ಫಿಫಾ ವಿಶ್ವಕಪ್‌ಗೆ ರಕ್ತದೊಕುಳಿ!- 30 ಲಕ್ಷ ನಾಯಿ ಕೊಲ್ಲೋಕೆ ಪ್ಲ್ಯಾನ್
ಫುಟ್ ಬಾಲ್ ಆಟಕ್ಕೆ ನೆತ್ತರು ಬೇಕಾ
ಫಿಫಾ ವಿಶ್ವಕಪ್ ಅನ್ನು ಆಯೋಜಿಸಲು ಮೊರಾಕೊ ಸಿದ್ಧವಾಗುತ್ತಿದ್ದಂತೆ ಸುಮಾರು 3 ಮಿಲಿಯನ್ ನಾಯಿಗಳನ್ನು ಕೊಲ್ಲಲು ನಿರ್ಧರಿಸಲಾಗಿದೆ ಎಂಬ ವರದಿಗಳು ಜಗತ್ತಿನಾದ್ಯಂತ ಟೀಕೆಗೆ ಕಾರಣವಾಗಿದೆ. ಬೀದಿ ನಾಯಿಗಳಿಗೆ ಸ್ಟ್ರೈಕ್ನೈನ್ ಅನ್ನು ಚುಚ್ಚುಮದ್ದಿನ ಮೂಲಕ ಕೊಲ್ಲಲಾಗುತ್ತಿದೆ ಎಂದು ವರದಿಗಳು ಹೇಳುತ್ತವೆ. ಇದು ಅತ್ಯಂತ ವಿಷಕಾರಿ ರಾಸಾಯನಿಕವಾಗಿದೆ.
ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯರು ಮಿಸ್ಸಿಂಗ್!- 20 ಸಾವಿರ ಸ್ಟೂಡೆಂಟ್ಸ್ ಹೋಗಿದ್ದು ಎಲ್ಲಿಗೆ?
2030ರ ಫಿಫಾ ವಿಶ್ವಕಪ್‌ಗೆ ಮುಂಚಿತವಾಗಿ 30 ಲಕ್ಷ ಬೀದಿನಾಯಿಗಳನ್ನು ಕೊಲ್ಲಲು ಮೊರಾಕೊ ಪ್ಲಾನ್ ಮಾಡುತ್ತಿದೆ ಎಂದು ವರದಿಗಳು ಸೂಚಿಸುತ್ತವೆ. ಮೊರಾಕೊ, ಸ್ಪೇನ್ ಮತ್ತು ಪೋರ್ಚುಗಲ್ ಎಂಬ 3 ದೇಶಗಳಲ್ಲಿ ನಡೆಯಲಿರುವ ಮುಂದಿನ ಫುಟ್ಬಾಲ್ ವಿಶ್ವಕಪ್‌ಗಾಗಿ ಮೊರಾಕೊದ ನಗರಗಳಿಗೆ ಭೇಟಿ ನೀಡುವ ಫುಟ್‌ಬಾಲ್ ಅಭಿಮಾನಿಗಳಿಗೆ ಮೊರಾಕೊ ನಗರ ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡಲು ನಾಯಿಗಳ ಹತ್ಯೆಯ ಮೂಲಕ ಬೀದಿನಾಯಿ ಮುಕ್ತ ರಸ್ತೆಗಳನ್ನು ಸಿದ್ಧಪಡಿಸುವ ಕಾರ್ಯಕ್ಕೆ ಮೊರಾಕೊ ನಿರ್ಧರಿಸಿದೆ. ಈ ಕಾರ್ಯ ಜಾಗತಿಕವಾಗಿ ಆಕ್ರೋಶವನ್ನು ಹುಟ್ಟುಹಾಕಿವೆ. ಏಕೆಂದರೆ, ಈ ವರದಿಗಳು ‘ಕ್ರೂರ’ ಮತ್ತು ‘ಆಘಾತಕಾರಿ’ ಎಂದು ಟೀಕೆಗೆ ಒಳಗಾಗಿವೆ. ಕೆಲವು ವರದಿಗಳು ಉತ್ತರ ಆಫ್ರಿಕಾದ ರಾಷ್ಟ್ರವು ನಾಯಿಗಳನ್ನು ಕೊಲ್ಲುವ ಮೂಲಕ ಬೀದಿಗಳನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿದೆ ಎಂದು ಹೇಳುತ್ತವೆ. ಈಗಾಗಲೇ ದೇಶದ ಹಲವಾರು ಸ್ಥಳಗಳಲ್ಲಿ ನಾಯಿಗಳನ್ನು ಕೊಲ್ಲಲಾಗುತ್ತಿದೆ.
