ಸ*ತ್ತ ದೇಹವೇ ಅಘೋರಿಗಳಿಗೆ ಶ್ರೇಷ್ಠ – ಸ್ಮಾಶನದಲ್ಲಿ ಹೆ*ಣ ತಿನ್ನೋದು ನಿಜನಾ?
ಶಿವ..ಶಿವ.. ವಿಸ್ಮಯ ಲೋಕದ ವಿಚಿತ್ರ ಸತ್ಯ!

ಸ*ತ್ತ ದೇಹವೇ ಅಘೋರಿಗಳಿಗೆ ಶ್ರೇಷ್ಠ – ಸ್ಮಾಶನದಲ್ಲಿ ಹೆ*ಣ ತಿನ್ನೋದು ನಿಜನಾ?ಶಿವ..ಶಿವ.. ವಿಸ್ಮಯ ಲೋಕದ ವಿಚಿತ್ರ ಸತ್ಯ!

ಅಘೋರಿಗಳ ವಿಚಾರದಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ. ಅವರನ್ನು ಕಂಡರೆ ಅನಾವಶ್ಯಕ ಭಯಗಳು ಕೂಡ ಇವೆ. ಆದ್ರೆ ಅಘೋರಿಗಳು ನಮ್ಮ ಕಲ್ಪನೆ ಹಾಗೂ ಭಯದ ಆಚೆ ಒಂದು ವಿಚಿತ್ರ ವಿಸ್ಮಯವಾದ ಬದುಕನ್ನು ಬದುಕುತ್ತಾರೆ. ಸಾಮಾನ್ಯ ನಂಬಿಕೆಯ ಪ್ರಕಾರ, ಜನರು ಈ ಅಘೋರಿ ಸಾಧುಗಳನ್ನು ತಾಂತ್ರಿಕರೆಂದು ಪರಿಗಣಿಸುತ್ತಾರೆ ಮತ್ತು ಅನೇಕ ಬಾರಿ, ಅವರ ಹತ್ತಿರ ಬರಲು ಅವರು ಹೆದರುತ್ತಾರೆ. ಅಘೋರಿ ಬಾಬಾಗಳ ಬಗ್ಗೆ ಜನರಲ್ಲಿ ಅನೇಕ ಕಲ್ಪನೆಗಳು ಇರುವುದರಿಂದ ನಾನಾ ಅವರ ನಿಗೂಢ ಪ್ರಪಂಚದ ಬಗ್ಗೆ  ನೋಡೋಣ..

ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯರು ಮಿಸ್ಸಿಂಗ್!- 20 ಸಾವಿರ ಸ್ಟೂಡೆಂಟ್ಸ್ ಹೋಗಿದ್ದು ಎಲ್ಲಿಗೆ?

ಮೊದಲಿಗೆ ಅಘೋರಿ ಎಂಬ ಪದ ಎಲ್ಲಿಂದ ಬಂತು ಎಂದು ಅನೇಕರಿಗೆ ಕುತೂಹಲವಿದೆ. ಅಘೋರಿ ಎಂಬ ಪದವು ವಾಸ್ತವವಾಗಿ ಸಂಸ್ಕೃತ ಪದ ಅಘೋರ್ ನಿಂದ ಬಂದಿದೆ, ಇದರರ್ಥ ನಿರ್ಭೀತನಾದವನು. ಅಘೋರಿಗಳನ್ನು ಶಿವನ ಆರಾಧಕರು ಎಂದು ಪರಿಗಣಿಸಲಾಗುತ್ತದೆ ಮತ್ತು ಮುಖ್ಯವಾಗಿ ಕಾಪಾಲಿಕ ಸಂಪ್ರದಾಯದ ಅನುಯಾಯಿಗಳು. ಅದಕ್ಕಾಗಿಯೇ ಅವರು ಯಾವಾಗಲೂ ಮಾನವ ತಲೆಬುರುಡೆಯನ್ನು ಹೊಂದಿರುತ್ತಾರೆ. ಶಿವನ ಹೊರತಾಗಿ, ಅಘೋರಿ ಸಾಧುಗಳನ್ನು ಶಕ್ತಿಯ ರೂಪವಾದ ಕಾಳಿಯ ಆರಾಧಕರೆಂದು ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿ ದೇಹದ ತುಂಬಾ ಬೂದಿಯನ್ನು ಹಚ್ಚಿಕೊಳ್ಳುತ್ತಾರೆ. ರುದ್ರಾಕ್ಷಿ ಮಣಿಗಳು ಮತ್ತು ಮಾನವ ತಲೆಬುರುಡೆ ಸಹ ಅವರ ಉಡುಪಿನ ಭಾಗವಾಗಿದೆ.

ಕುಂಭಮೇಳದಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಾತ್ರ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ. ಅಘೋರಿಗಳು ಸ್ಮಶಾನಗಳಲ್ಲಿ ಅಥವಾ ಜನರು ಹೋಗಲು ಸಾಧ್ಯವಾಗದ ಕೆಲವು ನಿರ್ಜನ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಏಕೆಂದರೆ ಅಂತಹ ಸ್ಥಳವು ಅವರ ಸಾಧನೆಗೆ ಅತ್ಯಂತ ಸೂಕ್ತವೆಂದು ಪರಿಗಣಿಸಲಾಗಿದೆ. ಅಘೋರಿ ಪಂಥವು 18 ನೇ ಶತಮಾನದಲ್ಲಿ ವಾಸಿಸುತ್ತಿದ್ದ ಬಾಬಾ ಕಿನಾರಾಮ್ ಅವರನ್ನು ಅನುಸರಿಸುತ್ತದೆ. ಅವರ ಕೃತಿಗಳನ್ನು ತಮ್ಮ ಸಂಪ್ರದಾಯದ ಭಾಗವೆಂದು ಪರಿಗಣಿಸುತ್ತದೆ. ಅಘೋರಿಗಳು ಮೊದಲು ಕಾಶಿಯಲ್ಲಿ ಹುಟ್ಟಿಕೊಂಡರು ಮತ್ತು ಅಂದಿನಿಂದ ಅವರು ದೇಶಾದ್ಯಂತ ಹರಡಿದ್ದಾರೆ.

ಅಘೋರಿ ಸಾಧುಗಳು, ಮೃತ ದೇಹಗಳನ್ನು ಪೂಜೆ ಮಾಡ್ತಾರೆ. ಜೊತೆಗೆ ದೈಹಿಕ ಸಂಬಂಧ ಬೆಳೆಸ್ತಾರಂತೆ. ಶಿವ ಮತ್ತು ಶಕ್ತಿಯನ್ನು ಪೂಜಿಸುವ ವಿಧಾನವೆಂದು ಅವರು ನಂಬುತ್ತಾರೆ. ಮೃತದೇಹದೊಂದಿಗೆ ದೈಹಿಕ ಚಟುವಟಿಕೆಯನ್ನು ಮಾಡುವಾಗ ಮನಸ್ಸು ದೇವರ ಭಕ್ತಿಯಲ್ಲಿ ಲೀನವಾಗಿರುತ್ತದೆ ಎಂಬುದು ಅವರ ನಂಬಿಕೆ. ಮೃತ ದೇಹಕ್ಕೆ ಬೂದಿ ಬಳಿದ ಮಂತ್ರಗಳನ್ನು ಉಚ್ಚರಿಸ್ತಾ, ಡ್ರಮ್ ಬಾರಿಸುವ ಮೂಲಕ ದೈಹಿಕ ಸಂಬಂಧವನ್ನು ಸೃಷ್ಟಿಸುತ್ತಾರೆ. ಅಘೋರಿಗಳು ಇತರ ಸಾಧುಗಳಂತೆ ಬ್ರಹ್ಮಚರ್ಯವನ್ನು ಪಾಲಿಸುವುದಿಲ್ಲ. ಅವರು ಶವದ ಜೊತೆ ಮಾತ್ರವಲ್ಲ ಜೀವಂತ ವ್ಯಕ್ತಿ ಜೊತೆ ದೈಹಿಕ ಸಂಬಂಧ ಬೆಳೆಸುತ್ತಾರೆ.

