ಆಗಸದಲ್ಲಿಂದು ನಡೆಯಲಿದೆ ವಿಸ್ಮಯ- 6 ಗ್ರಹಗಳ ಮೆರವಣಿಗೆ ಹೇಗಿರುತ್ತೆ?
ಬರಿಗಣ್ಣಿನಲ್ಲಿ ಮಿಸ್ ಮಾಡದೇ ನೋಡಿ
ಆಗಸದಲ್ಲಿ ಸಂಭವಿಸುವ ಅಪರೂಪದ ವಿದ್ಯಮಾನ ಪ್ಲಾನೇಟ್ ಪೆರೇಡ್ ಜನವರಿ 25 ಅಂದರೆ ಇಂದು ಹೆಚ್ಚು ಸ್ಪಷ್ಟವಾಗಿ ಕಾಣಲಿದೆ. ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳನ್ನು ಆಕಾಶದಲ್ಲಿ ಒಂದೇ ಸಾಲಿನಲ್ಲಿ ನೋಡಬಹುದಾಗಿದೆ. ಇವು ತಾಂತ್ರಿಕವಾಗಿ ಒಂದೇ ಸಾಲಿನಲ್ಲಿ ಇರದೆ ಇದ್ದರೂ ನಮಗೆ ನೋಡುವಾಗ ಸರಿಸುಮಾರು ಒಂದೇ ಸಾಲಿನಲ್ಲಿ ಇರುವಂತೆ ಕಾಣಿಸುತ್ತವೆ. ನಿಜ ಹೇಳಬೇಕೆಂದರೆ ಈ ಗ್ರಹಗಳ ನಡುವೆ ಹಲವು ಮಿಲಿಯನ್ ಕಿಮೀಗಳ ಅಂತರ ಇರಲಿದೆ. ಈ ಗ್ರಹಗಳು ಫೆಬ್ರವರಿ ಅಂತ್ಯದವರೆಗೆ ಸರಿಸುಮಾರು ಹೀಗೆಯೇ ಇರುತ್ತವೆ. ಇದಲ್ಲದೆ, ಫೆಬ್ರವರಿ ಅಂತ್ಯದಲ್ಲಿ ಬುಧ ಗ್ರಹವು ಈ ಗ್ರಹಗಳ ವಿರುದ್ಧ ಸ್ಥಾನವನ್ನು ತಲುಪುತ್ತದೆ. ಫೆಬ್ರವರಿ 28 ರಿಂದ ಮಾರ್ಚ್ 12 ರವರೆಗೆ ಬುಧವು ಏಳು ಗ್ರಹಗಳ ಕಾಸ್ಮಿಕ್ ಪ್ರದರ್ಶನವನ್ನು ಪೂರ್ಣಗೊಳಿಸುತ್ತದೆ.
ಇದನ್ನೂ ಓದಿ: ಪವಿತ್ರಾ ಪೋಸ್ಟ್ ಗೆ ಸೈಕ್ ಕಮೆಂಟ್ – ನೆಟ್ಟಿಗರ ಕಣ್ಮುಂದೆ ಬಂತಾ ಶೆಡ್?
ಇವುಗಳನ್ನು ಗ್ರಹಗಳ ಪಥ ಸಂಚಲನ ಎಂದು ಕರೆದರೂ ಇವು ಪರಿಪೂರ್ಣವಾಗಿ ಒಂದೇ ಸಾಲಿನಲ್ಲಿ ಇರುವುದಿಲ್ಲ. ಅವು ನಮ್ಮ ಸೌರವ್ಯೂಹದ ಕಕ್ಷೆಯ ಸಮತಲವನ್ನು ಅನುಸರಿಸುತ್ತವೆ. ಈ ಅಪರೂಪದ ಘಟನೆಯನ್ನು ಕಣ್ಣುಂಬಿಕೊಳ್ಳಲು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ರೀತಿ ವ್ಯವಸ್ಥೆ ಇಲ್ಲದವರೂ ಚಿಂತಿಸಬೇಕಾಗಿಲ್ಲ. ಇವುಗಳಲ್ಲಿ ನಾಲ್ಕು ಗ್ರಹಗಳನ್ನು ಬರಿಗಣ್ಣಿನಲ್ಲೇ ಕಣ್ಣುಂಬಿಕೊಳ್ಳಬಹುದು.
