TOP 10 ಶ್ರೀಮಂತ ದೇಶಗಳಿವು – ತಲಾವಾರು ಆದಾಯ ಎಷ್ಟಿದೆ ಗೊತ್ತಾ?
ಭಾರತ, ಅಮೆರಿಕಕ್ಕೆ ಎಷ್ಟನೇ ಸ್ಥಾನ?
ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ದೇಶವಾಗಿದೆ. ಆದರೆ ತಲಾ ಆದಾಯದ ವಿಷಯದಲ್ಲಿ, ನಾವು ಇನ್ನೂ ಅನೇಕ ರಾಷ್ಟ್ರಗಳಿಗಿಂತ ಹಿಂದುಳಿದಿದ್ದೇವೆ. ವಿಶ್ವದ ಅಗ್ರ 10 ಆರ್ಥಿಕತೆಗಳಲ್ಲಿ ಅಮೆರಿಕವು ಅತ್ಯಧಿಕ GDP ಹೊಂದಿದೆ. ಆದರೆ ತಲಾ ಆದಾಯದಲ್ಲಿ ಅಮೆರಿಕ ಮತ್ತು ಭಾರತ ಮೊದಲ 5 ರಾಷ್ಟ್ರಗಳ ಪಟ್ಟಿಯಲ್ಲಿಯೂ ಇಲ್ಲ. ಹಾಗಿದ್ರೆ ತಲಾ ಆದಾಯದಲ್ಲಿ ಯಾವ ದೇಶಗಳು ಮುಂದಿವೆ.. ಅದಕ್ಕೆ ಕಾರಣವೇನು ಅನ್ನೋದನ್ನ ನೋಡ್ತಾ ಹೋಗೋಣ
ಇದನ್ನೂ ಓದಿ: ಭಾರತ ಆರ್ಮಿಗೆ ಸಖತ್ ಪವರ್ – ಹೈಪರ್ ಸಾನಿಕ್ ಟೆಕ್ನಾಲಜಿ ಸಕ್ಸಸ್
ತಲಾ ಆದಾಯವು ಜನರ ಜೀವನ ಮಟ್ಟವನ್ನು ಸೂಚಿಸುತ್ತದೆ. ಇದು, ಯಾವುದಾದರೂ ದೇಶ, ರಾಜ್ಯ, ನಗರ ಅಥವಾ ಇತರ ಪ್ರದೇಶದಲ್ಲಿ ವಾಸಿಸುವ ಜನರ ಸರಾಸರಿ ಆದಾಯವಾಗಿದೆ. ಇದನ್ನು ಲೆಕ್ಕಾಚಾರ ಮಾಡಲು, ನಾವು ಆ ದೇಶದ ಜಿಡಿಪಿಯನ್ನು ಅದರ ಒಟ್ಟು ಜನಸಂಖ್ಯೆಯಿಂದ ಭಾಗಿಸಬೇಕು. ಆದರೆ ತಲಾ ಆದಾಯವು ದೇಶದ ನಾಗರಿಕರ ಏಳಿಗೆಯನ್ನು ತೋರಿಸುವ ಪ್ರಮುಖ ಸೂಚಕವಾಗಿದೆ. ತಲಾ ಆದಾಯ = ರಾಷ್ಟ್ರೀಯ ಆದಾಯ % ದೇಶದ ಜನಸಂಖ್ಯೆ.. ಆಗ ತಲಾ ಆದಾಯ ಎಷ್ಟಿದೆ ಅನ್ನೋದು ಗೊತ್ತಾಗುತ್ತೆ.. ಹಾಗಿದ್ರೆ ತಲಾ ಆದಾಯದಲ್ಲಿ .ಯಾವೆಲ್ಲಾ ದೇಶದಳು ಟಾಪ್ನಲ್ಲಿವೆ ಅನ್ನೋದನ್ನ ನೋಡೋದಾದ್ರೆ..
