ಸಂಸದೆಯ ಕೈ ಹಿಡೀತಾರಾ ರಿಂಕು?- ಏನಿವರ ಎಂಗೇಜ್ ಮೆಂಟ್ ಕತೆ?
ಸಿಕ್ಸರ್ ಹೀರೋ ಮದುವೆ ಯಾವಾಗ?

ಸಂಸದೆಯ ಕೈ ಹಿಡೀತಾರಾ ರಿಂಕು?- ಏನಿವರ ಎಂಗೇಜ್ ಮೆಂಟ್ ಕತೆ?ಸಿಕ್ಸರ್ ಹೀರೋ ಮದುವೆ ಯಾವಾಗ?

ಟೀಮ್​ ಇಂಡಿಯಾ ಕ್ರಿಕೆಟಿಗರ ಡಿವೋರ್ಸ್​ ಸುದ್ದಿ ಕೇಳಿ ಕೇಳಿ ಬೇಸರಗೊಂಡಿದ್ದ ಫ್ಯಾನ್ಸ್​ಗೆ ಇದೀಗ ಗುಡ್​ನ್ಯೂಸ್​ ಬಂದಿದೆ. ಸೋಷಿಯಾಲ್ ಮೀಡಿಯಾದಲ್ಲಿ ಮತ್ತೆ ಕ್ರೆಕಿಟಿಗನೊಬ್ಬನ ಮದುವೆ ಸುದ್ದಿ ಸಖತ್ ಸೌಂಡ್ ಮಾಡ್ತಿದೆ. ಟ್ರೋಲ್ ಕೂಡ ಆಗ್ತಿದೆ.. ಹೌದು ಒಂಟಿಯಾಗಿದ್ದ ಟೀಮ್​ ಇಂಡಿಯಾದ ನಯಾ ಫಿನಿಷರ್​, ಯಂಗ್​​ ಸೆನ್ಸೇಷನ್​ ರಿಂಕು ಸಿಂಗ್​ ಜಂಟಿಯಾಗೋ ಸಮಯ ಹತ್ತಿರ ಬಂದಂತಿದೆ. ಎಲ್ಲಾ ಅಂದುಕೊಂಡಂತೆಯಾದರೆ ಶೀಘ್ರದಲ್ಲೇ ರಿಂಕು ಸಿಂಗ್​ ಹಸೆಮಣೆ ಏರಲಿದ್ದಾರೆ.

