‘ಕಾಂಗ್ರೆಸ್ ತನ್ನ ಪಕ್ಷದ ತುಂಬಾ ಗೂಂಡಾಗಳನ್ನೇ ತುಂಬಿಸಿಕೊಂಡಿದೆ’ – ಬಿಜೆಪಿ ಟ್ವೀಟ್ ತಿರುಗೇಟು
ರೌಡಿ ಶೀಟರ್ಗಳ ಜೊತೆ ವೇದಿಕೆ ಹಂಚಿಕೊಂಡಿದ್ದು, ರೌಡಿ ಶೀಟರ್ಗಳ ಪಕ್ಷ ಸೇರ್ಪಡೆ ಬಿಜೆಪಿಗೆ ಮುಜುಗುರ ಉಂಟುಮಾಡಿದ್ದು ಒಂದು ಕಡೆಯಾದರೆ, ಕಾಂಗ್ರೆಸ್ ಇದನ್ನೇ ಮುಂದಿಟ್ಟುಕೊಂಡು ಟೀಕೆಗಳ ಸುರಿಮಳೆಯನ್ನೇ ಸುರಿಸುತ್ತಿದೆ. ಇದರಿಂದ ಮತ್ತಷ್ಟು ಮುಜುಗರಕ್ಕೊಳಗಾದ ಬಿಜೆಪಿ ಈಗ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕಾಂಗ್ರೆಸ್ ಗೆ ಏಟಿಗೆ ಎದಿರೇಟು ನೀಡುವ ಕೆಲಸ ಮಾಡುತ್ತಿದೆ. ನಿರಂತರ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸುತ್ತಿದೆ.
ಇದನ್ನೂ ಓದಿ : ಬೆಳಗ್ಗೆ 8.30ರ ನಂತರ ಶಾಲಾ ವಾಹನ ಸಂಚಾರ ನಿಷೇಧ – ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಪೊಲೀಸರ ಟಾನಿಕ್
ಪಕ್ಷದ ತುಂಬಾ ಗೂಂಡಾಗಳನ್ನು ತುಂಬಿಸಿಕೊಂಡಿರುವ ಕಾಂಗ್ರೆಸ್ಸಿಗೆ ಬಿಜೆಪಿಯ ನೈತಿಕತೆ ಬಗ್ಗೆ ಮಾತಾಡುವ ಹಕ್ಕಿಲ್ಲ. ಮುನ್ನೆಲೆಯ ನಾಯಕರೇ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಮಾಡೋದೆಲ್ಲಾ ಅನಾಚಾರ, ಮನೆ ಮುಂದೆ ಬೃಂದಾವನ ಎನ್ನುವಂತಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದೆ.
ಪಕ್ಷದ ತುಂಬಾ ಗೂಂಡಾಗಳನ್ನು ತುಂಬಿಸಿಕೊಂಡಿರುವ ಕಾಂಗ್ರೆಸ್ಸಿಗೆ ಬಿಜೆಪಿಯ ನೈತಿಕತೆ ಬಗ್ಗೆ ಮಾತಾಡುವ ಹಕ್ಕಿಲ್ಲ. @INCkarnataka ಮುನ್ನೆಲೆಯ ನಾಯಕರೇ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು,ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ ಎನ್ನುವಂತಾಗಿದೆ. #RowdyCongress
1/n pic.twitter.com/9418xf4rV2
— BJP Karnataka (@BJP4Karnataka) December 4, 2022
ಇಷ್ಟಲ್ಲದೇ ಮತ್ತೊಂದು ಟ್ವೀಟ್ನಲ್ಲಿ ಬಿಜೆಪಿ, ರೌಡಿಗಳು, ಕಳ್ಳರು, ಕೊಲೆಗಾರರು, ದರೋಡೆಕೋರರು, ಭ್ರಷ್ಟಾಚಾರಿಗಳೇ ನಾಯಕರಾಗಿರೋ @INCKarnataka ರೌಡಿ ರಾಜ್ಯದ ಬಗ್ಗೆ ಭಾಷಣ ಬಿಗಿಯುತ್ತಿರುವುದು, ಅಲ್ಲೆಲ್ಲೋ ಇರುವ ಅಲ್ಖೈದಾದವನು ಶಾಂತಿಯ ಸಂದೇಶ ಸಾರಿದಷ್ಟೇ ಅದಕ್ಕೆ ಪ್ರಾಮುಖ್ಯತೆ. ಭಯದಿಂದ ಅಣ್ಣಾ ಎಂದು ಕರೆಸಿಕೊಳ್ಳುವ @DKShivakumar ಪಟಾಲಮ್ಮಿನಿಂದ ಬಿಜೆಪಿಗೆ ಪಾಠ ಬೇಕಾಗಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.
ರೌಡಿಗಳು, ಕಳ್ಳರು, ಕೊಲೆಗಾರರು, ದರೋಡೆಕೋರರು, ಭ್ರಷ್ಟಾಚಾರಿಗಳೇ ನಾಯಕರಾಗಿರೋ @INCKarnataka ರೌಡಿ ರಾಜ್ಯದ ಬಗ್ಗೆ ಭಾಷಣ ಬಿಗಿಯುತ್ತಿರುವುದು, ಅಲ್ಲೆಲ್ಲೋ ಇರುವ ಅಲ್ಖೈದಾದವನು ಶಾಂತಿಯ ಸಂದೇಶ ಸಾರಿದಷ್ಟೇ ಅದಕ್ಕೆ ಪ್ರಾಮುಖ್ಯತೆ.
ಭಯದಿಂದ ಅಣ್ಣಾ ಎಂದು ಕರೆಸಿಕೊಳ್ಳುವ @DKShivakumar ಪಟಾಲಮ್ಮಿನಿಂದ ಬಿಜೆಪಿಗೆ ಪಾಠ ಬೇಕಾಗಿಲ್ಲ.
6/n— BJP Karnataka (@BJP4Karnataka) December 3, 2022