ಫೋನ್ ನೋಡಿ ರೇಟ್!! ಓಲಾ , ಉಬರ್ ಮೋಸ ಮಾಡ್ತಿದ್ಯಾ?
ಕೇಂದ್ರಕ್ಕೆ ಸ್ಕ್ಯಾಮ್ ಗೊತ್ತಾಗಿದ್ದೇಗೆ?

ಫೋನ್ ನೋಡಿ ರೇಟ್!! ಓಲಾ , ಉಬರ್ ಮೋಸ ಮಾಡ್ತಿದ್ಯಾ?ಕೇಂದ್ರಕ್ಕೆ ಸ್ಕ್ಯಾಮ್ ಗೊತ್ತಾಗಿದ್ದೇಗೆ?

ಓಲಾ ಉಬರ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ.. ಬೆಂಗಳೂರಿನ ಒಂದು ಪುಟ್ಟ ಮಗುವಿಗೆ ಕೇಳಿದ್ರೆ ಈ ಆ್ಯಪ್‌ ಬಗ್ಗೆ ಹೇಳುತ್ತೆ.. ಯಾಕಂದ್ರೆ ಬೆಂಗಳೂರಿನ ಶೇ 70 ರಷ್ಟು ಜನ ಓಲಾ ಉಬರ್ ಟ್ಯಾಕ್ಸಿ ಮತ್ತು ಆಟೋದಲ್ಲಿ ಓಡಾಡ್ತಾನೆ ಇರ್ತಾರೆ.. ಲಕ್ಷಾಂತರ ಜನ ಪ್ರಯಾಣ ಮಾಡ್ತಾನೆ ಇರ್ತಾರೆ.. ಈ ಆ್ಯಪ್ ಮೇಲೆ ಸಾಕಷ್ಟು ಗ್ರಹಕರು ನಂಬಿಕೆ ಇಟ್ಟುಕೊಂಡಿದ್ದಾರೆ.. ಆದ್ರೆ ಆ್ಯಪ್‌ನವರು ದೊಡ್ಡ ಮಟ್ಟದಲ್ಲಿ ಮೋಸಾ ಮಾಡುತ್ತಿದ್ದಾರೆ ಅನ್ನೋ ಆರೋಪ ಈಗ ಕೇಳಿ ಬಂದಿದೆ. ಅಷ್ಟೇ ಅಲ್ಲ ಈ ಎರಡು ಆ್ಯಪ್ ಕಂಪನಿಗೆ ಕೇಂದ್ರ ಸರ್ಕಾರ ನೋಟಿಸ್ ಕೂಡ ನೀಡಿದೆ.

ಓಲಾ ಮತ್ತು ಉಬರ್‌ ಮೂಲಕ ವಾಹನಗಳನ್ನ ಬುಕ್ ಮಾಡಿದ ಕೆಲವೇ ನಿಮಿಷಗಳಲ್ಲಿ ಮನೆ ಬಾಗಿಲಿಗೆ ಬರುತ್ತವೆ. ಆದರೆ ರೇಟ್ ಎಷ್ಟು ದೂರವಿದೆ, ಎಷ್ಟು ಟ್ರಾಫಿಕ್ ಇದೆ, ರಾತ್ರಿನಾ , ಹಗಲ ಅನ್ನೋದ್ರ ಮೇಲೆ ನಿಗದಿಯಾಗತ್ತೆ. ಆದ್ರೆ ನಿಮ್ಗೆ ಗೊತ್ತಿಲ್ಲ ರೀತಿಯಲ್ಲೂ ಈ ಆ್ಯಪ್‌ಗಳು ಮೋಸ ಮಾಡ್ತಿವೆ ಅನ್ನೋ ಆರೋಪ  ಕೇಳಿ ಬಂದಿದೆ. ಏನಿದು ಮೋಸ ಅಂತ ನೋಡೋದಾದ್ರೆ.

