ರಾಹುಲ್ Vs ಪಂತ್ Vs ಸಂಜು – ಚಾಂಪಿಯನ್ಸ್ ಟ್ರೋಫಿಗೆ ಯಾರು ಬೆಸ್ಟ್ ವಿಕೆಟ್ ಕೀಪರ್?

ರಾಹುಲ್ Vs ಪಂತ್ Vs ಸಂಜು – ಚಾಂಪಿಯನ್ಸ್ ಟ್ರೋಫಿಗೆ ಯಾರು ಬೆಸ್ಟ್ ವಿಕೆಟ್ ಕೀಪರ್?

ಫೆಬ್ರವರಿ 19ರಿಂದ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆರಂಭವಾಗಲಿದ್ದು, ಪಾಕಿಸ್ತಾನ ಆತಿಥ್ಯವನ್ನ ವಹಿಸಿದೆ. ಬಟ್ ಭಾರತದ ಪಂದ್ಯಗಳೆಲ್ಲಾ ದುಬೈನಲ್ಲಿ ನಡೆಯಲಿವೆ. ಐಸಿಸಿ ಪಂದ್ಯಾವಳಿಗಳಲ್ಲಿ ಅದ್ಭುತ ದಾಖಲೆಯನ್ನ ಹೊಂದಿರುವಂಥ ಭಾರತ ವಿಶ್ವಕ್ರಿಕೆಟ್​ನಲ್ಲಿ ಪ್ರಬಲ ಶಕ್ತಿಯಾಗಿದೆ. ಹೀದ್ರೂ 2017 ರ ಚಾಂಪಿಯನ್ಸ್ ಟ್ರೋಫಿ ಮತ್ತು 2023 ರ ಏಕದಿನ ವಿಶ್ವಕಪ್‌ನಲ್ಲಿ ಆದ ಸೋಲು ಇನ್ನೂ ಭಾರತವನ್ನ ಕಾಡ್ತಿದೆ. ಈ ನೋವಿಂದ ಹೊರ  ಬರೋಕೆ ಚಾಂಪಿಯನ್ಸ್ ಟ್ರೋಫಿ ಟಾನಿಕ್ ಆಗೋದ್ರಲ್ಲಿ ಡೌಟೇ ಇಲ್ಲ. ಬಟ್ ಟೂರ್ನಿಯಲ್ಲಿ ಭಾರತ ಹೇಗೆ ಪರ್ಫಾಮ್ ಮಾಡುತ್ತೆ ಅನ್ನೋದು ಮ್ಯಾಟರ್ ಆಗುತ್ತೆ. ಹೀಗಾಗೇ ಬಿಸಿಸಿಐ ಅಳೆದು ತೂಗಿ ತಂಡವನ್ನ ಕಟ್ಟುತ್ತಿದೆ. ಈ ಪೈಕಿ ವಿಕೆಟ್ ಕೀಪರ್ ಸ್ಥಾನಕ್ಕೆ ಯಾರು ಸೆಲೆಕ್ಟ್ ಆಗ್ತಾರೆ ಅನ್ನೋದು ಹಾಟ್ ಟಾಪಿಕ್ ಆಗಿದೆ.

