KL ಕೈ ತಪ್ಪಿದ DC ಕ್ಯಾಪ್ಟನ್ಸಿ.. ಅಕ್ಷರ್ ಪಟೇಲ್ ಗೆ ಮಣೆ ಹಾಕಿದ್ದೇಕೆ? – ರಾಹುಲ್ ಗೆ ಮೋಸ ಮಾಡಿದ್ರಾ?

 KL ಕೈ ತಪ್ಪಿದ DC ಕ್ಯಾಪ್ಟನ್ಸಿ.. ಅಕ್ಷರ್ ಪಟೇಲ್ ಗೆ ಮಣೆ ಹಾಕಿದ್ದೇಕೆ? – ರಾಹುಲ್ ಗೆ ಮೋಸ ಮಾಡಿದ್ರಾ?

2024ರ ನವೆಂಬರ್​ನಲ್ಲಿ ನಡೆದಿದ್ದ ಐಪಿಎಲ್ ಮೆಗಾ ಆಕ್ಷನ್​ನಲ್ಲಿ ಕೆಎಲ್ ರಾಹುಲ್​ರನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡ 14 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆ. ಲಕ್ನೋ ಸೂಪರ್ ಜೇಂಟ್ಸ್ ತಂಡದಿಂದ ಹೊರ ಬಂದಿದ್ದ ಕೆಎಲ್ ರಾಹುಲ್​ರನ್ನ ಆರ್​ಸಿಬಿ ಫ್ರಾಂಚೈಸಿ ಖರೀದಿ ಮಾಡುತ್ತೆ ಅಂತಾ ಕನ್ನಡಿಗರು ತುಂಬಾನೇ ಖುಷಿಯಲ್ಲಿದ್ರು. ಬಟ್ ಸ್ಟಾರ್ಟಿಂಗ್ 10 ಕೋಟಿವರೆಗೂ ಬಿಡ್ ಮಾಡಿದ ಆರ್​ಸಿಬಿ ಆ ಬಳಿಕ ಇಂಟ್ರೆಸ್ಟ್ ತೋರಿಸ್ಲಿಲ್ಲ. ಕೊನೆಗೆ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನ ಸೇರ್ಕೊಂಡಿದ್ರು. ಹರಾಜಿಗೂ ಮುನ್ನವೇ ಡಿಸಿ ಟೀಂ ತಮ್ಮ ನಾಯಕ ರಿಷಭ್ ಪಂತ್​ರನ್ನ ರಿಲೀಸ್ ಮಾಡಿದ್ರಿಂದ ರಾಹುಲ್​ಗೇ ಡೆಲ್ಲಿ ಕ್ಯಾಪ್ಟನ್ಸಿ ಅಂತಾ ಎಲ್ರೂ ಅನ್ಕೊಳ್ತಿದ್ರು. ಬಟ್ ಈಗ ಲಾಜಿಕ್ ಚೇಂಜ್ ಆಗಿದೆ. ಕೆಎಲ್ ಬದಲಿಗೆ ಅಕ್ಷರ್ ಪಟೇಲ್ ಸದ್ದು ಮಾಡ್ತಿದ್ದಾರೆ.

