ಚಾಂಪಿಯನ್ಸ್ ಟ್ರೋಫಿಗೆ 15 ಜನರ ಟೀಂ ಅನೌನ್ಸ್ – ರೋಹಿತ್ ಶರ್ಮಾ ಜೊತೆ ಓಪನರ್ ಯಾರು?
ಫೈನಲಿ ಅಳೆದು ತೂಗಿ ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾ ಅನೌನ್ಸ್ ಆಗಿದೆ. 15 ಸದಸ್ಯರ ತಂಡವನ್ನ ಘೋಷಣೆ ಮಾಡಲಾಗಿದ್ದು, ಈ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದು, ಉಪನಾಯಕರಾಗಿ ಶುಭ್ಮನ್ ಗಿಲ್ ಕಾಣಿಸಿಕೊಳ್ಳಲಿದ್ದಾರೆ. ಬ್ಯಾಟ್ಸ್ಮನ್ ಗಳಾಗಿ ರೋಹಿತ್ ಶರ್ಮಾ ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಹಾಗೂ ಯಶಸ್ವಿ ಜೈಸ್ವಾಲ್ ಇರ್ತಾರೆ. ಹಾಗೇ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಗಳಾಗಿ ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಗೆ ಚಾನ್ಸ್ ಸಿಕ್ಕಿದೆ. ಇನ್ನು ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ ಆಲ್ ರೌಂಡರ್ ಜವಾಬ್ದಾರಿ ನಿರ್ವಹಿಸ್ತಾರೆ. ಹಾಗೇ ಬೌಲರ್ ಗಳಾಗಿ ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಅರ್ಷದೀಪ್ ಸಿಂಗ್ ಚಾನ್ಸ್ ಪಡೆದಿದ್ದಾರೆ.
ಇದನ್ನೂ ಓದಿ : ಡ್ರೆಸ್ಸಿಂಗ್ ರೂಂ ರೂಲ್ಸ್.. ಸರ್ಫರಾಜ್ ಭವಿಷ್ಯ ಖತಂ? – ತಪ್ಪು ಮುಚ್ಚಿಕೊಳ್ಳಲು ಗಂಭೀರ್ ಆಟ?
ರೋಹಿತ್ ಶರ್ಮಾ ಟೀಮ್ಗೆ ಸೆಲೆಕ್ಟ್ ಆಗ್ತಾರೆ ಅನ್ನೋದು ಮೊದ್ಲೇ ಗೊತ್ತಿತ್ತು. ಯಾಕಂದ್ರೆ ಅವ್ರೇ ಕ್ಯಾಪ್ಟನ್. ಸೋ ರೋಹಿತ್ ಶರ್ಮಾ ಬ್ಯಾಟ್ಸ್ಮನ್ ಆಗಿದ್ದು ಪ್ಲೇಯಿಂಗ್ 11ನಲ್ಲಿ ಚಾನ್ಸ್ ಪಡೆಯೋದು ಪಕ್ಕಾ. ಅದರಲ್ಲೂ ಓಪನಿಂಗ್ ಸ್ಲಾಟ್ನಲ್ಲೇ ಇನ್ನಿಂಗ್ಸ್ ಆರಂಭಿಸ್ತಾರೆ. ರೋಹಿತ್ ಶರ್ಮಾ ಇದುವರೆಗೂ 265 ಏಕದಿನ ಪಂದ್ಯಗಳನ್ನ ಆಡಿದ್ದು, 10,866 ರನ್ ಗಳಿಸಿದ್ದಾರೆ. ಆವರೇಜ್ 49.
