ವಿಶ್ವದ ದೊಡ್ಡ ಸೈನ್ಯ ಯಾವುದು? – USA, ಚೀನಾಗಿಂತ ಈ ದೇಶವೇ ನಂ.1
ಭಾರತ ಸೇನೆಯಲ್ಲಿರೋ ಸೈನಿಕರೆಷ್ಟು?

ವಿಶ್ವದ ದೊಡ್ಡ ಸೈನ್ಯ ಯಾವುದು? – USA, ಚೀನಾಗಿಂತ ಈ ದೇಶವೇ ನಂ.1ಭಾರತ ಸೇನೆಯಲ್ಲಿರೋ ಸೈನಿಕರೆಷ್ಟು?

ಅಮೆರಿಕವನ್ನು ವಿಶ್ವದ ಅತಿದೊಡ್ಡ ಮಿಲಿಟರಿ ಶಕ್ತಿ ಎಂದು ಪರಿಗಣಿಸಲಾಗಿದೆ. ಆದರೆ ಅವರ ಬಳಿ ದೊಡ್ಡ ಸೈನ್ಯವೂ ಇಲ್ಲ. ಚೀನಾ ಕೂಡ ಹೆಚ್ಚು ಸೈನಿಕರನ್ನ ಹೊಂದಿರದ ದೇಶವಲ್ಲ. ಮೀಸಲು ಸೈನಿಕರನ್ನು ಸೇರಿಸಿದರೆ, ಚೀನಾದ ಸೈನ್ಯವು ವಿಯೆಟ್ನಾಂ, ಭಾರತ, ದಕ್ಷಿಣ ಕೊರಿಯಾ ಮತ್ತು ರಷ್ಯಾದ ಸೈನ್ಯಗಳಿಗಿಂತ ಹಿಂದುಳಿದಿದೆ. ಹಾಗಿದ್ರೆ ಯಾವ ದೇಶ ಸೈನಕರ ಬಲದಲ್ಲಿ ನಂ-1 ಇದೆ ಅನ್ನೋದನ್ನ ನೋಡೋಣ ಬನ್ನಿ..

 

 ಸೈನಿಕ ಬಲದಲ್ಲಿ ವಿಯೆಟ್ನಾಂ ನಂ-1

ವಿಯೆಟ್ನಾಂನ ಮಿಲಿಟರಿ 600,000 ಸಕ್ರಿಯ ಸಿಬ್ಬಂದಿ ಮತ್ತು 5 ದಶಲಕ್ಷಕ್ಕೂ ಹೆಚ್ಚು ಮೀಸಲು ಸಿಬ್ಬಂದಿಗಳನ್ನು ಒಳಗೊಂಡಿದೆ. ಹೀಗಾಗಿ ವಿಯೆಟ್ನಾಂ ದೇಶದವರು ವಿಶ್ವದ ಅತಿದೊಡ್ಡ ಸೈನ್ಯವನ್ನು ಹೊಂದಿದೆ. ವಿಯೆಟ್ನಾಂನ ಸೈನ್ಯವು 5.8 ಮಿಲಿಯನ್ ಸೈನಿಕರನ್ನು ಹೊಂದಿದೆ. ಇದಕ್ಕೆ ಮುಖ್ಯ ಕಾರಣ ವಿಯೆಟ್ನಾಂ, ದಕ್ಷಿಣ ಕೊರಿಯಾ ಮತ್ತು ಇಸ್ರೇಲ್‌ನಂತೆ ಯುವ ಸೈನಿಕರಿಗೆ ಶಾಶ್ವತ ನೇಮಕಾತಿಯನ್ನು ನೀಡುತ್ತದೆ. ಈ ದೇಶದ ಜನಸಂಖ್ಯೆ ಸರಿಸುಮಾರು 9.89 ಕೋಟಿ ಆಗಿದೆ. ಈ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಹಾಗಿದ್ರೆ ಟಾಪ್ 10 ನಲ್ಲಿ ಯಾವ್ಯಾವ ದೇಶಗಳು ಇವೆ ಅನ್ನೋದನ್ನ ನೋಡೋಣ ಬನ್ನಿ..

