ಅಮೆರಿಕದಲ್ಲಿ ಭಾರತೀಯರಿಗೆ ಶಾಕ್- 7.5 ಲಕ್ಷ ಇಂಡಿಯನ್ಸ್ ಗಡಿಪಾರು!?
ಮೋದಿ ಐಡಿಯಾ ವರ್ಕೌಟ್ ಆಗುತ್ತಾ?
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗುತ್ತಿದ್ದಂತೆ ಹುಟ್ಟಿನಿಂದ ಪಡೆಯುವ ಪೌರತ್ವ ಹಕ್ಕನ್ನು ರದ್ದು ಮಾಡಿದ್ದಾರೆ. ಜನ್ಮಸಿದ್ಧ ಪೌರತ್ವ ಹಕ್ಕಿಗೆ ಸಂವಿಧಾನದ ರಕ್ಷಣೆ ಇದ್ದರೂ ಟ್ರಂಪ್ ಅದನ್ನು ರದ್ದುಗೊಳಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಇದು ಇಂಡೋ – ಅಮೆರಿಕನ್ನರಿಗೆ ನುಂಗಲಾರದ ತಪ್ಪವಾಗಿದೆ. ಪ್ರತಿ ವರ್ಷ ಭಾರತದಿಂದ ಅಮೆರಿಕಕ್ಕೆ ಲಕ್ಷಾಂತರ ವಲಸಿಗರು ತೆರಳುತ್ತಾರೆ. ಹೀಗೆ ಹೋದವರಲ್ಲಿ ಎಚ್ -1ಬಿ ವೀಸಾ ಹೊಂದಿರುವವರು ಮತ್ತು ಗ್ರೀನ್ ಕಾರ್ಡ್‌ಗಾಗಿ ಕಾಯುತ್ತಿರುವ ಪಾಲಕರ ಮಕ್ಕಳಿಗೆ ಇನ್ಮುಂದೆ ಜನ್ಮಸಿದ್ಧ ಪೌರತ್ವ ಸಿಗುವುದಿಲ್ಲ. ಹೀಗಾಗಿ ಸಾಕಷ್ಟು ಅನಿವಾಸಿ ಭಾರತೀಯರಿಗೆ ಅಮೆರಿಕದಲ್ಲಿ ತೊಂದ್ರೆ ಆಗಲಿದೆ. ಎಲೆಕ್ಷನ್ ಟೈಂನಲ್ಲಿ ಟ್ರಂಪ್ ಕೊಟ್ಟ ಭರವಸೆಯೆಂತೆ ವಲಸಿಗರ ವಿರುದ್ಧ ಕಠಿಣ ನಿಲುವನ್ನು ಟ್ರಂಪ್ ತೆಗೆದುಕೊಳ್ಳುತ್ತಿರುವುದು ಭಾರತೀಯರು ಮಾತ್ರವಲ್ಲದೇ ಜಗತ್ತಿನ ಅನೇಕ ದೇಶಗಳ ಜನರಿಗೆ ಸಮಸ್ಯೆಯಾಗಲಿದೆ.
ಇದನ್ನೂ ಓದಿ: ವಿಶ್ವದ ದೊಡ್ಡ ಸೈನ್ಯ ಯಾವುದು? – USA, ಚೀನಾಗಿಂತ ಈ ದೇಶವೇ ನಂ.1
ಅಮೆರಿಕದಲ್ಲಿ 7.5 ಲಕ್ಷ ಅಕ್ರಮ ಭಾರತೀಯ ವಲಸಿಗರಿದ್ದಾರಾ?
