ಇಂಗ್ಲೆಂಡ್ ಚೆಂಡಾಡಲು ಶಮಿ ರೆಡಿ – 14 ತಿಂಗಳ ಜಿದ್ದು ಸ್ಫೋಟವಾಗುತ್ತಾ?  

ಇಂಗ್ಲೆಂಡ್ ಚೆಂಡಾಡಲು ಶಮಿ ರೆಡಿ – 14 ತಿಂಗಳ ಜಿದ್ದು ಸ್ಫೋಟವಾಗುತ್ತಾ?  

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬೌಲರ್‌ ಮೊಹಮ್ಮದ್ ಶಮಿ. ಕಳೆದ 14 ತಿಂಗಳಲ್ಲಿ ಭಾರತದ ಪ್ರತಿಯೊಂದು ಪಂದ್ಯ ಬಂದಾಗ್ಲೂ ಫಸ್ಟ್ ನೆನಪಾಗ್ತಾ ಇದ್ದದ್ದೇ ಮೊಹಮ್ಮದ್ ಶಮಿ. ಭರ್ತಿ 400ಕ್ಕೂ ಹೆಚ್ಚು ದಿನಗಳ ಬಳಿಕ ಶಮಿ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಿದ್ದಾರೆ. ತಮ್ಮ ಸ್ವಿಂಗ್ ಬೌಲಿನಿಂಗ್‌ನಿಂದಲೇ ಎದುರಾಳಿಗಳನ್ನು ಕಾಡುವ ಶಮಿ ಅನುಪಸ್ಥಿತಿ ಈ ಹಿಂದಿನ ಹಲವು ಸರಣಿಗಳಲ್ಲಿ ಎದ್ದು ಕಂಡಿದೆ. ಆದರೆ ಈಗ ಗಾಯದಿಂದ ಚೇತರಿಸಿಕೊಂಡಿರುವ ಅವರು ಸಂಪೂರ್ಣ ಫಿಟ್ ಆಗಿದ್ದಾರೆ. ತಮ್ಮ ಬೌಲಿಂಗ್ ಪರಾಕ್ರಮ ತೋರಲು ರೆಡಿಯಾಗಿದ್ದಾರೆ. ಆದ್ರೆ ಶಮಿಗೆ ಅವ್ರ ಕಮ್ ಬ್ಯಾಕ್ ಅಷ್ಟು ಈಸಿಯಾಗಿರಲಿಲ್ಲ.

ಇದನ್ನೂ ಓದಿ : ನಾಳೆಯಿಂದ IND Vs ENG ಫೈಟ್ – ಮಂಕಾದ ಸೂರ್ಯ ಮತ್ತೆ ಸಿಡಿಯುತ್ತಾರಾ?

ಮೊಹಮ್ಮದ್‌ ಶಮಿ ಟೀಂ ಇಂಡಿಯಾ ಸೇರುವ ಸಾಹಸ ಅಷ್ಟು ಸುಲಭವಾಗಿರಲಿಲ್ಲ. ಆರಂಭದಲ್ಲಿ ಪಾದಕ್ಕೆ ಶಸ್ತ್ರ ಚಿಕಿತ್ಸೆ ಮುಗಿದ ಬಳಿಕ ಚೇತರಸಿಕೊಂಡು ಮೈದಾನಕ್ಕೆ ಎಂಟ್ರಿ ನೀಡಿದ್ರು. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ಮುನ್ನವೇ ದೇಶೀಯ ಕ್ರಿಕೆಟ್‌ನಲ್ಲ್ಲೂ ಬೆವರು ಹರಿಸಿದ್ರು. ತರಬೇತುದಾರ ಶಿಬ್ ಶಂಕರ್ ಪಾಲ್‌ ಹೇಳೋ ಪ್ರಕಾರ ಶಮಿ ಬೌಲಿಂಗ್ ಮಾಡಲು ಮೈದಾನಕ್ಕೆ ಬರುವಾಗ ಎಲ್ಲರೂ ಬರುವ ಮುನ್ನವೇ ಅಭ್ಯಾಸಕ್ಕೆ ಎಂಟ್ರಿ ಕೊಡ್ತಿದ್ರು. ಎಲ್ಲರೂ ಹೋದ ಮೇಲೂ ಮೈದಾನದಲ್ಲೇ ಇರ್ತಿದ್ರು. ಶಮಿಗೆ ಕ್ರಿಕೆಟ್ ಮೇಲೆ ಅದೆಷ್ಟು ಆಸಕ್ತಿ ಅನ್ನೋದಕ್ಕೆ ಇಷ್ಟದ ಬಿರಿಯಾನಿಗೆ ಗುಡ್ ಬೈ ಹೇಳಿದ್ದಾರೆ. ಹೌದು ಮೊಹಮ್ಮದ್ ಶಮಿಗೆ ಬಿರಿಯಾನಿ ಅಂದ್ರೆ ಪ್ರಾಣ. ಆದ್ರೆ ಫಿಟ್​ನೆಸ್​ಗಾಗಿ ಬಿರಿಯಾನಿ ತಿನ್ನೋದನ್ನೇ ಬಿಟ್ಟಿದ್ದಾರೆ. ಹೀಗೆ ಛಲ ಬಿಡದ ತ್ರಿವಿಕ್ರಮನಂತೆ ದೇಹ ದಂಡಿಸಿ ಮತ್ತೆ ಕಮ್​ಬ್ಯಾಕ್ ಮಾಡ್ತಿದ್ದಾರೆ. 2023ರ ಏಕದಿನ ವಿಶ್ವಕಪ್‌ನ ಫೈನಲ್‌ ನಂತರ ಶಮಿ ಮೊದಲ ಬಾರಿಗೆ ಟೀಮ್ ಇಂಡಿಯಾ ಪರ ಆಡಲು ಸಜ್ಜಾಗಿದ್ದಾರೆ.