:  ಹೆಚ್ಚು ಸೇನಾ ಬಲ ಹೊಂದಿದ ದೇಶ

ವಿಯೆಟ್ನಾಂ             5.8 ಮಿಲಿಯನ್

ಭಾರತ                 5.1 ಮಿಲಿಯನ್

ದಕ್ಷಿಣ ಕೊರಿಯಾ       3.8 ಮಿಲಿಯನ್

ರಷ್ಯಾ                   3.6 ಮಿಲಿಯನ್

ಚೀನಾ                  3.2 ಮಿಲಿಯನ್

ಉಕ್ರೇನ್       2.2 ಮಿಲಿಯನ್

ಅಮೆರಿಕ        2.1 ಮಿಲಿಯನ್

ಉತ್ತರ ಕೊರಿಯಾ  2.0 ಮಿಲಿಯನ್

ಪಾಕಿಸ್ತಾನ – 1.7 ಮಿಲಿಯನ್

 

ಟಾಪ್‌ 4 ನಲ್ಲಿದೆ ಭಾರತದ ಮಿಲಿಟರಿ

ದೇಶದ ಸೇನಾ ಶಕ್ತಿಯನ್ನು 60 ಅಂಶಗಳಲ್ಲಿ ಅಳೆಯಲಾಗುತ್ತೆ. ಸಿಬ್ಬಂದಿ ಸಂಖ್ಯೆ, ಮಿಲಿಟರಿ ಉಪಕರಣಗಳು, ಆರ್ಥಿಕ ಸ್ಥಿರತೆ, ಭೌಗೋಳಿಕ ಪ್ರದೇಶ ಮತ್ತು ಲಭ್ಯವಿರುವ ಮಾನವ ಸಂಪನ್ಮೂಲಗಳು ಸೇರಿದಂತೆ ಹಲವು ಅಂಶಗಳನ್ನು ಇದು ಹೊಂದಿದೆ. ಈ ಅಂಶಗಳು ಪವರ್​ಇಂಡೆಕ್ಸ್​​ ಸ್ಕೋರ್​ ಅನ್ನು ನಿರ್ಧರಿಸುತ್ತದೆ. ಕಡಿಮೆ ಅಂಕಗಳು ಸ್ಟ್ರಾಂಗ್‌ ಮಿಲಿಟರಿ ಸಾಮರ್ಥ್ಯವನ್ನು ಸೂಚಿಸುತ್ತದೆ.

ಇದನ್ನೂ ಓದಿ: ಸೈಫ್ ಕುಟುಂಬದ ಆಸ್ತಿ ಸರ್ಕಾರಕ್ಕೆ? 15000 ಕೋಟಿ ಆಸ್ತಿ ಕೈ ಬಿಡುತ್ತಾ?

ಅಮೆರಿಕ ವಿಶ್ವದ ಶಕ್ತಿಶಾಲಿ ಸೇನಾಪಡೆ ಹೊಂದಿದೆ. ಅಮೆರಿಕದ ಸೇನೆಯಲ್ಲಿ ಜಾಗತಿಕ ತಂತ್ರಜ್ಞಾನದ ಅಭಿವೃದ್ಧಿ, ವೈದ್ಯಕೀಯ, ಏರೋಸ್ಪೇಸ್ ಮತ್ತು ಕಂಪ್ಯೂಟರ್​​, ಟೆಲಿಕಾಂ ವಲಯ ಅತ್ಯಂತ ಪ್ರಬಲವಾಗಿದೆ. ಅಮೆರಿಕ 13,300 ಯುದ್ಧ ವಿಮಾನಗಳನ್ನು ಹೊಂದಿದ್ದು, 983 ದಾಳಿ ನಡೆಸುವ ಹೆಲಿಕ್ಟಾಪರ್‌ಗಳನ್ನು​ ಹೊಂದಿದೆ. ವಾಯುಪಡೆಯ ಶಕ್ತಿಯೊಂದನ್ನು ಎಣಿಸಿದರೆ, ಅಮೆರಿಕದ ಶಕ್ತಿಯೇ ಅತ್ಯಂತ ಹೆಚ್ಚು. ರಷ್ಯ, ಭಾರತ, ಚೀನಾ ಮೂರನ್ನೂ ಸೇರಿಸಿದರೆ ಎಷ್ಟಾಗಬಹುದೋ ಅಷ್ಟು ವೈಮಾನಿಕ ದಾಳಿಪಡೆ ಅಮೆರಿಕ ಒಂದರ ಬಳಿಯೇ ಇದೆ.