ಅಮೆರಿಕದ ಜನಗಣತಿ ಬ್ಯೂರೋ ಪ್ರಕಾರ ಅಮೆರಿಕದಲ್ಲಿ 51 ಲಕ್ಷ ಭಾರತೀಯ ಮೂಲದವರು ಇದ್ದಾರೆ. ಇದ್ರಲ್ಲಿ 21 ಲಕ್ಷ ಮಂದಿ ಭಾರತದಲ್ಲಿ ಜನಿಸಿದರು ಇದ್ದಾರೆ. ಒಟ್ಟಾರೆ ಅಮೆರಿಕದಲ್ಲಿರುವ ಭಾರತೀಯರ ಪೈಕಿ 7,50,000 ಜನ ಅಕ್ರಮ ವಲಸಿಗರು ಇದ್ದಾರೆ ಎಂದು ಹೇಳಲಾಗುತ್ತಿದೆ. ಈ ಪೈಕಿ 18 ಸಾವಿರ ಜನರನ್ನು ವಾಪಸ್ ಕರೆತರಲು ಭಾರತ ಸರ್ಕಾರ ಪ್ರಯತ್ನ ನಡೆಸುತ್ತಿದೆ. ಅಕ್ರಮ ವಲಸಿಗರನ್ನು ವಾಪಸ್ ಕರೆಸಿಕೊಳ್ಳುವ ಮೂಲಕ ಎಚ್-1 ಬಿ ವೀಸಾ ಸೇರಿ ಹಲವು ಸಕ್ರಮ ವೀಸಾ ಯೋಜನೆಗಳಲ್ಲಿ ಭಾರತೀಯರಿಗೆ ಆದ್ಯತೆ ಕೊಡುವಂತೆ ಅಮೆರಿಕದೊಂದಿಗೆ ಭಾರತ ಮಾತುಕತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ 2024 ರಲ್ಲಿ ಅಮೆರಿಕ 1500 ಭಾರತೀಯರನ್ನು ಭಾರತಕ್ಕೆ ವಾಪಸ್ ಕಳುಹಿಸಿದ್ದು, ಈ ಸಂಖ್ಯೆ ಮುಂದಿನ ವರ್ಷಗಳಲ್ಲಿ ಬಹಳಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.
ಅಮೆರಿಕದಲ್ಲಿ ಪೌರತ್ವದ ಪರಿಗಣನೆ ಹೇಗೆ?
ಅಮೆರಿಕದಲ್ಲಿ ಈಗ 54 ಲಕ್ಷ ಭಾರತೀಯರಿದ್ದಾರೆ. ಇವರಲ್ಲಿ ಶೇ.66ರಷ್ಟು ಜನ ವಲಸಿಗರಾಗಿದ್ದಾರೆ. ಶೇ.34 ಜನ ಮಾತ್ರ ಅಮೆರಿಕ ನಾಗರಿಕರಾಗಿದ್ದಾರೆ. ಈ ವಲಸಿಗ ಶೇ.66 ಜನರು ಭಾರತೀಯ ನಾಗರಿಕರೇ ಆಗಿದ್ದು, ಅಮೆರಿಕದಲ್ಲಿ ಎಚ್1ಬಿ ವೀಸಾ ಸೇರಿ ಹಲವು ವೀಸಾ ಆಧರಿಸಿ ಅಮೆರಿಕದಲ್ಲಿದ್ದಾರೆ. ಇವರು ಅಮೆರಿಕ ನಾಗರಿಕರಲ್ಲ. ಜನ್ಮಸಿದ್ಧ ವೀಸಾ ರದ್ದತಿಯಿಂದ ಈ ಶೇ.66 ಭಾರತೀಯರಲ್ಲಿ ಯಾರಿಗಾದರೂ ಮಕ್ಕಳಾದರೆ ಆ ಮಗುವಿಗೆ ತನ್ನಿಂತಾನೇ ಅಮೆರಿಕ ಪೌರತ್ವ ಸಿಗುತ್ತಿತ್ತು. ಈ ನಿಯಮವನ್ನು 1868ರಲ್ಲಿ ಅಮೆರಿಕದಲ್ಲಿ ಜಾರಿಗೆ ತರಲಾಗಿತ್ತು, ಸಂವಿಧಾನಕ್ಕೆ 14ನೇ ತಿದ್ದುಪಡಿ ತಂದು ಅಮೆರಿಕದಲ್ಲಿ ಈ ನಿಯಮವನ್ನು ಜಾರಿಗೆ ತರಲಾಗಿತ್ತು. ಆದರೆ, ಈ ನಿಯಮ ಇನ್ಮುಂದೆ ಇರುವುದಿಲ್ಲ. ಹೊಸ ನಿಯಮದಂತೆ, ಅಮೆರಿಕದಲ್ಲಿ ಜನಿಸಿದ ಮಗುವಿನ ಪಾಲಕರಲ್ಲಿ ಒಬ್ಬರು ಅಮೆರಿಕದ ಪ್ರಜೆ ಆಗಿದ್ದಲ್ಲಿ ಅಥವಾ ಗ್ರೀನ್ ಕಾರ್ಡ್ ಹೊಂದಿದ್ದರೆ ಮಾತ್ರ ಜನ್ಮಸಿದ್ಧ ಪೌರತ್ವ ದೊರೆಯುತ್ತದೆ. ಇದು ಭಾರತೀಯರಿಗಷ್ಟೇ ಅಲ್ಲ, ಬೇರೆ ಬೇರೆ ದೇಶದ ವಲಸಿಗರ ಮೇಲೂ ಪರಿಣಾಮ ಬೀರಲಿದೆ. ಆದರೆ, ಟ್ರಂಪ್ ಆದೇಶಕ್ಕೆ ತಡೆ ತರಲು ಅಮೆರಿಕದ 22 ರಾಜ್ಯಗಳು ನ್ಯಾಯಾಲಯದ ಮೊರೆ ಹೋಗಿರುವುದು ಭಾರತೀಯರಿಗೆ ರಿಲೀಫ್ ನೀಡಿದಂತಾಗಿದೆ.
