ಭೂಮಿಯ ಅಂತ್ಯ ಯಾವಾಗ? ವಿಜ್ಞಾನಿಗಳು ಕೊಟ್ಟ ವಾರ್ನಿಂಗ್ ಏನು?
ಮನುಷ್ಯ ಸೇರಿ ಎಲ್ಲಾ ಜೀವಿಗಳು ನಾಶ!!
ಈ ಹಿಂದೆ 2012 ಡಿಸೆಂಬರ್ 12 ರಂದು ಪ್ರಳಯ ಆಗುತ್ತೆ ಎಂದಿದ್ರು.. ಆ ಮೇಲೆ 2021 ಡಿಸೆಂಬರ್ 21ಕ್ಕೆ ಭೂಮಿ ಅಂತ್ಯವಾಗಲಿದೆ ಎಂದಿದ್ದರು. ಆದರೆ, ಅದು ಸುಳ್ಳಾಯಿತು. ಇನ್ನು ಬಲ್ಲೇರಿಯನ್‌ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಪ್ರಕಾರ 5079ಕ್ಕೆ ಜಗತ್ತು ಕೊನೆಯಾಗುತ್ತದೆ ಎಂದಿದ್ದಾರೆ. ಆದರೆ, ನಿಜವಾಗುತ್ತಾ ಎಂದು ತಿಳಿಯಲು ನಾವೇ ಇರುವುದಿಲ್ಲ. ಅದೇನೆ ಇರಲಿ ಇದೀಗ ವಿಜ್ಞಾನಿಗಳು ಸ್ಫೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಭೂಮಿಯು ಅಂತ್ಯದ ದಿನವನ್ನು ಪತ್ತೆಹಚ್ಚಿದ್ದಾರೆ. ಒಂದು ದಿನ ಇಡೀ ಭೂಮಿಯು ಸಂಪೂರ್ಣವಾಗಿ ನಾಶವಾಗುತ್ತದೆ ಮತ್ತು ಭೂಮಿ ಅಥವಾ ಸಮುದ್ರದಲ್ಲಿ ಒಂದೇ ಒಂದು ಜೀವಿ ಉಳಿಯುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಪ್ರಪಂಚದ ಅಂತ್ಯದ ಬಗ್ಗೆ ವಿಜ್ಞಾನಿಗಳು ಕೆಲವು ಹೊಸ ಆವಿಷ್ಕಾರಗಳನ್ನು ಸಹ ಮಾಡಿದ್ದಾರೆ.
ಮುಂದಿನ 250 ಮಿಲಿಯನ್ ವರ್ಷಗಳಲ್ಲಿ ಒಂದು ದುರಂತ ಸಂಭವಿಸಲಿದ್ದು, ಭೂಮಿಯು ಸಂಪೂರ್ಣವಾಗಿ ನಾಶವಾಗಲಿದೆ ಎಂದು ಬ್ರಿಸ್ಟಲ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೇಳಿರುವುದನ್ನು ಡೈಲಿ ಮೇಲ್ ವರದಿ ಮಾಡಿದೆ. ಈ ದುರಂತದಲ್ಲಿ ಮಾನವರು ಸೇರಿದಂತೆ ಭೂಮಿಯ ಮೇಲಿನ ಎಲ್ಲಾ ಜೀವಿಗಳು ನಾಶವಾಗುತ್ತವೆ. ಆ ಸಮಯದಲ್ಲಿ ಭೂಮಿಯ ಉಷ್ಣತೆಯು 70 ಡಿಗ್ರಿ ಸೆಲ್ಸಿಯಸ್ ತಲುಪುತ್ತದೆ ಮತ್ತು ಯಾವುದೇ ಜೀವಿ ಆ ತಾಪಮಾನದಲ್ಲಿ ಬದುಕಲು ಸಾಧ್ಯವಾಗುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಕಂಪ್ಯೂಟರ್ ಸಿಮ್ಯುಲೇಶನ್‌ಗಳನ್ನು ನಡೆಸುವ ಮೂಲಕ ಇದನ್ನು ಕಂಡುಹಿಡಿಯಲಾಗಿದೆ. ಭೂಮಿಯಲ್ಲಿ ಇಂಗಾಲದ ಪ್ರಮಾಣದಲ್ಲಿನ ಹೆಚ್ಚಳವು ಭೂಮಿಯನ್ನು ಶೀಘ್ರವಾಗಿ ವಿನಾಶದತ್ತ ಕೊಂಡೊಯ್ಯುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. 66 ಮಿಲಿಯನ್ ವರ್ಷಗಳ ಹಿಂದೆ ಇದೇ ರೀತಿಯ ಪರಿಸ್ಥಿತಿ ಸಂಭವಿಸಿದೆ ಮತ್ತು ಅದು ಡೈನೋಸಾರ್‌ಗಳ ಅಳಿವಿಗೆ ಕಾರಣ ಎಂದು ಹೇಳಲಾಗುತ್ತಿದೆ.