ಇದನ್ನೂ ಓದಿ : CSK, MIನೇ ಹಿಂದಿಕ್ಕಿದ RCB – ಸೋಶಿಯಲ್ ಮೀಡಿಯಾದಲ್ಲಿ ನಾವೇ ನಂ.1

ಸದ್ಯ ಟೀಂ ಇಂಡಿಯಾದಲ್ಲಿ ಚಾಂಪಿಯನ್ಸ್ ಟ್ರೋಫಿಗೆ ಈ ಮೂವರಲ್ಲಿ  ಒಬ್ಬರಿಗೆ ಚಾನ್ಸ್ ಸಿಗೋದು ಗ್ಯಾರಂಟಿ.  ಸಂಜು ಸ್ಯಾಮ್ಸನ್, ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಮೂವರೂ ಕೂಡ ವಿಶಿಷ್ಟ ಕೌಶಲ್ಯಗಳನ್ನು ಹೊಂದಿದ್ದು ತಂಡದ ಮೇಲೆ ಪರಿಣಾಮ ಬೀರುವಂಥ ಆಟಗಾರರಾಗಿದ್ದಾರೆ. ಬ್ಯಾಟ್ ಹಿಡಿದು ತಂಡಕ್ಕೆ ರನ್​ಗಳನ್ನ ಕಟ್ಟಿಕೊಡೋದ್ರ ಜೊತೆಗೆ ಸ್ಟಂಪ್​ಗಳ ಹಿಂದೆ ನಿಂತು ಚಾಣಾಕ್ಷ ತನದಿಂದ ಫೀಲ್ಡಿಂಗ್ ಕೂಡ ಮಾಡ್ಬೇಕಾಗುತ್ತೆ. ಪ್ರಸ್ತುತ ಟೀಂ ಇಂಡಿಯಾದ ಬೇರೆ ಬೇರೆ ಫಾರ್ಮೇಟ್​ಗಳಲ್ಲಿ ಈ ಮೂವರೂ ಕೂಡ ಸ್ಥಾನವನ್ನ ಪಡೆಯುತ್ತಿದ್ದು, ಆಯಾ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ವಿಕೆಟ್ ಕೀಪಿಂಗ್ ಅಂತಾ ಬಂದ್ರೆ ಮೂವರೂ ಕೂಡ ಗುಡ್ ಪ್ಲೇಯರ್ಸ್. ಒಬ್ಬೊಬ್ಬರದ್ದೂ ಒಂದೊಂದು ರೀತಿಯ ಪ್ಲಸ್ ಪಾಯಿಂಟ್ಸ್ ಇವೆ. ಕೆಎಲ್ ರಾಹುಲ್ ಅವರು ಏಕದಿನ ಕ್ರಿಕೆಟ್‌ನಲ್ಲಿ ಅದ್ರಲ್ಲೂ ವಿಶೇಷವಾಗಿ ಮಧ್ಯಮ ಕ್ರಮಾಂಕದಲ್ಲಿ ಇನ್ನಿಂಗ್ಸ್ ಆಡಬಲ್ಲರು. 2023 ರ ವಿಶ್ವಕಪ್‌ನಂತಹ ಹೆಚ್ಚಿನ ಒತ್ತಡದ ಪಂದ್ಯಗಳಲ್ಲಿನ ಅವರ ಅನುಭವ ಮತ್ತು ಪ್ರದರ್ಶನವು ರಾಹುಲ್ ಸಾಮರ್ಥ್ಯಕ್ಕೆ ಕನ್ನಡಿ ಹಿಡಿದಂತಿದೆ. ಇನ್ನು ರಿಷಭ್ ಪಂತ್ ಕೂಡ ತಮ್ಮ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಈ ಎಡಗೈ ಬ್ಯಾಟ್ಸ್​ಮನ್ ಬೆಸ್ಟ್ ಆಯ್ಕೆಯಾಗಿದ್ದಾರೆ. 2024 ರ ಟಿ 20 ವಿಶ್ವಕಪ್ ಸಮಯದಲ್ಲಿ ಇದನ್ನ ಪ್ರೂವ್ ಮಾಡಿದ್ದಾರೆ. ಮತ್ತೊಂದೆಡೆ ಸಂಜು ಸ್ಯಾಮ್ಸನ್ ಕೂಡ ಅದ್ಭುತ ಪ್ರದರ್ಶನವನ್ನು ತೋರಿಸಿದ್ದಾರೆ. ದೊಡ್ಡ ಹಿಟ್‌ಗಳೊಂದಿಗೆ ಆಟದ ದಿಕ್ಕನ್ನೇ ಬದಲಿಸೋ ತಾಕತ್ತು ಹೊಂದಿದ್ದಾರೆ.

ಕೆಎಲ್ ರಾಹುಲ್ ODI ಸಾಧನೆ!

ಪಂದ್ಯಗಳು : 77

ರನ್ ಗಳು: 2,851

ಸರಾಸರಿ : 49.15

ಸ್ಟ್ರೈಕ್ ರೇಟ್: 87.56

18 ಬಾರಿ 50, 7 ಸೆಂಚುರಿ

ರಿಷಭ್ ಪಂತ್ ODI ಸಾಧನೆ!

ಪಂದ್ಯಗಳು: 31

ರನ್ ಗಳು: 871

ಸರಾಸರಿ : 33.50

ಸ್ಟ್ರೈಕ್ ರೇಟ್: 106.21

5 ಬಾರಿ 50.. 1 ಶತಕ

ಸಂಜು ಸ್ಯಾಮ್ಸನ್ ODI ಸಾಧನೆ!

ಪಂದ್ಯಗಳು : 16

ರನ್ ಗಳು : 510

ಸರಾಸರಿ : 56.66

ಸ್ಟ್ರೈಕ್ ರೇಟ್ : 99.60

3 ಬಾರಿ 50, 1 ಸೆಂಚುರಿ

ಸಂಜು ಸ್ಯಾಮ್ಸನ್ ಅವ್ರು ಇತ್ತೀಚೆಗೆ T20I ಪ್ರದರ್ಶನಗಳು ಜಾಸ್ತಿ ಇವೆ. 16 ಏಕದಿನ ಪಂದ್ಯಗಳನ್ನ ಆಡಿ  ಭರವಸೆ ನೀಡಿದ್ದರೂ, ಅವರ ಇಂಪ್ಯಾಕ್ಟ್ ಹೇಗೆ ಪ್ಲಸ್ ಆಗುತ್ತೆ ಅನ್ನೋದನ್ನ ನೋಡ್ಬೇಕಾಗುತ್ತೆ. ಆದ್ರೂ ಮೂವರು ಬ್ಯಾಟ್ಸ್‌ಮನ್‌ಗಳಲ್ಲಿ, ಸ್ಯಾಮ್ಸನ್ ODIಗಳಲ್ಲಿ ಅತ್ಯುತ್ತಮ ಸರಾಸರಿಯನ್ನು ಹೊಂದಿದ್ದಾರೆ.

Shantha Kumari

Leave a Reply

Your email address will not be published. Required fields are marked *