ಫೋನ್ ನೋಡಿ ಓಲಾ, ಉಬರ್‌ ರೇಟ್

ಈ ಓಲಾ ಉಬರ್ ಮೇಲೆ ಬಂದಿರೋ ಆರೋಪವೇನು ಅಂದ್ರೆ ಫೋನ್ ನೋಡಿ ರೇಟ್ ಹೇಳ್ತಾರೆ ಅನ್ನೋದು. ನಾವು ಬುಕ್ ಮಾಡೋ ಮೊಬೈಲ್ ಯಾವುದು ಅನ್ನೋದರ ಮೇಲೆ ರೇಟ್ ಫಿಕ್ಸ್ ಮಾಡ್ತವಂತೆ.. ಅಯ್ಯೋ ದೇವರೇ ನಾವ್ ಬುಕ್ ಮಾಡೋದು ಆ್ಯಪ್ ಮೂಲಕ, ನಮ್ ಮೊಬೈಲ್ ಅವರ್ ಬಂದ್ ನೋಡ್ತಾರಾ ಅಂತ ಕೇಳ್ಬೇಡಿ.. ನಾವು ಟೆಕ್ನಾಲಜಿಯಲ್ಲಿ ಸಾಕಷ್ಟು ಮುಂದುವರಿದಿದ್ದೇವೆ. ನಾವು ಒಂದು ಆ್ಯಪ್ ಇನ್‌ಸ್ಟಾಲ್  ಮಾಡಿದ್ರೆ ಆ ಆ್ಯಪ್ ಮೂಲಕ ನಮ್ಮ ಕಂಪ್ಲೀಟ್ ಮಾಹಿತಿ ಅವರಿಗೆ ಸಿಗುತ್ತೆ..ನಮ್ಮ ಮೊಬೈಲ್ ಯಾವುದು, ಎಷ್ಟು ಬೆಲೆಯದ್ದು, ನಾವು ತರ ಹೈಫೈ ಲೈಪ್ ಲೀಡ್ ಮಾಡುತ್ತಿದ್ದೇವೆ ಅನ್ನೋದು.. ಅದೇ ತರ ಈ ಓಲಾ ಉಬರ್ ಆ್ಯಪ್‌ಗಳಿಗೂ ನಮ್ಮ ಮೊಬೈಲ್‌ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತೆ. ಇದನ್ನ ಆಧರಿಸಿ ವಿಭಿನ್ನ ಬೆಲೆಯನ್ನ  ವಿಧಿಸುತ್ತಿವೆ ಅನ್ನೋ ಆರೋಪ ಕೇಳಿ ಬಂದಿದೆ.