ಟೀಂ ಇಂಡಿಯಾ ಬೌಲಿಂಗ್ ವಿಭಾಗದಲ್ಲಿ ಬೆಸ್ಟ್ ಎನಿಸಿಕೊಳ್ತಿರೋದೇ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಮಾತ್ರ. ಬಟ್ ಆಸಿಸ್ ಸರಣಿ ಬಳಿಕ ಬುಮ್ರಾ ಬೆನ್ನು ನೋವಿನ ಸಮಸ್ಯೆಗೆ ತುತ್ತಾಗಿದ್ದಾರೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ವೇಳೆಗೆ ರಿಕವರ್ ಆಗ್ತಾರೋ ಇಲ್ವೋ ಹೇಳೋಕೆ ಆಗಲ್ಲ. ಬಟ್ ಆ ಸ್ಥಾನವನ್ನ ಮೊಹಮ್ಮದ್ ಶಮಿ ಕಂಪ್ಲೀಟ್ ಮಾಡ್ಬೇಕಾಗುತ್ತೆ. ಇದೇ ಕಾರಣಕ್ಕೆ ಬಿಸಿಸಿಐ ಶಮಿ ಮೇಲೆ ಕಣ್ಣಿಟ್ಟಿದೆ. ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಗೆ ಆಯ್ಕೆ ಮಾಡಿರೋ ಬಿಸಿಸಿಐ ಮ್ಯಾನೇಜ್​ಮೆಂಟ್ ಏಕದಿನಕ್ಕೂ ಸೆಲೆಕ್ಟ್ ಮಾಡಿದೆ. ಸೋ ಈ ಎರಡೂ ಸರಣಿಗಳು ಶಮಿ ಪಾಲಿಗೆ ಕಮ್​ಬ್ಯಾಕ್​ ಮ್ಯಾಚ್​ಗಳು ಇದ್ದಂತೆ. ಈ ಎರಡದಲ್ಲಿ ಹೇಗೆ ಪರ್ಫಾಮ್ ಮಾಡ್ತಾರೆ ಅನ್ನೋದ್ರ ಮೇಲೆ ಬಿಸಿಸಿಐ ಒಂದಷ್ಟು ಲೆಕ್ಕಾಚಾರಗಳೂ ಇವೆ.

ಸದ್ಯ ಮೊಹಮ್ಮದ್ ಶಮಿ ಪಾದದ ಶಸ್ತ್ರಚಿಕಿತ್ಸೆ ಮತ್ತು ಮೊಣಕಾಲು ನೋವಿನಿಂದ ಕಂಪ್ಲೀಟ್ ಚೇತರಿಸಿಕೊಂಡಿದ್ದು, ಮತ್ತೊಮ್ಮೆ ಮೈದಾನದಲ್ಲಿ ಭಾರತ ತಂಡದ ಪರ ಆಡುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡೂ ಸರಣಿಗಳಿಗೂ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.  ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡದಲ್ಲಿಯೂ ಸ್ಥಾನ ಪಡೆದಿದ್ದಾರೆ. ಭಾರತ ತಂಡವು ಜನವರಿ 22 ರಿಂದ ಫೆಬ್ರವರಿ 2 ರವರೆಗೆ ಕೋಲ್ಕತ್ತಾ, ಚೆನ್ನೈ, ರಾಜ್‌ಕೋಟ್, ಪುಣೆ ಮತ್ತು ಮುಂಬೈನಲ್ಲಿ ಇಂಗ್ಲೆಂಡ್ ವಿರುದ್ಧ ಐದು ಟಿ20 ಪಂದ್ಯಗಳನ್ನು ಆಡಲಿದೆ. ಇದಾದ ನಂತರ ಮೂರು ಏಕದಿನ ಪಂದ್ಯಗಳ ಸರಣಿಯೂ ನಾಗ್ಪುರ (6 ಫೆಬ್ರವರಿ), ಕಟಕ್ (9 ಫೆಬ್ರವರಿ) ಮತ್ತು ಅಹಮದಾಬಾದ್ (12 ಫೆಬ್ರವರಿ) ನಲ್ಲಿ ನಡೆಯಲಿವೆ.

Shantha Kumari

Leave a Reply

Your email address will not be published. Required fields are marked *