಲಿಯೇ ವಿಕ್ಕಿ. ತ್ರಿವಿಕ್ರಮ್ ಬಿಟ್ಟು ಬೇರೆ ಯಾರ ಜೊತೆಯೂ ಸೇರದೇ ಫೈನಲ್ ವರೆಗೂ ಬಂದ ಭವ್ಯಾ. ಇಬ್ಬರೂ ಪ್ರಪೋಸ್ ಮಾಡಿಕೊಂಡಿದ್ದೇನು? ಲವ್ ಯೂ ಪನ್ನುಕುಟ್ಟಿ ಅಂತಾ ಹೇಳಿದ್ದೇನು? ಯಾರು ಏನೇ ಹೇಳಲಿ ತಲೆಕೆಡಿಸಿಕೊಳ್ಳಬೇಡ, ನಮ್ಮ ಪ್ರೀತಿ ಶಾಶ್ವತ ಎಂದಿದ್ದೇನು.. ಆದ್ರೆ, ಬಿಗ್‌ಬಾಸ್ ಟೈಟಲ್ ಕೈ ತಪ್ಪಿಹೋದ ಮೇಲೆ ಎಲ್ಲವೂ ಉಲ್ಟಾ.. ಹೌದು.. ವಿಕ್ಕಿ ಭವ್ಯಾ ಲವ್ ಸ್ಟೋರಿ ಕಪ್ ಗೆದ್ದಿದ್ರೆ ಮಾತ್ರ ಕಂಟಿನ್ಯೂ ಆಗ್ತಿತ್ತಾ? ಭವ್ಯಾ ಇದೇ ಷರತ್ತಿನ ಮೇಲೆ ವಿಕ್ಕಿ ಹಿಂದೆ ಬಿದ್ದಿದ್ಲಾ, ಇಲ್ಲಾ, ವಿಕ್ಕಿಯೇ ಈಗ ಲವ್ ಸ್ಟೋರಿಗೆ ಫುಲ್ ಸ್ಟಾಪ್ ಇಟ್ಟಿರೋದಾ ಅನ್ನೋ ಪ್ರಶ್ನೆ ಎಲ್ಲರನ್ನು ಕಾಡ್ತಿದೆ. ಅದಕ್ಕೆ ಕಾರಣ ದೊಡ್ಮನೆಯಿಂದ ಬಂದು ವಿಕ್ಕಿ ಹೇಳಿರೋ ಮಾತು.. ಅಷ್ಟಕ್ಕೂ ತ್ರಿವಿಕ್ರಮ್ ಹೇಳಿದ್ದೇನು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಆಡದ ರೋHITಗೆ ಕಾಮೆಂಟ್ರಿ ಡೊಂಕು – ಇನ್ನೆಷ್ಟು ಕುಂಟು ನೆಪ ಬೇಕಿತ್ತು?