ಭೂಮಿ ಮೇಲೆ ಒಂದೇ ಖಂಡವಾಗುತ್ತಾ?
ಸುಮಾರು 300 ಮಿಲಿಯನ್ ವರ್ಷಗಳ ಹಿಂದೆ, ಭೂಮಿಯ ಮೇಲಿನ ಎಲ್ಲಾ ಖಂಡಗಳು ಒಂದು ದೊಡ್ಡ ಸಾಗರದಿಂದ ಸಂಪರ್ಕ ಹೊಂದಿದ್ದವು. ಇದನ್ನು ಪನಾಗಿಯಾ ಎಂದು ಕರೆಯಲಾಗುತ್ತಿತ್ತು. ಇದು ನಿಧಾನವಾಗಿ ವಿಭಜನೆಯಾಗಿ ಇಂದು ನಮಗೆ ತಿಳಿದಿರುವ ಖಂಡಗಳಾಗಿ ಮಾರ್ಪಟ್ಟಿತು ಎಂದು ಹೇಳಲಾಗುತ್ತದೆ. ಅದೇ ರೀತಿ, 250 ಮಿಲಿಯನ್ ವರ್ಷಗಳ ನಂತರ, ಭೂಮಿಯು ಒಂದೇ ಖಂಡವಾಗುತ್ತದೆ ಮತ್ತು ಪನಾಗಿಯಾ ಅಲ್ಟಿಮಾ ಎಂಬ ಖಂಡವು ರೂಪುಗೊಳ್ಳುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಅದರ ನಂತರ, ಭೂಮಿಯು ಉರಿಯಲು ಪ್ರಾರಂಭವಾಗುತ್ತದೆ, ಒಣಗುತ್ತದೆ ಮತ್ತು ಅಂತಿಮವಾಗಿ ವಾಸ ಮಾಡೋಕೆ ಆಗದಂತೆ ಆಗುತ್ತೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.
ಅಂತ್ಯದ ವೇಳೆಗೆ ಜ್ವಾಲಾಮುಖಿಗಳು ಸ್ಫೋಟ
ಭೂಮಿಯ ಅಂತ್ಯದ ವೇಳೆಗೆ ಜ್ವಾಲಾಮುಖಿಗಳು ಸ್ಫೋಟಗೊಳ್ಳುತ್ತವೆ ಎಂದು ಸಂಶೋಧಕರು ಅಭಿಪ್ರಾಯ. ಜ್ವಾಲಾಮುಖಿಗಳು ಭೂಮಿಯ ಹೆಚ್ಚಿನ ಭಾಗಗಳಲ್ಲಿವೆ. ಈ ಸ್ಫೋಟಗಳು ಭೂಮಿಯ ಮೇಲೆ ಇಂಗಾಲದ ಡೈಆಕ್ಸೆಡ್ ಬಿಡುಗಡೆಯನ್ನು ಹೆಚ್ಚಿಸುತ್ತವೆ ಮತ್ತು ಆಹಾರ, ನೀರಿನ ಮೂಲಗಳು ಮತ್ತು ಆಮ್ಲಜನಕವಿಲ್ಲದೆ ಭೂಮಿಯ ಮೇಲಿನ ಜೀವವು ಕೊನೆಗೊಳ್ಳುತ್ತದೆ ಎಂದು ವಿಜ್ಞಾನಿಗಳು ಅನಿಸಿಕೆ. ತೀವ್ರ ತಾಪಮಾನದಿಂದಾಗಿ ಭೂಮಿಯು ಯಾವುದೇ ಜೀವಿಗಳಿಗೆ ವಾಸಕ್ಕೆ ಯೋಗ್ಯವಲ್ಲ ಎಂದು ಸಂಶೋಧರು ಹೇಳುತ್ತಿದ್ದಾರೆ.. ಆದ್ರೆ ನಾವು ಅಲ್ಲಿ ತನಕ ಇರಲ್ಲ.. ನಾವು ಇರೋ ತನಕ ಭೂಮಿ ಏನು ಆಗಲ್ಲ..