ಬಲಿಕಾ ಬಕ್ರಾವಾದ್ರಾ ಧನು.. ಬಿಗ್‌ “ಮೋಸವಾಯ್ತಾ” ಬಾಸ್?‌  – ರಜತ್‌ ಗಿಂತ ಗೌತಮಿ ವೀಕಾ?

ಬಲಿಕಾ ಬಕ್ರಾವಾದ್ರಾ ಧನು.. ಬಿಗ್‌ “ಮೋಸವಾಯ್ತಾ” ಬಾಸ್?‌  – ರಜತ್‌ ಗಿಂತ ಗೌತಮಿ ವೀಕಾ?

ಕಿರುತೆರೆಯ ಅಂತ್ಯಂತ ಪವರ್‌ ಫುಲ್‌ ಶೋ ಅಂದ್ರೆ ಅದು ಬಿಗ್‌ ಬಾಸ್‌.. ಮನೆ ತುಂಬಾ ಕ್ಯಾಮೆರಾ.. ಸಣ್ಣ ತಪ್ಪು ಮಾಡಿದ್ರು ಬಿಗ್‌ ಬಾಸ್‌ ಆ ಕ್ಷಣಕ್ಕೆ ಸ್ಪರ್ಧಿಗಳಿಗೆ ಎಚ್ಚರಿಕೆ ನೀಡ್ತಾರೆ.. ಈ ಸೀಸನ್‌ ನಲ್ಲಿ ಬಿಗ್‌ ಬಾಸ್‌ ನಿದ್ದೆ ಮಾಡ್ತಾ ಇದ್ಯಾ ಅನ್ನೋದು ವೀಕ್ಷಕರ ಪ್ರಶ್ನೆ.. ಯಾಕಂದ್ರೆ ಈ ಬಾರಿ ತಪ್ಪು ನಡೆದಿದ್ದು ದೊಡ್ಮನೆ ಸ್ಪರ್ಧಿಗಳಿಂದ ಅಲ್ಲ.. ಬಿಗ್‌ ಬಾಸ್‌ ನಿಂದ. ಇದ್ರಿಂದಾಗಿ ಫಿನಾಲೆಗೆ ಸೆಲೆಕ್ಟ್‌ ಆಗಿದ್ದ ಸ್ಪರ್ಧಿಗೆ ಮೋಸವಾಗಿದೆ. ಬಿಗ್‌ ಬಾಸ್‌ ಮನೆಗೆ ಬಂದ ಧನರಾಜ್‌ ಬಲಿಕಾ ಬಕ್ರ ಆಗಿದ್ದಾರೆ. ಹಾಗಾದ್ರೆ ಬಿಗ್‌ ಬಾಸ್‌ ಮನೆಯಲ್ಲಿ ಕಾಮನ್‌ ಪೀಪಲ್‌ ಗೆ ಒಂದು ನ್ಯಾಯ.. ಸೆಲೆಬ್ರಿಟಿಗಳಿಗೊಂದು ನ್ಯಾಯಾನಾ? ಸೆಲೆಬ್ರಿಟಿಗಳ ಪರವಾಗಿದ್ರೆ, ದೊಡ್ಮನೆಗೆ ಯಾಕೆ ಸಾಮಾನ್ಯ ಜನರನ್ನ ಕರೆತರ್ಬೇಕು? ಇದೊಂದು ಫಿಕ್ಸಿಂಗ್‌ ಆಟನಾ? ಮೊದಲೇ ಎಲ್ಲವೂ ಡಿಸೈಡ್‌ ಆಗಿರುತ್ತಾ? ಈ ಬಗ್ಗೆ  ಮಾಹಿತಿ ಇಲ್ಲಿದೆ.