ಬಿಗ್‌ಬಾಸ್ ಮನೆಯಲ್ಲಿ ಸದಾ ಅಂಟಿಕೊಂಡೇ ಓಡಾಡಿದ ಜೋಡಿಯೆಂದ್ರೆ ಅದು ಭವ್ಯಾ ಮತ್ತು ತ್ರಿವಿಕ್ರಮ್.. ಒಮ್ಮೊಮ್ಮೆ ಇವರ ಅತಿರೇಕದ ವರ್ತನೆ ವೀಕ್ಷಕರಿಗೂ ಕಿರಿಕಿರಿಯಾಗಿತ್ತು. ಫ್ಯಾಮಿಲಿ ಜೊತೆ ನೋಡಲು ಕೂಡಾ ಮುಜುಗರ ಆಗೋ ರೀತಿ ಇಬ್ಬರೂ ಬಿಹೇವ್ ಮಾಡ್ತಿದ್ರು. ಪರಸ್ಪರ ಅಂಟಿಕೊಂಡೇ ಇರೋದು, ಕಾಲಲ್ಲೂ ಹಾರ್ಟ್ ಸಿಂಬಲ್ ಬಿಡಿಸೋದು, ಪರಸ್ಪರ ಊಟ ಮಾಡಿಸಿಕೊಂಡು ನಾವೇ ಬೆಸ್ಟ್ ಜೋಡಿ ಅನ್ನೋ ಥರಾ ಇಬ್ಬರೂ ಆಡ್ತಿದ್ರು. ಪ್ರತಿಸಲ ಕಿಚ್ಚ ಸುದೀಪ್ ಇಬ್ಬರಿಗೂ ಅದೆಷ್ಟೇ ವಾರ್ನಿಂಗ್ ಮಾಡಿದ್ರೂ ಕೂಡಾ ತಲೆ ಕೆಡಿಸಿಕೊಂಡಿರಲಿಲ್ಲ. ಅದ್ರಲ್ಲೂ ನೀವು ಕಪ್ ಗೆದ್ರೆ ನಮ್ ಮದುವೆ ಅಂತಾ ಭವ್ಯಾ ತ್ರಿವಿಕ್ರಮ್ ಗೆ ಹೇಳಿದ್ದೂ ಇದೆ. ಅದಾದ್ಮೇಲೆ ಇಬ್ಬರು ಹಾವು ಮುಂಗುಸಿಯಂತೆ ಕಿತ್ತಾಡಿಕೊಂಡಿದ್ರು.. ಇವರಿಬ್ಬರು ಬ್ರೇಕ್ ಅಪ್ ಮಾಡಿಕೊಂಡ್ರು ಅನ್ನುವಾಗಲೇ ತ್ರಿವಿಕ್ರಮ್ ಭವ್ಯಾಗೆ ಲವ್ ಲೆಟರ್ ಬರೆದಿದ್ರು.. ಫಿನಾಲೆ ವೀಕ್ ನಲ್ಲಿ ತ್ರಿವಿಕ್ರಮ್ ಭವ್ಯಾಗೆ ಐ ಲವ್ ಯೂ ಪನ್ನಿ ಕುಟ್ಟಿ ಅಂತಾ ಹೇಳಿದ್ರು.. ಇದನ್ನ ನೋಡಿದ ವೀಕ್ಷರು ಇವರಿಬ್ಬರು ಮದುವೆ ಆಗೋದು ಫಿಕ್ಸ್ ಅಂದಿದ್ರು.. ಆದ್ರೀಗ ಇದೇ ಲವ್ ಸ್ಟೋರಿ ಬಿಗ್‌ಬಾಸ್ ಶೋ ಮುಗಿದ ಕೆಲವೇ ಕ್ಷಣಗಳಲ್ಲಿ ಮುಗಿದೇ ಹೋಗಿದೆ.
ಬಿಗ್‌ಬಾಸ್ ಮನೆಯಲ್ಲಿ ತ್ರಿವಿಕ್ರಮ್ ಮತ್ತು ಭವ್ಯಾ ಇರೋ ರೀತಿ ನೋಡಿ ಎಲ್ರೂ ಇವರಿಬ್ಬರೂ ಮದುವೆಯಾಗ್ತಾರೆ ಅಂತಾನೇ ಹೇಳ್ತಿದ್ರು. ಇಬ್ರೂ ಕೂಡಾ ಮದುವೆಯಾಗ್ತೀವಿ ಅನ್ನೋ ರೇಂಜ್‌ಲ್ಲೇ ಅಂಟಿಕೊಂಡೇ ಇದ್ರು. ಭವ್ಯಾನ ಅಪ್ಪ ಕೂಡಾ ನನ್ ಮಗಳನ್ನ ಕ್ಯಾಚ್ ಹಾಕಿಕೊಂಡಿದ್ದೀಯಾ ಅಂತಾ ನೇರವಾಗಿಯೇ ಹೇಳಿದ್ರು. ತ್ರಿವಿಕ್ರಮ್ ಅಮ್ಮ ಕೂಡಾ ಮಗನ ಪ್ರೀತಿಗೆ ಸಪೋರ್ಟ್ ಮಾಡೋ ರೀತಿಯೇ ಮಾತಾಡಿದ್ದರು. ರಾಧೆ ಕೃಷ್ಣನ ಹಾಗೇ ಕಾಣ್ತೀರ.. ಚೆನ್ನಾಗಿದೆ ಜೋಡಿ ಅಂತಾ ಹೇಳಿದ್ರು.. ಆದ್ರೆ, ಯಾವಾಗ ತ್ರಿವಿಕ್ರಮ್ ಕೈಯಿಂದ ಕಪ್ ಮಿಸ್ ಆಯ್ತೋ ಲವ್ ಸ್ಟೋರಿಗೂ ಟ್ವಿಸ್ಟ್ ಸಿಕ್ಕಿದೆ.