ಇಂಡೋ-ಇಂಗ್ಲೆಂಡ್​ ನಡುವಿನ ಟಿ20 ಸರಣಿ ಆರಂಭಕ್ಕೆ ಕೌಂಟ್​​ಡೌನ್​ ಶುರುವಾಗಿದೆ. ಫೆಬ್ರವರಿ 22ರಿಂದ ಆರಂಭವಾಗೂ ಟೂರ್ನಿಗೆ ಟೀಮ್​ ಇಂಡಿಯಾದಲ್ಲಿ ಸಿದ್ಧತೆ ಜೋರಾಗಿದೆ. ತಂಡಕ್ಕೆ ಆಯ್ಕೆಯಾಗಿರೋ ಆಟಗಾರರು ಭರ್ಜರಿ ಅಭ್ಯಾಸ ನಡೆಸ್ತಿದ್ದಾರೆ. ಫಿನಿಷರ್​​ ರಿಂಕು ಸಿಂಗ್ ಕೂಡ ಭರ್ಜರಿ ತಯಾರಿ ನಡೆಸ್ತಿದ್ದಾರೆ. ಒಂದೆಡೆ ಕ್ರಿಕೆಟ್​ ಸರಣಿಗೆ ರಿಂಕು ತಯಾರಿ ನಡೀತಿದ್ರೆ, ಇನ್ನೊಂದೆಡೆ ಅವ್ರ ಕುಟುಂಬಸ್ಥರು ರಿಂಕು ಸಿಂಗ್​ಗೆ ಜೋಡಿಯ ಹುಡುಕಾಟ ಆರಂಭಿಸಿದ್ದಾರೆ. ಟೀಮ್​ ಇಂಡಿಯಾದ ನಯಾ ಫಿನಿಷರ್​​​, ರೈಸಿಂಗ್​ ಸ್ಟಾರ್​​ ರಿಂಕು ಸಿಂಗ್ ಕುಟುಂಬದಲ್ಲಿ ಸದ್ಯ ಸಂಭ್ರಮ ಮನೆ ಮಾಡಿದೆ. ಒಂಟಿಯಾಗಿದ್ದ ಕ್ರಿಕೆಟಿಗನನ್ನ ಜಂಟಿ ಮಾಡಲು ರಿಂಕು ಸಿಂಗ್ ಕುಟುಂಬ ಮುಂದಾಗಿದೆ. ರಿಂಕು ಸಿಂಗ್​ಗೆ ಬಾಳಸಂಗಾತಿಯ ಹುಡುಕಾಟವನ್ನ ಕುಟುಂಬಸ್ಥರು ಕಳೆದ ಕೆಲ ತಿಂಗಳಿನಿಂದಲೇ ಆರಂಭಿಸಿದ್ರು. ಇದೀಗ ಆ ಹುಡುಕಾಟದ ಕಾರ್ಯಕ್ರಮ ಅಂತಿಮ ಘಟ್ಟ ತಲುಪಿದೆ. ಕ್ರಿಕೆಟ್​ಗೂ ರಾಜಕೀಯಕ್ಕೂ ಬೆಸುಗೆ ಬೆಸೆಯೋ ಸಾಧ್ಯತೆ ದಟ್ಟವಾಗಿದೆ.  ರಿಂಕು ಸಿಂಗ್‌ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ದೊಡ್ಡ ಸುದ್ದಿಯೊಂದು ಹೊರ ಬಿದ್ದಿದೆ. ರಿಂಕು ಸಿಂಗ್‌ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿದಿದೆ ಎಂದು ವರದಿಗಳು ಹೊರ ಬಿದ್ದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಕೂಡ ಆಗುತ್ತಿದೆ.  ರಿಂಕು ಸಿಂಗ್​ಗೆ ಬಾಳಸಂಗಾತಿಯ ಹುಡುಕಾಟದಲ್ಲಿದ್ದ ಕುಟುಂಬಕ್ಕೆ ಸಮಾಜವಾದಿ ಪಾರ್ಟಿಯ ಹಿರಿಯ ನಾಯಕ ತುಫಾನಿ ಸರೋಜ್​ ಕುಟುಂಬಸ್ಥರಿಂದ ಆಫರ್​ ಬಂದಿದೆ ಎಂಬ ಮಾಹಿತಿ ಹೊರಬಿದ್ದಿದೆ. ತಮ್ಮ ಮಗಳಾದ ಪ್ರೀಯಾ ಸರೋಜ್​ನ ರಿಂಕು ಸಿಂಗ್​ಗೆ ಮದುವೆ ಮಾಡಿಕೊಡಲು ತುಫಾನಿ ಕುಟುಂಬ ಉತ್ಸುಕತೆ ತೋರಿದೆ. ಇದಕ್ಕೆ ರಿಂಕು ಕುಟುಂಬಸ್ಥರು ಕೂಡ ಪಾಸಿಟಿವ್​ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ಎರಡೂ ಕುಟುಂಬಗಳ ನಡುವೆ ಮದುವೆ ಮಾತುಕತೆ ನಡೆದಿದೆ. ಅನ್ನೋ ಮಾತು ಕೇಳಿ ಬರ್ತಿದೆ.

ಇದನ್ನೂ ಓದಿ : ವಿಶ್ವಕ್ಕೆ ನಂ1 ಆಗುತ್ತಾ ಇಸ್ರೋ? ಚಂದ್ರಯಾನಕ್ಕೆ ಯಾಕೆ ಪೈಪೋಟಿ?

ಹೌದು ಎಷ್ಟು ಮಂದಿಗೆ ನೆನಪಿದೆಯೋ ಇಲ್ಲವೋ. ಕಳೆದ ಲೋಕಸಭಾ ಚುನಾವಣೆ ವೇಳೆ ಪ್ರಿಯಾ ಸರೋಜ್ ಎಂಬ ಹೆಸರು ಬಹಳ ಓಡಾಡಿತ್ತು. ಸದ್ಯ ಇವರು ಸಂಸತ್ತಿನಲ್ಲಿರುವ ಎರಡನೇ ಅತಿ ಕಿರಿಯ ಸಂಸದೆ ಸಹ ಹೌದು. ಉತ್ತರ ಪ್ರದೇಶದ ಹಿರಿಯ ರಾಜಕಾರಣಿ, ಸಮಾಜವಾದಿ ಪಕ್ಷದ 3 ಬಾರಿಯ ಸಂಸದ ಮತ್ತು ಹಾಲಿ ಶಾಸಕ ತೂಫಾನಿ ಸರೋಜ್ ಅವರ ಪುತ್ರಿ ಪ್ರಿಯಾ ಸರೋಜ್. 1998ರ ನವೆಂಬರ್ 23ರಂದು ಜನಿಸಿದ ಇವರು ದಿಲ್ಲಿ ವಿವಿಯಲ್ಲಿ ಬಿಎ ಮತ್ತು ನೋಯ್ಡಾದಲ್ಲಿ ಎಎಲ್ ಬಿ ವ್ಯಾಸಂಗ ಮಾಡಿದ್ದಾರೆ.  ಈಕೆ ಸುಪ್ರೀಂಕೋರ್ಟ್​ನ ಲಾಯರ್​ ಕೂಡ ಹೌದು. ಶಿಕ್ಷಣ ಮುಗಿಸಿದ ಬಳಿಕ ರಾಜಕೀಯ ಕ್ಷೇತ್ರಕ್ಕೆ ಧುಮುಕಿದ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಮಚ್ಚಿಶಹರ್ ಕ್ಷೇತ್ರದಿಂದ ಕಣಕ್ಕಿಳಿದು ಬಿಜೆಪಿಯ ಭೋಲೇನಾಥ್ ಪ್ರಸಾದ್ ಸರೋಜ್ ಅವರನ್ನು 35850 ಮತಗಳಿಂದ ಸೋಲಿಸಿದ್ರು.  ಇವರು ಸಂದರ್ಭದಲ್ಲಿ ಈಕೆ ದೇಶದ ಎರಡನೇ ಅತ್ಯಂತ ಕಿರಿಯ ಸಂಸದೆ ಎಂದು ಫೇಮಸ್ ಆಗಿದ್ದರು.

ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ರಿಂಕು ಸಿಂಗ್ 8ನೇ ತೇರ್ಗಡೆಯಾಗಿದ್ದಾರೆ. ಇವರಿಬ್ಬರ ನಡುವೆ ಸಂಪರ್ಕ ಇದೆ ಎಂದು ಹೇಳಲಾಗಿದೆ. ಕ್ರಿಕೆಟ್​​, ಬಾಲಿವುಡ್​ ನಡುವೆ ಸಂಭದ ಬೆಸೆಯೋದು ಕಾಮನ್​ ಆಗಿತ್ತು.. ಮನ್ಸೂರಿ ಅಲಿ ಖಾನ್​ ಪಟೌಡಿಯಿಂದ ಹಿಡಿದು ಕೆ.ಎಲ್​ ರಾಹುಲ್​ ವರೆಗೆ ಟೀಮ್​ ಇಂಡಿಯಾಗೂ ಬಾಲಿವುಡ್​​ಗೂ ಅವಿನಾಭಾವ ನಂಟಿದೆ. ಕ್ರಿಕೆಟ್​​ಗೂ ಪಾಲಿಟಿಕ್ಸ್​ಗೂ ಹೀಗೆ ನಂಟು ಬೆಳೆದಿರೋದು ತೀರಾ​ ವಿರಳ. ಎಲ್ಲಾ ಅಂದುಕೊಂಡಂತೆ ಆದರೆ ರಿಂಕು ಸಿಂಗ್​​ ಪ್ರಿಯಾ ಸರೋಜ್​ ಈ ಲಿಸ್ಟ್​ನಲ್ಲಿ ಒಬ್ಬರಾಗಲಿದ್ದಾರೆ.

 ರಿಂಕು ಎಂಗೇಜ್ಮೆಂಟ್ ಬಗ್ಗೆ ಪ್ರೀಯಾ ತಂದೆ ಹೇಳಿದ್ದೇನು? 

ಇದೀಗ ಕ್ರಿಕೆಟರ್ ರಿಂಕು ಸಿಂಗ್ ಮತ್ತು ಸಂಸದೆ ಪ್ರಿಯಾ ಸರೋಜ್ ನಿಶ್ಚಿತಾರ್ಥ ನೆರವೇರಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್ ಆಗಿದೆ. ಆ ಬಗ್ಗೆ ಇದೀಗ ಪ್ರಿಯಾ ಸರೋಜ್ ಅವರ ತಂದೆ ತೂಫಾನಿ ಸರೋಜ್ ಅವರೇ ಸ್ಪಷ್ಟನೆ ನೀಡಿದ್ದಾರೆ. ರಿಂಕು ಸಿಂಗ್ ಮತ್ತು ಪ್ರಿಯಾ ವಿವಾಹ ನಿಶ್ಚಿತಾರ್ಥ ಆಗಿಲ್ಲ . ಎರಡೂ ಕುಟುಂಬಗಳ ಮಧ್ಯೆ ಮಾತುಕತೆ ನಡೆದಿರುವುದು ನಿಜ. ಆದರೆ ಎಂಗೇಜ್ ಮೆಂಟ್ ಆಗಿಲ್ಲ ಎಂದಿದ್ದಾರೆ.

