ಸೆಹ್ವಾಗ್ ಬಾಳಲ್ಲಿ ಸುಂಟರಗಾಳಿ!! – ಅನ್ ಫಾಲೋ, ಪ್ರತ್ಯೇಕ ವಾಸ.. ಕಾರಣ?
ಡ್ಯಾಶಿಂಗ್ ಬ್ಯಾಟ್ಸ್ ಮನ್ ಗೆ ಏನಾಯ್ತು?

ಡಿವೋರ್ಸ್.. ಸದ್ಯ ಇದೊಂದು ವಿಚಾರ ದೊಡ್ಡ ಮಟ್ಟದಲ್ಲೇ ಸದ್ದು ಮಾಡ್ತಿದೆ.. ಎಲ್ಲರಿಗೂ ಮಾದರಿಯಾಗ್ಬೇಕಿದ್ದ ನಮ್ಮ ಸೆಲೆಬ್ರಿಟಿಗಳೇ ಡಿವೋರ್ಸ್ ಪಡ್ಕೊಳ್ತಿದ್ದಾರೆ.. ಇದೀಗ ಮತ್ತೊಬ್ಬ ಕ್ರಿಕೆಟರ್ ದಾಂಪತ್ಯದಲ್ಲಿ ಸುಂಟರಗಾಳಿ ಎದ್ದಿದೆ ಅನ್ನೋ ಸುದ್ದಿ ಜೋರಾಗಿ ಸದ್ದು ಮಾಡ್ತಿದೆ.. ಇದೀಗ ಟೀಮ್ ಇಂಡಿಯಾದ ಮಾಜಿ ಸ್ಪೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ದಾಂಪತ್ಯದಲ್ಲಿ ಬಿರುಕು ಬಿದ್ದಿದೆ.. ಇನ್ನೇನು ಕೆಲವೆ ದಿನಗಳಲ್ಲಿ ವಿಚ್ಚೇದನ ಪಡೆಯಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಗೆಳತಿ ಔಟ್.. ಮಂಜುಗೆ ಫುಲ್ ಎನರ್ಜಿ.. BBK ವಿನ್ನರ್ ಮಂಜು? – ಉಗ್ರಂ ಸೈಲೆಂಟ್ ಗೇಮ್
ಈಗ ಡಿವೋರ್ಸ್ ಒಂದು ಟ್ರೆಂಡ್ ಆಗಿದೆ ಅಂತಾ ಹೇಳಿದ್ರೆ ತಪ್ಪಾಗಲ್ವೇನೋ.. ಯಾಕಂದ್ರೆ ಕೆಲ ಸ್ಟಾರ್ಸ್ ಡಿವೋರ್ಸ್ ವಿಚಾರವೇಗೆ ಸುದ್ದಿಯಲ್ಲಿದ್ದಾರೆ.. ಹಾರ್ದಿಕ್ ಪಾಂಡ್ಯ ಹಾಗೂ ನತಾಶ ಕೆಲ ತಿಂಗಳ ಹಿಂದೆ ಡಿವೋರ್ಸ್ ಪಡೆದುಕೊಂಡಿದ್ರು.. ಅದಾದ ಬಳಿಕ ಚಹಲ್ ಹಾಗೂ ಧನಶ್ರೀ ಸೋಶಿಯಲ್ ಮೀಡಿಯಾದಲ್ಲಿ ಅನ್ ಫಾಲೋ ಮಾಡಿಕೊಂಡು ಡಿವೋರ್ಸ್ ಸುಳಿವು ನೀಡಿದ್ರು.. ಈ ವಿಚಾರ ಸದ್ದು ಮಾಡ್ತಿದ್ದಂತೆ ತೇಪೆ ಹಚ್ಚುವ ಕೆಲ್ಸ ಕೂಡ ಮಾಡಿದ್ರು.. ಇದೀಗ ವಿರೇಂದ್ರ ಸೆಹ್ವಾಗ್ ಹಾಗೂ ಆರತಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಅನ್‌ಫಾಲೋ ಮಾಡಿಕೊಂಡು ಡಿವೋರ್ಸ್ ಸುಳಿವು ನೀಡಿದ್ದಾರೆ. ಇದೀಗ 20 ವರ್ಷಗಳ ದಾಂಪತ್ಯ ಅಂತ್ಯ ಆಗಲಿದೆ ಎಂದು ಹೇಳಲಾಗ್ತಿದೆ.
ಸೆಹ್ವಾಗ್ ಹಾಗೂ ಆರತಿ 2004 ರಲ್ಲಿ ಪ್ರೀತಿಸಿ ಮದುವೆಯಾಗಿದ್ರು.. ಇಬ್ಬರು ಮಕ್ಕಳಿದ್ದಾರೆ.. ಇದೀಗ ಸೆಹ್ವಾಗ್ ಮಕ್ಕಳ ಕ್ರಿಕೆಟ್ ಕೆರಿಯರ್ ಬಿಲ್ಡ್ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ವೇದಾಂತ್ ಸೆಹ್ವಾಗ್ ಹಾಗೂ ಆರ್ಯವೀರ್ ಈಗಾಗಲೇ ಕ್ರಿಕೆಟ್ ಅಂಗಳದಲ್ಲಿ ಸದ್ದು ಮಾಡ್ತಿದ್ದಾರೆ.. ಈ ಹೊತ್ತಲ್ಲೇ ಈಗ ಸೆಹ್ವಾಗ್ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ. ಅವರ ಕುಟುಂಬದ ಆಪ್ತ ಮೂಲಗಳು ಹೇಳುವಂತೆ ಇವರಿಬ್ಬರೂ ಬಹುದಿನಗಳಿಂದ ಬೇರೆ ಬೇರೆ ಆಗಿ ಇರುತ್ತಿದ್ದಾರೆ. ಇವರಿಬ್ಬರು ವಿಚ್ಛೇಧನಕ್ಕೆ ಮುಂದಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.. ವರದಿಗಳ ಪ್ರಕಾರ ಸೆಹ್ವಾಗ್ ಹಾಗೂ ಅವರ ಪತ್ನಿ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿಕೊಂಡಿದ್ದಾರೆ. ಇವರಿಬ್ಬರು ಶೀಘ್ರದಲ್ಲೇ ಬೇರೆಯಾಗಲಿದ್ದಾರೆ.