ಇದನ್ನೂ ಓದಿ: KHO KHO ವಿಶ್ವವಿಜೇತ ಭಾರತ – ಮೆನ್ಸ್ & ವುಮೆನ್ಸ್ ಡಬಲ್ ಧಮಾಕ

ದೊಡ್ಮನೆಯ ಆಟ ಈಗ ಆಟವಾಗಿ ಉಳಿದಿಲ್ಲ.. ಬರೀ ಮೋಸದಾಟ ಆಯ್ತಾ ಅನ್ನೋದು ಶೋ ನೋಡ್ತಿರುವ ವೀಕ್ಷಕರ ಪ್ರಶ್ನೆ.. ಯಾಕಂದ್ರೆ ಈ ಬಾರಿಯ ಸೀಸನ್‌ ನಲ್ಲಿ ನಿಜವಾದ ಟ್ಯಾಲೆಂಟ್‌ ಗೆ ಬೆಲೆ ಇಲ್ಲದಾಗಿ ಹೋಗಿದೆ. ಇದೀಗ ಪ್ರಬಲ ಸ್ಪರ್ಧಿ ಧನರಾಜ್‌ ಗೆ ಬಿಗ್‌ ಬಾಸ್‌ ನಿಂದಲೇ ಮೋಸ ಆಯ್ತಾ ಅನ್ನೋ ಪ್ರಶ್ನೆ ಎಲ್ಲರನ್ನ ಕಾಡೋದಿಕ್ಕೆ ಶುರುವಾಗಿದೆ. ಬಿಗ್‌ ಬಾಸ್‌ ಮನೆಯಲ್ಲಿ ಧನರಾಜ್‌ ಆಚಾರ್‌ ಆರಂಭದಿಂದಲೂ ಪ್ರಮಾಣಿಕತ ಅನ್ನೋ ಹೆಸರನ್ನ ಪಡ್ಕೊಂಡು ಬಂದಿದ್ರು.. ಅದನ್ನ ಕಡೆವರೆಗೂ ಉಳಿಸಿಕೊಂಡೇ ಬಂದಿದ್ರು.. ಮನರಂಜನೆ ಜೊತೆಗೆ ಟಾಸ್ಕ್‌ ಗಳನ್ನ ಕೂಡ ಚೆನ್ನಾಗೆ ಆಟ ಆಡ್ತಿದ್ರು.. ಆದ್ರೆ ಕಳೆದ ವಾರ ಮಾಡಿದ ಒಂದು ಸಣ್ಣ ತಪ್ಪು ಅವರಿಗೇ ಮುಳುವಾಗಿದೆ. ಇದ್ರಿಂದಾಗಿ ಮನೆಯಿಂದ ಆಚೆ ಹೋಗೋ ತರ ಆಗಿದೆ.

ಕಳೆದ ವಾರ ಬಿಗ್‌ ಬಾಸ್‌ ನಾಮಿನೇಷನ್‌ ನಿಂದ ಬಚಾವ್‌ ಆಗಿ, ಫಿನಾಲೆಗೆ ಎಂಟ್ರಿ ಪಡೆಯಲು ಟಾಸ್ಕ್‌ ವೊಂದನ್ನ ನೀಡಿದ್ರು.. ಯೋಜನೆಯಂತೆ ಟಾಸ್ಕ್‌ ಕೂಡ ಕಂಪ್ಲೀಟ್‌ ಆಗಿತ್ತು.. ಈ ಟಾಸ್ಕ್‌ ನಲ್ಲಿ ಧನರಾಜ್‌ ಎಲ್ಲರಿಗಿಂತ ಮೊದಲೇ ಆಟ ಮುಗಿಸಿ ಗೆದ್ದದ್ರು.. ಆದ್ರೆ ಈ ಆಟದಲ್ಲಿ ಧನರಾಜ್‌ ಕನ್ನಡ ನೋಡಿಕೊಂಡು ಆಟ ಆಡಿದ್ರು.. ಟಾಸ್ಕ್‌ ಮುಗಿದ ಕೂಡಲೇ ಧನರಾಜ್‌ ಇತರ ಸ್ಪರ್ಧಿಳೊಂದಿಗೂ ಚರ್ಚೆ ನಡೆಸಿದ್ರು.. ಆಗಲೂ ಸುಮ್ಮನಿದ್ದ ಬಿಗ್‌ ಬಾಸ್‌ ಈ ಟಾಸ್ಕ್‌ ನಲ್ಲಿ ಧನರಾಜ್‌ ಅವರನ್ನ ವಿನ್ನರ್‌.. ಈ ವಾರದ ನಾಮಿನೇಷನ್‌ ನಿಂದ ಪಾರಾದ್ರಿ ಅಂತಾ ಅನೌನ್ಸ್‌ ಮಾಡಿದ್ರು.. ಅದಾಗಿ ಒಂದು ದಿನ ಕಳೆದ್ಮೇಲೆ ದೊಡ್ಮನೆಯಲ್ಲಿ ದಿಢೀರ್‌ ಬೆಳವಣಿಗೆಯೊಂದು ನಡೆದಿದೆ.. ಧನರಾಜ್‌ ಮಾಡಿರೋದು ದೊಡ್ಡ ತಪ್ಪು ಅಂತಾ ಬಿಂಬಿಸಿ ಆ ಟಾಸ್ಕ್‌ ಅನ್ನ ರದ್ದು ಮಾಡಲಾಗಿದೆ. ಬಿಗ್‌ ಬಾಸ್‌ ಆದೇಶದ ಬೆನ್ನಲ್ಲೇ ತಾನು ಮಾಡಿರೋದು ತಪ್ಪು ಅಂತಾ ಒಪ್ಪಿಕೊಂಡ ಧನರಾಜ್‌ ನಾಮಿನೇಷನ್‌ ಪ್ರಕ್ರಿಯೆಯನ್ನ ಮುಂದುವರಿಸುವಂತೆ ಹೇಳಿದ್ರು.. ಈ ಬೆಳವಣಿಗೆ ನೋಡಿದ ವೀಕ್ಷಕರು ಇಲ್ಲಿ ಏನೋ ಮಿಸ್ಸಿಂಗ್‌ ಅನ್ನಿಸ್ತಿದೆ.. ಧನರಾಜ್‌ ಬಲಿಕಾ ಬಕ್ರಾ ಆಗೋದು ಪಕ್ಕಾ ಅಂತಾ ಆಗಲೇ ಭವಿಷ್ಯ ನುಡಿದಿದ್ರು.. ವೀಕ್ಷಕರು ಅಂದ್ಕೊಂಡಂತೆ ಆಗಿದೆ. ಧನರಾಜ್‌ ಅನ್ನ ಈ ವಾರ ಎಲಿಮಿನೇಟ್‌ ಮಾಡಲಾಗಿದೆ.

