ಆಡದ ರೋHITಗೆ ಕಾಮೆಂಟ್ರಿ ಡೊಂಕು – ಇನ್ನೆಷ್ಟು ಕುಂಟು ನೆಪ ಬೇಕಿತ್ತು?
2024-25ನೇ ಸಾಲಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು 3-1 ಅಂತರದಲ್ಲಿ ಗೆದ್ದು ಬೀಗಿತ್ತು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೂ ಲಗ್ಗೆ ಇಟ್ಟಿತ್ತು. ಬಟ್ 10 ವರ್ಷಗಳ ಬಳಿಕ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯನ್ನ ಕಳ್ಕೊಂಡಿದ್ದ ಭಾರತ ತೀವ್ರ ಮುಖಭಂಗ ಅನುಭವಿಸಿತ್ತು. ಈ ಸೋಲಿಗೆ ಹಲವು ಕಾರಣಗಳೂ ಇವೆ. ಆದ್ರೆ ಅದನ್ನೆಲ್ಲಾ ಪಕ್ಕಕ್ಕಿಟ್ಟಿರೋ ನಾಯಕ ರೋಹಿತ್ ಶರ್ಮಾ ಸುನಿಲ್ ಗವಾಸ್ಕರ್ ಹೇಳಿಕೆಗಳನ್ನೇ ಹೈಲೆಟ್ ಮಾಡ್ತಿದ್ದಾರೆ. ಅವ್ರೇ ತಮ್ಮ ಸೋಲಿಗೆ ಕಾರಣ ಎನ್ನುವಂತೆ ಬಿಸಿಸಿಐಗೆ ಕಂಪ್ಲೇಂಟ್ ಕೊಟ್ಟಿದ್ದಾರೆ.
ಇದನ್ನೂ ಓದಿ : ಸೂರ್ಯ ಕುಮಾರ್ ಕ್ಯಾಪ್ಟನ್ ಮಾಡಿದ್ದೇ ತಪ್ಪಾಯ್ತಾ – 4, 1, 0, O, 12 ರನ್.. ಇಷ್ಟೇನಾ?
ಆಸ್ಟ್ರೇಲಿಯಾ ಸರಣಿಯಲ್ಲಿ ಭಾರತ ಮೊದಲ ಪಂದ್ಯ ಗೆದ್ದಿದ್ದು ಬಿಟ್ರೆ ಆ ನಂತ್ರ ಸೋತಿದ್ದೇ ಬಂತು. ಪರ್ತ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿತ್ತು. ಆದರೆ ಅಡಿಲೇಡ್‌ನಲ್ಲಿ ನಡೆದ ಪಿಂಕ್‌ಬಾಲ್ ಟೆಸ್ಟ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವು 10 ವಿಕೆಟ್ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತಕ್ಕೆ ತಿರುಗೇಟು ನೀಡಿತ್ತು. ಇನ್ನು ಬ್ರಿಸ್ಬೇನ್‌ನ ಗಾಬಾದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ಮಳೆಯ ಕಾರಣದಿಂದಾಗಿ ಡ್ರಾನಲ್ಲಿ ಅಂತ್ಯವಾಗಿತ್ತು. ಇನ್ನು ಐತಿಹಾಸಿಕ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 185 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿತ್ತು. ಸಿಡ್ನಿಯಲ್ಲಿ ನಡೆದ ಕೊನೆಯ ಟೆಸ್ಟ್‌ನಲ್ಲಿ ಆಸೀಸ್ 6 ವಿಕೆಟ್ ಅಂತರದ ಗೆಲುವು ಸಾಧಿಸಿ 3-1 ಅಂತರದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ತನ್ನದಾಗಿಸಿಕೊಂಡಿತ್ತು.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಭಾರತದ ಲೆಜೆಂಡರಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ವಿರುದ್ಧ ಬಿಸಿಸಿಐಗೆ ದೂರು ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಸರಣಿ ವೇಳೆ ಗವಾಸ್ಕರ್ ಅವ್ರು ಭಾರತೀಯ ಆಟಗಾರರನ್ನು ಟಾರ್ಗೆಟ್ ಮಾಡಿದ್ರು. ಆಟದ ಬಗ್ಗೆ ನಕಾರಾತ್ಮಕ ಮಾತುಗಳನ್ನ ಆಡಿದ್ರು. ಇದೂ ಕೂಡ ನಮ್ಮ ಹಿನ್ನಡೆಗೆ ಕಾರಣ ಆಯ್ತು ಅಂತಾ ರೋಹಿತ್ ಶರ್ಮಾ ಬಿಸಿಸಿಐಗೆ ದೂರು ಕೊಟ್ಟಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದ ವೇಳೆ ಕಾಮೆಂಟ್ರಿ ಮಾಡುತ್ತಿದ್ದ ಸುನಿಲ್ ಗವಾಸ್ಕರ್ ಅವರು ಅಗತ್ಯಕ್ಕಿಂತ ಹೆಚ್ಚು ನಕಾರಾತ್ಮಕ ಹೇಳಿಕೆ ನೀಡುತ್ತಿದ್ದರು. ಇದು ಆಟಗಾರರ ಮೇಲೆ ಪರಿಣಾಮ ಬೀರುತ್ತದೆ ಎಂದು ರೋಹಿತ್ ಸಭೆಯಲ್ಲಿ ಹೇಳಿದ್ದಾರೆ. ಸುನಿಲ್ ಗವಾಸ್ಕರ್ ಇಂತಹ ಕಟು ಪದಗಳಲ್ಲಿ ಆಟಗಾರರನ್ನು ಟೀಕಿಸಬಾರದಿತ್ತು. ಕಾಮೆಂಟ್ರಿ ಮಾಡುವವರ ನೇರ ಟೀಕೆಗಳಿಂದ ಆಟಗಾರರ ಮನಸ್ಥಿತಿ ಬದಲಾಗುತ್ತದೆ. ಹೀಗಾಗಿ ಇಂತಹ ಟೀಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂದು ರೋಹಿತ್ ಶರ್ಮಾ ಬಿಸಿಸಿಐಗೆ ತಿಳಿಸಿದ್ದಾರೆ. ಗವಾಸ್ಕರ್ ನೀಡಿದ್ದ ಹೇಳಿಕೆಗಳು ಈ ಕೆಳಗಿನಂತಿವೆ.