ಬಡತನ ಮೆಟ್ಟಿ ನಿಂತ ರಿಂಕು ಸಿಂಗ್ 

ಟಿ20 ಸ್ಪೆಷಲಿಸ್ಟ್ ಬ್ಯಾಟರ್ ಆಗಿರುವ ಉತ್ತರ ಪ್ರದೇಶ ಮೂಲದ ರಿಂಕು ಸಿಂಗ್ ಅವರು ಭಾರತ ತಂಡದ ಪರ 30 ಟಿ20 ಪಂದ್ಯಗಳನ್ನಾಡಿದ್ದು 22 ಇನ್ನಿಂಗ್ಸ್ ಗಳಂದ 46.09 ಸರಾಸರಿಯಲ್ಲಿ 507 ರನ್ ಗಳಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿಯುವ ಅವರು ಕೋಲ್ಕತಾ ನೈಟ್ ರೈಡರ್ಸ್ ನ ಮ್ಯಾಚ್ ವಿನ್ನರ್ ಆಗಿ ಗುರ್ತಿಸಿಕೊಂಡಿದ್ದಾರೆ. ಕೆಕೆಆರ್ 13 ಕೋಟಿ ನೀಡಿ ತಂಡದ ಮೊದಲ ಆಯ್ಕೆಯ ಆಟಗಾರನಾಗಿ ರಿಟೇನ್ ಮಾಡಿಕೊಂಡಿದೆ. ಇನ್ನೂ ರಿಂಕು ಕುಮಾರ್ ಸಿಂಗ್ ಉತ್ತರ ಪ್ರದೇಶದ ಅಲಿಗಢದಲ್ಲಿ ಬಡ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಪ್ರತಿ ಮನೆಯಲ್ಲೂ ಗ್ಯಾಸ್ ಸಿಲಿಂಡರ್‌ಗಳನ್ನು ಪೂರೈಸುವ ಕೆಲಸ ಮಾಡುತ್ತಾ ಕುಟುಂಬ ನಡೆಸಿದವರು. ಕೆಲವೊಮ್ಮೆ ರಿಂಕು ತನ್ನ ತಂದೆಯ ಆರೋಗ್ಯ ಸರಿಯಿಲ್ಲದ ಸಂದರ್ಭದಲ್ಲಿ ಸಿಲಿಂಡರ್‌ಗಳನ್ನು ಡಿಲೆವರಿ ಮಾಡುತ್ತಿದ್ದರು. ಕೆಲವೊಮ್ಮೆ ರಿಂಕು ಕಸ ಗುಡಿಸುವವನಾಗಿಯೂ ಕೆಲಸ ಮಾಡುತ್ತಿದ್ದಿದ್ದಾಗಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.  ರಿಂಕು ಸಿಂಗ್‌ ಅವರು ಇತ್ತೀಚಿಗೆ ಅಲಿ ಘರ್‌ನಲ್ಲಿ ದೊಡ್ಡ ಬಂಗಲೆಯನ್ನು ಖರೀದಿಸಿದ್ದಾರೆ. ಒಂದೊಂದೆ ಮೆಟ್ಟಿಲು ಏರುವ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ರಿಂಕು  ನಾಲ್ಕೈದು ವರ್ಷಗಳ ಬೆಂಚ್​ ಕಾಯ್ದಿದ್ದರು.  2023ರಲ್ಲಿ ಒಂದೇ ಓವರ್​ನಲ್ಲಿ 5 ಸಿಕ್ಸರ್​ ಸಿಡಿಸಿ ಪಂದ್ಯವನ್ನು ಗೆಲ್ಲಿಸಿದ ನಂತರ ರಾತ್ರೋ ರಾತ್ರಿ ಸ್ಟಾರ್​ ಆದರು. ನಂತರ ತಂಡದಲ್ಲಿ ಖಾಯಂ ಸದಸ್ಯರಾದರು. ಭಾರತ ತಂಡಕ್ಕೂ ಪದಾರ್ಪಣೆ ಮಾಡಿದ ರಿಂಕು, ಅಲ್ಲೂ ಸೈ ಎನಿಸಿಕೊಂಡರು. ಒಟ್ನಲ್ಲಿ ಬಡತನದಲ್ಲಿ ಬೆಂದು ದೊಡ್ಡ ಸಾಧನೆ ಮಾಡಿರೋ ರಿಂಕು ಸಿಂಗ್ ಅವರು ವೈವಾಹಿಕ ಜೀವನ ಚೆನ್ನಾಗಿರಲಿ ಅನ್ನೋದು ಫ್ಯಾನ್ಸ್‌ಗಳ ಆಸೆ..

Kishor KV

Leave a Reply

Your email address will not be published. Required fields are marked *