ಬಿಗ್‌ ಬಾಸ್‌ ಮನೆಯ ಪ್ರತಿ ಮೂಲೆ ಮೂಲೆಯಲ್ಲಿ ಕ್ಯಾಮರಾ ಇದೆ. ಒಂದು ಸಣ್ಣ ತಪ್ಪು ಆದ್ರೂ ಆ ಕ್ಷಣವೇ ಗೊತ್ತಾಗುತ್ತೆ.. ಆದ್ರೆ ಟಾಸ್ಕ್‌ ಆಗ್ಬೇಕಾದ್ರೆ ಬಿಗ್‌ ಬಾಸ್‌ ಕಣ್ಣು ಮುಚ್ಚಿ ಕೂತಿದ್ರಾ ಅಂತಾ ವೀಕ್ಷಕರು ಪ್ರಶ್ನೆ ಮಾಡ್ತಿದ್ದಾರೆ.. ಇನ್ನು ಈ ಸೀಸನ್‌ ನಲ್ಲಿ ಇತರ ಸ್ಪರ್ಧಿಗಳು ಮೋಸ ಮಾಡಿ ಕೆಲ ಟಾಸ್ಕ್‌ಗಳನ್ನು ಗೆದ್ದಿದ್ದೂ ಇದೆ. ಫೇವರಿಸಂ ಆಟ ಕೂಡ ನಡೆದಿದೆ. ಆದ್ರೆ ಇಷ್ಟು ದಿನ ಬಿಗ್‌ ಬಾಸ್‌  ಸೈಲೆಂಟ್‌ ಆಗಿದ್ದಿದ್ದು ಯಾಕೆ? ಅಂತಾ ವೀಕ್ಷಕರು ಹೇಳ್ತಿದ್ದಾರೆ.

ಭವ್ಯಾ ಅನೇಕ ಬಾರಿ ಟಾಸ್ಕ್‌ ನಲ್ಲಿ ಮೋಸ ಮಾಡಿ ವಿನ್‌ ಆಗಿದ್ರು.. ಮೋಸ ಮಾಡಿಯೇ ಕ್ಯಾಪ್ಟನ್‌ ಪಟ್ಟ ತೆಗೆದುಕೊಂಡಿದ್ರು.. ಆಗಲೂ ಬಿಗ್‌ ಬಾಸ್‌ ಸೈಲೆಂಟ್‌ ಆಗಿಯತೇ ಇತ್ತು.. ಇನ್ನು ಭವ್ಯಾ ಟಾಸ್ಕ್‌ ವೇಳೆ ಹನುಮಂತನಿಗೆ ಹೊಡೆದಾಗಲೂ ಬಿಗ್‌ ಬಾಸ್‌ ಸೈಲೆಂಟ್‌ ಆಗೇ ಇತ್ತು.. ಯಾವುದೇ ಶಿಕ್ಷೆ ನೀಡಿಲ್ಲ.. ಆದ್ರೆ ರಂಜಿತ್‌ ಲಾಯರ್‌ ಜಗದೀಶ್‌ ಮೇಲೆ ಕೈ ಮಾಡಿದ್ದಕ್ಕೆ ಅವರನ್ನ ಮನೆಯಿಂದ ಆಚೆ ಕಳುಹಿಸಲಾಗಿತ್ತು.. ಆದ್ರೆ ಭವ್ಯಾಳನ್ನ ಯಾಕೆ ಆಚೆ ಕಳುಹಿಸಿರ್ಲಿಲ್ಲ.. ಇನ್ನು ಇದನ್ನ ಸುದೀಪ್‌ ಕೂಡ ಪ್ರಶ್ನಿಸಿದ್ರು.. ಇನ್ನು ತ್ರಿವಿಕ್ರಮ್‌ ಆಟದ ವೇಳೆ ಮೋಸ ಮಾಡಿದಾಗಲೂ ಪೌಲ್‌ ನೀಡಿ, ಮತ್ತೆ ಆಟ ಆಡಲು ಬಿಗ್‌ ಬಾಸ್‌ ಆದೇಶ ನೀಡಿದ್ರು.. ಆದ್ರೀಗ ಧನರಾಜ್‌ ಅವರನ್ನ ಕೂಡ ಮತ್ತೆ ಆಟ ಆಡಿಸ್ಬೋದಿತ್ತಲ್ವಾ? ಆಟವನ್ನೇ ರದ್ದು ಮಾಡಿದ್ದು ಯಾಕೆ? ಸಾಮಾನ್ಯರಿಗೊಂದು ನ್ಯಾಯ.. ಸೆಲೆಬ್ರಿಟಿಗಳಿಗೊಂದು ನ್ಯಾಯಾನಾ ಅಂತಾ ವೀಕ್ಷಕರು ಪ್ರಶ್ನೆ ಮಾಡ್ತಿದ್ದಾರೆ.