 ಐಫೋನ್‌ಗೆ ಒಂದು ರೇಟ್ ಆಂಡ್ರಾಯ್ಡ್‌ಗೆ ಒಂದು ರೇಟ್‌

ಹೌದು, ಈ ಓಲಾ ಉಬರ್ ಕಂಪನಿಗಳು ಐಫೋನ್‌ನಲ್ಲಿ ಬುಕ್ ಮಾಡಿದ್ರೆ ಒಂದು ರೇಟ್ ಆಂಡ್ರಾಯ್ಡ್‌ನಲ್ಲಿ ಬುಕ್ ಮಾಡಿದ್ರೆ ಇನ್ನೊಂದು ರೇಟ್‌ ವಿಧಿಸುತ್ತಿವೆ.. ಉದಾಹರಣೆಗೆ ಮೆಜೆಸ್ಟಿಕ್‌ನಿಂದ ಜಯನಗರಕ್ಕೆ ನಾನು ಆಂಡ್ರಾಯ್ಡ್‌ ಫೋನ್‌ನಲ್ಲಿ ಬುಕ್ ಮಾಡಿದಾಗ 150 ರೂಪಾಯಿ ತೋರಿಸುತ್ತೆ.. ಅದೇ ಟೈಂನಲ್ಲಿ ನಾನು ಅದೇ ಸ್ಥಳಕ್ಕೆ ಐಫೋನ್‌ನಿಂದ ಮಾಡಿದ್ರೆ 170 ರೂಪಾಯಿ ತೋರಿಸುತ್ತೆ.. ಇಲ್ಲಿ ಸೇಮ್ ಡಿಸ್ಟೆನ್ಸ್, ಸೇಮ್ ವೆಹಿಕಲ್ ಆದ್ರೆ ಮೊಬೈಲ್ ಬೇರೆ ಬೇರೆ ಆಗಿದ್ದಕ್ಕೆ ರೇಟ್ ಚೇಂಜ್ ಆಗುತ್ತೆ ಅನ್ನೋ ಆರೋಪ ಕೇಳಿ ಬಂದಿದೆ.. ಈಬಗ್ಗೆ ಸಾಕಷ್ಟು ಜನ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.  ಕೆಲ ಮಾದರಿಯ ಫೋನ್​ಗಳಲ್ಲಿ ಹೆಚ್ಚಿನ ಶುಲ್ಕ ತೋರಿಸಿದರೆ, ಇನ್ನು ಕೆಲ ಮಾದರಿಗಳಲ್ಲಿ ಕಡಿಮೆ ದರಗಳನ್ನು ತೋರಿಸಲಾಗುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ. ಆದ್ರೆ ಐಫೋನ್‌ ಬಳಸುವವರ ಬಳಿ ಹೆಚ್ಚು ಹಣ ಇರುತ್ತೆ. ದುಡ್ಡಿನ ಬಗ್ಗೆ ಪ್ರಶ್ನೆ ಮಾಡಲ್ಲ, ಕೊಟ್ಟು ಬರ್ತಾರೆ ಅನ್ನೋದು ಇವರ ಐಡಿಯಾ.

ಓಲಾ, ಉಬರ್‌ ಕೇಂದ್ರದ ನೋಟಿಸ್ 

ಒಂದೇ ಸ್ಥಳದಲ್ಲಿ ಐಫೋನ್ ಮತ್ತು ಆಂಡ್ರಾಯ್ಡ್ ಬಳಕೆದಾರರ ನಡುವೆ ದರಗಳಲ್ಲಿ ತೋರಿಸುವ ವ್ಯತ್ಯಾಸವೇ ನೋಟಿಸ್​ಗೆ ಕಾರಣವಾಗಿದೆ. ಈ ಬಗ್ಗೆ ಸಾಲು ಸಾಲು ದೂರು ಹಿನ್ನೆಲೆಯಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ‘ಟ್ರಾವೆಲ್ ಆ್ಯಪ್ ಕಂಪನಿ’ಗಳಾದ ಉಬರ್ ಮತ್ತು ಓಲಾಗೆ ನೋಟಿಸ್ ಜಾರಿ ಮಾಡಿದೆ. ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಈ ಬಗ್ಗೆ ತನಿಖೆ ಆರಂಭಿಸಿದೆ  ರೈಡ್ ಬುಕ್ ಮಾಡಲು ಬಳಸುವ ಸ್ಮಾರ್ಟ್‌ಫೋನ್ ಪ್ರಕಾರದ ಆಧಾರದ ಮೇಲೆ ವಿಭಿನ್ನ ದರಗಳ ವರದಿಗಳ ಕುರಿತು ಸ್ಪಷ್ಟೀಕರಣ ನೀಡುವಂತೆ ಕೇಂದ್ರ ಸರ್ಕಾರ ಹೇಳಿದೆ. ಇದರ ನಡುವೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಓಲಾ, ಉಬರ್ ಮತ್ತು ರಾಪಿಡೊದಂತಹ ಪ್ಲಾಟ್‌ಫಾರ್ಮ್‌ಗಳ ಬಗ್ಗೆ ತನಿಖೆ ನಡೆಸುವಂತೆ CCPAಗೆ ಆದೇಶಿಸಿದ್ದಾರೆ.

