CSK, MIನೇ ಹಿಂದಿಕ್ಕಿದ RCB – ಸೋಶಿಯಲ್ ಮೀಡಿಯಾದಲ್ಲಿ ನಾವೇ ನಂ.1

CSK, MIನೇ ಹಿಂದಿಕ್ಕಿದ RCB – ಸೋಶಿಯಲ್ ಮೀಡಿಯಾದಲ್ಲಿ ನಾವೇ ನಂ.1

ಆರ್‌ಸಿಬಿ ಅಂದ್ರೆ ಬರೀ ಒಂದು ತಂಡ ಅಲ್ಲ. ಇದು ಕನ್ನಡಿಗರ ಭಾವನೆ. ಅಭಿಮಾನಿಗಳ ಶಕ್ತಿ. ಆರ್‌ಸಿಬಿ ಈಗ  ಬ್ರ್ಯಾಂಡ್ ಆಗಿ ಬೆಳೆದಿದೆ. ದಿನದಿಂದ ದಿನಕ್ಕೆ ಆರ್‌ಸಿಬಿ ವ್ಯಾಲ್ಯೂ ಬೆಳೆಯುತ್ತಲೆ ಸಾಗುತ್ತಿದೆ. ಹಾಗೆ ಈ ತಂಡದ ಫಾಲೋವರ್ಸ್ ಕೂಡ ಹೆಚ್ಚುತಲೇ ಇದ್ದಾರೆ. ಆರ್‌ಸಿಬಿ ವಿಶ್ವದಲ್ಲೇ ಅತ್ಯಂತ ಹೆಚ್ಚು ಜನಪ್ರೀಯ ಕ್ರಿಕೆಟ್ ತಂಡ. ಕಳೆದ 17 ಆವೃತ್ತಿಗಳಲ್ಲಿ ಒಮ್ಮೆಯೂ ಪ್ರಶಸ್ತಿ ಗೆಲ್ಲದೆ ಇರಬಹುದು. ಆದರೂ ಈ ತಂಡದ ಮೇಲೆ ಜನರ ಪ್ರೀತಿ ಕಿಂಚಿತ್ತೂ ಕಮ್ಮಿ ಆಗಿಲ್ಲ. ಆರ್‌ಸಿಬಿ ಮ್ಯಾನೇಜ್ಮೆಂಟ್ ಸಹ ಫ್ಯಾನ್ಸ್‌ ಜೊತೆಗೆ ಆಗಾಗ್ಗೆ ಸಾಮಾಜಿಕ ತಾಣದಲ್ಲಿ ಎಂಗೇಜ್ ಆಗಿರುತ್ತದೆ. ಸಾಮಾಜಿಕ ತಾಣಗಳಾದ ಇನ್‌ಸ್ಟಾಗ್ರಾಮ್‌, ಟ್ವೀಟರ್, ಯುಟ್ಯೂಬ್, ಫೇಸ್‌ಬುಕ್‌ಗಳಲ್ಲಿ ಒಟ್ಟು 2 ಬಿಲಿಯನ್‌ ಎಂಗೇಜ್ಮೆಂಟ್‌ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅತ್ಯಂತ ಜನಪ್ರಿಯ ತಂಡವಾಗಿ ಹೊರ ಹೊಮ್ಮಿದೆ.

ಇದನ್ನೂ ಓದಿ : ಭಾರತ ಗಡಿಯಲ್ಲಿ ಡ್ರ್ಯಾಗನ್ ಸ್ಕೆಚ್! – ರೋಬೋಟ್ ಡಾಗ್ ಬಳಸಿದ್ದೇಕೆ ಚೀನಾ?