ಇನ್ನು ಕಳೆದ ಕೆಲ ವಾರದ ಹಿಂದೆ ಆಗ ಧನು ಕೆನ್ನೆ ಮುಟ್ಟಿದ್ದಕ್ಕೆ ರಜತ್‌ ಕೈ ಮಾಡಲು ಹೋಗಿದ್ರು.. ಆಗಲೂ ಬಿಗ್‌ ಬಾಸ್‌ ಮನೆಯಲ್ಲಿ ಧನು ಮಾಡಿದ್ದೇ ತಪ್ಪು ಅಂತಾ ಅವರಿಗೆ ಕ್ಲಾಸ್‌ ತೆಗೆದುಕೊಳ್ಳಲಾಗಿತ್ತು. ರಜತ್‌ ವಿರುದ್ಧ ಯಾವುದೇ ಕ್ರಮ ಕೈಗೊಂಡಿರ್ಲಿಲ್ಲ ಯಾಕೆ ಅಂತಾ ಚರ್ಚೆ ನಡೆತಿದೆ. ಇನ್ನು ಈ ವಾರ ಗೌತಮಿ ಕೂಡ ದೊಡ್ಮನೆಯಿಂದ ಆಚೆ ಬಂದಿದ್ದಾರೆ. ರಜತ್‌ ಗಿಂತ ಗೌತಮಿ ಚೆನ್ನಾಗಿ ಆಟ ಆಡ್ತಿದ್ರು ಅಲ್ವಾ? ರಜತ್‌ 50 ದಿನ ಕಳೆದಾದ್ಮೇಲೆ ದೊಡ್ಮನೆಗೆ ಬಂದಿದ್ರು.. ಟಾಸ್ಕ್ ನಲ್ಲಿ ಚೆನ್ನಾಗಿ ತೊಡಗಿಸಿಕೊಂಡಿರ್ಲಿಲ್ಲ.. ಬಾಯಿ ತೆಗೆದ್ರೆ ಬರೀ ಕೆಟ್ಟ ಪದಗಳೇ ಬರುತ್ತೆ.. ಫಿನಾಲೆಗೆ ಕರೆದುಕೊಂಡು ಹೋಗುವ ಅರ್ಹತೆ ಏನಿತ್ತು? ಇದು ಸರಿಯಾದ ಕ್ರಮನಾ ಅಂತಾ ವೀಕ್ಷಕರು ಪ್ರಶ್ನೆ ಮಾಡ್ತಿದ್ದಾರೆ.   ಮೊದಲೇ ಮ್ಯಾಚ್ ಫಿಕ್ಸ್ ಆಗಿದೆ.. ಅವರರೇನು ಮಾಡಿದ್ರೂ ಸರಿ.. ಧನು ಈ ವಾರ ಎಲ್ಲಾ ಗೇಮ್ ನಲ್ಲಿ ಗೆದ್ದ.. ಸಿಲ್ಲಿ ಕಾರಣ ಕೊಟ್ಟು ಆಚೆ ಕಳಿಸಿದ್ರು.. ಎಷ್ಟು ಮೋಸ ಮಾಡಿದಳು.. ಭವ್ಯಾ ಉಳಿದಳು.. ಹನುಮಂತ ವಿನ್ ಆಗೋದಕ್ಕೆ ಬಿಡಲ್ಲಾ.. ಬಿಗ್ಬಾಸ್.. ಎಂದು ಕಾಮೆಂಟ್‌ ಮಾಡ್ತಿದ್ದಾರೆ.

Shwetha M

Leave a Reply

Your email address will not be published. Required fields are marked *