ಇದನ್ನೂ ಓದಿ : CSK, MIನೇ ಹಿಂದಿಕ್ಕಿದ RCB – ಸೋಶಿಯಲ್ ಮೀಡಿಯಾದಲ್ಲಿ ನಾವೇ ನಂ.1

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮಾಲೀಕ ಯಾರಾಗ್ಬೇಕು ಅನ್ನೋ ಬಗ್ಗೆ ಮಾಲೀಕ ಪಾರ್ಥ್ ಜಿಂದಾಲ್ ಇತ್ತೀಚೆಗೆ ಮಾತನಾಡಿದ್ರು. ಬಟ್ ಎಲ್ಲೂ ಕೂಡ ಇಂಥವ್ರೇ ನಾಯಕ ಆಗ್ತಾರೆ ಅನ್ನೋದನ್ನ ಬಿಟ್ಟುಕೊಟ್ಟಿರಲಿಲ್ಲ. ಯಾಕಂದ್ರೆ ಡೆಲ್ಲಿಯಲ್ಲಿ ಮೂವರು ಹೆಸರು ರೇಸ್​​ನಲ್ಲಿದೆ. ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಅವರಿಗೆ ಬರೋಬ್ಬರಿ 14 ಕೋಟಿ ನೀಡಿ ಖರೀದಿ ಮಾಡಲಾಗಿದೆ. ಹಾಗೆಯೇ ರಾಯಲ್ಸ್ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕರಾಗಿದ್ದ ಅನುಭವಿ ಫಾಫ್ ಡುಪ್ಲೆಸಿಸ್​ರನ್ನೂ ತಂಡಕ್ಕೆ ಸೇರಿಸಿಕೊಂಡಿದೆ. ಆಲ್‌ರೌಂಡರ್ ಅಕ್ಸರ್ ಪಟೇಲ್ ಅವರನ್ನು 16.50 ಕೋಟಿಗೆ ರೀಟೈನ್​ ಮಾಡಿಕೊಂಡಿದೆ. ಈ ಮೂವರಲ್ಲಿ ಒಬ್ಬರಿಗೆ ಕ್ಯಾಪ್ಟನ್ಸಿ ಪಟ್ಟ ನೀಡುವ ಬಗ್ಗೆ ಮಾತಾಡಿದ್ದಾರೆ ಜಿಂದಾಲ್. ಬಟ್ ಇಲ್ಲಿ ಫಾಫ್​ಗೆ ನಾಯಕತ್ವ ಸಿಗೋದು ಡೌಟ್ ಇದೆ. 40+ ವಯಸ್ಸಾಗಿರೋದ್ರಿಂದ ನಾಯಕತ್ವ ನೀಡೋ ಸಾಧ್ಯತೆ ಕಡಿಮೆ ಇದೆ.

ಇನ್ನು ಕ್ಯಾಪ್ಟನ್ಸಿ ವಿಚಾರವಾಗಿ ಮಾತ್ನಾಡಿದ್ದ ಪಾರ್ಥ್ ಜಿಂದಾಲ್, ಅಕ್ಷರ್​ ಪಟೇಲ್ ಬಗ್ಗೆ ಒಲವು ತೋರಿಸಿದ್ರು. ಪಟೇಲ್ ಅವ್ರು​ ಹಿಂದಿನಿಂದಲೂ ತಂಡದಲ್ಲೇ ಇದ್ದಾರೆ. ಅವರೊಂದಿಗೆ ನನಗೆ ಉತ್ತಮ ಸಂಬಂಧ ಇದೆ. ತಂಡದ ಉಪನಾಯಕ ಆಗಿದ್ರು. ಹಾಗಾಗಿ ಅವರೇ ಕ್ಯಾಪ್ಟನ್​ ಆಗುತ್ತಾರೋ? ಅಥವಾ ಬೇರಯವರಿಗೆ ನಾಯಕತ್ವ ಸಿಗುತ್ತೋ ಗೊತ್ತಿಲ್ಲ. ಕೆ.ಎಲ್​ ರಾಹುಲ್​ ಅವರನ್ನು ನಾನು ಭೇಟಿ ಮಾಡಿದ್ದೇನೆ. ಅವರು ಹೇಗೆ ಯೋಚನೆ ಮಾಡುತ್ತಾರೆ ಎಂದು ನನಗೆ ಗೊತ್ತಿದೆ ಎಂದಿದ್ದರು. ಸದ್ಯ ಟೀಂ ಇಂಡಿಯಾದಲ್ಲಿ ಇಂಗ್ಲೆಂಡ್ ಸರಣಿಗೆ ಅಕ್ಷರ್ ಪಟೇಲ್ ಅವರನ್ನೇ ಉಪನಾಯಕನನ್ನಾಗಿ ಮಾಡಲಾಗಿದೆ. ಇದೂ ಕೂಡ ಅವ್ರಿಗೆ ಪ್ಲಸ್ ಆಗ್ಬೋದು.

