ಕಣ್ಣೀರು ಹಾಕಿದ್ರೆ ಕಪ್ ಗೆಲ್ತಾರಾ? – ಭವ್ಯಾ ನಾಟಕ ವೀಕ್ಷಕರಿಂದಲೇ ಬಯಲು?
ಬಿಗ್ ಬಾಸ್ ನಲ್ಲಿ Over Acting ಭವ್ಯಾ
ಬಿಗ್ಬಾಸ್ ಟ್ರೋಫಿ ಗೆಲ್ಲಲು ಇನ್ನೊಂದೇ ಹೆಜ್ಜೆ ಬಾಕಿ. ಬಿಗ್ ಮನೆಯಲ್ಲಿ ಈಗ 6 ಜನ ಸ್ಪರ್ಧಿಗಳ ಕಣ್ಣು ಟ್ರೋಫಿ ಮೇಲೆ ಬಿದ್ದಿದೆ. ಆದ್ರೆ, ಎಲ್ಲಾ ಟ್ರೋಫಿ ಗೆಲ್ಲೋ ಬಯಕೆ ವ್ಯಕ್ತಪಡಿಸಿದ್ರೆ, ಭವ್ಯಾ ಗೌಡ ಮಾತ್ರ ಟ್ರೋಫಿ ಜೊತೆಗೆ ಕೊಡೋ ದುಡ್ಡಿನ ಬಗ್ಗೆಯೂ ಮಾತಾಡಿದ್ದಾರೆ. ಅಂದ್ರೆ, ಭವ್ಯಾ ಗೌಡ ರಿಯಾಲಿಟಿ ಶೋ ಕೊನೇ ಹಂತದಲ್ಲಿ ಎಮೋಷನ್ ಕಾರ್ಡ್ ಪ್ಲೇ ಮಾಡ್ತಿದ್ದಾರೆ. ಅಕ್ಕನ ಮದುವೆ, ತಂಗಿಯ ಓದು, ಅಪ್ಪನ ಆಪರೇಷನ್ ಅಂತಾ ಸಾಲು ಸಾಲು ಖರ್ಚಿನ ಪಟ್ಟಿಯನ್ನ ಮುಂದಿಟ್ಟಿದ್ದಾರೆ. ರಿಯಲ್ಲಾಗಿ ಭವ್ಯಾಗೆ ಇಷ್ಟೊಂದು ಕಮಿಟ್ ಮೆಂಟ್ ಇದೆಯಾ, ಹಾಗಾದ್ರೆ ಗೀತಾ ಸೀರಿಯಲ್ ಟೈಮ್ಲ್ಲಿ ಭವ್ಯಾ ಆಡಿರೋ ಮಾತೆಲ್ಲಾ ಬರೀ ಸುಳ್ಳಾ, ಇಲ್ಲಾ, ಕಷ್ಟ ಹೇಳಿಕೊಂಡ್ರೆ ವೋಟ್ ಬೀಳುತ್ತೆ ಅನ್ನೋ ಸ್ಟ್ಟ್ರಾಟಜಿಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ನಡುವೆ ಬೆಸ್ಟ್ ವಾರ್ – ಕ್ಯಾಪ್ಟನ್ಸಿ, ರನ್, ಕೀಪಿಂಗ್ ಹೇಗಿದೆ?