ಮೆಕ್ಸಿಕೋ ಗಡಿಯಲ್ಲಿ ಭದ್ರತೆ!
ಅಮೆರಿಕದೊಳಗೆ ಅಕ್ರಮವಾಗಿ ನುಸುಳುವ ವಲಸಿಗರನ್ನು ತಡೆಯಲು ಮತ್ತು ಅಮೆರಿಕದಲ್ಲಿರುವ ಅಕ್ರಮ ವಲಸಿಗರನ್ನು ಗಡಿಪಾರು ಮಾಡಲು ಟ್ರಂಪ್ ನಿರ್ಧಾರ ತೆಗೆದುಕೊಂಡಿದ್ದಾರೆ. ಇದರ ಭಾಗವಾಗಿ ಮೊದಲ ಹಂತದಲ್ಲಿ ಮೆಕ್ಸಿಕೋ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಳ ಮಾಡಿದ್ದಾರೆ. ಜತೆಗೆ ಗಡಿಯುದ್ದಕ್ಕೂ ನಿರ್ಮಿಸಲಾಗುತ್ತಿರುವ ತಡೆ ಗೋಡೆಯನ್ನು ಪೂರ್ಣಗೊಳಿಸಲು ಹಾಗೂ ಲಕ್ಷಾಂತರ ವಲಸಿಗರು ಅಮೆರಿಕದೊಳಗೆ ಪ್ರವೇಶ ದೊರೆಯುವಂತೆ ಮಾಡಿದ ಬೈಡೆನ್ ಆಡಳಿತಾವಧಿಯ ಆ್ಯಪ್ ಅನ್ನು ರದ್ದುಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಮೆರಿಕದಲ್ಲಿರುವ ಸುಮಾರು 1.1 ರಿಂದ 1.4 ಕೋಟಿ ಅಕ್ರಮ ವಲಸಿಗರು ಗಡೀಪಾರು ಭೀತಿ ಎದುರಿಸುತ್ತಿದ್ದಾರೆ. ಅದಲ್ಲದೇ ಅಮೆರಿಕದ ಡಾಲರ್ ಆಕ್ರೋಶಕ್ಕೆ ಪರ್ಯಾಯವಾಗಿ ಬ್ರಿಕ್ಸ್ ರಾಷ್ಟ್ರಗಳು ಪರಸ್ಪರ ವ್ಯವಹಾರಗಳಿಗಾಗಿ ಜಾರಿಗೆ ತರಲು ಉದ್ದೇಶಿಸಿದ್ದ ಪ್ರತ್ಯೇಕ ಕರೆನ್ಸಿ ವಿರುದ್ಧವೂ ಟ್ರಂಪ್ ಗುಡುಗಿದ್ದಾರೆ. ಪ್ರತ್ಯೇಕ ಕರೆನ್ಸಿ ತಂದರೆ ಬ್ರಿಕ್ಸ್ ರಾಷ್ಟ್ರಗಳ ಮೇಲೆ ಶೇ.100 ತೆರಿಗೆ ವಿಧಿಸುವುದಾಗಿ ಎಚ್ಚರಿಸಿದ್ದಾರೆ.