ಭಾರತ ಬೃಹತ್ ಪ್ರಮಾಣದ ಭೂಸೇನೆ ಮತ್ತು ದೇಶೀಯ ಮಿಲಿಟರಿ ಪಡೆ ಹೊಂದಿದೆ. ರಷ್ಯಾ ದೇಶವು ಸುಧಾರಿತ ತಂತ್ರಜ್ಞಾನ ಮತ್ತು ಉತ್ತಮ ತರಬೇತಿ ಪಡೆದ ಮಿಲಿಟರಿ ಹೊಂದಿದೆ. ಚೀನಾ ಕೂಡ ಗಮನಾರ್ಹ ಸೇನಾ ಬಲ ಹೊಂದಿದೆ . ಚೀನಾದ ಬಲಿಷ್ಠತೆ ಬಂದಿರುವುದು ಅದರ ನೌಕಾಪಡೆಯಿಂದ. ಜಗತ್ತಿನಲ್ಲೇ ಅತಿ ದೊಡ್ಡದಾದ ಹಾಗೂ ಬಲಿಷ್ಠವಾದ ನೌಕಾಪಡೆ ಚೀನಾದ ಬಳಿ ಇದೆ.

2014ರಿಂದ ಬದಲಾಗುತ್ತಿದೆ ಭಾರತ ಸಶಸ್ತ್ರ ಪಡೆಗಳ ಬಲ 

2014ರಿಂದ ಭಾರತೀಯ ಸಶಸ್ತ್ರಪಡೆಯ ಬಲ ಗಣನೀಯವಾಗಿ ವೃದ್ಧಿಸುತ್ತಿದೆ ರಫೇಲ್‌ನಂಥ ಅತ್ಯಾಧುನಿಕ ಯುದ್ಧ ವಿಮಾನಗಳ ಖರೀದಿ, ದೇಶೀಯ ತೇಜಸ್ ಯುದ್ಧ ವಿಮಾನಗಳ ಉನ್ನತೀಕರಣ, ಕ್ಷಿಪಣಿಗಳು, ಜಲಾಂತರ್ಗಾಮಿ ವಿರೋಧಿ ವಿಮಾನಗಳ ಮೂಲಕ ಸಶಸ್ತ್ರಪಡೆಗಳು ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ಧಿ ಕಾಣುತ್ತಿವೆ. 2016ರ ಸೆಪ್ಟೆಂಬರ್ ತಿಂಗಳಲ್ಲಿ ಪಾಕಿಸ್ಥಾನದ ನೆಲಕ್ಕೇ ನುಗ್ಗಿ ಸರ್ಜಿಕಲ್ ಸ್ಟೈಕ್ ನಡೆಸಿದ್ದು, 2017ರಲ್ಲಿ ಸುಮಾರು ಎರಡು ತಿಂಗಳುಗಳ ಕಾಲ ಡೋಕ್ಲಾಂ ಪ್ರದೇಶದಲ್ಲಿ ಚೀನಿ ಸೈನಿಕರಿಗೆ ಎದುರು ನಿಂತು ಅವರನ್ನು ಹಿಮ್ಮೆಟ್ಟಿಸಿದ್ದು, 2019ರಲ್ಲಿ ಪಠಾಣ್‌ಕೋಟ್ ದಾಳಿಗೆ ಪ್ರತ್ಯುತ್ತರವಾಗಿ ಪಾಕಿಸ್ಥಾನದ ಬಾಲಾಕೋಟ್ ಮೇಲೆ ವಾಯುದಾಳಿ ನಡೆಸಿದ್ದು, 2020ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ಚೀನದ ಸೈನಿಕರ ಹೆಡೆಮುರಿಕಟ್ಟಿರುವುದು, ಈಗಲೂ ಲಕ್ಷಾಂತರ ಸಂಖ್ಯೆಯಲ್ಲಿ ಅತ್ಯಂತ  ಕಠಿಣ ಪ್ರದೇಶಗಳಲ್ಲಿ, ಶೀತಗಾಳಿಯ ನಡುವೆ ಭಾರತೀಯ ಸೇನೆಯುರು ದೇಶಕ್ಕೆ ಹೋರಾಡುತ್ತಿದ್ದಾರೆ.

