ಅಭಿಷೇಕ್ ಇಂಜುರಿ.. ಶಮಿ ಅನ್ ಫಿಟ್ – 2 ಪಂದ್ಯಕ್ಕೆ ಟೀಂ ಕಂಪ್ಲೀಟ್ ಚೇಂಜ್?

ಅಭಿಷೇಕ್ ಇಂಜುರಿ.. ಶಮಿ ಅನ್ ಫಿಟ್ – 2 ಪಂದ್ಯಕ್ಕೆ ಟೀಂ ಕಂಪ್ಲೀಟ್ ಚೇಂಜ್?

ಇಂಗ್ಲೆಂಡ್ ವಿರುದ್ಧದ ಮೊದಲ ಟಿ-20ಐ ಪಂದ್ಯವನ್ನ ಈಸಿಯಾಗಿ ಗೆದ್ದಿರೋ ಭಾರತಕ್ಕೆ ಎರಡನೇ ಪಂದ್ಯದಲ್ಲಿ ಅಸಲಿ ಸವಾಲು ಶುರುವಾಗಲಿದೆ. ಜಗತ್ತಿನ ನಂಬರ್ ಒನ್ ಟಿ-20 ಟೀಮ್ ವರ್ಸಸ್, ಬೆಸ್ಟ್ ಟಿ-20 ಟೀಮ್ ನಡುವಿನ ಹೈವೋಲ್ಟೇಜ್ ಫೈಟ್ ನೋಡೋಕೆ ಕ್ರಿಕೆಟ್ ಲೋಕವೇ ಕಾಯ್ತಿದೆ. ವೀಕೆಂಡ್​​ನಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಕಿಕ್ ನೀಡಲು T20 ಸ್ಟಾರ್ಸ್​ ಕೂಡ ರೆಡಿಯಾಗಿದ್ದಾರೆ. ಬಟ್ ಟೀಂ ಇಂಡಿಯಾ ಪ್ಲೇಯಿಂಗ್ 11ನಲ್ಲಿ ಒಂದಷ್ಟು ಚೇಂಜಸ್ ಆಗೋ ಸಾಧ್ಯತೆ ಇದೆ.

ಇದನ್ನೂ ಓದಿ : ಆಂಗ್ಲರ ಚೆಂಡಾಡಲು SKY ತಂತ್ರ.. 2ನೇ ಪಂದ್ಯದಲ್ಲೂ ಧೂಳೀಪಟ – ಚೆನ್ನೈನಲ್ಲಿ ಯಾರ ಅಬ್ಬರ?

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್​​ಮನ್ ಅಭಿಷೇಕ್ ಶರ್ಮಾ. ಮೊದಲ ಪಂದ್ಯದಲ್ಲೇ ಆಂಗ್ಲರನ್ನ ಚೆಂಡಾಡಿದ್ರು. ಬಟ್ ಈಗ ಎರಡನೇ ಪಂದ್ಯ ಆಡೋದೇ ಅನುಮಾನ ಇದೆ. ಕ್ರಿಕ್‌ಬಜ್ ವರದಿಯ ಪ್ರಕಾರ, ಅಭಿಷೇಕ್ ಶರ್ಮಾ ಅಭ್ಯಾಸದ ವೇಳೆ ಗಾಯಗೊಂಡು ಮೈದಾನದಿಂದ ಹೊರನಡೆದಿದ್ದಾರೆ. ಬ್ಯಾಟಿಂಗ್ ಮಾಡುವಾಗ ಅಭಿಷೇಕ್ ಅವರ ಬಲಗಾಲಿಗೆ ಇಂಜುರಿಯಾಗಿದ್ದು, ತೀವ್ರ ನೋವಿನಿಂದ ಬಳಲುತ್ತಿದ್ದ ಅಭಿಷೇಕ್ ಅಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಹೊರನಡೆದಿದ್ರು. ಹೀಗಾಗಿ ಎರಡನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಆಡುವ ಬಗ್ಗೆ ಅನುಮಾನ ಮೂಡಿದೆ. ಅಭಿ ಆಬ್ಸೆನ್ಸ್ ಸುದ್ದಿಯೇ ಟೀಂ ಇಂಡಿಯಾ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.  ಮೊದಲ ಟಿ20 ಪಂದ್ಯದಲ್ಲಿ ಅಭಿಷೇಕ್ 34 ಎಸೆತಗಳಲ್ಲಿ 79 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದರು. ಇದರಲ್ಲಿ ಅವರು 8 ಸಿಕ್ಸರ್ ಮತ್ತು 5 ಬೌಂಡರಿಗಳನ್ನು ಬಾರಿಸಿದರು.. ಹಾಗೇನಾದ್ರೂ ಅಭಿಷೇಕ್ ಆಡ್ಲಿಲ್ಲ ಅಂದ್ರೆ  ಟೀಂ ಇಂಡಿಯಾ ಓಪನಿಂಗ್ ನಲ್ಲಿ ಯಾರನ್ನು ಕಣಕ್ಕಿಳಿಸುತ್ತದೆ ಅನ್ನೋದೇ ಪ್ರಶ್ನೆ.