‘ಪ್ರತಿಭಾವಂತರು ನನಗೆ ಇಷ್ಟ’ ಎಂದ ಟ್ರಂಪ್
ಭಾರತ ಸೇರಿ ವಲಸಿಗರಿಗೆ ನೀಡಲಾಗುವ ಎಚ್1ಬಿ ವೀಸಾ ಬಗ್ಗೆ ಅಮೆರಿಕದಲ್ಲಿ ಪರ-ವಿರೋಧ ಚರ್ಚೆ ನಡೆದಿರುವ ನಡುವೆಯೇ, ‘ಎಚ್1ಬಿ ವೀಸಾ ಪಡೆದಿರುವ ಪ್ರತಿಭಾವಂತರು ನನಗೆ ಇಷ್ಟ’ ಎಂದು ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಬುಧವಾರ ಮಾತನಾಡಿದ ಅವರು, ‘ವೀಸಾ ಪರ ಹಾಗೂ ವಿರೋಧ ಚರ್ಚೆಗಳು ನಡೆದಿವೆ. ಎರಡೂ ಕಡೆಯ ಚರ್ಚೆಗಳನ್ನು ನಾನು ಗೌರವಿಸುವೆ. ಆದರೆ ಪ್ರತಿಭಾವಂತ ಎಚ್1ಬಿ ವೀಸಾದಾರರು ನನಗೆ ಇಷ್ಟ. ಅರ್ಹರು ನಮ್ಮ ದೇಶಕ್ಕೆ ಬಂದು ನಮ್ಮಲ್ಲಿನ ಜನರಿಗೆ ತರಬೇತಿ ನೀಡುವುದು ಒಳ್ಳೆಯ ಬೆಳವಣಿಗೆ’ ಎಂದಿದ್ದಾರೆ.
ಯಾಕೆ ಭಾರತೀಯರಿಗೆ ಅಮೆರಿಕದ ಮೇಲೆ ಮೋಹ?
ಭಾರತ ದೇಶ ಸಾಕಷ್ಟು ಅಭಿವೃದ್ಧಿಯನ್ನ ಹೊಂದಿರೋ ದೇಶ.. ಮೋದಿ ವಿಶ್ವ ಗುರು ಎಂದು ಕರೆಸಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಭಾರತ ಡೆವಲಪ್ ಆಗ್ತಾನೆ ಇದೆ. ಹೀಗಿದ್ರೂ ಭಾರತೀಯರು ಯಾಕೆ ವಿದೇಶಗಳ ಮೇಲೆ ಹೆಚ್ಚು ವ್ಯಾಮೋಹವನ್ನ ತೋರ್ಸ್ತಾರೆ ಅನ್ನೋ ಪ್ರಶ್ನೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತೆ.. ಅದರಲ್ಲೂ ಹೆಚ್ಚಾಗಿ ನಾರ್ಥ್ ಇಂಡಿಯನ್ಸ್ ವಿದೇಶಗಳಿಗೆ ಅಕ್ರಮವಾಗಿ ಹೋಗ್ತಾರೆ.. ಅದು ಪ್ರಾಣದ ಹಂಗನ್ನೂ ತೋರೆದು. ಹೀಗೆ ಹೋಗುವುದು ಅಷ್ಟು ಸುಲಭವಲ್ಲ.. ಕೋಟಿ ಕೋಟಿ ಖರ್ಚು ಮಾಡಿ ಅಕ್ರಮವಾಗಿ ಅಮೆರಿಕಕ್ಕೆ ಹೋಗ್ತಾರೆ. ದುಡ್ಡು ಕೊಟ್ರೆ ಅಮೆರಿಕಕ್ಕೆ ಸುಲಭವಾಗಿ ಹೋಗೋಕೆ ಆಗಲ್ಲ.. ಇದು ತುಂಬಾ ರಿಸ್ಕಿನ ಕೆಲಸ.. ಹಣಕೊಟ್ಟು ಜೀವ ಕಳೆದುಕೊಳ್ಳುವಂತಹ ರಿಸ್ಕ್ ಇದು.. ಪ್ರಾಣಕ್ಕಿಂತ ಹೆಚ್ಚಾಗಿ ವಿದೇಶದ ಮೇಲೆ ನಮ್ಮ ಜನಕ್ಕೆ ವ್ಯಾಮೋಹ ಜಾಸ್ತಿ.. ನಮ್ಮ ನೆಲದಲ್ಲಿ ಎಲ್ಲಾ ಸೌಕರ್ಯವಿದ್ದರೂ ಬೇರೆ ದೇಶದ ಮೇಲೆ ಆಸೆ..