ಶಿವ – ಮೃತದೇಹದ ಆರಾಧಕರು  

ಅಘೋರಿಗಳು ಸಂಪೂರ್ಣವಾಗಿ ಶಿವನ ಭಕ್ತಿಯಲ್ಲಿ ಲೀನವಾಗಲು ಬಯಸ್ತಾರೆ. ಅಘೋರವು ಶಿವನ ಐದು ರೂಪಗಳಲ್ಲಿ ಒಂದಾಗಿದೆ. ಶಿವನನ್ನು ಪೂಜಿಸಲು ಈ ಅಘೋರಿಗಳು ಮೃತದೇಹದ ಮೇಲೆ ಕುಳಿತು ಧ್ಯಾನ ಮಾಡುತ್ತಾರೆ. ಶಿವನ ಕೃಪೆಗೆ ಪಾತ್ರರಾಗಲು ಈ ವಿಧಾನವು ಅಘೋರ ಪಂಥದ ವಿಶಿಷ್ಟ ವಿಧಾನವಾಗಿದೆ. ಅಘೋರಿಗಳು ಶವ ಸಾಧನ ಎಂಬ ಮೂರು ವಿಧದ ಸಾಧನಗಳನ್ನು ಮಾಡುತ್ತಾರೆ. ಇದರಲ್ಲಿ ಮೃತ ದೇಹಕ್ಕೆ ಮಾಂಸ ಮತ್ತು ಮದ್ಯವನ್ನು ಅರ್ಪಿಸಲಾಗುತ್ತದೆ. ಮೂರನೇಯದು, ಶವದ ಮೇಲೆ ಒಂದು ಕಾಲನ್ನಿಟ್ಟು ತಪಸ್ಸು ಮಾಡುವುದು. ಇದು ಸ್ಮಶಾನದಲ್ಲಿ ನಡೆಯುತ್ತದೆ. ಈ ವೇಳೆ ಹವನ ಮಾಡಲಾಗುತ್ತದೆ.

ಸಾಮಾನ್ಯ ಜನರಿಗೆ ಅಘೋರಿಗಳು ಮಾಡುವಂತಹ ಕೆಲಸಗಳು ಅಸಹ್ಯಕರ ಸಂಗತಿಗಳಾಗಿವೆ. ಆದ್ರೆ ಅಘೋರಿಗಳಿಗೆ ಇದು ಆಧ್ಯಾತ್ಮಿಕ ಅಭ್ಯಾಸದ ಒಂದು ಭಾಗವಾಗಿದೆ. ಮೃತ ದೇಹದಿಂದ ಎಣ್ಣೆಯನ್ನು ತೆಗೆಯುವ ಅಘೋರಿಗಳು ಅದನ್ನು ಖಾಯಿಲೆಗೆ ಬಳಸುತ್ತಾರೆ.  ಆದ್ರೆ ಈ ಬಗ್ಗೆ ಯಾವುದೇ ಸಂಶೋಧನೆಯಾಗಿಲ್ಲ.

ಅಘೋರಿಗಳು ಶಿವನನ್ನು ಬಿಟ್ಟು ಮತ್ತ್ಯಾವ ದೇವರ ಮೇಲೂ ನಂಬಿಕೆ ಹೊಂದಿಲ್ಲ. ಅವರು ಯಾರೊಬ್ಬರನ್ನು ಕೂಡ ದ್ವೇಷ ಮಾಡೋದಿಲ್ಲ. ಅಘೋರಿಗಳು ನಾಯಿಗಳನ್ನು ಬಿಟ್ಟು ಹಸು, ಕೋಳಿ ಸೇರಿದಂತೆ ಮತ್ತ್ಯಾವ ಪ್ರಾಣಿಯನ್ನು ಸಾಕುವುದಿಲ್ಲ. ಅಘೋರಿಗಳಿಗಾಗಿಯೇ ಕೆಲ ದೇವಸ್ಥಾನಗಳಿದ್ದು, ಅವರು ಅಲ್ಲಿ ವಾಸ ಮಾಡುತ್ತಾರೆ. ಕಾಶಿಯಲ್ಲಿ ಮೊದಲು ಹೆಚ್ಚಾಗಿ ಕಾಣಿಸಿಕೊಳ್ತಿದ್ದ ಈ ಅಘೋರಿಗಳು ಈಗ ದೇಶದ ಮೂಲೆ ಮೂಲೆಯಲ್ಲಿದ್ದಾರೆ. ನೇಪಾಳದ ಅಘೋರಿ ಕುಟಿ, ಕಾಳಿ ಮಠ, ಚಿತ್ರಕೂಟ ಸೇರಿದಂತೆ ಅನೇಕ ದೇವಸ್ಥಾನಗಳು ಅವರಿಗೆ ಮೀಸಲಾಗಿವೆ.