ಡೈಲಿ ಮೇಲ್ ವರದಿಯ ಪ್ರಕಾರ, ಪ್ರಸಿದ್ಧ ಪ್ರಾಣಿ ಹಕ್ಕುಗಳ ಪ್ರಚಾರಕಿ ಜೇನ್ ಗುಡಾಲ್, ಅಂತಾರಾಷ್ಟ್ರೀಯ ಫುಟ್ಬಾಲ್ ಅಸೋಸಿಯೇಷನ್ ಜೊತೆ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಫುಟ್ಬಾಲ್ ಅಸೋಸಿಯೇಷನ್ ಈ ಬೆಳವಣಿಗೆಯ ಬಗ್ಗೆ ಕಣ್ಣು ಮುಚ್ಚಿಕೊಂಡಿದೆ ಎಂದು ಆರೋಪಿಸಿದ್ದಾರೆ ಮತ್ತು ತಕ್ಷಣದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
FIFA ವಿಶ್ವಕಪ್ ಪ್ರತಿ 4 ವರ್ಷಗಳಿಗೊಮ್ಮೆ ಬರುತ್ತದೆ. ಈ ಪಂದ್ಯವನ್ನು ವೀಕ್ಷಿಸಲು ಜಗತ್ತಿನಾದ್ಯಂತ ಪ್ರೇಕ್ಷಕರು ಬರುತ್ತಾರೆ. ಇದು ಪ್ರಪಂಚದಾದ್ಯಂತದ ಶತಕೋಟಿ ಅಭಿಮಾನಿಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಭಾರೀ ಗಮನವನ್ನು ಸೆಳೆಯುತ್ತದೆ. ಹೀಗಾಗಿ, ದೇಶಗಳು ಆತಿಥೇಯ ಹಕ್ಕುಗಳನ್ನು ಪಡೆದ ನಂತರ ತಮ್ಮ ಕೈಲಾದಷ್ಟು ಪ್ರೇಕ್ಷಕರ ಮನಸಿಗೆ ಇಷ್ಟವಾಗುವಂತೆ ತಯಾರಿಗಳನ್ನು ಮಾಡುತ್ತವೆ.
ಮೊರಾಕೊದ ಬೀದಿ ನಾಯಿಗಳನ್ನು ಕೀಟನಾಶಕವಾಗಿ ಬಳಸುವ ಅತ್ಯಂತ ವಿಷಕಾರಿ ರಾಸಾಯನಿಕವಾದ ಸ್ಟ್ರೈಕ್ನೈನ್ ಅನ್ನು ಇಂಜೆಕ್ಷನ್ ಮೂಲಕ ನೀಡಿ ಕೊಲ್ಲಲಾಗುತ್ತಿದೆ, ನಾಯಿಗಳನ್ನು ಬೀದಿಗಳಲ್ಲಿ ಗುಂಡು ಹಾರಿಸಲಾಗುತ್ತಿದೆ ಅಥವಾ ಸೆರೆಹಿಡಿದು ಕಸಾಯಿಖಾನೆಗಳಿಗೆ ಕಳುಹಿಸಲಾಗುತ್ತಿದೆ. ಇದಕ್ಕೂ ಮೊದಲು, ಮೊರಾಕೊದ ಅಧಿಕಾರಿಗಳು 2024ರಲ್ಲಿ ನಾಯಿಗಳ ಹತ್ಯೆ ನಿಲ್ಲಿಸಲಾಗಿದೆ ಎಂದು ಹೇಳಿದ್ದರು. ಆದರೆ, 2023ರಲ್ಲಿ ಉತ್ತರ ಆಫ್ರಿಕಾದ ಮೊರಾಕೊ ದೇಶಕ್ಕೆ ಆತಿಥ್ಯ ವಹಿಸುವ ಹಕ್ಕುಗಳನ್ನು ನೀಡುವ FIFA ಘೋಷಣೆಯ ನಂತರ ಆ ದೇಶದಲ್ಲಿ ನಾಯಿಗಳ ಹತ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ವರದಿಗಳು ಸುಳಿವು ನೀಡಿವೆ.