ಚಾಂಪಿಯನ್ಸ್ ಟ್ರೋಫಿಗೆ PAK ಹೆಸರಿಲ್ಲ – BCCI ಏಟಿಗೆ ಕಂಗೆಟ್ಟ ಪಾಕಿಸ್ತಾನ
ಫೆಬ್ರವರಿ 19ರಿಂದ ಶುರುವಾಗಲಿರೋ ಚಾಂಪಿಯನ್ಸ್ ಟ್ರೋಫಿಗಾಗಿ 8 ಟೀಮ್ಗಳು ಅನೌನ್ಸ್ ಆಗಿವೆ. ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಯಲಿದ್ದು, ಭಾರತದ ಪಂದ್ಯಗಳೆಲ್ಲಾ ದುಬೈನಲ್ಲಿ ನಡೆಯಲಿವೆ. ಟೂರ್ನಿಯಲ್ಲಿ ಈ ಬಾರಿಯ ಹಾಟ್ ಟಾಪಿಕ್ ಅಂದ್ರೆ ಭಾರತ ವರ್ಸಸ್ ಪಾಕಿಸ್ತಾನದ ನಡುವೆ ನಡೆಯುತ್ತಿರೋ ಕೆಲ ಬೆಳವಣಿಗೆಗಳು. ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವು ಫೆಬ್ರವರಿ 23 ರಂದು ದುಬೈನಲ್ಲಿ ನಡೆಯಲಿದೆ. ಌಕ್ಚುಲಿ ಟೀಂ ಇಂಡಿಯಾ ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನದ ಮೇಲೆ ಪ್ರಾಬಲ್ಯ ಸಾಧಿಸಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಒಮ್ಮೆ ಮಾತ್ರ ತನ್ನ ಸಾಂಪ್ರದಾಯಿಕ ಎದುರಾಳಿ ವಿರುದ್ಧ ಭಾರತ ಸೋಲನ್ನು ಎದುರಿಸಿದೆ. ಉಳಿದಂತೆ ನಾವೇ ಗೆದ್ದು ಬೀಗಿದ್ದೇವೆ. ಹೀಗೆ ಭಾರತವನ್ನ ಮ್ಯಾಚ್ನಲ್ಲಿ ಸೋಲಿಸೋಕೆ ಆಗಲ್ಲ ಅಂತಾನೇ ಪಾಕಿಸ್ತಾನ ಇಲ್ದೇ ಇರೋ ಕಾಂಟ್ರವರ್ಸಿಗಳನ್ನ ಕ್ರಿಯೇಟ್ ಮಾಡ್ತಿದೆ. ಈಗ ಭಾರತದ ಜೆರ್ಸಿ ವಿಚಾರಕ್ಕೂ ಮೂಗು ತೂರಿಸಿದೆ.
ಇದನ್ನೂ ಓದಿ : ಟೀಂ ಸೆಲೆಕ್ಷನ್ನೇ ಭಾರತಕ್ಕೆ ಮೈನಸ್ – ಸಿರಾಜ್ ಡ್ರಾಪ್.. ಪ್ಲೇಯಿಂಗ್ 11 ಹೇಗೆ?