 ನಾವೇನು ತಪ್ಪು ಮಾಡಿಲ್ಲವೆಂದ ಓಲಾ, ಉಬರ್

ತನ್ನ ಮೇಲೆ ಆರೋಪ ಬರುತ್ತಿದ್ದಂತೆ ಈ ಪ್ರತಿಕ್ರಿಯಿಸಿದ ಓಲಾ ಮತ್ತು ಉಬರ್ ಕಂಪೆನಿಗಳು ಗ್ರಾಹಕರ ಮೊಬೈಲ್ ಫೋನ್ ಆಧಾರದಲ್ಲಿ ದರವನ್ನು ನಿಗದಿಪಡಿಸಿಲ್ಲ ಎಂದು ಆರೋಪವನ್ನು ತಳ್ಳಿ ಹಾಕಿದೆ. ಓಲಾ ವಕ್ತಾರರು ಈ ಕುರಿತು ಪ್ರತಿಕ್ರಿಯಿಸುತ್ತಾ, ನಮ್ಮ ಎಲ್ಲಾ ಗ್ರಾಹಕರಿಗೆ ನಾವು ಏಕರೂಪದ ದರ ಹೊಂದಿದ್ದೇವೆ ಮತ್ತು ಸೆಲ್‌ ಫೋನ್ ಆಧರಿಸಿ ನಾವು ವ್ಯತ್ಯಾಸವನ್ನು ಮಾಡುವುದಿಲ್ಲ.  ನಾವು CCPAಗೆ ಅದನ್ನೇ ಸ್ಪಷ್ಟಪಡಿಸಿದ್ದೇವೆ. ಈ ವಿಷಯದಲ್ಲಿ ಯಾವುದೇ ತಪ್ಪು ತಿಳುವಳಿಕೆಯನ್ನು ನಿವಾರಿಸಲು ನಾವು ಅವರೊಂದಿಗೆ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.  ಪಿಕ್-ಅಪ್ ಪಾಯಿಂಟ್‌ಗಳು, ಆಗಮನದ ಅಂದಾಜು ಸಮಯ  ಮತ್ತು ಡ್ರಾಪ್-ಆಫ್ ಪಾಯಿಂಟ್‌ಗಳಿಂದಾಗಿ ದರ ವ್ಯತ್ಯಾಸಗಳು ಉಂಟಾಗಬಹುದು ಎಂದು ಕಂಪನಿ ಹೇಳಿದೆ.    

 ಕಷ್ಟ ಪಡದೇ ಜನರ ಹಣ ಲೂಟಿ?

ಓಲಾ ಉಬರ್ ಕಷ್ಟ ಪಡದೇ ಕೇವಲ ಗ್ರಹಕರು ಮತ್ತು ವಾಹನದ ಮಾಲೀಕರ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಾ ಭರ್ಜರಿ ಹಣ ಸಂಪಾನೆ ಮಾಡುತ್ತಿದೆ. ಇಲ್ಲಿ ಗ್ರಾಹಕನಿಂದ ಹೆಚ್ಚು ಹಣ ತೆಗೆದುಕೊಳ್ಳು ಈ ಕಂಪನಿಗಳು ವಾಹನದ  ಮಾಲೀಕರು ಹೆಚ್ಚು ಹಣವನ್ನ ನೀಡುತ್ತಿಲ್ಲ.. 100 ರೂಪಾಯಿಯಲ್ಲಿ 30 ರೂ . ತಾನು ತಗೊಂಡು  ಇನ್ನೂ 70 ರೂಪಾಯಿ ವಾಹನಗಳ ಮಾಲೀಕರಿಗೆ ನೀಡುತ್ತಿದೆ. ಇಲ್ಲಿ ಕೇವಲ ಮಧ್ಯವರ್ತಿ ಕೆಲಸ ಮಾಡಿಕೊಂಡು ಉಬರ್ ಮತ್ತು ಓಲಾ ಭರ್ಜರಿ  ಹಣ ಮಾಡುತ್ತಿದೆ. ಆದ್ರೆ ಎಷ್ಟು ಆಟೋ ಮತ್ತು ಟ್ಯಾಕ್ಸಿ ಮಾಲೀಕರು ಸಿಕ್ಕಿದ್ದಷ್ಟು ಸಿಗಲಿ, ಇದನ್ನ ಬಿಟ್ರೆ ಹೊಟ್ಟೆಗೆ ಏನೂ ಸಿಗಲ್ಲ ಎಂಬ ಅನಿವಾರ್ಯ ಕಾರಣಕ್ಕೆ ಓಲಾ, ಉಬರ್‌ಗೆ ತಮ್ಮ ವಾಹನವನ್ನ ಅಟ್ಯಾಚ್ ಮಾಡುತ್ತಿದ್ದಾರೆ.