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರೋ ಗೀತಾ ಸೀರಿಯಲ್ ಮೂಲಕ ಫೇಮಸ್ ಆದವ್ರು ನಟಿ ಭವ್ಯಾ ಗೌಡ. ಸೀರಿಯಲ್ ಮುಗೀತಿದ್ದಂತೆ ಸಿನಿಮಾದಲ್ಲೂ ಬಣ್ಣ ಹಚ್ಚಿದ್ರು. ಇದ್ರ ಮಧ್ಯೆ ಬಿಗ್ ಬಾಸ್ ಮನೆಗೂ ಕಾಲಿಟ್ರು. ಇದೀಗ ಫೈನಲ್ ವೀಕ್ ವರೆಗೂ ಬಂದಿದ್ದಾರೆ. ಬಹುಶಃ ಬಿಗ್ ಬಾಸ್ ಮನೆಯಲ್ಲಿ ಯಾರ ಜೊತೆಯೂ ಬೆರೆಯದೇ, ಹುಡುಗಿಯರು ಮಾತಾಡಿದ್ರೆ ಬೆಕ್ಕಿನ ತರ ವಾಯ್ಸ್ ಮಾಡಿ, ಕೇವಲ ಒಬ್ಬನೇ ಒಬ್ಬ ಸ್ಪರ್ಧಿ ಜೊತೆ ಮಾತ್ರವೇ ಬೆರೆತು… ಕೊನೇ ತನಕ ಶೋನಲ್ಲಿ ಇದ್ದ ಸ್ಪರ್ಧಿಯೆಂದ್ರೆ ಅದು ಭವ್ಯಾ ಗೌಡ. ಬಿಗ್ ಮನೆಯಲ್ಲಿ ಎಲ್ರೂ ಎಲ್ಲರ ಜೊತೆ ಬೆರೆಯಬೇಕು. ಆದ್ರೆ, ಇಲ್ಲಿ ತ್ರಿವಿಕ್ರಮ್ ಬಿಟ್ರೆ ಭವ್ಯಾಗೆ ಯಾರೂ ಲೆಕ್ಕಕ್ಕಿಲ್ಲ. ಬಿಗ್ ಬಾಸ್ ಮೂಲ ನಿಯಮ ಗಾಳಿಗೆ ತೂರಿದ್ರೂ ಕೂಡಾ ಭವ್ಯಾ ಫೈನಲ್ ಹಂತ ತಲುಪಿದ್ದಕ್ಕೆ ಈಗಾಗ್ಲೇ ನಾನಾ ಕಾಮೆಂಟ್ಸ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಭವ್ಯಾ ಹೀಗಿರೋದಕ್ಕೆ ಪ್ಲಸ್ ಆಂಡ್ ಮೈನಸ್ ಕಾಮೆಂಟ್ಸ್ ಕೂಡಾ ಬರ್ತಿದೆ.
ಇದೀಗ ಭವ್ಯಾ ಬಿಗ್ಬಾಸ್ ಟ್ರೋಫಿ ಯಾಕೆ ಬೇಕು ಅನ್ನೋ ಬಗ್ಗೆ ಕೊಟ್ಟಿರೋ ಹೇಳಿಕೆ ಸಖತ್ ಚರ್ಚೆಯಲ್ಲಿದೆ. ‘ಟ್ರೋಫಿ ಜೊತೆ ಬರುವ ದುಡ್ಡಿನಿಂದ ತಂಗಿನ ಓದಿಸಬೇಕು. ಅಕ್ಕನ ಮದುವೆ ಮಾಡಬೇಕು. ಅಪ್ಪನ ಧ್ವನಿ ಪೆಟ್ಟಿಗೆಗೆ ಪೆಟ್ಟು ಆಗಿತ್ತು. ಆಗ ನನ್ನ ಬಳಿ ಹಣ ಇರಲಿಲ್ಲ. ಪೆಟ್ಟಾದ ಬಳಿಕ ಅವರ ವಾಯ್ಸ್ ಸರಿ ಮಾಡಿಸೋಕೆ ಆಗಲಿಲ್ಲ ಅಂತ ನೋವಾಯಿತು. ಆವತ್ತು ನನ್ನ ಬಳಿ ದುಡ್ಡು ಇರ್ತಿದ್ರೆ ಅಪ್ಪನಿಗೆ ಚಿಕಿತ್ಸೆ ಕೊಡಿಸಬಹುದಿತ್ತು. ಈ ಶೋನಿಂದ ಸಿಗುವ ದುಡ್ಡಲ್ಲಿ ಅಪ್ಪನ ಆಪೇರಷನ್ ಮಾಡಬಹುದು ಅಂತಾ ಭವ್ಯಾ ಹೇಳಿದ್ರು. ಜೊತೆಗೆ ಅಂದು ನಾನು ಶೂಟಿಂಗ್ ನಿಂದ ಬಂದು ಅಪ್ಪನ ಆಸ್ಪತ್ರೆಗೆ ಕರೆದುಕೊಂಡು ಹೋದೆ. ಕ್ಯಾಬ್ ಗೆ ಒಂದ್ ಸೈಡ್ ಪೇ ಮಾಡಲು ಕೂಡಾ ದುಡ್ಡಿರಲಿಲ್ಲ ಅಂತಾ ಹೇಳಿದ್ರು. ಈಗ ಇದೇ ಮಾತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಲ್ಲಿದೆ.