ಭಾರತದಾದ್ಯಂತ ಖಗೋಳಾಸಕ್ತರು 2025ರ ಪ್ಲಾನೆಟ್ ಪೆರೇಡ್ ವೀಕ್ಷಣೆಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಿಕೊಂಡಿವೆ. ಬೆಂಗಳೂರಿನ ಜವಾಹಲಾಲ್ ನೆಹರು ತಾರಾಲಯದಲ್ಲಿಯೂ ಪ್ಲಾನೆಟ್ಗಳನ್ನು ಪೆರೇಡ್ ನೋಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಜನವರಿ 25ರಂದು ಸಂಜೆ 6.30 ಗಂಟೆಯ ಬಳಿಕ ಉಚಿತವಾಗಿ ಈ ಅದ್ಭುತ ವಿದ್ಯಮಾನವನ್ನು ಕಣ್ಣುಂಬಿಕೊಳ್ಳಬಹುದು.
ಬರೀಗಣ್ಣಲ್ಲಿ ನೋಡುವ ಅವಕಾಶ
ಈ ಆರು ಗ್ರಹಗಳ ಪ್ಲಾನೆಟ್ ಅಲೈನ್ಮೆಂಟ್ ಸಮಯದಲ್ಲಿ ನಾಲ್ಕು ಗ್ರಹಗಳನ್ನು ಬರಿಗಣ್ಣಿನಲ್ಲಿಯೇ ನೋಡಬಹುದು. ವಾಸ್ತವವಾಗಿ, ಗ್ರಹಗಳ ಜೋಡಣೆ ಅಥವಾ ಅಲೈನ್ಮೆಂಟ್ ಸಾಮಾನ್ಯ ಘಟನೆಯಾಗಿದೆ. ಆದರೆ ಇಲ್ಲಿ ವಿಶೇಷವೆಂದರೆ ಆರು ಗ್ರಹಗಳು ಒಂದೇ ಬಾರಿ ಕಾಣಿಸುತ್ತಿರುವುದು ಮಾತ್ರ ಅಪರೂಪದ ಖಗೋಳ ವಿದ್ಯಮಾನ. ಅದಕ್ಕಾಗಿಯೇ ಈ ಬಾರಿಯ ಪ್ಲಾನೆಟ್ ಪೆರೇಡ್ ನೋಡಲು ಕುರಿತು ಎಲ್ಲರೂ ವಿಶೇಷ ಆಸಕ್ತಿಯಿಂದ ಕಾಯುತ್ತಿದ್ದಾರೆ. ಈ ಆಕಾಶ ಪ್ರದರ್ಶನವನ್ನು ವೀಕ್ಷಿಸಲು ಉತ್ತಮ ಸಮಯವೆಂದರೆ ಸೂರ್ಯಾಸ್ತದ ಒಂದು ಗಂಟೆಯ ನಂತರ.. ಸ್ಮಾರ್ಟ್ಫೋನ್ ಕ್ಯಾಮೆರಾದಲ್ಲಿ ಆ ದೃಶ್ಯಗಳನ್ನು ಸೆರೆಹಿಡಿಯಲು ಬಯಸುವವರು ಲಾಂಗ್ ಎಕ್ಸ್ಪೋಸರ್ ಶಾಟ್ಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಬೇಕು. ಪ್ಲಾನೆಟ್ ಪೆರೇಡ್ನ ಸ್ಪಷ್ಟ ಚಿತ್ರಣವನ್ನು ಪಡೆಯಲು ಇದು ಉಪಯುಕ್ತವಾಗಿದೆ. ಬೈನಾಕ್ಯುಲರ್ ಬಳಸಿದರೆ ಗುರು ಮತ್ತು ಅದರ ಚಂದ್ರರನ್ನು ನೋಡಬಹುದು, ದೂರದರ್ಶಕದ ಸಹಾಯದಿಂದ ಯುರೇನಸ್ ಮತ್ತು ನೆಪ್ಚೂನ್ ಅನ್ನು ನೋಡಬಹುದು.. ಡಿಮೆ ಮಾಲಿನ್ಯವಿರುವ ಪ್ರದೇಶಗಳಲ್ಲಿ ಗ್ರಹಗಳ ಗೋಚರತೆ ಹೆಚ್ಚಾಗಿರುತ್ತೆ. ಪ್ಲಾನೆಟ್ ಪೆರೇಡ್ ವೀಕ್ಷಿಸಲು ಅತ್ಯುತ್ತಮ ಮೊಬೈಲ್ ಅಪ್ಲಿಕೇಷನ್ಗಳು ಅಂದ್ರೆ ಸ್ಟಾರ್ ವಾಕ್, ಸ್ಟಾರ್ ಟ್ರ್ಯಾಕರ್, ಪ್ರೈ ಮ್ಯಾಪ್. ನೀವು ಮಿಸ್ ಮಾಡದೇ ಈ ಕೌತಕವನ್ನ ಕಣ್ತುಂಬಿಕೊಳ್ಳಿ..