ಭವ್ಯಾನ ತಬ್ಬಿಕೊಂಡು ಓಡಾಡುವಾಗ, ಎಲ್ಲೇ ಇದ್ರೂ ಜೊತೆಯಲ್ಲಿ ಭವ್ಯಾನೇ ಇರಬೇಕು ಅನ್ನೋ ರೀತಿ ಇದ್ದ ವಿಕ್ಕಿ ಸಡನ್ ಆಗಿ ಮದುವೆ ಬಗ್ಗೆ ಮಾತಾಡಿದ್ದಾರೆ. ಭವ್ಯ ಗೌಡ ಚಿಕ್ಕವಳಾಗುತ್ತಾಳೆ. ನಾನು ಅವಳನ್ನ ಮದುವೆ ಆಗೋದಿಲ್ಲ. ಬೇರೆ ಹುಡುಗಿಯನ್ನ ಹುಡುಕಬೇಕು. ಈಗ ತಾನೆ ಮನೆಯಿಂದ ಹೊರಗೆ ಬಂದಿದ್ದೇನೆ. ಇನ್ಮುಂದೆ ಹುಡುಗಿಯನ್ನ ಹುಡುಕಬೇಕಿದೆ ಎಂದು ಬಿಗ್ ಬಾಸ್ ರನ್ನರ್‌ಅಪ್ ತ್ರಿವಿಕ್ರಮ್ ಹೇಳಿಕೊಂಡಿದ್ದಾರೆ. ಭವ್ಯ ಗೌಡನ ಮದುವೆ ಆಗೋದಿಲ್ಲ ಅಂತಾ ನೇರವಾಗಿಯೇ ಹೇಳಿದ್ದಾರೆ ವಿಕ್ಕಿ. ಇನ್ನು ವಿಕ್ಕಿ ತನ್ನ ಲವ್ ಸ್ಟೋರಿಗೆ ಟ್ವಿಸ್ಟ್ ಕೊಟ್ಟಿದ್ದು ಸೋತ ಸಿಟ್ಟಿಗೆ ಇರಬಹುದಾ ಎಂಬ ಮಾತು ಕೇಳಿಬಂದಿದೆ. ಭವ್ಯಾನ ಸುತ್ತ ಓಡಾಡದೇ, ತಾನು ಬಂದಿದ್ದು ಆಟ ಆಡೋಕೆ, ಗೆಲ್ಲೋಕೆ ಎಂಬ ವಿಚಾರವನ್ನ ಸೀರಿಯಸ್ ಆಗಿ ತಗೋಬೇಕಿತ್ತು. ಭವ್ಯಾನ ಮೋಹವೇ ತನ್ನ ಸೋಲಿಗೆ ಕಾರಣವಾಯ್ತು ಅನ್ನೋ ಬೇಜಾರು ವಿಕ್ಕಿಗೆ ಇದೆ ಎಂದು ಅವರ ಆಪ್ತರು ಹೇಳ್ತಿದ್ದಾರೆ. ಅದೇನೋ ಹೇಳ್ತಾರಲ್ಲ. ಕೆಟ್ಟ ಮೇಲೇನೆ ಬುದ್ದಿ ಬರೋದು . ಹಾಗೇ ವಿಕ್ಕಿ ವಿಚಾರದಲ್ಲೂ ಆಗಿರೋದು ಅಷ್ಟೇ.