ಸಾಕಷ್ಟು ಜನ ಮೊದಲು ಮೆಕ್ಸಿಕೋ ಕ್ಕೆ ಹೋಗಿ ಅಲ್ಲಿಂದ ಅಕ್ರಮವಾಗಿ ಅಮೆರಿಕ್ಕೆ ನುಸುಳುತ್ತಾರೆ.. ಅದೂ ಚಿಕ್ಕ ಚಿಕ್ಕ ಮಕ್ಕಳನ್ನ ಕಟ್ಟಿಕೊಂಡು ಇಡೀ ಕುಟುಂಬ ಅಮೆರಿಕಕ್ಕೆ ಹೋಗುವ ಪ್ರಯತ್ನ ಮಾಡುತ್ತೆ. ಕೆನಡಾ ಗಡಿಯಲ್ಲಿ ಮತ್ತು ಮೆಕ್ಸಿಕೋ ಗಡಿಯಲ್ಲಿ ಅಮೆರಿಕಕ್ಕೆ ಅಕ್ರಮವಾಗಿ ಹೋಗೋಕೆ ಯತ್ನಿಸಿ, ಸಾಕಷ್ಟು ಜನ ಭಾರತೀಯರು ಸಿಕ್ಕಿ ಬಿದ್ದಿದ್ದಾರೆ. ಹಾಗೇ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. 2011 ರಿಂದ 19 ಲಕ್ಷಕ್ಕೂ ಹೆಚ್ಚು ಜನ ಭಾರತೀಯ ಪೌರತ್ವವನ್ನ ತೇಜಿಸಿದ್ದು, ವಿದೇಶಗಳಲ್ಲಿ ಪೌರತ್ವ ಪಡೆದಿದ್ದಾರೆ. ಅದ್ರೂಲ್ಲಿ ಗುಜರಾತ್‌ನಿಂದಲೇ ಹೆಚ್ಚು ಜನ ಅಮೆರಿಕ್ಕೆ ವಲಸೆ ಹೋಗ್ತಾರೆ.. ಅದು ಶ್ರೀಮಂತ ವ್ಯಕ್ತಿಗಳೇ ಅನ್ನೋದು ಮತ್ತೊಂದು ಅಚ್ಚರಿಗೆ ಕಾರಣ.. ಇಡೀ ಕುಟುಂಬದ ಪ್ರಾಣವನ್ನ ಲೆಕ್ಕಿಸದೇ ಅಕ್ರಮವಾಗಿ ಹೋಗ್ತಾರೆ. ಇನ್ನೂಂದು ವಿಚಾರ ಅಂದ್ರೆ ಭಾರತದಲ್ಲಿರೋ ಆಸ್ತಿ, ಮನೆಗಳನ್ನ ಮಾರಿ ಅದ್ರಲ್ಲಿ ಬಂದ ಹಣವನ್ನ ಎಜೆಂಟ್‌ಗಳಿಗೆ ಕೊಟ್ಟು ಅಪಾಯದ ದಾರಿ ಹಿಡಿತಾರೆ.
ಭಾರತದಲ್ಲಿ ಇರದೇ ಇರೋದು ಅಮೆರಿಕದಲ್ಲಿ ಏನಿದೆ?
ಹೌದು, ಸಾಕಷ್ಟು ಜನರ ಪ್ರಶ್ನೆ ಇದೆ. ಭಾರತದಲ್ಲಿ ಇರದೇ ಇರೋದು ಅಮೆರಿದಲ್ಲಿ ಏನಿದೆ ಅನ್ನೋದು.. ಭಾರತದಲ್ಲಿ ಹಣವಿದ್ದರೇ ಎಲ್ಲವೂ ತುಂಬ ಈಸಿಯಾಗೇ ಸಿಗುತ್ತೆ.. ಆದ್ರೆ ಮನುಷ್ಯನ ಆಸೆಗೆ ಕೊನೆ ಇಲ್ಲ ನೋಡಿ.. ಹಾಗಾಗಿ ಭಾರತೀಯರು ವಿದೇಶದ ಮೇಲೆ ಹೆಚ್ಚು ವ್ಯಾಮೋಹ ತೋರಿಸುತ್ತಾರೆ. ಅಲ್ಲಿ ಹೋದ್ರೆ ನಮಗೆ ಕಷ್ಟನೇ ಬರಲ್ಲ.. ಜೀವನ ಸೆಟಲ್ ಆಗುತ್ತೆ.. ಮಕ್ಕಳ ಲೈಫ್ ಕೂಡ ಚೆನ್ನಾಗಿರುತ್ತೆ.. ಹಣ ಬಂದು ಬಂದು ಬೀಳುತ್ತೆ ಅನ್ನೋ ಅತೀ ಆಸೆಯಿಂದ ಸಾಕಷ್ಟು ಭಾರತೀಯರು ಅಮೆರಿಕಕ್ಕೆ ಹೋಗ್ತಾರೆ.. ಆದ್ರೆ ಭಾರತವೇ ಸೂಪರ್ ಅನ್ನೋದು ಅವರೇ ಮರೆತು ಬಿಟ್ಟು, ಪ್ರಾಣದ ಹಂಗು ತೊರೆದು ಯಾವುದೋ ದೇಶದಲ್ಲಿ ಜೀವನ ಮಾಡ್ತಾರೆ.. ತಮ್ಮ ಸಂಬಂಧಿಕರ ಮುಂದೆ ಫಾರಿನ್‌ನಲ್ಲಿ ನಾನು ಇರೋದನ್ನ ತೋರಿಸಿಕೊಳ್ಳವುದಕ್ಕೂ ಸಾಕಷ್ಟು ಜನ ಅಮೆರಿಕದಂತಹ ದೇಶಕ್ಕೆ ಹೋಗ್ತಾರೆ..
