ವಿಜಯಲಕ್ಷ್ಮೀ ಮುಂದೆ.. ಪವಿತ್ರ ಹಿಂದೆ? – ದೇವರ ದರ್ಶನಕ್ಕೂ ಕಾಂಪಿಟೇಶನ್?
ಕೆಟ್ಟ ಮೇಲು ಬುದ್ದಿ ಬಂದಿಲ್ವಾ?

ವಿಜಯಲಕ್ಷ್ಮೀ ಮುಂದೆ.. ಪವಿತ್ರ ಹಿಂದೆ? – ದೇವರ ದರ್ಶನಕ್ಕೂ ಕಾಂಪಿಟೇಶನ್?ಕೆಟ್ಟ ಮೇಲು ಬುದ್ದಿ ಬಂದಿಲ್ವಾ?

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಪಾಲಾಗಿದ್ದ ಪವಿತ್ರಾ ಗೌಡ ಈಗ ಬೇಲ್ ಮೂಲಕ ಹೊರ ಬಂದಿದ್ದಾರೆ.. ಹೊಸ ವರ್ಷಕ್ಕೆ ಹೊಸ ಜೀವನ ಆರಂಭಿಸಲು ಪವಿತ್ರಾ ಅಣಿಯಾಗಿದ್ದಾರೆ.. ಜೈಲಿನಿಂದ ಬಂದ ಕೂಡಲೇ ದರ್ಶನ್‌ ಹೆಸರಲ್ಲಿ ಪೂಜೆ‌ ಮಾಡಿ, ನಾನ್ ಬದಲಾಗಿಲ್ಲ ಅಂತ ತೋರಿಸಿದ್ದ ಪವಿತ್ರ ನಂತರ ಉದ್ಯಮದತ್ತ ಹೆಚ್ಚು ಗಮನ ಕೊಟ್ಟಿದ್ದಾರಂತೆ. ಹೀಗಾಗಿ ಬ್ಯುಸಿನೆಸ್ ವಿಚಾರವಾಗಿ ಹೊರರಾಜ್ಯಗಳಿಗೆ ಹೋಗಲು ಅವಕಾಶ ಬೇಕು ಅಂತಾ ಕೋರ್ಟ್ ಮೊರೆ ಹೋಗಿದ್ರು.. ಕೋರ್ಟ್ ಕೂಡ ಪರ್ಮಿಷನ್ ನೀಡಿದೆ.. ಬೇರೆ ರಾಜ್ಯಕ್ಕೆ ಹೋಗಿ ಅದೇನ್ ಬ್ಯುಸಿನೆಸ್ ಮಾಡ್ತಾರೋ ಗೊತ್ತಿಲ್ಲ. ಆದ್ರೆ ಹೋಗೋಕೆ ಅವಕಾಶ ಸಿಕ್ತಿದ್ದಂತೆ ಈಗ ಟೆಂಪಲ್ ರನ್ ಮಾಡಲಿದ್ದಾರೆ..

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗೆ 15 ಜನರ ಟೀಂ ಅನೌನ್ಸ್  – ರೋಹಿತ್ ಶರ್ಮಾ ಜೊತೆ ಓಪನರ್ ಯಾರು?

ಸಂಕಟ ಬಂದಾಗ ವೆಂಕಟ ರಮಣ ಅನ್ನೋ ಮಾತನ್ನ ನೀವು ಕೇಳೇ ಇರ್ತೀರಾ.. ಕಷ್ಟ ಬಂದಾಗ ಫಸ್ಟ್ ನೆನಪಿಗೆ ಬರೋದೇ ದೇವರು.. ಇದೀಗ ಪವಿತ್ರಾ ಗೌಡ ಕೂಡ ತನಗೆ ಬಂದಿರೋ ಸಂಕಷ್ಟದಿಂದ ಪಾರಾಗಲು ದೇವರ ಮೊರೆ ಹೋಗಿದ್ದಾರೆ.. ರೇಣುಕಾಸ್ವಾಮಿ ಕೊಲೆ ಕೇಸ್ ನ ಎ1 ಆರೋಪಿ ಪವಿತ್ರಾ ಗೌಡ ಈ ಕೇಸ್ ನಿಂದಾಗಿ 7 ತಿಂಗಳ ಕಾಲ ಜೈಲು ವಾಸ ಅನುಭವಿಸಿದ್ದಾರೆ. ಪವಿತ್ರಗೆ ಅವಹೇಳನಕಾರಿ‌ ಮೆಸೇಜ್ ಕಳಿಸಿದ್ದಕ್ಕೇ ರೇಣುಕಾಸ್ವಾಮಿಯನ್ನು‌ ಕೊಲೆ ಮಾಡಿದ ಆರೋಪವಿದೆ. ಜೈಲಿಗೆ ಹೋಗಿ ಜಾಮೀನು ಮೂಲಕ ಹೊರ ಬರುತ್ತಿದ್ದಂತೆ ಪವಿತ್ರಾ ಗೌಡ ನೇರವಾಗಿ ಹೋಗಿದ್ದೇ ದೇವಸ್ಥಾನಕ್ಕೆ..