 

 ಹಲವು ಬಿಕ್ಕಟ್ಟು-ಯುದ್ಧ ಎದುರಿಸಿದ ಭಾರತ

ಭಾರತೀಯ ಸೇನೆಯು ದಶಕಗಳಿಂದ ಪಾಕಿಸ್ಥಾನ ಹಾಗೂ ಚೀನದೊಂದಿಗೆ ಗಡಿ ಭಾಗದಲ್ಲಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿರುವುದರಿಂದ, ವಿವಿಧ ಪರಿಸ್ಥಿತಿಗಳಲ್ಲಿ, ವಾತಾವರಣಗಳಲ್ಲಿ ಹೋರಾಡುವ ಅದರ ಶಕ್ತಿ ಹೆಚ್ಚಿದೆ. ಆರಂಭಿಕ ಹಂತದಲ್ಲಿ ಸೇನೆಯು ಮುಖ್ಯ ಗುರಿ ಗಡಿ ಭಾಗದ ರಕ್ಷಣೆಯಾಗಿತ್ತು. ಆದರೆ ಅನಂತರದ ವರ್ಷಗಳಲ್ಲಿ ಸೇನೆಯು ಆಂತರಿಕ ಭದ್ರತೆ ನೀಡುವಲ್ಲಿ ತನ್ನ ಗಮನ ಹರಿಸಿತು. ಭಾರತೀಯ ಸೇನೆಯು ಇದುವರೆಗೂ 1947-48ರ ಭಾರತ ಪಾಕ್ ಯುದ್ಧ, 1948ರಲ್ಲಿ ಹೈದರಾಬಾದ್ ನಿಜಾಮನ ವಿರುದ್ಧ ಆಪರೇಷನ್‌ ಪೋಲೋ, 1962ರಲ್ಲಿ ಚೀನ ವಿರುದ್ಧದ ಯುದ್ಧ, 1965ರಲ್ಲಿ ಪಾಕ್ ವಿರುದ್ಧ, 1971ರಲ್ಲಿ ಬಾಂಗ್ಲಾದೇಶ ವಿಮೋಚನಾ ಯುದ್ಧ , 1998ರಲ್ಲಿ ಕಾರ್ಗಿಲ್ ಯುದ್ಧವನ್ನು ಎದುರಿಸಿದೆ.

 

 ಸೂಪರ್ ಪವರ್ ಹೊಂದಿದೆ ಭಾರತ 

*ಫ್ರಾನ್ಸ್‌ನಿಂದ ರಫೇಲ್‌ ಯುದ್ಧವಿಮಾನಗಳ ಆಗಮನದಿಂದ ಭಾರತಕ್ಕೆ ಪವರ್

*ಕೆಲವೇ ದೇಶಗಳ ಬಳಿ ಇರುವ ಹೈಪರ್‌ಸಾನಿಕ್‌ ಕ್ಷಿಪಣಿ ಉಡಾವಣೆ ವ್ಯವಸ್ಥೆ ಈಗ ಭಾರತದ ಬಳಿ ಇದೆ.

