ಪಾಕ್ ಭಿಕ್ಷಾಂದೇಹಿ ಅನ್ನುತ್ತಾ? ಚಳಿಗಾಲದಲ್ಲಿ ಬಿದ್ದಿದ್ದು ಎಂಥಾ ಹೊಡೆತಾ?
ಉಗ್ರದೇಶ ವಿಲವಿಲ..!

ಪಾಕ್ ಭಿಕ್ಷಾಂದೇಹಿ ಅನ್ನುತ್ತಾ? ಚಳಿಗಾಲದಲ್ಲಿ ಬಿದ್ದಿದ್ದು ಎಂಥಾ ಹೊಡೆತಾ?ಉಗ್ರದೇಶ ವಿಲವಿಲ..!

ಆರ್ಥಿಕ ಕುಸಿತದಿಂದ ಕಂಗೆಟ್ಟಿರುವ ಪಾಕಿಸ್ತಾನ, ಪದೇ ಪದೇ ವಿದೇಶಿ ಸಾಲಕ್ಕೆ ಕೈ ಒಡ್ಡಿದರೂ ಕೂಡಾ ಪರಿಸ್ಥಿತಿ ಸುಧಾರಿಸುತ್ತಿಲ್ಲ. ದೇಶೀಯವಾಗಿ ಹಣದುಬ್ಬರ ಏರಿಕೆ ಆಗುತ್ತಲೇ ಇದೆ. ಗ್ಯಾಸ್ ಸಿಲಿಂಡರ್ ದರವೇ ಹತ್ತಾರು ಸಾವಿರ ರೂಪಾಯಿಗೆ ಏರಿಕೆ ಕಂಡಿದೆ. ಹೀಗಾಗಿ ಜನರು ಮನೆಯಲ್ಲಿ ಸೌದೆ ಉರಿಸಿ ಅಡುಗೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಗ್ಯಾಸ್ ಮಾತ್ರವಲ್ಲ, ಎಲ್ಲ ರೀತಿಯ ಆಹಾರ ಪದಾರ್ಥಗಳ ಬೆಲೆಯೂ ಏರಿಕೆ ಕಂಡಿದ್ದು, ಜನರು ಕಂಗೆಟ್ಟಿದ್ದಾರೆ. ಹೀಗಿರುವ ಪಾಕಿಸ್ತಾನಕ್ಕೆ ಮತ್ತೊಂದು ಶಾಕ್ ಎದುರಾಗಿದೆ.  ಚಳಿಗಾಲದ ಬರಗಾಲ ಪಾಕಿಸ್ತಾನದ ಬೆಳೆಗಳನ್ನು ಸಂಪೂರ್ಣ ನಾಶ ಮಾಡಿದ್ದು, ಪಾಕ್ ರೈತರು ಕಂಗೆಟ್ಟು ಹೋಗಿದ್ದಾರೆ.  ಪಾಕಿಸ್ತಾನದಲ್ಲಿ ಮಳೆಯ ಪ್ರಮಾಣ ಶೇ.40 ರಷ್ಟು ಕಡಿಮೆಯಾಗಿದೆ. ಹೀಗಾಗಿ ಬೆಳೆಗಳಿಗೆ ನೀರಿಲ್ಲದೇ ಪರದಾಡುವಂತಾಗಿದೆ.

ಇದನ್ನೂ ಓದಿ: ಸೆಹ್ವಾಗ್‌ ಬಾಳಲ್ಲಿ ಸುಂಟರಗಾಳಿ!! – ಅನ್‌ ಫಾಲೋ, ಪ್ರತ್ಯೇಕ ವಾಸ.. ಕಾರಣ?

240 ದಶಲಕ್ಷಕ್ಕೂ ಹೆಚ್ಚು ಜನರಿಗೆ ನೆಲೆಯಾಗಿರುವ ಪಾಕಿಸ್ತಾನ, ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಹೆಚ್ಚು ಗುರಿಯಾಗುವ ದೇಶಗಳಲ್ಲಿ ಒಂದಾಗಿದೆ. ಪೂರ್ವ ಪಂಜಾಬ್ ಪ್ರಾಂತ್ಯದ ಕೃಷಿ ಕೇಂದ್ರದಲ್ಲಿ ಸೆಪ್ಟೆಂಬರ್ ಆರಂಭ ಮತ್ತು ಜನವರಿ ಮಧ್ಯದ ನಡುವೆ ಸಾಮಾನ್ಯಕ್ಕಿಂತ ಶೇ.42 ರಷ್ಟು ಕಡಿಮೆ ಮಳೆಯಾಗಿದೆ ಎಂದು ಪಾಕಿಸ್ತಾನ ಹವಾಮಾನ ಇಲಾಖೆ ಹೇಳಿದೆ.