ಭಾರತ ತಂಡ ಆಸ್ಟ್ರೇಲಿಯಾವನ್ನ ಸೋಲಿಸೋದು ಅಸಾಧ್ಯ
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೇರುವ ಕನಸು ಬೇಡ
ಆಸ್ಟ್ರೇಲಿಯಾದಲ್ಲಿ ಸರಣಿ ಗೆಲ್ಲುವುದಕ್ಕೆ ಪ್ರಯತ್ನ ಮಾಡಿ
ರಿಷಭ್ ಪಂತ್ ಅವ್ರನ್ನ ಲೈವ್ ನಲ್ಲೇ ಸ್ಟುಪಿಡ್ ಸ್ಟುಪಿಡ್ ಬೈಗುಳ
ಎರಡು ಬಾರಿ ಜೀವದಾನ ಪಡೆದರೂ ಸುಧಾರಿಸಿಕೊಳ್ಳದ ಪಂತ್
ಸ್ಕೂಪ್ ಶಾಟ್ ಆಡಲು ಹೋಗಿ ನೇರವಾಗಿ ಥರ್ಡ್ ಮ್ಯಾನ್ ಕಡೆ ಕ್ಯಾಚ್
ಸ್ಟುಪಿಡ್.. ಸ್ಟುಪಿಡ್.. ಸ್ಟುಪಿಡ್ ಎಂದು ಲೈವ್ ಕಾಮೆಂಟ್ರಿಯಲ್ಲೇ ಬೈಗುಳ
ಸಿರಾಜ್ಗೆ ತಂಡದಿಂದ ಬ್ರೇಕ್ ನೀಡಬೇಕು, ಕಳಪೆ ಪ್ರದರ್ಶನಕ್ಕಾಗೇ ಡ್ರಾಪ್
140 ರನ್ ಗಳಿಸಿದ್ದ ಹೆಡ್ ಔಟ್ ಸಂಭ್ರಮ ಬೇಡ, ವಿಲನ್
ವಿರಾಟ್ ಕೊಹ್ಲಿ ಸೈಡ್ ಆಫ್ ಸ್ಟಂಪ್ ಬಾಲ್ ಬೆನ್ನಟ್ಟಿ ಎಡ್ಜ್ ಆಗಿ ಔಟ್
ಕೊಹ್ಲಿ.. ನಿಮಗೆ ತಾಳ್ಮೆ ಇಲ್ಲವೇ? ಆ ಚೆಂಡನ್ನು ಆಡುವ ಅಗತ್ಯವೇನು?
ಜಸ್ ಪ್ರೀತ್ ಬುಮ್ರಾ ಅವರೇ ನಾಯಕರಾಗಿ ಮುಂದುವರೆಯಬೇಕು
ರೋಹಿತ್ ಶರ್ಮಾ ಮಗುವಾಗಿದೆ, ಪತ್ನಿಯೊಂದಿಗೆ ವಿರಾಮ ತೆಗೆದುಕೊಳ್ಳಿ
ಹೀಗೆ ಟೂರ್ನಿಯುದ್ದಕ್ಕೂ ನಾನಾ ಹೇಳಿಕೆಗಳ ಮೂಲಕ ಸುನಿಲ್ ಗವಾಸ್ಕರ್ ಬಾರೀ ಸುದ್ದಿಯಾಗಿದ್ದರು. ಆದ್ರೆ ಇಂಥದ್ದೇ ಹೇಳಿಕೆಗಳು ಟೀಮ್ ಇಂಡಿಯಾ ಆಟಗಾರರ ಮೇಲೆ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಅಂತಾ ರೋಹಿತ್ ಶರ್ಮಾ ಬಿಸಿಸಿಐಗೆ ಮನವಿ ಮಾಡಿದ್ದಾರೆ.