ಲಕ್ಸೆಂಬರ್ಗ್
ಒಂದು ಸಣ್ಣ ಯುರೋಪಿಯನ್ ದೇಶವಾದ ಲಕ್ಸೆಂಬರ್ಗ್, GDP ತಲಾವಾರು ಪ್ರಕಾರ ವಿಶ್ವದ ಆರ್ಥಿಕತೆಗಳ ಪಟ್ಟಿಯಲ್ಲಿ ಟಾಪ್ 1 ಸ್ಥಾನದಲ್ಲಿದೆ.ಆದ್ರೆ ಅಮೆರಿಕಾ ಈ ಸ್ಥಾನದಿಂದ ಹೊರಗಿದೆ. IMF ಪ್ರಕಾರ, 2024 ಕ್ಕೆ ಲಕ್ಸೆಂಬರ್ಗ್ನ ತಲಾವಾರು GDP 1,43,742.69 ಡಾಲರ್ ಎಂದು ಅಂದಾಜಿಸಲಾಗಿದೆ.
ಐರ್ಲೆಂಡ್
ಐರೋಪ್ಯ ಒಕ್ಕೂಟದ ಸದಸ್ಯ ಐರ್ಲೆಂಡ್ ಕೂಡ ತಲಾವಾರು GDP ಯಲ್ಲಿ 10 ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ. 2024 ರಲ್ಲಿ IMF ಅಂದಾಜಿನ ಪ್ರಕಾರ, ಐರ್ಲೆಂಡ್ನ ತಲಾವಾರು GDP 1,31,550 ಡಾಲರ್ ಎಂದು ಅಂದಾಜಿಸಿದೆ.
ಸಿಂಗಾಪುರ
ವಿಶ್ವದ ಪ್ರಮುಖ ವ್ಯಾಪಾರ ಕೇಂದ್ರ ನಗರ ದೇಶವಾಗಿರುವ ಸಿಂಗಾಪುರವು $530.71 ಶತಕೋಟಿ ಜಿಡಿಪಿ ಹೊಂದಿದ್ದು, ಅದರ PPP ಆಧಾರಿತ ವಿಶ್ವದ GDP ಪಾಲು ಶೇ. 0.45 ರಷ್ಟಾಗಿದೆ. ಇನ್ನು ಚೀನಾದ ಆರ್ಥಿಕತೆಯು ಸಿಂಗಾಪುರದ ಉತ್ಪಾದನಾ ವಲಯಕ್ಕೆ ನಿರ್ಣಾಯಕ ವ್ಯಾಪಾರ ಪಾಲುದಾರನಾಗಿದೆ.
ಮಕಾವೊ
ಚೀನಾದ ವಿಶೇಷ ಆಡಳಿತ ಪ್ರದೇಶವಾಗಿರುವ ಮಕಾವೊ $53.45 ಶತಕೋಟಿ ಜಿಡಿಪಿ ಹೊಂದಿದೆ. ಇನ್ನು ಇದರ PPP ಆಧರಿಸಿ ವಿಶ್ವದ GDP ಯ ಪಾಲು ಶೇ.0.05 ಆಗಿದೆ. ಏಳು ಜನಸಂಖ್ಯೆ ಹೊಂದಿರುವ ಇದರ ಸಂಪತ್ತು ಪ್ರಾಥಮಿಕವಾಗಿ 40 ಕ್ಕೂ ಹೆಚ್ಚು ಕ್ಯಾಸಿನೊಗಳಿಂದ ಬರುತ್ತದೆ, ಇದು ವಿಶ್ವದ ಅಗ್ರ ಪ್ರಯಾಣದ ತಾಣಗಳಲ್ಲಿ ಒಂದಾಗಿದೆ. ಇನ್ನು ಮಕಾವೊ ಏಷ್ಯಾದ ಮೊದಲ ಮತ್ತು ಕೊನೆಯ ಯುರೋಪಿಯನ್ ವಸಾಹತು.
ಕತಾರ್
ತಲಾವಾರು ಅತಿ ಹೆಚ್ಚು GDP ಹೊಂದಿರುವ ಟಾಪ್ 10 ದೇಶಗಳ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿ ಕತಾರ್ ಇದೆ. IMF ಕತಾರ್ನ ತಲಾವಾರು GDP ಯನ್ನು 2024ಕ್ಕೆ 1,18,760 ಡಾಲರ್ ಎಂದು ಅಂದಾಜಿಸಿದೆ.