*ಶತ್ರುದೇಶಗಳ ಸ್ಯಾಟ್‌ಲೈಟ್‌ಗಳನ್ನು ಕೆಡವಬಲ್ಲ ಉಪಗ್ರಹ ಉಡಾವಣೆ ತಂತ್ರಜ್ಞಾನವಿದೆ

* ಹಿಮಾಲಯದಂಥ ಎತ್ತರದ, ಆಮ್ಲಜನಕ ಕಡಿಮೆಯಿರುವ ಪ್ರದೇಶದಲ್ಲಿ ಯುದ್ಧ ಮಾಡಬಲ್ಲಸಾಮರ್ಥ್ಯವಿದೆ

* ಇಗ್ಲಾಏರ್‌ ಡಿಫೆನ್ಸ್‌ ಸಿಸ್ಟಮ್‌ಗಳು ಗಡಿಯಲ್ಲಿಯೋಧರು ಭುಜದಿಂದಲೇ ಉಡಾಯಿಸಬಹುದು.

* ಗಡಿಯಲ್ಲಿರುವ ಘಾತಕ್‌ ಕಮಾಂಡೋಗಳು ಹಿಮಪ್ರದೇಶ, ಮರುಭೂಮಿ ಮುಂತಾದ ಸಂಕಷ್ಟಮಯ ಪ್ರದೇಶಗಳಲ್ಲಿ ಹಾಗೂ ಮಾರ್ಷಲ್‌ ಯುದ್ಧ ಕಲೆಗಳಲ್ಲಿ ತರಬೇತಿ ಪಡೆದಿದ್ದಾರೆ .

*ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಸ್ವಾತಿ ರೇಡಾರ್‌ಗಳು ಗಡಿಪ್ರದೇಶದಲ್ಲಿ ಶತ್ರುಗಳ ಶೆಲ್‌, ರಾಕೆಟ್‌ ಮುಂತಾದ ಆಯುಧಗಳನ್ನು 50 ಕಿಲೋಮೀಟರ್‌ ದೂರದಿಂದ ನಿಖರವಾಗಿ ಪತ್ತೆ

* ರಷ್ಯದಿಂದ ತರಿಸಿರುವ ಎಸ್‌-400 ಟ್ರಯಂಫ್‌ ಕ್ಷಿಪಣಿಗಳು ಜಗತ್ತಿನ ಅತ್ಯಾಧುನಿಕ ಕ್ಷಿಪಣಿ ನಾಶಕ, ಜೆಟ್‌ನಾಶಕ ವ್ಯವಸ್ಥೆಯಾಗಿವೆ.

* ಡಿಆರ್‌ಡಿಒ ಅತ್ಯಾಧುನಿಕ ಡ್ರೋನ್‌ ತಡೆ ವ್ಯವಸ್ಥೆಯೊಂದನ್ನು ರೂಪಿಸಿದೆ. ‘ಭಾರತ್‌’ ಹೆಸರಿನ ಡ್ರೋನ್‌ಗಳ ಕಣ್ಗಾವಲಿದೆ.

 

 ರಕ್ಷಣ ಪರಿಕರಗಳ ರಫ್ತು ಹೆಚ್ಚಳ

ಸೇನೆಗೆ ಅಗತ್ಯವಿರುವ ರಕ್ಷಣ ಪರಿಕರಗಳ ಸ್ವದೇಶಿ ಉತ್ಪಾದನೆಗೆ ಕೆಲವು ವರ್ಷಗಳಿಂದ ಒತ್ತು ನೀಡಲಾಗುತ್ತಿದೆ.   ಭಾರತ ರಕ್ಷಣಾ ಉಪಕರಣ ಮತ್ತು ಪರಿಕರಗಳ ರಫ್ತಿನಲ್ಲಿ ಬಹುದೊಡ್ಡ ಮಟ್ಟದ ಯಶಸ್ಸು ಸಾಧಿಸಿದೆ. ಗಮನಾರ್ಹ ಸಂಗತಿಯೆಂದರೆ. ಕಳೆದ ವರ್ಷ 20 ಸಾವಿರ ಕೋಟಿಗೂ ಹೆಚ್ಚು ರಫ್ತು ಮಡಲಾಗಿದೆ.  ಮುಂದಿನ 2-3 ವರ್ಷಗಳಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರ ನಿರ್ಮಾಣಗಳ ಮೂಲಕ ರಫ್ತು ಪ್ರಮಾಣವನ್ನು 35,000 ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ.