ಬೇಲ್ ಮೂಲಕ ಜೈಲಿನಿಂದ ಹೊರ ಬಂದ ಪವಿತ್ರಾ ತಾಯಿ ಜೊತೆ ನೇರವಾಗಿ ದೇವಸ್ಥಾನಕ್ಕೆ ಹೋಗಿದ್ರು. ತನ್ನ ತವರೂರು ತಲಘಟ್ಟಪುರದಲ್ಲಿರೋ  ವಜ್ರಮುನೇಶ್ವರ ದೇಗುಲದಲ್ಲಿ ತೀರ್ಥಸ್ನಾನ ಮಾಡಿ, ವಿಶೇಷ ಪೂಜೆ ಸಲ್ಲಿಸಿದ್ರು.. ಆಗಲೂ ದರ್ಶನ್ ಹೆಸರು ಸೇರಿಸಲು ಹಿಂದೆ‌ಮುಂದೆ ನೋಡಿರಲಿಲ್ಲ. ಆಮೇಲೆ ಜೈಲಿನಿಂದ ಬರೋವಾಗ ಧರಿಸಿದ್ದ ಚಪ್ಪಲಿಯನ್ನ ದೇವಸ್ಥಾನದ ಬಳಿಯೇ ಬಿಟ್ಟು ಹೋಗಿದ್ರು.. ದೇವಸ್ಥಾನದಲ್ಲಿ ಹಾಕಿದ ಚಪ್ಪಲಿ ಕಳೆದರೆ.. ಅದು ಅನಿಷ್ಟ ತೊಲಗಿದ ಸಂಕೇತ ಎಂಬ  ನಂಬಿಕೆ ಇದೆ.  ಜೈಲಿನಿಂದ ಬಂದ ಪವಿತ್ರಾ ಹೊಸ ಲೈಫ್ ಶುರು ಮಾಡ್ತಿದ್ದಾರೆ.. ತನ್ನ ಬೌಟಿಕ್ ಉದ್ಯಮವನ್ನ ಮತ್ತೆ ಶುರು ಮಾಡ್ತಿದ್ದಾರೆ ಪವಿತ್ರಾ.. ಈಗ ಬ್ಯುಸಿನೆಸ್ ವಿಚಾರವಾಗಿ ರಾಜ್ಯದಿಂದ ಬೇರೆ ರಾಜ್ಯಕ್ಕೆ ಹೋಗಲು ಕೋರ್ಟ್ ಅನುಮತಿಯನ್ನು ಪಡೆದುಕೊಂಡಿದ್ದಾರೆ. ಕೋರ್ಟ್ ಪರ್ಮಿಷನ್ ಸಿಗ್ತಿದ್ದಂತೆ ಪವಿತ್ರಾ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ.. ಬ್ಯುಸಿನೆಸ್ ಟ್ರಿಪ್ ಜೊತೆಗೆ ಟೆಂಪಲ್ ರನ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಪವಿತ್ರಾ ಗೌಡ ರೆಡ್ ಕಾರ್ಪೆಟ್ ರೀ ಓಪನ್ ಮಾಡಲು ಸಜ್ಜಾಗಿದ್ದಾರೆ.. ಈಗ ಪ್ರಯಾಣ ಶುರು ಮಾಡೋಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಫ್ರಾಬ್ರಿಕ್ ಶಾಪಿಂಗ್ ಗಾಗಿ ಹೊರ ರಾಜ್ಯಗಳಿಗೆ ಭೇಟಿ ನೀಡ್ತಿದ್ದಾರೆ. ದೆಹಲಿ, ಶಿರಡಿ, ಅಸ್ಸಾಂಗೆ ಹೋಗೋಕೆ ಪವಿತ್ರಗೌಡ ಸಜ್ಜಾಗಿದ್ದಾರೆ. ಅಲ್ಲಿನ ಸುತ್ತಮುತ್ತ ಇರೋ ದೇವಸ್ಥಾನಕ್ಕೂ ಭೇಟಿ ನೀಡಲಿದ್ದಾರೆ ಎಂದು ಮಾಧ್ಯಮಗಳು ವರದಿಮಾಡಿವೆ.  ಮುಂದಿನ ವಾರ ಮೊದಲಿಗೆ ಶಿರಡಿ ಸಾಯಿಬಾಬ ದೇವಸ್ಥಾನಕ್ಕೆ ತೆರಳಿ ಸಾಯಿಬಾಬ ದರ್ಶನ ಪಡೆದ್ದಾರೆ.. ಬಳಿಕ ದೆಹಲಿಗೆ ಪವಿತ್ರಾ ಹೋಗಲಿದ್ದಾರಂತೆ. ರೆಡ್ ಕಾರ್ಪೆಟ್ ರೀ ಒಪನ್ ಮಾಡಿದ ನಂತರ ಪವಿತ್ರಾ ಗೌಡ ಕಾಮಾಕ್ಯ ಟೆಂಪಲ್ ಗೆ ಹೋಗೊಕೆ ಪ್ಲಾನ್ ಮಾಡಿದ್ದಾರಂತೆ.

ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಸ್ಥಾನ ಅತ್ಯಂತ ಪವರ್ ಫುಲ್ ದೇವಸ್ಥಾನ ಎಂದೇ ಪ್ರಸಿದ್ಧಿ ಪಡೆದಿದೆ. ದರ್ಶನ್ ಕೊಲೆ ಕೇಸ್ ನಲ್ಲಿ ಜೈಲಿಗೆ ಹೋದಾಗ ಅವರ ಪತ್ನಿ ವಿಜಯಲಕ್ಷ್ಮಿ ಕೂಡ ಕಾಮಾಕ್ಯ ದೇವಸ್ಥಾನಕ್ಕೆ ಹೋಗಿದ್ದರು. ದೇವಸ್ಥಾನದ ಆವರಣದಲ್ಲಿ ನಿಂತು ಒಂದು ಫೋಟೋ ತೆಗೆಸಿಕೊಂಡಿದ್ರು. ಈ ಮೂಲಕ ತಾವು ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ಕೊಟ್ಟಿರೋ ವಿಷಯವನ್ನು ತಿಳಿಸಿದ್ದರು. ಈಗ ಕೊಲೆ ಪ್ರಕರಣದಲ್ಲಿ ಬೇಲ್ ಸಿಕ್ಕ ನಂತರ ಪವಿತ್ರಾ ಗೌಡ ಈಗ ಕಾಮಾಕ್ಯ ದೇವಸ್ಥಾನಕ್ಕೆ ಹೋಗಲಿದ್ದಾರೆ ಎನ್ನಲಾಗಿದೆ. ಕಾಮಾಕ್ಯ ದೇವಸ್ಥಾನಕ್ಕೆ ಹೋಗಿ ಬಂದ ನಂತ್ರ ಧರ್ಮಸ್ಥಳ, ತಿರುಪತಿಗೆ ಹೋಗಿ ಹರಕೆ ತೀರಿಸಲಿದ್ದಾರಂತೆ ಪವಿತ್ರಾ. ಜೈಲು ಸೇರಿದ್ದ ವೇಳೆ ತಿರುಪತಿ, ಧರ್ಮಸ್ಥಳಕ್ಕೆ ಬರುವುದಾಗಿ ಪವಿತ್ರಾ ಗೌಡ ಹರಕೆ ಹೊತ್ತಿದ್ದರು ಎನ್ನಲಾಗಿದೆ. ಈ ನಿಟ್ಟಿನಲ್ಲಿ ಸೋಮವಾರ ಅಥವಾ ಮಂಗಳವಾರ ಶಿರಡಿಗೆ ಹೋಗಲು ಪವಿತ್ರ ಗೌಡ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

ಜೈಲಿಗೆ ಹೋಗಿ ಬಂದ್ಮೇಲೆ ಪವಿತ್ರಾ ಬದಲಾಗ್ತಾರೆ.. ಒಳ್ಳೆ ಬುದ್ದಿ ಬರ್ಬೋದು.. ದರ್ಶನ್ ಫ್ಯಾಮಿಲಿಯಿಂದ ದೂರ ಉಳಿಬೋದು ಅಂತಾ ದರ್ಶನ್ ಫ್ಯಾನ್ಸ್ ಅಂದ್ಕೊಂಡಿದ್ರು.. ಆದ್ರೆ ಈಕೆಗೆ ಕೆಟ್ಟಮೇಲೂ ಬುದ್ದಿ ಬಂದಿಲ್ಲ..‌ ದರ್ಶನ್ ಕ್ಲೋಸ್ ಆಗಿದ್ದಾಗ ವಿಜಯಲಕ್ಷ್ಮಿ ಬಳಿ ಏನೆಲ್ಲಾ ಇದ್ಯೋ… ಅದೆಲ್ಲಾ ಬೇಕು ಅಂತಾ ಹಠ ಮಾಡಿ ಪಡ್ಕೊಳ್ತಿದ್ದ ಪವಿತ್ರಾ.. ಈಗ ದೇವರು.. ದೇವಸ್ಥಾನದ ವಿಚಾರದಲ್ಲೂ ಅದೇ ಚಾಳಿಯನ್ನ ಮುಂದುವರೆಸಿದ್ದಾರೆ.. ಇನ್ನಾದ್ರೂ ಪವಿತ್ರಾಗೆ ದೇವ್ರು  ಒಳ್ಳೆ ಬುದ್ದಿ ಕೊಡ್ಲಿ ಅಂತಾ ದರ್ಶನ್ ಫ್ಯಾನ್ಸ್ ಹೇಳ್ತಿದ್ದಾರೆ.

Shwetha M

Leave a Reply

Your email address will not be published. Required fields are marked *