ಇದೇ ಭವ್ಯಾ ಗೊಡ ಗೀತಾ ಸೀರಿಯಲ್ ಟೈಮ್ ಲ್ಲಿ ಆಂಕರ್ ಅಕುಲ್ ಬಾಲಾಜಿ ಬಳಿ ಒಂದು ಮಾತು ಹೇಳಿದ್ರು. ನಾನು ಒಂದು ದಿನವೂ ಬಟ್ಟೆ ರಿಪೀಟ್ ಮಾಡಲ್ಲ, ಮನೆಯಲ್ಲಿ 3 ಸಾವಿರ ಬಟ್ಟೆಗಳಿವೆ. ಗೀತಾ ಧಾರಾವಾಹಿಯಲ್ಲಿ ಒಂದು ದಿನ ಧರಿಸಿದ ಬಟ್ಟೆ ಮತ್ತೊಂದು ದಿನ ಹಾಕಿದ್ದೇ ಇಲ್ಲ ಅಂತಾ ಹೇಳ್ತಾರೆ. ಆಗ ಅಕುಲ್ ಬಾಲಾಜಿ ಈಗಾಗಲೇ ಗೀತಾ ಸೀರಿಯಲ್ 300 ಎಪಿಸೋಡ್ ಶೂಟಿಂಗ್ ಆಗಿದೆ. ಹಾಗಾದ್ರೆ ನಿಮ್ಮ ಬಳಿ ಎಷ್ಟು ಬಟ್ಟೆ ಇವೆ ಎಂದು ಪ್ರಶ್ನೆ ಮಾಡುತ್ತಾರೆ. ನನ್ನ ಬಳಿ ಈಗಾಗಲೇ ಮೂರು ಸಾವಿರ ಬಟ್ಟೆಗಳಿವೆ. ಮನೆ ತುಂಬಾ ಬರೀ ಬಟ್ಟೆಗಳೇ ಕಾಣಿಸುತ್ತವೆ ಎಂದು ಭವ್ಯಾ ಹೇಳಿದ್ದಾರೆ. 3ಸಾವಿರ ಬಟ್ಟೆ ತೆಗೆದುಕೊಳ್ಳುವ ಒಬ್ಬ ನಟಿಗೆ ತಂದೆಯನ್ನ ಆಸ್ಪತ್ರೆಗೆ ಸೇರಿಸುವಾಗ ಕ್ಯಾಬ್ ಗೆ ಪೇ ಮಾಡಲು ಹಣ ಇಲ್ವಾ ಅಂತಾ ನೆಟ್ಟಿಗರು ಪ್ರಶ್ನೆ ಮಾಡ್ತಿದ್ದಾರೆ.
ವೋಟ್ ಬೇಕಂದ್ರೆ ಎಮೋಷನಲ್ ಆಗ್ಬೇಕು, ಕಣ್ಣೀರು ಹಾಕ್ಬೇಕು, ಆದ್ರೆ, ಅಕ್ಕನ ಮದುವೆ, ತಂಗಿಯ ಓದು, ಅಪ್ಪನ ಆಪರೇಷನ್ ಅಂತೆಲ್ಲಾ ಹೇಳುವ ಅಗತ್ಯವಿತ್ತಾ ಅನ್ನೋ ಪ್ರಶ್ನೆಯನ್ನ ಅನೇಕರು ಕೇಳಿದ್ದಾರೆ. ನೀವು ಬಂದಿರೋದು ಆಟ ಆಡೋಕೆ, ಕಪ್ ಗೆಲ್ಲೋಕೆ, ನಿಮಗೆ ಸಾಮರ್ಥ್ಯವಿದ್ರೆ ಗೆಲ್ಲಬೇಕು, ಅದು ಬಿಟ್ಟು ಇಷ್ಟು ದಿನ ತ್ರಿವಿಕ್ರಮ್ ಜೊತೆ ತೀರಾ ಕ್ಲೋಸ್ ಆಗಿ, ಕುಂತ್ರೂ ನಿಂತ್ರೂ ತ್ರಿವಿಕ್ರಮ್ ನೆರಳಲ್ಲೇ ಇದ್ದು, ಕೊನೇ ಕ್ಷಣದಲ್ಲಿ ಇಂಥಾ ಕಣ್ಣೀರೆಲ್ಲಾ ಬೇಕಾ ಅಂತಾ ಕೇಳ್ತಿದ್ದಾರೆ ವೀಕ್ಷಕರು. ಇಲ್ಲಿ ವೋಟ್ ಹಾಕಬೇಕಾದ ವೀಕ್ಷಕರು ಕೂಡಾ ದಡ್ಡರಲ್ಲ, ಈ ಬಾರಿ ಬಿಗ್ಬಾಸ್ ನ್ನ ನ್ಯಾಯವಾಗಿ ಯಾರು ಗೆಲ್ಲಬೇಕೋ ಅವರಿಗೆ ವೋಟ್ ಹಾಕಿಯೇ ಹಾಕ್ತಾರೆ.