 ಕೊರೆಯುವ ಚಳಿಯಲ್ಲೂ ಯೋಧರ ಹೋರಾಟ

ಭಾರತೀಯ ಸೇನಾಪಡೆಯ ಯೋಧರು ಸಿಯಾಚಿನ್‌ ಭೀಕರ ಚಳಿಯಲ್ಲೂ ಗಡಿಗಳನ್ನು ಕಾಯುತ್ತಾರೆ. ಇಲ್ಲಿನ ಸರಾಸರಿ ತಾಪಮಾನವು -50 ಡಿಗ್ರಿಗಳಷ್ಟಾಗಿರುತ್ತದೆ. ಹಿಮ ಮತ್ತು ತಂಪಾದ ಗಾಳಿ ಕೂಡ ದೊಡ್ಡ ಅಪಾಯವನ್ನುಂಟು- ಮಾಡುತ್ತದೆ. ಸಿಯಾಚಿನ್ ಭೂಮಿಯ ಮೇಲಿನ ಅತೀ ಎತ್ತರದ ಯುದ್ಧ ಭೂಮಿಗಳಲ್ಲಿ ಒಂದು.

 ‘ಮೌಂಟೆನ್ ಟ್ಯಾಂಕ್’ ಅಭಿವೃದ್ಧಿಪಡಿಸಿದ ಭಾರತ

ಭಾರತಕ್ಕೆ  ಗಡಿ ಭಾಗಗಳಲ್ಲಿ ಸಾಂಪ್ರದಾಯಿಕ ಎದುರಾಳಿಗಳ ಕಾಟ ಹೆಚ್ಚಾಗಿದೆ. ಗಡಿಯಲ್ಲಿ ಭದ್ರತೆ ಹೆಚ್ಚಿಸಿಕೊಳ್ಳಲು ಸುಧಾರಿತ ಯುದ್ಧೋಪಕರಣಗಳನ್ನು ದೇಶ ಅಭಿವೃದ್ಧಿಪಡಿಸುತ್ತಿದೆ. ತನ್ನ ಸೇನಾ ಸಾಮರ್ಥ್ಯದ ಮೂಲಕ ಮಗ್ಗುಲು ಮುಳ್ಳಾಗಿರುವವರನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸುತ್ತಿದೆ. ರಷ್ಯಾ-ಉಕ್ರೇನ್ ಯುದ್ಧದಿಂದ ಭಾರತ ಸಾಕಷ್ಟು ಪಾಠ ಕಲಿತಿದೆ. ನಮ್ಮ ನೆರೆ-ಹೊರೆಯವರೇ ಹೇಗೆ ನಮಗೆ ಅಪಾಯ ಎಂಬುದಕ್ಕೆ ಈ ಎರಡು ರಾಷ್ಟ್ರಗಳ ನಡುವಿನ ಯುದ್ಧವೇ ಸ್ಪಷ್ಟ ಸಾಕ್ಷಿ. ಇದರಿಂದ ಎಚ್ಚೆತ್ತುಕೊಂಡಿರುವ ಭಾರತ ಗಡಿ ಭಾಗಗಳಲ್ಲಿ ಹೈಅಲರ್ಟ್ ಆಗಿದೆ. ಪೂರ್ವ ಲಡಾಖ್‌ನಲ್ಲಿ ಚೀನಾ ಸೈನಿಕರ ಉಪಟಳವನ್ನು ನಿಯಂತ್ರಿಸಲು ಭಾರತ ‘ಮೌಂಟೆನ್ ಟ್ಯಾಂಕ್’ ಅಭಿವೃದ್ಧಿಪಡಿಸಿದೆ.   ಗಡಿಗಳಲ್ಲಿ ಶತ್ರುಗಳನ್ನು ಎದುರಿಸಲು ಭಾರತ ‘ಮೌಂಟೆನ್ ಟ್ಯಾಂಕ್’ ಅಭಿವೃದ್ಧಿಪಡಿಸಿದೆ. ಪರ್ವತಗಳಂತಹ ಕಡಿದಾದ ಭಾಗಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಲು ಲಾರ್ಸೆನ್ ಮತ್ತು ಟೂಬ್ರೊ ಸಹಯೋಗದಲ್ಲಿ ಡಿಆರ್‌ಡಿಒ ಇದನ್ನು ಅಭಿವೃದ್ಧಿಪಡಿಸಿದೆ. ಪರ್ವತ ಪ್ರದೇಶಗಳಂತಹ ಭಾಗಗಳಲ್ಲಿ ಯುದ್ಧಕ್ಕಾಗಿ ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಭಾರತದ ಮೊದಲ ಟ್ಯಾಂಕರ್ ಇದು. ಇದರ ಹೆಸರು ‘ಜೊರಾವರ್’. ಲಡಾಖ್‌ನ ಪರ್ವತ ಪ್ರದೇಶ ಭಾಗಗಳಲ್ಲಿ ಚೀನಾದೊಂದಿಗೆ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಬಿಕ್ಕಟ್ಟನ್ನು ನಿರ್ವಹಿಸಲು ಇದನ್ನು ರೂಪಿಸಲಾಗಿದೆ. ಎತ್ತರದ ಪ್ರದೇಶಗಳಲ್ಲಿ ‘ಮೌಂಟೆನ್ ಟ್ಯಾಂಕ್’ ನಿಯೋಜನೆಗೆ ಸಿದ್ಧವಾಗಿದೆ. ಭಾರತೀಯ ಸೇನೆಯು ಸುಮಾರು 350 ಜೊರಾವರ್ ಟ್ಯಾಂಕ್‌ಗಳನ್ನು ವಿಶೇಷವಾಗಿ ಪರ್ವತ ಪ್ರದೇಶಗಳಲ್ಲಿ ನಿಯೋಜಿಸಲು ಯೋಜಿಸಿದೆ. ಭಾರವಾದ ‘ಅರ್ಜುನ್ ಯುದ್ಧ ಟ್ಯಾಂಕ್’ಗಳಿಗೆ ಹೋಲಿಸಿದರೆ, ಜೊರಾವರ್ ಹೆಚ್ಚು ಹಗುರವಾಗಿರುತ್ತದೆ. ಗುಡ್ಡಗಾಡು ಪ್ರದೇಶಗಳಿಗೆ ಇದು ಹೆಚ್ಚು ಸೂಕ್ತವಾಗಿವೆ. ವಿಶೇಷವಾಗಿ ಲಡಾಖ್‌ನಂತಹ ಎತ್ತರದ ಪ್ರದೇಶಗಳಲ್ಲಿ ಸೇನೆಯು ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು. ಅರ್ಜುನ್ ಯುದ್ಧ ಟ್ಯಾಂಕ್ 58.5 ಟನ್ ತೂಕವಿದೆ. ಚೀನಾದೊಂದಿಗಿನ ಸಂಘರ್ಷದ ಸಂದರ್ಭದಲ್ಲಿ ಗುಡ್ಡಗಾಡು ಮತ್ತು ಎತ್ತರದ ಪ್ರದೇಶಗಳಲ್ಲಿ ಇದನ್ನು ಸಮರ್ಥವಾಗಿ ಬಳಸುವುದು ಕಷ್ಟ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಹಗುರವಾದ ಟ್ಯಾಂಕ್‌ನ ಅಗತ್ಯತೆ ಹೆಚ್ಚಿದ್ದು.. ಒಟ್ನಲ್ಲಿ ಭಾರತ ಯಾರಿಗೂ ಕಮ್ಮಿಲ್ಲದಂತೆ ಸೇನೆಯಲ್ಲಿ ತನ್ನದೇ ಆದ ತಾಕತ್ತು ತೋರಿಸುತ್ತಿದೆ. ಮುದೊಂದು ದಿನ ಇಂಡಿಯಾನ್ ಆರ್ಮಿ ವಿಶ್ವಕ್ಕೆ ನಂಬರ್ 1 ಆಗಲಿ ಅನ್ನೋದು ಎಲ್ಲರ ಆಶಯ. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯವನ್ನ ಕಮೆಂಟ್ ಮೂಲಕ ತಿಳಿಸಿ. ನಮಸ್ಕಾರ..

Kishor KV

Leave a Reply

Your email address will not be published. Required fields are marked *