ಮೆಕ್ಸಿಕೋ ಅಮೆರಿಕ ಗಡಿಯಲ್ಲಿ ಉಕ್ಕಿನ ಗೋಡೆ
ವಲಸಿಗರು ಅಕ್ರಮವಾಗಿ ದೇಶ ಪ್ರವೇಶಿಸುವುದನ್ನು ತಡೆಯಲು 3126 ಕಿ.ಮೀ. ಉದ್ದವಿರುವ ಮೆಕ್ಸಿಕೋ ಗಡಿಯುದ್ದಕ್ಕೂ ಅಮೆರಿಕ ಗೋಡೆ ನಿರ್ಮಿಸಿದೆ. ಡೊನಾಲ್ಡ್ ಟ್ರಂಪ್ ಮೊದಲ ಬಾರಿದೆ ಅಧ್ಯಕ್ಷರಾಗಿದ್ದಾಗ ಇದನ್ನ ನಿರ್ಮಾಣ ಮಾಡಲಾಗಿದೆ. ಗೋಡೆಯ ಕೆಳಭಾಗದಲ್ಲಿ ಆಳವಾದ ಕಾಂಕ್ರೀಟ್ ಪದರ ನಿರ್ಮಿಸಲಾಗಿದೆ. ಇದರಿಂದಾಗಿ ಒಳನುಸುಳುಕೋರರು ಸುರಂಗ ಮಾರ್ಗ ತೋಡುವುದನ್ನು ಬಂದ್ ಮಾಡಿದಂತಾಗಿದೆ. ಮೆಕ್ಸಿಕೋ ಗಡಿಯಿಂದ ಏನಾದರೂ ಒಳನುಸುಳುಕೋರರು ಕಂಡುಬಂದರೆ ಪತ್ತೆ ಹಚ್ಚಬಹುದು. ಸಂಪೂರ್ಣ ಉಕ್ಕಿನ ಗೋಡೆ ಇದು. 50 ಅಡಿವರೆಗೂ ಎತ್ತರ ಇದೆ ಈ ಗೋಡೆ ಕಿಂಡಿಗಳನ್ನು ಹೊಂದಿದೆ. ಯಾರಾದರೂ ನುಸುಳುಕೋರರು ಬಂದರೆ ಸ್ಪಷ್ಟವಾಗಿ ಕಾಣುತ್ತದೆ . ಇದಕ್ಕೆ 25 ಮಿಲಿಯನ್ ಡಾಲರ್ ಹಣವನ್ನ ಇದಕ್ಕೆ ಸುರಿದಿದ್ದಾರೆ. 35ಕ್ಕೂ ಹೆಚ್ಚು ಕಿಲೋ ಮೀಟರ್ ಸಮುದ್ರದಲ್ಲೂ ಗೋಡೆ ಕಟ್ಟಿಸಿದ್ದಾರೆ. ಹೀಗಾಗಿ ಮೆಕ್ಸಿಕೋ ಗಡಿಯಿಂದ ಅಮೆರಿಕ್ಕೆ ಅಕ್ರಮವಾಗಿ ಹೋಗುವುದು ಅಷ್ಟು ಸುಲಭವಲ್ಲ.. ಹೀಗಾಗಿ ಟ್ರಂಪ್ ಅಕ್ರಮ ವಲಸಿಗರ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಮತ್ತಷ್ಟು ಟಫ್ ರೂಲ್ಸ್ ತರೋದು ಪಕ್ಕಾ.. ಈ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯವನ್ನ ಕಮೆಂಟ್ ಮೂಲಕ ತಿಳಿಸಿ.