ಉಬರ್ ಮತ್ತು ಓಲಾ ಮೇಲೆ ಬಂದಿರೋ ಆರೋಪ ನೋಡಿದ್ರೆ ನಿಜಕ್ಕೂ ಭಯ ಆಗುತ್ತಿದೆ.. ಸಾಕಷ್ಟು ನಂಬಿಕೆ ಇರುವಂತಹ ಈ ಆ್ಯಪ್‌ಗಳೇ ಜನ ಯಾವ ಫೋನ್ ಬಳಸುತ್ತಿದ್ದಾರೆ. ಎಷ್ಟು ರಿಚ್ ಇದ್ದಾರೆ ಅನ್ನೋದನ್ನ ತಿಳಿದುಕೊಳ್ಳುತ್ತಿದ್ದಾವೆ ಅಂದ್ರೆ, ಬೇರೆ ಆ್ಯಪ್‌ಗಳ ಕತೆಯೇನು? ಸಾಕಷ್ಟು ಜನ 3rd ಪಾರ್ಟಿ ಆ್ಯಪ್‌ಗಳನ್ನ ಬಳಸುತ್ತಾರೆ. ಅಧಿಕೃತ ಕಂಪನಿ ವಾಟ್ಸಾಪ್ ಇದ್ದರು ಕೆಲವರು Gb ವಾಟ್ಯಾಪ್ ಬಳಸುತ್ತಾರೆ. ಹಾಗೇ ಸಾಕಷ್ಟು ಜನ ಫೇಕ್ ಲೋನ್ ಅಪ್ಲಿಕೇಶನ್ ಬಳಸುತ್ತಾರೆ.. ಇಂತಹ ಆ್ಯಪ್‌ಗಳು ಒಮ್ಮೆ ನಮ್ಮ ಮೊಬೈಲ್‌ಗೆ ಇನ್‌ಸ್ಟಾಲ್ ಆದ್ರೆ ಮುಗಿತು.. ನಮ್ಮ ಫೋನ್‌ನಲ್ಲಿರೋ ಕಾಂಟ್ಯಾಕ್‌ನಿಂದ ಹಿಡಿದು, ಗ್ಯಾಲರಿಯಲ್ಲಿರೋ ನಮ್ಮ ಫೋಟೋ ಕೂಡ ಅವರಿಗೆ ಸಿಗುತ್ತೆ.. ಹೀಗಾಗಿ ನಾವು ಇನ್‌ಸ್ಟಾಲ್ ಮಾಡಿಕೊಳ್ಳುವ ಆ್ಯಪ್‌ಗಳ ಮೇಲೆ ನಮ್ಗೆ ಸಾಕಷ್ಟು ಗಮನ ಇರಬೇಕು.. ಸೈಬರ್ ವಂಚಕರು ಕೂಡ ಹೆಚ್ಚಾಗಿದ್ದು, ಈ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು.. ಇಂತಹ ಚಿಕ್ಕ ಚಿಕ್ಕ ವಿಷ್ಯಗಳು ನಮಗೆ ದೊಡ್ಡ ಪಾಠ..

Kishor KV

Leave a Reply

Your email address will not be published. Required fields are marked *