ಸಾಮಾಜಿಕ ಜಾಲತಾಣಗಳಲ್ಲಿ ಆರ್‌ಸಿಬಿಯ ಈ ಎಂಗೇಜ್ಮೆಂಟ್‌, ಡಿಜಿಟಲ್ ಫ್ಲಾಟ್‌ಫಾರ್ಮ್‌ನಲ್ಲಿ ತಂಡ ಬೆಳೆಯುತ್ತಿರುವ ರೀತಿಗೆ ಎಕ್ಸಾಂಪಲ್ಸ್ ಆಗಿದೆ. ಸೋಶಿಯಲ್ ಪ್ಲಾಟ್ ಫಾರ್ಮ್​ನಲ್ಲಿ 5 ಮಿಲಿಯನ್ ಫಾಲೋಅರ್ಸ್ ಮಾರ್ಕ್‌ ರೀಚ್ ಆಗಿದೆ. ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇದು ಅತ್ಯಂತ ವೇಗವಾಗಿ ಬೆಳೆಯುತ್ತಿರವ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ಪರಿಣಾಮವೇ ಆರ್‌ಸಿಬಿ ಸಾಮಾಜಿಕ ತಾಣದಲ್ಲಿ ತನ್ನ ಬಿಗಿ ಹಿಡಿತವನ್ನು ಸತತ ಐದನೇ ವರ್ಷವೂ ಮುಂದುವರೆಸಿದೆ. ಆರ್‌ಸಿಬಿ ಹವಾ ಬರೀ ಭಾರತದಲ್ಲಿ ಅಷ್ಟೇ ಅಲ್ಲಾ ವಿದೇಶದಲ್ಲೂ ಅಭಿಮಾನಿಗಳನ್ನು ಹೊಂದಿದೆ. ಹೀಗಾಗಿ ಸಾಗರೋತ್ತರ ದೇಶಗಳಲ್ಲೂ ಆರ್‌ಸಿಬಿ ಕ್ರೇಜ್ ಹೆಚ್ಚಾಗಿದೆ. ವಿಶ್ವ ಮಟ್ಟದಲ್ಲಿ ಆರ್‌ಸಿಬಿ ತಂಡ ತನ್ನ ಸ್ಥಾನವನ್ನು ಬಲ ಪಡಿಸಿಕೊಂಡಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಆರ್ ಸಿಬಿ ತಂಡ ವಿಶ್ವದ ಟಾಪ್‌ 5 ಜನಪ್ರೀಯ ತಂಡಗಳಲ್ಲಿ ಸ್ಥಾನ ಪಡೆದಿದೆ. ಮ್ಯಾಂಚೆಸ್ಟರ್ ಯುನೈಟೆಡ್, ಲಿವರ್‌ಪೂಲ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸೇರಿದಂತೆ ಹಲವು ತಂಡಗಳ ಜನಪ್ರೀಯತೆಗಿಂತ, ಆರ್‌ಸಿಬಿ ಜನಪ್ರೀಯತೆಯೇ ಹೆಚ್ಚಿದೆ.

ಇನ್ನು ಆರ್‌ಸಿಬಿ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಹವಾ ಕ್ರಿಯೇಟ್ ಮಾಡಿಲ್ಲ. ಬದಲಿಗೆ ತನ್ನ ವಾಟ್ಸಾಪ್ ಪ್ರಸಾರ ಚಾನೆಲ್‌ನಲ್ಲೂ ಭರ್ತಿ 7.5 ಮಿಲಿಯನ್ ಫಾಲೋಅರ್ಸ್‌ ಹೊಂದಿದೆ. ಈ ಮೂಲಕ ವಾಟ್ಸ್‌ಅಪ್‌ನಲ್ಲಿ ಅತಿ ಹೆಚ್ಚು ಹಿಂಬಾಲಿಸುವ ಐಪಿಎಲ್ ತಂಡವಾಗಿದೆ. ಈ ಬಗ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ರಾಜೇಶ್ ಮೆನನ್ ಸಂತಸ ವ್ಯಕ್ತಪಡಿಸಿದ್ದಾರೆ. ಇದೆಲ್ಲ ಕ್ರೆಡಿಟ್ ನಮ್ಮ 12 ನೇ ಮ್ಯಾನ್ ಆರ್ಮಿಗೆ ಸೇರುತ್ತದೆ. ಅಭಿಮಾನಿಗಳ ಪ್ರೀತಿ ಹಾಗೂ ವಿಶ್ವಾಸ ಪ್ರತಿಯೊಂದು ಪಂದ್ಯದಲ್ಲೂ ಎದ್ದು ಕಾಣುತ್ತದೆ. ಮುಂದಿನ ದಿನಗಳಲ್ಲೂ ನಾವು ನಮ್ಮ ಉತ್ತಮವಾದನ್ನು ನೀಡುತ್ತೇವೆ ಎಂದಿದ್ದಾರೆ. ಒಟ್ನಲ್ಲಿ ಆರ್​ಸಿಬಿ ಫ್ಯಾನ್ ಫಾಲೋವರ್ಸ್ ಮತ್ತು ಬ್ರ್ಯಾಂಡ್ ವ್ಯಾಲ್ಯೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.

Shantha Kumari

Leave a Reply

Your email address will not be published. Required fields are marked *