ಭಾರತದ ಮಾಜಿ ವಿಕೆಟ್ ಕೀಪರ್-ಕಮ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಕೂಡ ಡೆಲ್ಲಿ ಕ್ಯಾಪಿಟಲ್ಸ್  ನಾಯಕನ ಬಗ್ಗೆ ಮಾತ್ನಾಡಿದ್ದಾರೆ. 2025 ರ ಐಪಿಎಲ್ ಸೀಸನ್​ನಲ್ಲಿ ಅಕ್ಷರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಆಗ್ತಾರೆ ಅಂತಾ ಭವಿಷ್ಯ ನುಡಿದಿದ್ದಾರೆ.  ಅಕ್ಷರ್ ಪಟೇಲ್​ಗೆ ಇದು ಒಳ್ಳೆಯ ಅವಕಾಶ. ಮತ್ತು ಮುಖ್ಯವಾಗಿ, ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯು ಅಕ್ಸರ್‌ಗೆ ನನ್ನ ತುಂಬ ಹೃದಯದ ಶುಭಾಶಯಗಳು ಎಂದಿದ್ದಾರೆ. ಅಕ್ಷರ್​ ಪಟೇಲ್ ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗುವುದು ಇನ್ನೂ ಕನ್ಫರ್ಮ್ ಆಗಿಲ್ಲವಾದ್ರೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ವೈಸ್ ಕ್ಯಾಪ್ಟನ್ ಆದ ಮೇಲೆ ಮತ್ತಷ್ಟು ಹೈಪ್ ಸಿಗ್ತಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಡಿಸಿ ತಂಡದ ಜೊತೆಗೆ ಹೆಚ್ಚು ಒಡೆನಾಟ ಇದೆ. 30 ವರ್ಷದ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಆಗಿರುವ ಅಕ್ಷರ್ 2019 ರಿಂದಲೂ ಡೆಲ್ಲಿ ಕ್ಯಾಪಿಟಲ್ಸ್‌ನ ಭಾಗವಾಗಿದ್ದಾರೆ. ಹೀಗಾಗಿ ತಂಡದೊಳಗಿನ ಪ್ಲಸ್ ಮತ್ತು ಮೈನಸ್ ಬಗ್ಗೆ ಜಾಸ್ತಿಗೇ ಗೊತ್ತಿದೆ.

ಇನ್ನು ಕೆಎಲ್ ರಾಹುಲ್ ಕೂಡ ಕ್ಯಾಪ್ಟನ್ ಆಗಿ ಟೀಂ ಇಂಡಿಯಾ ಹಾಗೇ ಐಪಿಎಲ್​ನಲ್ಲೂ ತಮ್ಮನ್ನ ತಾವು ಪ್ರೂವ್ ಮಾಡಿಕೊಂಡಿದ್ದಾರೆ. 2020 ರಿಂದ 24ವರೆಗೂ ನಾಯಕನಾಗಿಯೇ ಐಪಿಎಲ್​ನಲ್ಲಿ ಆಡಿದ್ದಾರೆ. ಹಾಗೇನಾದ್ರೂ ಅಕ್ಷರ್ ಪಟೇಲ್ ಅವರನ್ನು ದೆಹಲಿ ತಂಡದ ನಾಯಕನನ್ನಾಗಿ ನೇಮಿಸಿದರೆ, ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಜಿ ನಾಯಕ ಕೆ.ಎಲ್. ರಾಹುಲ್ 2020 ರ ಸೀಸನ್ ಬಳಿಕ  ಮೊದಲ ಬಾರಿಗೆ ಸಾಮಾನ್ಯ ಆಟಗಾರನಾಗಿ ಕಣಕ್ಕೆ ಇಳಿಯಲಿದ್ದಾರೆ. 2020 ಮತ್ತು 2021 ಋತುವಿನಲ್ಲಿ ಪಂಜಾಬ್ ಮತ್ತು 2022-24 ರಿಂದ ಲಕ್ನೋ ತಂಡದ ನಾಯಕತ್ವ ವಹಿಸಿದ್ದ ರಾಹುಲ್ ಇದೀಗ ಡಿಸಿ ಕ್ಯಾಪ್ಟನ್ಸಿ ನಿರೀಕ್ಷೆಯಲ್ಲಿದ್ದಾರೆ. ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಪರ 38 ಪಂದ್ಯಗಳನ್ನಾಡಿರೋ ರಾಹುಲ್ 10 ಅರ್ಧಶತಕ ಹಾಗೂ 2 ಶತಕಗಳೊಂದಿಗೆ ಒಟ್ಟು 1410 ರನ್ ಕಲೆಹಾಕಿದ್ದಾರೆ. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹೀಗೆ ಬ್ಯಾಟಿಂಗ್ ಮತ್ತು ವಿಕೆಟ್ ಕೀಪರ್ ಆಗಿ ಅದ್ಭುತ ಪ್ರದರ್ಶನವನ್ನೇ ನೀಡಿದ್ದಾರೆ.

Shantha Kumari

Leave a Reply

Your email address will not be published. Required fields are marked *