ಇನ್ನು ವೀರೇಂದ್ರ ಸೆಹ್ವಾಗ್ ಈ ಮೊದಲು ದೀಪವಾಳಿ ಶುಭಾಶಯ ಕೋರಿದಾಗ ತಮ್ಮ ತಾಯಿ, ಮಕ್ಕಳ ಫೋಟೋ ಹಂಚಿಕೊಂಡಿದ್ದರು. ಅಲ್ಲದೆ ಅವರು ತಮ್ಮ ಪತ್ನಿಯ ಉಲ್ಲೇಖವನ್ನು ಆ ವೇಳೆಯೂ ಮಾಡಿರಲಿಲ್ಲ ಎಂದು ನೆಟ್ಟಿಗರು ನೆನಪಿಸಿಕೊಂಡಿದ್ದಾರೆ. ಇದಾದ ಬಳಿಕ ಇವರಿಬ್ಬರೂ ಬೇರೆಯಾಗಿರಬಹುದು ಎಂಬ ಊಹಾಪೋಹಗಳ ಹರಿದಾಡಲು ಆರಂಭಿಸಿದವು. ಇತ್ತೀಚಿಗೆ ಸೆಹ್ವಾಗ್ ದೇವಸ್ಥಾನಕ್ಕೆ ಹೋಗಿದ್ದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಆದರೆ ಅದರಲ್ಲೂ ಪತ್ನಿಯನ್ನ ಟ್ಯಾಗ್ ಮಾಡಿರ್ಲಿಲ್ಲ.. ಹೀಗಾಗಿ ಇವರಿಬ್ಬರು ಡಿವೋರ್ಸ್ ಪಡೆದುಕೊಳ್ಳೋದು ಕನ್ಪರ್ಮ್ ಅಂತಾ ಹೇಳಲಾಗ್ತಿದೆ. ಆದ್ರೆ ಈ ಬಗ್ಗೆ ಸೆಹ್ವಾಗ್ ಸ್ಪಷ್ಟನೆ ನೀಡಿಲ್ಲ.
ವೀರೇಂದ್ರ ಸೆಹ್ವಾಗ್ ಹಾಗೂ ಆರತಿ ಅವರದ್ದು ಲವ್ ಮ್ಯಾರೆಜ್.. 2000ನೇ ಇಸವಿಯಲ್ಲಿ ಇವರಿಬ್ಬರು ಪ್ರೀತಿಯಲ್ಲಿ ಬಿದ್ದಿದ್ರು. 2004ರಲ್ಲಿ ಸೆಹ್ವಾಗ್ ಹಾಗೂ ಆರತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರು. ಇದೆಲ್ಲದರ ನಡುವೆಯೂ, ವೀರೇಂದ್ರ ಸೆಹ್ವಾಗ್ ತಮ್ಮ ವೈಯಕ್ತಿಕ ಜೀವನವನ್ನು ಬಹಳ ಖಾಸಗಿಯಾಗಿ ಇಟ್ಟುಕೊಂಡಿದ್ದರು. ಇನ್ನು ವೀರೇಂದ್ರ ಸೆಹ್ವಾಗ್ ಭಾರತ 2007ರಲ್ಲಿ ಟಿ20 ವಿಶ್ವಕಪ್ ಹಾಗೂ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದ ತಂಡದ ಸದಸ್ಯ. ಇವರು 2015ರಲ್ಲಿ ತಮ್ಮ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದರು. ಆ ಬಳಿಕ ಅವರು ಕ್ರಿಕೆಟ್ ಸಂಬಂಧಿತ ಬೇರೆ ಬೇರೆ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಅದಲ್ಲದೇ ತಮ್ಮ ಮಕ್ಕಳ ಕ್ರಿಕೆಟ್ ಕೆರಿಯರ್ ಗೆ ಸಪೋರ್ಟ್ ಮಾಡ್ತಾ ಇದ್ದಾರೆ.. ಇದೀಗ ಸೆಹ್ವಾಗ್ ದಾಂಪತ್ಯದಲ್ಲಿ ಬಿರುಕು ಬಿದ್ದಿದೆ.. ದೀರ್ಘ ಅವಧಿಯ ಕಾಲ ಜೊತೆಯಾಗಿಯೇ ಸಂಸಾರ ಮಾಡಿದ್ದರೂ ಕೂಡ, ಇತ್ತೀಚಿನ ಬೆಳವಣಿಗಳು ಇವರಿಬ್ಬರ ನಡುವಿನ ಅಂತರ ದೊಡ್ಡ ಮಟ್ಟದಲ್ಲಿ ಹೆಚ್ಚಾಗಿದೆ ಎಂದು ಹೇಳಲಾಗ್ತಿದೆ. ಇದೀಗ ಈ ಸುದ್ದಿ ಸುಳ್ಳಾಗಲಿ ಅಂತಾ ಅಭಿಮಾನಿಗಳು ಹೇಳ್ತಿದ್ದಾರೆ.