ಪ್ರತೀ ಸಲ ಐಸಿಸಿ ಟೂರ್ನಿಗಳು ಆಯೋಜನೆಯಾದಾಗ ಯಾವ ಟೀಂ ಸ್ಟ್ರಾಂಗ್, ಯಾರೆಲ್ಲಾ ಆಡ್ತಾರೆ, ಪಿಚ್ ಹೇಗಿದೆ, ಕ್ಲೈಮೇಟ್ ಹೇಗಿದೆ ಅಂತಾ ಡಿಸ್ಕಷನ್ಸ್ ಆಗ್ತಿರುತ್ತೆ. ಬಟ್ ಈ ಸಲ ಪಾಕಿಸ್ತಾನ ಆತಿಥ್ಯ ವಹಿಸಿಕೊಂಡಿರೋದೇ ದೊಡ್ಡ ತಲೆನೋವಾಗಿದೆ. ಕಳೆದ ಆರು ತಿಂಗಳಿಂದ್ಲೂ ಒಂದಲ್ಲ ಒಂದು ಗೋಳು ಇದ್ದದ್ದೇ. ಭದ್ರತೆಯೇ ಇಲ್ಲದ ಪಾಕಿಸ್ತಾನಕ್ಕೆ ನಾವು ಕಾಲಿಡಲ್ಲ ಅಂತಾ ಬಿಸಿಸಿಐ ಮೊದ್ಲೇ ಕಡ್ಡಿ ತುಂಡು ಮಾಡಿದಂತೆ ಹೇಳಿತ್ತು. ಆರಂಭದಲ್ಲಿ ನೋ ನೋ ನೋ ನಾವ್ ಒಪ್ಪಲ್ಲ ಅಂತಿದ್ದ ಪಾಕಿಸ್ತಾನ ಕೊನೆಗೆ ಬಲಿಷ್ಠ ಭಾರತದ ಎದುರು ಸೋತು ಸುಣ್ಣವಾಗಿತ್ತು. ಹೈಬ್ರಿಡ್ ಮಾದರಿಯನ್ನ ಒಪ್ಪಿಕೊಳ್ತು. ಅಲ್ಲಿಗೆ ಭಾರತದ ಪಂದ್ಯಗಳೆಲ್ಲಾ ದುಬೈನಲ್ಲೇ ನಡೆಯೋದು ಫಿಕ್ಸ್ ಆಗಿದೆ. ಸದ್ಯ ಭಾರತ ತಂಡ ಚಾಂಪಿಯನ್ಸ್ ಟ್ರೋಫಿಗೆ ಆಟಗಾರರಿಗೆ ಜೆರ್ಸಿಗಳನ್ನ ಡಿಸೈನ್ ಮಾಡಿಸ್ತಿದೆ. ಬಿಸಿಸಿಐ ನಾವು ಟೀಂ ಇಂಡಿಯಾ ಜೆರ್ಸಿ ಮೇಲೆ ಪಾಕಿಸ್ತಾನದ ಹೆಸರನ್ನ ಹಾಕ್ಸೋದು ಬೇಡ ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ. ಆದ್ರೆ ಇದೇ ನಿರ್ಧಾರ ಈಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬುಡಕ್ಕೆ ಬೆಂಕಿ ಇಟ್ಟಂತಾಗಿದೆ.
ಈ ಬಾರಿಯ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ್ ಆತಿಥ್ಯವಹಿಸುತ್ತಿದ್ದರೂ, ಟೀಮ್ ಇಂಡಿಯಾ ತನ್ನೆಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಆಡಲು ಟೀಮ್ ಇಂಡಿಯಾ ನಿರಾಕರಿಸಿರುವ ಕಾರಣ ಈ ಬಾರಿ ಟೂರ್ನಮೆಂಟ್ ಅನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗುತ್ತಿದೆ. ಅದರಂತೆ ಬಹುತೇಕ ಪಂದ್ಯಗಳು ಪಾಕ್ನಲ್ಲಿ ನಡೆದರೆ, ಭಾರತ ತಂಡದ ಪಂದ್ಯಗಳು ದುಬೈನಲ್ಲಿ ಜರುಗಲಿದೆ. ಭಾರತ ಪಾಕ್ನಲ್ಲಿ ಒಂದೂ ಪಂದ್ಯಗಳನ್ನ ಆಡದೇ ಇರೋ ಕಾರಣಕ್ಕೆ ಜೆರ್ಸಿ ಮೇಲೆ ಆತಿಥೇಯ ‘ಪಾಕಿಸ್ತಾನ್’ ಹೆಸರು ನಮೂದಿಸಲು ಬಿಸಿಸಿಐ ನಿರಾಕರಿಸಿದೆ. ಬಿಸಿಸಿಐನ ಈ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ, ಇದನ್ನು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಒಪ್ಪೋದಿಲ್ಲ ಅಂತಾ ಬಾಯಿ ಬಡ್ಕೊಳ್ತಿದೆ. ಕ್ರೀಡೆಯಲ್ಲಿ ರಾಜಕೀಯವನ್ನು ಬೆಳೆಸುವುದು ಒಳ್ಳೆಯದಲ್ಲ, ಚಾಂಪಿಯನ್ಸ್ ಟ್ರೋಫಿಯನ್ನು ನಾವು ಆಯೋಜಿಸುತ್ತಿದ್ದೇವೆ ಎಂದು ಗೊತ್ತಾದ ಕೂಡಲೇ, ಒಂದಲ್ಲಾ ಒಂದು ಆಕ್ಷೇಪವನ್ನು ಭಾರತ ವ್ಯಕ್ತ ಪಡಿಸುತ್ತಿದೆ. ಈಗ, ಜರ್ಸಿ ವಿವಾದವನ್ನು ಎಳೆದು ತರುವ ಮೂಲಕ, ಟೂರ್ನಮೆಂಟಿಗೆ ತೊಂದರೆಯನ್ನು ಕೊಡುತ್ತಿದೆ ಎಂದು ಪಿಸಿಬಿ ಅಧಿಕಾರಿಗಳು ಸಿಟ್ಟನ್ನು ಹೊರಹಾಕಿದ್ದಾರೆ.