ಮೊಹಮ್ಮದ್ ಶಮಿ ಬೌಲಿಂಗ್ ನೋಡೋಕೆ ಕಾಯ್ತಿರೋ ಅಭಿಮಾನಿಗಳಿಗೆ ಈ ಪಂದ್ಯದಲ್ಲೂ ನಿರಾಸೆಯಾಗಲಿದೆ.  ಯಾಕಂದ್ರೆ ಮೊಹಮ್ಮದ್ ಶಮಿ ಈಗಲೂ ಫಿಟ್​ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚೆನ್ನೈನಲ್ಲಿ ನಡೆದ ಅಭ್ಯಾಸದ ವೇಳೆ ಶಮಿ ಕಾಲಿಗೆ ಸ್ಟ್ರಾಪಿಂಗ್​ ಹಾಕಿಕೊಂಡು ಬೌಲಿಂಗ್ ಅಭ್ಯಾಸ ಮಾಡಿದ್ದಾರೆ. ಇದ್ರಿಂದ ರನ್ ಅಪ್ ಕೂಡ ಸರಿಯಾಗಿರಲಿಲ್ಲ. ಓಡಲು ಸಹ ತೊಂದರೆ ಅನುಭವಿಸ್ತಿದ್ದಾರೆ. ಹೀಗಾಗಿ ದ್ವಿತೀಯ ಟಿ20 ಪಂದ್ಯದಲ್ಲೂ ಮೊಹಮ್ಮದ್ ಶಮಿ ಕಣಕ್ಕಿಳಿಯುವುದು ಅನುಮಾನ. ಬಟ್ ಏಕದಿನ ಸರಣಿ ವೇಳೆಗಾದ್ರೂ ಶಮಿ ಕಣಕ್ಕಿಳಿಯಲೇಬೇಕು. ಯಾಕಂದ್ರೆ ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ಆಯ್ಕೆಯಾಗಿರೋದ್ರಿಂದ ತಮ್ಮ ಫಿಟ್​ನೆಸ್ ಪ್ರೂವ್ ಮಾಡ್ಬೇಕು. ಇಲ್ದೇ ಇದ್ರೆ ಶಮಿ ಅವ್ರನ್ನ ಕೈಬಿಟ್ಟು ಹರ್ಷಿತ್ ರಾಣಾ ಅಥವಾ ಮೊಹಮ್ಮದ್ ಸಿರಾಜ್​ಗೆ ಚಾನ್ಸ್ ಕೊಡ್ಬೋದು. ಸೋ ಇಂಗ್ಲೆಂಡ್ ವಿರುದ್ಧದ ಸರಣಿಯು ಮೊಹಮ್ಮದ್ ಶಮಿ ಪಾಲಿಗೆ ಅಗ್ನಿ ಪರೀಕ್ಷೆಯಾಗಿದೆ.