 

ಈ ಬಗ್ಗೆ ಮಾತನಾಡಿರೋ ಪಾಕ್ ಹಣ್ಣು ಮತ್ತು ತರಕಾರಿ ರಫ್ತುದಾರ, ಮಳೆಯ ಕೊರತೆಯು ರೈತರ ಮೇಲೆ ಪ್ರಮುಖ ಆರ್ಥಿಕ ಪರಿಣಾಮ ಬೀರಿದೆ ಎಂದು ಹೇಳುತ್ತಿದ್ದಾರೆ. ಹಾಗೇ ನನ್ನ ಪ್ರದೇಶದಲ್ಲಿ ಆಲೂಗಡ್ಡೆ ಪ್ರಧಾನ ಆಹಾರವಾಗಿದೆ. ಈ ವರ್ಷ ಸರಾಸರಿ ತುಂಬಾ ಕಡಿಮೆಯಾಗಿದೆ. ಸಾಮಾನ್ಯವಾಗಿ ನಾವು ಎಕರೆಗೆ 100 ರಿಂದ 120 ಚೀಲಗಳನ್ನು ಸುಲಭವಾಗಿ ಪಡೆಯಬಹುದು. ಈ ಚಳಿಗಾಲದಲ್ಲಿ ನಾವು ಎಕರೆಗೆ ಸುಮಾರು 60 ಚೀಲಗಳನ್ನು ಮಾತ್ರ ಪಡೆದುಕೊಂಡಿದ್ದೇವೆ.” ಎಂದು ಹೇಳಿದ್ದಾರೆ. ಅಂದ್ರೆ ಇಲ್ಲೇ ಗೊತ್ತಾಗುತ್ತೆ ಅರ್ಧಕ್ಕೆ ಅರ್ಧ ಬೆಳೆ ರೈತರ ಕೈ ಸೇರಿಲ್ಲ..

ಪಾಕಿಸ್ತಾನದ ಜಿಡಿಪಿಗೆ ಸುಮಾರು ಕಾಲು ಭಾಗದಷ್ಟು ಕೊಡುಗೆ ನೀಡುವ ಕೃಷಿ ವಲಯ, ರಾಷ್ಟ್ರೀಯ ಕಾರ್ಮಿಕ ಬಲದ ಶೇಕಡಾ 37 ರಷ್ಟು ಜನರಿಗೆ ಉದ್ಯೋಗ ನೀಡಿದೆ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ತಿಳಿಸಿದೆ. ಆದರೆ ಅನೇಕ ಸಣ್ಣ ರೈತರು “ಈಗಾಗಲೇ ಕೃಷಿಯನ್ನು ಬಿಟ್ಟುಕೊಡುತ್ತಿದ್ದಾರೆ” ಮತ್ತು ಬೇರೆಡೆ ಉದ್ಯೋಗವನ್ನು ಹುಡುಕುತ್ತಿದ್ದಾರಂತೆ.

ದಕ್ಷಿಣದಲ್ಲಿ ನೆಲೆಗೊಂಡಿರುವ ಪಾಕಿಸ್ತಾನದ ಅತ್ಯಂತ ನಗರೀಕರಣಗೊಂಡ ಪ್ರಾಂತ್ಯವಾದ ಸಿಂಧ್‌ನಲ್ಲಿ pmd ಪ್ರಕಾರ ಸಾಮಾನ್ಯ ಮಟ್ಟಕ್ಕಿಂತ ಶೇಕಡಾ 52 ರಷ್ಟು ಕಡಿಮೆ ಮಳೆಯಾಗಿದ್ದರೆ, ಪಶ್ಚಿಮದಲ್ಲಿರುವ ಬಲೂಚಿಸ್ತಾನದಲ್ಲಿ ಶೇಕಡಾ 45 ರಷ್ಟು ಕುಸಿತ ಕಂಡುಬಂದಿದೆ.  ಈ ತಿಂಗಳಲ್ಲಿ ಪಂಜಾಬ್‌ನ ಮುಕ್ಕಾಲು ಭಾಗ, ಸಿಂಧ್‌ನ ಎಲ್ಲಾ ಭಾಗ ಮತ್ತು ಬಲೂಚಿಸ್ತಾನದ ಅರ್ಧದಷ್ಟು ಭಾಗದಲ್ಲಿ ಬರ ಉಂಟಾಗಿತ್ತು. ಇದು ಮುಂಬರುವ ಬೆಚ್ಚಗಿನ ತಿಂಗಳುಗಳಲ್ಲಿ “ದಿಢೀರ್ ಬರ” ಪರಿಸ್ಥಿತಿಗಳನ್ನು ತಂದೊಡ್ಡುವ ಮುನ್ಸೂಚನೆ ನೀಡಿದೆ. ಗೋಧಿ ಬೆಳೆಯುತ್ತಿದ್ದ ರೈತ ಅಹ್ಮದ್ ಜಾಟ್ ಮಧ್ಯ ಪಂಜಾಬ್‌ನ ಮುಲ್ತಾನ್ ಪ್ರದೇಶದಲ್ಲಿ ತನ್ನ ಕೊಯ್ಲು ಮಳೆಯ ಕೊರತೆಯಿಂದ ಹಾನಿಯಾಗಿದೆ ಎಂದು ಹೇಳಿಕೊಂಡಿದ್ದಾರೆ.

