ಶಿವಾಜಿ ಸೊಸೆ ಪಾತ್ರದಲ್ಲಿ ರಶ್ಮಿಕಾ – ಐತಿಹಾಸಿಕ ಪಾತ್ರ ಗೆಲುವು ತಂದುಕೊಡುತ್ತಾ?

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಈಗ ಮುಟ್ಟಿದ್ದೆಲ್ಲಾ ಚಿನ್ನ.. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.. ಇಷ್ಟು ದಿನ ಗ್ಲಾಮರಸ್ ಪಾತ್ರಗಳಲ್ಲಿ ಮಿಂಚಿದ್ದ ರಶ್ಮಿಕಾ ಈಗ ಐತಿಹಾಸಿಕ ಪಾತ್ರಕ್ಕೆ ಬಣ್ಣ ಹಚ್ಚಲ್ಲಿದ್ದಾರೆ.. ಇದೀಗ ಆ ಸಿನಿಮಾದಲ್ಲಿನ ರಶ್ಮಿಕಾ ಲುಕ್ ರಿಲೀಸ್ ಅಗಿದೆ.. ಛಾವ ಸಿನಿಮಾದಲ್ಲಿ ಮಂದಣ್ಣ ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಲುಕ್ ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.. ಅಷ್ಟಕ್ಕೂ ಇಷ್ಟು ದಿನ ಗ್ಲಾಮರಸ್ ಪಾತ್ರಗಳಲ್ಲಿ ಮಿಂಚಿದ್ದ ರಶ್ಮಿಕಾಗೆ ಐತಿಹಾಸಿಕ ಪಾತ್ರ ಗೆಲುವು ತಂದುಕೊಡುತ್ತಾ? ಏಕಾಏಕಿ ರಶ್ಮಿಕಾ ನಿವೃತ್ತಿ ಬಗ್ಗೆ ಮಾತನಾಡಿದ್ಯಾಕೆ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಸಂಜು ಮುಗಿಸಲು ಮಹಾ ಸಂಚು – ಕೆರಿಯರ್ ಕಾಪಾಡಿದ್ದೇ ರಾಹುಲ್ ದ್ರಾವಿಡ್
ರಶ್ಮಿಕಾ ಮಂದಣ್ಣ.. ಸಿನಿಮಾ ಇಂಡಸ್ಟ್ರಿಗೆ ಬಂದ ಕೆಲವೇ ವರ್ಷಗಳಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಸದ್ಯ ಟಾಲಿವುಡ್, ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ಇನ್ನೂ ಅಲ್ಲು ಅರ್ಜುನ್ ಜೊತೆ ನಟಿಸಿದ ‘ಪುಷ್ಪ 2’ ಚಿತ್ರ ರಶ್ಮಿಕಾ ಮಂದಣ್ಣಗೆ ಬಿಗ್ ಸಕ್ಸಸ್ ಕೊಟ್ಟಿದೆ. 1800 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಬಾಕ್ಸಾಫಿಸ್ ನಲ್ಲಿ ಮುನ್ನುಗ್ಗುತ್ತಿದೆ. ಪುಷ್ಪಾ ಸಕ್ಸಸ್ ಬೆನ್ನಲ್ಲೇ ಮಂದಣ್ಣ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಆದ್ರೆ ಇತ್ತೀಚೆಗಷ್ಟೇ ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಕಾಲು ಮುರಿದುಕೊಂಡಿರುವ ನಟಿ ಈಗ ವ್ಹೀಲ್ಚೇರ್ ನಲ್ಲಿ ಓಡಾಡ್ತಿದ್ದಾರೆ. ಚಿಕ್ಕ ಗಾಯ ಎಂದು ಹೆಚ್ಚು ಗಮನ ಕೊಡದೇ ಇರೋದಿಕ್ಕೆ ಈ ಪರಿ ವಿಪರೀತಕ್ಕೆ ಹೋಗಿದೆ ಎನ್ನಲಾಗಿದೆ. ಆದ್ರೂ ರಶ್ಮಿಕಾ ಸಿನಿಮಾ ವಿಚಾರದಲ್ಲಿ ಕಾಂಪ್ರಮೈಸ್ ಮಾಡಿಕೊಂಡಿಲ್ಲ.. ಕಾಲು ನೋವಿದ್ರೂ ವ್ಹೀಲ್ಚೇರ್ ನಲ್ಲೇ ಓಡಾಡಿ ಸಿನಿಮಾ ಪ್ರಚಾರ ಮಾಡ್ತಿದ್ದಾರೆ.. ಇದೀಗ ನೋವಿನಲ್ಲೇ ಶ್ರೀವಲ್ಲಿ ಫ್ಯಾನ್ಸ್ ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.. ಇದೀಗ ಐತಿಹಾಸಿಕ ಕತೆಯೊಂದಿಗೆ ನ್ಯಾಷನಲ್ ಕ್ರಶ್ ತೆರೆಮೇಲೆ ಬರ್ತಿದ್ದಾರೆ..