ಇಷ್ಟೇ ಅಲ್ಲ, ಅನೇಕ ಬಾರಿ ಅವರು ಸತ್ತವರೊಂದಿಗೆ ರಾತ್ರಿ ಕಳೆಯಲು ಮತ್ತು ಚಿತೆಯಲ್ಲಿ ಬೇಯುತ್ತಿರುವ ಮಾಂಸವನ್ನು ತಿನ್ನಲು ಹಿಂಜರಿಯುವುದಿಲ್ಲ. ಅವರು ಚಿತೆಯಿಂದ ಅರ್ಧ ಸುಟ್ಟ ಶವವನ್ನು ತೆಗೆದು ಆ ಮಾಂಸವನ್ನು ತಿನ್ನುವುದನ್ನು ತಮ್ಮ ಸಂಪ್ರದಾಯದ ಭಾಗವೆಂದು ಪರಿಗಣಿಸುತ್ತಾರೆ. ಹೀಗೆ ಮಾಡುವುದರಿಂದ ಅವರಿಗೆ ಭಯ ಅಥವಾ ಅಸಹ್ಯ ಅನಿಸದಿದ್ದರೆ, ಅವರು ತಮ್ಮ ಸಾಧನೆಯಲ್ಲಿ ದೃಢರಾಗುತ್ತಿದ್ದಾರೆಂದು ನಂಬಲಾಗಿದೆ. ಸಾಮಾನ್ಯ ಮನುಷ್ಯನು ರಾತ್ರಿ ಸ್ಮಶಾನಕ್ಕೆ ಹೋಗಲು ಸಾಧ್ಯವಿಲ್ಲ, ಆದರೆ ಅಘೋರಿಗಳು ಅಲ್ಲಿ ಹಲವು ದಿನಗಳವರೆಗೆ ಇರುತ್ತಾರೆ.  ಅವರು ತಂತ್ರವನ್ನು ಅಭ್ಯಾಸ ಮಾಡುತ್ತಾರೆ ಮತ್ತು ಮಂತ್ರಗಳನ್ನು ಸಹ ಪಠಿಸುತ್ತಾರೆ. ಆದರೆ ಇತರರಿಗಾಗಿ ಅಲ್ಲ. ಅವರ ತಮ್ಮ ಈ ಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ.

ಅಘೋರಿಗಳ ಜೀವನ ನಿಗೂಢವಾಗಿದೆ. ಜನರಿಗೆ ಅವರ ಬಗ್ಗೆ ಹೆಚ್ಚು ತಿಳಿದಿಲ್ಲ. ಜನರ ಮನಸ್ಸಿನಲ್ಲಿ ಅವರ ಬಗ್ಗೆ ಒಂದು ರೀತಿಯ ಭಯವಿರುತ್ತದೆ ಆದರೆ ಅಘೋರಿಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಮಾತ್ರ ಆ ಭಯವನ್ನು ಹೋಗಲಾಡಿಸಬಹುದು. ನೀವು ನಿಮ್ಮ ಕೆಲಸವನ್ನು ಮಾಡಿ ಮತ್ತು ನಮ್ಮ ಮೋಕ್ಷದ ಮಾರ್ಗವನ್ನು ಅನುಸರಿಸಲು ಬಿಡಿ ಎಂಬುದು ಅಘೋರಿಗಳ ಜೀವನದ ಮಂತ್ರ. ಅವರು ಕೂಡ ನಮ್ಮಂತೆಯೇ ಸಾಮಾನ್ಯ ಮನುಷ್ಯರು ಆದರೆ ಅವರ ಜೀವನದ ಗುರಿ ನಮ್ಮದಕ್ಕಿಂತ ಭಿನ್ನವಾಗಿದೆ ಅಷ್ಟೇ. ಈ ಮಾಹಿತಿ ಇಷ್ಟ ಆಗಿದ್ರೆ, ನಿಮ್ಮ ಅನಿಸಿಕೆಯನ್ನ ಕಮೆಂಟ್ ಮಾಡಿ ಲೈಕ್ ಮಾಡಿ. ನಮಸ್ಕಾರ..

Kishor KV

Leave a Reply

Your email address will not be published. Required fields are marked *