ನಾರ್ವೆ
ಪಾಶ್ಚಿಮಾತ್ಯ ಯುರೋಪಿಯನ್ ಪ್ರಾಂತ್ಯಗಳಲ್ಲಿ ನಾರ್ವೆ ಅಗ್ರ ಪೆಟ್ರೋಲಿಯಂ ಪೂರೈಕೆದಾರನಾಗಿದ್ದು, $503.75 ಶತಕೋಟಿ ಜಿಡಿಪಿ ಹೊಂದಿದೆ. ಇದರ PPP ಆಧಾರಿತ ವಿಶ್ವದ GDP ಪಾಲು ಶೇ. 0.3 ಆಗಿದೆ. 5.51 ಮಿಲಿಯನ್ ಜನಸಂಖ್ಯೆ ಹೊಂದಿರುವ ಈ ಪ್ರದೇಶವು $1.3 ಟ್ರಿಲಿಯನ್ ಸಾರ್ವಭೌಮ ಸಂಪತ್ತು ನಿಧಿಯನ್ನು ಹೊಂದಿದೆ, ಇದು ವಿಶ್ವದಲ್ಲೇ ಅತಿ ದೊಡ್ಡದಾಗಿದೆ.
ಸ್ವಿಟ್ಜರ್ಲೆಂಡ್
ಭೂಮಿಯ ಸ್ವರ್ಗವಾಗಿರುವ ಸ್ವಿಟ್ಜರ್ಲೆಂಡ್ ನ ತಲಾವಾರು 7ನೇ ಅತಿ ಹೆಚ್ಚು GDP ಹೊಂದಿದೆ. IMF ನ ಅಂದಾಜಿನ ಪ್ರಕಾರ ಸ್ವಿಟ್ಜರ್ಲೆಂಡ್ನ ತಲಾವಾರು GDP 91,980 ಡಾಲರ್ ಎಂದು ಅಂದಾಜಿಸಲಾಗಿದೆ.
ಬ್ರೂನಿ ದಾರುಸ್ಸಲಾಮ್
ಬ್ರೂನಿ ದಾರುಸ್ಸಲಾಮ್ ಆಗ್ನೇಯ ಏಷ್ಯಾದ ಬೊರ್ನಿಯೊ ದ್ವೀಪದಲ್ಲಿ ಮಲೇಷ್ಯಾ ಮತ್ತು ದಕ್ಷಿಣ ಚೀನಾ ಸಮುದ್ರದ ಗಡಿಯಲ್ಲಿರುವ ಒಂದು ಸಣ್ಣ, ಶ್ರೀಮಂತ ರಾಷ್ಟ್ರವಾಗಿದೆ. $15.71 ಟ್ರಿಲಿಯನ್ ಜಿಡಿಪಿ ಹೊಂದಿರುವ ಈ ರಾಷ್ಟ್ರದ PPP ಆಧಾರಿತ ವಿಶ್ವದ GDP ಪಾಲು ಶೇ. 0.02 ಆಗಿದೆ. 4.58 ಲಕ್ಷ ಜನಸಂಖ್ಯೆ ಹೊಂದಿರುವ ಇದು ಆಗ್ನೇಯ ಏಷ್ಯಾದ ರಾಷ್ಟ್ರಗಳಲ್ಲಿ ಎರಡನೇ ಅತಿ ಹೆಚ್ಚು ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಹೊಂದಿದೆ.
ಗಯಾನಾ
ದಕ್ಷಿಣ ಅಮೆರಿಕಾದ ಉತ್ತರ ಕರಾವಳಿಯಲ್ಲಿರುವ ಒಂದು ಸಣ್ಣ ದೇಶ, ಗಯಾನಾವನ್ನು ಐತಿಹಾಸಿಕ ಮುಖ್ಯ ಭೂಭಾಗವಾದ ಬ್ರಿಟಿಷ್ ವೆಸ್ಟ್ ಇಂಡೀಸ್ನ ಭಾಗವೆಂದು ಪರಿಗಣಿಸಲಾಗಿದ್ದು, 123 ಬಿಲಿಯನ್ ಜಿಡಿಪಿ ಹೊಂದಿದೆ. ಇದರ PPP ಆಧಾರಿತ ವಿಶ್ವದ GDP ಪಾಲು ಶೇ. 0.04 ಇದ್ದು, ಇದರ 8,31 ಲಕ್ಷ ಜನಸಂಖ್ಯೆ ಹೊಂದಿದೆ. 2015 ರಲ್ಲಿ ಕಚ್ಚಾ ತೈಲದ ಆವಿಷ್ಕಾರದ ನಂತರ ಗಯಾನಾದ ಆರ್ಥಿಕ ಏರಿಕೆಯು ಪ್ರಾರಂಭವಾಯಿತು. 2017 ರಿಂದ ಗಯಾನಾ ಕರಾವಳಿಯಲ್ಲಿ 11 ಶತಕೋಟಿ ಬ್ಯಾರೆಲ್ ತೈಲ ನಿಕ್ಷೇಪಗಳ ಆವಿಷ್ಕಾರವು 1970 ರ ನಂತರ ಜಾಗತಿಕ ತೈಲ ನಿಕ್ಷೇಪಗಳಿಗೆ ದೊಡ್ಡ ಸೇರ್ಪಡೆಯಾಗಿದೆ.
ಅಮೆರಿಕ
GDP ಯಲ್ಲಿ ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, GDP ತಲಾವಾರು ಪಟ್ಟಿಗೆ ಬಂದಾಗ 10 ನೇ ಸ್ಥಾನದಲ್ಲಿದೆ. IMF ಅಂದಾಜಿನ ಪ್ರಕಾರ 2024ಕ್ಕೆ ಅಮೆರಿಕದ ತಲಾವಾರು GDP $29.17 ಟ್ರಿಲಿಯನ್ ಎಂದು ಅಂದಾಜಿಸಲಾಗಿದೆ.
ಭಾರತಕ್ಕೆ ಎಷ್ಟನೇ ಸ್ಥಾನದಲ್ಲಿದೆ?
ಪ್ರಸ್ತುತ ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತ, ತಲಾವಾರು GDP ಅತಿ ಹೆಚ್ಚು ಹೊಂದಿರುವ ದೇಶಗಳ ಪಟ್ಟಿಯಲ್ಲಿ 129 ನೇ ಸ್ಥಾನದಲ್ಲಿದೆ. ಭಾರತದ GDP ತಲಾವಾರು ಸುಮಾರು $10,122 ಡಾಲರ್ ಆಗಿರುತ್ತದೆ.
ಚೀನಾಕ್ಕೆ 77ನೇ ಸ್ಥಾನ
ಜಿಡಿಪಿಯಲ್ಲಿ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಚೀನಾ, ಜಿಡಿಪಿ ತಲಾವಾರು ಪ್ರಕಾರ ವಿಶ್ವದ ಆರ್ಥಿಕತೆಗಳ ಪಟ್ಟಿಯಲ್ಲಿ 77 ನೇ ಸ್ಥಾನದಲ್ಲಿದೆ. IMF ಪ್ರಕಾರ, ಚೀನಾದ ತಲಾವಾರು GDP 2024ಕ್ಕೆ 25,015.32 ಡಾಲರ್ ಎಂದು ಅಂದಾಜಿಸಲಾಗಿದೆ.
140 ನೇ ಸ್ಥಾನದಲ್ಲಿ ಪಾಕ್
ಪಾಕಿಸ್ತಾನವು ವಿಶ್ವದ ಆರ್ಥಿಕತೆಗಳ ಪಟ್ಟಿಯಲ್ಲಿ ಮತ್ತು ತಲಾವಾರು GDP ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ 140 ನೇ ಸ್ಥಾನದಲ್ಲಿದೆ. IMF ಪ್ರಕಾರ, ಪಾಕಿಸ್ತಾನದ GDP ತಲಾವಾರು ಆದಾಯ $6,955 ಡಾಲರ್ ಎಂದು ಅಂದಾಜಿಸಲಾಗಿದೆ. ಇವಿಷ್ಟು ತಲಾವಾರು ಆದಾಯದಲ್ಲಿ ಟಾಪ್ 10 ನಲ್ಲಿರೋ ದೇಶಗಳು.