ಹೌದು.. ರಶ್ಮಿಕಾ ಮಂದಣ್ಣ ಬಾಲಿವುಡ್ ಸಿನಿಮಾ ಛಾವ ನಟಿಸಲಿದ್ದಾರೆ. ಈಗಾಗಲೇ ಈ ಸಿನಿಮಾದಲ್ಲಿನ ರಶ್ಮಿಕಾ ಪಾತ್ರದ ಲುಕ್ ಬಿಡುಗಡೆಯಾಗಿದೆ. ಇದರಲ್ಲಿ ರಶ್ಮಿಕಾ ಛತ್ರಪತಿ ಶಿವಾಜಿ ಸೊಸೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಶ್ಮಿಕಾ ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರತೀ ಯಶಸ್ವೀ ಸಾಮ್ರಾಟನ ಹಿಂದೆಯೂ ಶಕ್ತಿಶಾಲಿ ರಾಣಿ ಇರುತ್ತಾಳೆ ಎಂಬ ಟ್ಯಾಗ್ಲೈನ್ ಈ ಪಾತ್ರದ ಹಿರಿಮೆಯನ್ನು ವಿವರಿಸುವಂತಿದೆ. ಮರಾಠ ಸಾಮ್ರಾಜ್ಯದ ಮಹಾನ್ ಸಾಮ್ರಾಟ ಛತ್ರಪತಿ ಸಾಂಬಾಜಿ ಮಹಾರಾಜ್ ಕುರಿತಾದ ಕಾದಂಬರಿ ಆಧರಿತ ಚಿತ್ರವಿದು. ಸಾಂಭಾಜಿ ಮಹಾರಾಜ್ ಪತ್ನಿ ಯೇಸುಬಾಯಿ ಮಹಾರಾಣಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದು, ನಟಿಯ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದೇ ಫೆಬ್ರವರಿ 14ರಂದು ಛಾವ ಬಿಡುಗಡೆ ಆಗುತ್ತಿದೆ. ಬಾಲಿವುಡ್ ನಟ ವಿಕ್ಕಿ ಕೌಶಲ್ ನಾಯಕ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಸಿನಿಮಾವಿದು.
ಇನ್ನು ಛಾವಾದ ಟ್ರೈಲರ್ ಬಿಡುಗಡೆ ಬೆನ್ನಲ್ಲೇ ರಶ್ನಿಕಾ ನಿವೃತ್ತಿಯ ಬಗ್ಗೆಯೂ ಮಾತನಾಡಿದ್ದಾರೆ.. ಹೌದು ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಭಾವುಕರಾಗಿದ್ದಾರೆ. ಮಹಾರಾಣಿ ಪಾತ್ರ ಮಾಡಲು ಸಿಕ್ಕಿರುವುದು ನನ್ನ ಹೆಮ್ಮೆ ಹಾಗೂ ಭಾಗ್ಯ. ಮಹಾರಾಣಿ ಯೇಸುಬಾಯಿ ಭೋನ್ಸಾಲೆ ಪಾತ್ರ ಮಾಡುತ್ತಿರುವುದು ನನ್ನ ಜೀವಮಾನದ ಅತ್ಯಂತ ಶ್ರೇಷ್ಠ ಎಂದು ಭಾವಿಸುತ್ತೇನೆ. ಈ ಛಾವಾ ಚಿತ್ರದ ಬಳಿಕ ಚಿತ್ರರಂಗದಿಂದ ನಿವೃತ್ತಿಯಾಗಲು ನನಗೆ ಬೇಸರವಿಲ್ಲ. ಈ ಪಾತ್ರದಿಂದ ನನ್ನಲ್ಲಿ ಸಾರ್ಥಕ ಭಾವವಿದೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಈ ಮಾತು ಕೇಳಿದ ಫ್ಯಾನ್ಸ್ ಶಾಕ್ ಆಗಿದ್ದಾರೆ.. ಈ ಮಾತಿನ ಅರ್ಥ ಏನು ಅಂತಾ ಕೇಳ್ತಿದ್ದಾರೆ..
ಇನ್ನು, ರಶ್ಮಿಕಾ ಮಂದಣ್ಣಗೆ ಈ ಚಿತ್ರದ ಮೇಲೆ ವಿಪರೀತ ನಿರೀಕ್ಷೆಗಳಿವೆ. ಹೀಗಾಗಿಯೇ ಕಾಲು ನೋವಿದ್ರೂ ರಶ್ಮಿಕಾ ವೀಲ್ ಚ್ಹೇರ್ ನಲ್ಲಿಯೇ ಓಡಾಡಿಕೊಂಡು ಛಾವಾ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ.. ರಶ್ಮಿಕ ಚಿತ್ರದ ಮೇಲೆ ರಶ್ಮಿಕಾ ಅವರಿಗೆ ಇರುವ ಶ್ರದ್ದೆಯನ್ನು ಕಂಡು ಅನೇಕರು ರಶ್ಮಿಕಾ ಮಂದಣ್ಣ ಅವರನ್ನು ಸದ್ಯ ಹೊಗಳುತ್ತಿದ್ದಾರೆ. ಕೆಲವರು ರಶ್ಮಿಕಾ ಮಂದಣ್ಣ ಅವರ ಈ ಸ್ಥಿತಿಯನ್ನು ಕಂಡು ಮರುಗುತ್ತಿದ್ದಾರೆ. ನಿಮ್ಮನ್ನು ಈ ಸ್ಥಿತಿಯಲ್ಲಿ ನೋಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ದುಖ ಪಡುತ್ತಿದ್ದಾರೆ. ಇನ್ನು ಕೆಲವರು ಬೇಗ ಗುಣಮುಖರಾಗಿ ಎಂದು ಹಾರೈಸುತ್ತಿದ್ದಾರೆ.