ಐದು ವರ್ಷಗಳ ಹಿಂದೆ ಚಳಿಗಾಲದ ಮಳೆ ಒಂದು ವಾರಕ್ಕೊಮ್ಮೆ ಬರುತಿತ್ತು. ಅವು ಅಲ್ಪ ಮಳೆಯಾಗಿದ್ದರು ಅಲ್ಲ ಬೆಳೆಗೆ ಲ ಸಾಕಾಗುತಿತ್ತಂತೆ. ಒಂದು ವೇಳೆ ಆದಷ್ಟು ಬೇಗ ಮಳೆಯಾಗದಿದ್ದರೆ, ಉತ್ಪಾದನೆಯು ಶೇಕಡಾ 50 ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಪಾಕಿಸ್ತಾನ ಸಾಮಾನ್ಯವಾಗಿ ಸಿಂಧೂ ನದಿಯ ನೀರನ್ನು ಅವಲಂಬಿಸಿದೆ, ಇದು ದೇಶವನ್ನು ಉತ್ತರದಿಂದ ದಕ್ಷಿಣಕ್ಕೆ ವಿಭಜಿಸುತ್ತದೆ, ಅಲ್ಲಿ ಅದು ಅರೇಬಿಯನ್ ಸಮುದ್ರಕ್ಕೆ ಹರಿಯುತ್ತದೆ. ಆದರೆ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆ, ಹವಾಮಾನ ಬದಲಾವಣೆ ಮತ್ತು ಒಂದೇ ನೀರಿನ ಮೂಲದ ಮೇಲೆ ಅತಿಯಾಗಿ ಅವಲಂಬಿತವಾಗಿರುವ ಪಾಕ್‌ ಕಂಗೆಡುವಂತೆ ಮಾಡಿದೆ.

ಅಷ್ಟೇ ಪಾಕಿಸ್ತಾನ ಕಳಪೆ ಗುಣಮಟ್ಟದ ವಾಹನ ಇಂಧನ ಮತ್ತು ರೈತರು ಬೆಳೆಗಳ ತ್ಯಾಜ್ಯವನ್ನ ಸುಟ್ಟುಹಾಕುವುದರಿಂದ ಉಂಟಾಗುವ ಹೊಗೆಯಿಂದ ಬಳಲುತ್ತಿದೆ.  ಅಲ್ಲದೇ ಚಳಿಗಾಲದಲ್ಲಿ ಮಳೆ ಕೂಡ ಆಗುತ್ತಿಲ್ಲ.. ಹೀಗಾಗಿ ಪಾಕಿಸ್ತಾನ ರೈತರು ಬೆಳೆ ಕಳೆದುಕೊಂಡು ಕಂಗೆಟ್ಟು ಹೋಗಿದ್ದು, ಇದು ಪಾಕ್ ಆರ್ಥಿಕತೆ ಮೇಲೆ ಎಫೆಕ್ಟ್ ಆಗಲಿದೆ.. ಒಂದು ವೇಳೆ ಪಾಕ್‌ನಲ್ಲಿ ಆಹಾರದ ಕೊರತೆಯಾದ್ರೆ ಮತ್ತೆ ಬೇರೆ ದೇಶದ ಮೇಲೆ ಕೈ ಚಾಚುವ ಸ್ಥಿತಿ ಬರುವುದು ಗ್ಯಾರಂಟಿ. ಭಾರತ ಮುಂದೆ ಕೂಡ ಪಾಕ್ ಬಿಕ್ಷೆ ಪಾತ್ರೆ ಹಿಡಿದು ನಿಲ್ಲೋ ಸ್ಥಿತಿ ಬರುವುದು ಪಕ್ಕ..

Kishor KV

Leave a Reply

Your email address will not be published. Required fields are marked *