ಇನ್ನು ನಂಬರ್ ಶುಭ್ಮನ್ ಗಿಲ್ಗೂ ಚಾನ್ಸ್ ಸಿಕ್ಕಿದೆ. ಅಲ್ದೇ ವೈಸ್ ಕ್ಯಾಪ್ಟನ್ಸಿಯನ್ನೂ ನೀಡಲಾಗಿದೆ. ಶುಭ್ಮನ್ ರೋಹಿ್ತ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭ ಮಾಡ್ಬೋದು. ಇದುವೆರಗೂ 47 ಏಕದಿನ ಪಂದ್ಯವನ್ನ ಆಗಿದ್ದು, 2,328 ರನ್ ಕಲೆ ಹಾಕಿದ್ದಾರೆ. ಆವರೇಜ್ 58
ಇನ್ನು ಟೀಂ ಇಂಡಿಯಾದ ಶೈನಿಂಗ್ ಸ್ಟಾರ್ ಆಗಿರುವ ಯಶಸ್ವಿ ಜೈಸ್ವಾಲ್ಗೆ ಇದೇ ಮೊದಲ ಬಾರಿಗೆ ಏಕದಿನ ಪಂದ್ಯಕ್ಕೆ ಸೆಲೆಕ್ಟ್ ಮಾಡಲಾಗಿದೆ.ಈಗಾಗ್ಲೇ ಟಿ-20 ಹಾಗೂ ಟೆಸ್ಟ್ನಲ್ಲಿ ಜೈಸ್ವಾಲ್ ಟೀಂ ಇಂಡಿಯಾದ ನಂಬಿಕಸ್ಥ ಆಟಗಾರ ಆಗಿದ್ದಾರೆ. ಓಪನರ್ ಸ್ಲಾಟ್ನಲ್ಲಿ ಕಣಕ್ಕಿಳಿಯೋ ಜೈಸ್ವಾಲ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಪ್ಲೇಯಿಂಗ್ 11ನಲ್ಲಿ ಚಾನ್ಸ್ ಸಿಕ್ರೆ ಓಪನರ್ ಆಗಿ ಇನ್ನಿಂಗ್ಸ್ ಆರಂಭಿಸ್ತಾರೆ.
ಇನ್ನು ವಿರಾಟ್ ಕೂಡ ಟೀಮ್ನಲ್ಲಿ ಆಡೋದು ಫಿಕ್ಸ್ ಆಗಿತ್ತು. ಬ್ಯಾಟ್ಸ್ಮನ್ ಆಗಿರುವ ವಿರಾಟ್ ನಂಬರ್ 3 ಅಥವಾ 4ರಲ್ಲಿ ಸ್ಲಾಟ್ನಲ್ಲಿ ಕಣಕ್ಕಿಳಿಯಲಿದ್ದಾರೆ. ಇದುವರೆಗೂ 295 ಏಕದಿನ ಪಂದ್ಯಗಳನ್ನ ಆಡಿರೋ ವಿರಾಟ್ ಕೊಹ್ಲಿ 13,906 ರನ್ ಕಲೆ ಹಾಕಿದ್ದಾರೆ. ಆವರೇಜ್ 58 ಇದೆ. ಆಸಿಸ್ ಸರಣಿಯಲ್ಲಿ ಕಳಪೆ ಫಾರ್ಮ್ನಲ್ಲಿದ್ದ ವಿರಾಟ್ ಈಗ ಗ್ರೇಟ್ ಕಮ್ ಬ್ಯಾಕ್ ಮಾಡೋ ನಿರೀಕ್ಷೆಯಲ್ಲಿದ್ದಾರೆ.
ಇನ್ನು ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಅಚ್ಚರಿಯ ರೀರಿಯಲ್ಲಿ ಶ್ರೇಯಸ್ ಅಯ್ಯರ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈವರೆಗೂ 62 ಏಕದಿನ ಪಂದ್ಯಗಳನ್ನ ಆಡಿರೋ ಅಯ್ಯರ್, 2421 ರನ್ ಕಲೆ ಹಾಕಿದ್ದಾರೆ. 47 ಆವರೇಜ್ ಇದೆ. ಪ್ಲೇಯಿಂಗ್ 11ನಲ್ಲಿ ಚಾನ್ಸ್ ಸಿಕ್ರೆ ಮಿಡಲ್ ಆರ್ಡರ್ನಲ್ಲಿ ಕಣಕ್ಕೀಳಿಸಬಹುದು. ಸೋ ಹೀಗೆ ಇವ್ರು ಐದು ಜನ ಬ್ಯಾಟ್ಸ್ಮನ್ಸ್ ಆಗಿದ್ದು, ಟಾಪ್ ಆರ್ಡರ್ ಬ್ಯಾಟ್ಸ್ಮನ್ ಗಳಾಗಿ ಆಡ್ತಾರೆ. ಹಾಗೇ ವಿಕೆಟ್ ಕೀಪರ್ ಬ್ಯಾಟ್ಟ್ಮನ್ ಗಳಾಗಿ ರಿಷಭ್ ಪಂತ್ ಕೆಎಲ್ ರಾಹುಲ್ ಆಯ್ಕೆಯಾಗಿದ್ದಾರೆ.
ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಆಗಿರುವ ಕೆಎಲ್ ರಾಹುಲ್ ಕೂಡ ಚಾನ್ಸ್ ಪಡೆಯುವಲ್ಲಿ ಸಕ್ಸಸ್ ಆಗಿದ್ದಾರೆ. ಕೆಎಲ್ ರಾಹುಲ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿದ್ದು, ಮಿಡಲ್ ಆರ್ಡರ್ ಸ್ಟ್ರೆಂಥ್ ಹೆಚ್ಚಿಸಲು ನೆರವಾಗ್ತಾರೆ. ಈವರೆಗೂ 77 ಒಡಿಐ ಮ್ಯಾಚಸ್ ಆಡಿರೋ ಕೆಎಲ್ ರಾಹುಲ್ 2851 ರನ್ ಬಾರಿಸಿದ್ದಾರೆ. ಆವರೇಜ್ 49 ಇದೆ. ಚಾಂಪಿಯನ್ಸ್ ಟ್ರೋಫಿಯಲ್ಲೂ ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ನಂಬರ್ 5 ಸ್ಲಾಟ್ನಲ್ಲಿ ಕಣಕ್ಕಿಳಿಸಬಹುದು.
ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ರಿಷಭ್ ಪಂತ್ ಕೂಡ ಸ್ಥಾನ ಗಿಟ್ಟಿಸುಕೊಳ್ಳುವಳ್ಳಿ ಯಶಸ್ವಿಯಾಗಿದ್ದಾರೆ. ಮಿಡರ್ ಆರ್ಡರ್ ಬ್ಯಾಟಿಂಗ್ ನಲ್ಲಿ ಭಾರತಕ್ಕೆ ಶಕ್ತಿಯಾಗಿರುವ ಪಂತ್ ಪ್ಲೇಯಿಂಗ್ 11ನಲ್ಲಿ ಚಾನ್ಸ್ ಪಡೆಯೋದು ಪಕ್ಕಾ. ನಂಬರ್ 6 ಸ್ಲಾಟ್ನಲ್ಲಿ ಕಣಕ್ಕಿಳಿಯಲಿರೋ ಪಂತ್ ಹೊಡಿಬಡಿ ಆಟದಿಂದಲೇ ಪಂದ್ಯದ ದಿಕ್ಕನ್ನೇ ಬದಲಿಸೋ ಕೆಪಾಸಿಟಿ ಹೊಂದಿದ್ದಾರೆ. ಆದ್ರೆ ಏಕದಿನ ಫಾರ್ಮೆಟ್ನಲ್ಲಿ ಪಂತ್ ಈವರೆಗೂ 31 ಪಂದ್ಯಗಳನ್ನಷ್ಟೇ ಆಡಿದ್ದಾರೆ. ಇದ್ರಲ್ಲಿ 871 ರನ್ ಕಲೆ ಹಾಕಿದ್ದಾರೆ. ಆವರೇಜ್ 34 ಇದೆ. ಇನ್ನು ಆಲ್ರೌಂಡರ್ಸ್ ಕೋಟಾದಲ್ಲಿ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಹಾಗೇ ರವೀಂದ್ರ ಜಡೇಜಾ ಸ್ಥಾನ ಪಡೆದಿದ್ದಾರೆ.
ಹಾರ್ದಿಕ್ ಪಾಂಡ್ಯ ಅಲ್ರೌಂಡರ್ ಆಗಿದ್ದು, ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಸ್ಟ್ರೆಂಥ್ ಆಗ್ತಾರೆ. ಈವರೆಗೂ 86 ಪಂದ್ಯಗಳನ್ನ ಆಡಿದ್ದು, 1769 ರನ್ ಬಾರಿಸಿದ್ದಾರೆ. ಹಾಗೇ 84 ವಿಕೆಟ್ ಬೇಟೆಯಾಡಿದ್ದಾರೆ. ಅಕ್ಷರ್ ಪಟೇಲ್ ಬಗ್ಗೆ ನೋಡೋದಾದ್ರೆ ಇವ್ರೂ ಕೂಡ ಆಲ್ರೌಂಡರ್.. ಈವರೆಗೂ 60 ಏಕದಿನ ಪಂದ್ಯ ಆಡಿದ್ದು, 568 ರನ್ ಗಳಿಸಿದ್ದಾರೆ. 64 ವಿಕೆಟ್ ಪಡೆದಿದ್ದಾರೆ. ಹಾಗೇ ವಾಷಿಂಗ್ ಟನ್ ಸುಂದರ್ ಇತ್ತೀಚೆಗೆ ಶೈನ್ ಆಗ್ತಿದ್ದು, 22 ಏಕದಿನ ಪಂದ್ಯ ಆಡಿದ್ದು, 23 ವಿಕೆಟ್ ಪಡೆದಿದ್ದಾರೆ. 315 ರನ್ ಕಲೆ ಹಾಕಿದ್ದಾರೆ.
ಇನ್ನು ರವೀಂದ್ರ ಜಡೇಜಾ ಅನುಭವಿ ಮತ್ತು ಹಿರಿಯ ಆಲ್ ರೌಂಡರ್ ಆಗಿದ್ದು, ಈವರೆಗೂ 2,756 ರನ್ ಗಳಿಸಿದ್ದಾರೆ. 220 ವಿಕೆಟ್ ಕಿತ್ತಿದ್ದಾರೆ. ಇನ್ನು ಬೌಲರ್ ಕೋಟಾದಲ್ಲಿ ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೇ ಅರ್ಷದೀಪ್ ಸಿಂಗ್ ಸ್ಥಾನ ಪಡೆದಿದ್ದಾರೆ. ಮತ್ತೊಂದೆಡೆ ಮೊಹಮ್ಮದ್ ಸಿರಾಜ್ ಅವರನ್ನು ಈ ಬಾರಿ ತಂಡದಿಂದ ಕೈ ಬಿಡಲಾಗಿದೆ. ಅವರ ಬದಲಿಗೆ ಅರ್ಷದೀಪ್ ಸಿಂಗ್ಗೆ ಸ್ಥಾನ ನೀಡಲಾಗಿದೆ. ಹಾಗೆಯೇ ಕಳೆದ ಒಂದೂವರೆ ವರ್ಷದಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದ ಶಮಿ ಅವರನ್ನು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಲಾಗಿತ್ತು. ಇದೀಗ ಇಂಗ್ಲೆಂಡ್ ವಿರುದ್ಧದ ಏಕದಿನ ಹಾಗೂ ಚಾಂಪಿಯನ್ಸ್ ಟ್ರೋಫಿಗಾಗಿಯೂ ಮೊಹಮ್ಮದ್ ಶಮಿ ಅವರಿಗೆ ಸ್ಥಾನ ನೀಡಲಾಗಿದೆ. ಇನ್ನು ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದ ವೇಳೆ ಫಿಟ್ನೆಸ್ ಸಮಸ್ಯೆಗೆ ಒಳಗಾಗಿದ್ದ ಜಸ್ಪ್ರೀತ್ ಬುಮ್ರಾ ಅವರನ್ನು ಚಾಂಪಿಯನ್ಸ್ ಟ್ರೋಫಿಗಾಗಿ ಆಯ್ಕೆ ಮಾಡಲಾಗಿದೆ. ಇದಾಗ್ಯೂ ಅವರು ಇಡೀ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.