ಟೀಂ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ 11 ನೋಡೋದಾದ್ರೆ ಅಭಿಷೇಕ್ ಶರ್ಮಾ ಕಂಪ್ಲೀಟ್ ಫಿಟ್ ಆಗಿಲ್ಲ ಅಂದ್ರೆ ಸಂಜು ಸ್ಯಾಮ್ಸನ್ ಮತ್ತು ಸೂರ್ಯಕುಮಾರ್ ಯಾದವ್ ಇನ್ನಿಂಗ್ಸ್ ಆರಂಭಿಸಬಹುದು. ಬಟ್ ತಿಲಕ್ ವರ್ಮಾರನ್ನ ಮೂರನೇ ಸ್ಲಾಟ್​ನಲ್ಲೇ ಕಂಟಿನ್ಯೂ ಮಾಡಿಸ್ತಾರೆ. ಯಾಕಂದ್ರೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ, ತಿಲಕ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಸತತ ಎರಡು ಶತಕಗಳನ್ನು ಗಳಿಸಿದ್ದರು. ಸೋ ಸ್ಲಾಟ್ ಚೇಂಜ್ ಮಾಡದೇ ಇರಬಹುದು. ಆ ನಂತ್ರ ರಿಂಕು ಸಿಂಗ್ ಎಂಟ್ರಿಯಾಗ್ತಾರೆ. ಆಲ್​ರೌಂಡರ್ ಗಳಾಗಿ  ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಬರ್ತಾರೆ. ಬೌಲರ್​ಗಳು  ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ ಬರಬಹುದು ಎನ್ನಲಾಗಿತ್ತು. ಬಟ್ ಶಮಿ ಫಿಟ್​ನೆಸ್ಟ್ ಆಗಿಲ್ಲದ ಕಾರಣ ನಿತೀಶ್ ಕುಮಾರ್ ರೆಡ್ಡಿಗೆ ಚಾನ್ಸ್ ಸಿಗುತ್ತೆ. ಎಡಗೈ ವೇಗಿ ಆರ್ಷ್​ದೀಪ್ ಸಿಂಗ್​​​​​​​​​​​​, ಪವರ್-​ಪ್ಲೇನಲ್ಲಿ ಸಖತ್ ಎಫೆಕ್ಟೀವ್ ಬೌಲರ್. ಆರಂಭದಲ್ಲೇ ಎದುರಾಳಿಗಳನ್ನು ಕಟ್ಟಿಹಾಕೋ ಆರ್ಷ್​ದೀಪ್​ಗೆ ಸಾಥ್ ನೀಡೋಕೆ ಮತ್ತೊಬ್ಬ ಕ್ವಾಲಿಟಿ ಬೌಲರ್ ಬೇಕು. ಒಂದು ವೇಳೆ ಹೊಸ ಬಾಲ್​ನಲ್ಲಿ ಆರ್ಷ್​ದೀಪ್​​ಗೆ ಒಳ್ಳೆ ಪಾರ್ಟ್ನರ್ ಸಿಕ್ಕಿದ್ರೆ ಇಂಡಿಯಾ ಬೌಲಿಂಗ್ ಅಟ್ಯಾಕ್ ನೆಕ್ಸ್ಟ್​​ ಲೆವೆಲ್​​ನಲ್ಲಿರಲಿದೆ. ಹೀಗಾಗಿ ಈಡನ್​ ಗಾರ್ಡನ್ಸ್​ನಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್ಸ್ ಬೆಂಕಿ ಬಿರುಗಾಳಿಯಂತೆ ಬೌಲಿಂಗ್​ ಮಾಡಿದ್ರು. ಇದೇ ಸ್ಪಿನ್ ಅಸ್ತ್ರವನ್ನ ನಾಯಕ ಸೂರ್ಯಕುಮಾರ್ ಯಾದವ್, ಚೆಪಾಕ್​ನಲ್ಲೂ ಕಂಟಿನ್ಯೂ ಮಾಡಲಿದ್ದಾರೆ.

Shantha Kumari

Leave a Reply

Your email address will not be published. Required fields are marked *