ವಿಷ್ಯ ಏನಪ್ಪಾ ಅಂದ್ರೆ ಐಸಿಸಿ ಟೂರ್ನಿ ಆಯೋಜನೆ ವೇಳೆ ಒಂದಷ್ಟು ಟರ್ಮ್ಸ್ ಌಂಡ್ ಕಂಡೀಷನ್ಸ್ ಇರುತ್ತೆ. ಯಾವ ರಾಷ್ಟ್ರ ಟೂರ್ನಿ ಆಯೋಜನೆಯ ಹೊಣೆ ಹೊತ್ತಿರುತ್ತೋ ಆ ದೇಶದ ಹೆಸರನ್ನ ಟೂರ್ನಿಯಲ್ಲಿ ಭಾಗಿಯಾಗುವ ಎಲ್ಲಾ ರಾಷ್ಟ್ರಗಳು ತಮ್ಮ ತಮ್ಮ ತಂಡಗಳ ಜೆರ್ಸಿಗಳ ಮೇಲೆ ಪ್ರಿಂಟ್ ಮಾಡಿಸ್ಬೇಕು. ಫಾರ್ ಎಕ್ಸಾಂಪಲ್ 2023ರ ಏಕದಿನ ವಿಶ್ವಕಪ್ ವೇಳೆ ಎಲ್ಲಾ ರಾಷ್ಟ್ರಗಳ ಜೆರ್ಸಿಗಳ ಮೇಲೂ ಐಸಿಸಿ ಮೆನ್ಸ್ ಒಡಿಐ ವರ್ಲ್ಡ್ಕಪ್ 2023, ಇಂಡಿಯಾ ಅಂತಾ ಬರೆಯಲಾಗಿತ್ತು. ಹಾಗೇ ಲಾಸ್ಟ್ ಇಯರ್ ನಡೆದಂತೆ ಟಿ-20 ವಿಶ್ವಕಪ್ನಲ್ಲಿ ಎಲ್ಲಾ ತಂಡಗಳ ಆಟಗಾರರ ಜೆರ್ಸಿ ಮೇಲೆ ಐಸಿಸಿ ಮೆನ್ಸ್ ಟಿ-20 ವರ್ಲ್ಡ್ಕಪ್ 2024, ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಅಂತಾ ಬರೆದಿತ್ತು. ಯಾಕಂದ್ರೆ ಯುಎಸ್ಎ ಮತ್ತು ಸೌತ್ ಆಫ್ರಿಕಾ ಎರಡೂ ರಾಷ್ಟ್ರಗಳು ಆತಿಥ್ಯ ವಹಿಸಿದ್ರು. ಸೋ ವರ್ಷ, ಯಾವ ಮಾದರಿ ವಿಶ್ವಕಪ್ ಹಾಗೇ ಎಲ್ಲಿ ನಡೆಯುತ್ತಿರೋ ಅನ್ನೋದು ಜೆರ್ಸಿಗಳಲ್ಲಿ ಕಡ್ಡಾಯವಾಗಿರುತ್ತೆ. ಸೋ ಇದೇ ಕಾರಣಕ್ಕೆ ಪಾಕಿಸ್ತಾನ ನಮ್ಮ ದೇಶದ ಹೆಸರನ್ನೂ ಟೀಂ ಇಂಡಿಯಾ ಜೆರ್ಸಿ ಮೇಲೆ ಪ್ರಿಂಟ್ ಮಾಡಿಸಿ ಅಂತಾ ಪಟ್ಟು ಹಿಡಿದಿದೆ.