ಕೆನಡಾದಲ್ಲಿ ಭಾರತೀಯರು ಮಿಸ್ಸಿಂಗ್!- 20 ಸಾವಿರ ಸ್ಟೂಡೆಂಟ್ಸ್ ಹೋಗಿದ್ದು ಎಲ್ಲಿಗೆ?
ಅಮೆರಿಕಕ್ಕೆ ಹೋಗ್ತಾ ಪ್ರಾ*ಣ ಬಿಟ್ರಾ?
ಭಾರತ-ಕೆನಡಾ ಉದ್ವಿಗ್ನತೆಯ ನಡುವೆ, ‘ವಲಸೆ, ನಿರಾಶ್ರಿತರ ಮತ್ತು ಪೌರತ್ವ ಕೆನಡಾ’ ಅಂದ್ರೆ IRCC ವರದಿ ರಿಲೀಸ್ ಮಾಡಿದೆ. ಇದರಲ್ಲಿ ಆಘಾತಕಾರಿ ಅಂಶ ಬಹಿರಂಗಗೊಂಡಿದೆ. ಮಾಹಿತಿ ಪ್ರಕಾರ, ಈ ವರದಿಯಲ್ಲಿ ಕೆನಡಾ ದೇಶಕ್ಕೆ ಹೋಗಿರುವ ಸುಮಾರು 20 ಸಾವಿರ ಭಾರತೀಯ ವಿದ್ಯಾರ್ಥಿಗಳು ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಕಾಣಿಸಿಕೊಳ್ಳದೆ ಕಾಣೆಯಾಗಿದ್ದಾರೆ ಎಂದು ಹೇಳಲಾಗಿದೆ. ಒಟ್ಟು ವಿವಿಧ ದೇಶಗಳಿಂದ ಬಂದಿದ್ದ 50000 ವಿದ್ಯಾರ್ಥಿಗಳು ಮಿಸ್ಸಿಂಗ್ ಮಾಡಿದ್ದಾರೆ. ಇದ್ರಲ್ಲಿ 20 ಸಾವಿರ ಭಾರತೀಯ ವಿದ್ಯಾರ್ಥಿಗಳು ಸೇರಿದ್ದಾರೆ. ಆ ವಿದ್ಯಾರ್ಥಿಗಳು ದಾಖಲಾಗಿರುವ ಕಾಲೇಜುಗಳು ಅಥವಾ ವಿಶ್ವವಿದ್ಯಾನಿಲಯಗಳಲ್ಲಿ ಅವರನ್ನು ‘ನೋ-ಶೋ’ ಎಂದು ಗುರುತಿಸಲಾಗಿದೆ. ಅಂದರೆ ಬಹಳ ದಿನ ಅಲ್ಲಿ ಕಂಡು ಬಂದಿಲ್ಲ. ಹೀಗಿರುವಾಗ ಈ ವಿದ್ಯಾರ್ಥಿಗಳು ಎಲ್ಲಿಗೆ ಹೋದರು ಎಂಬ ಪ್ರಶ್ನೆಗಳು ಸಹ ಉದ್ಭವವಾಗಿದೆ.
ಕೆನಡಾದಲ್ಲೇ ಕೆಲಸ ಮಾಡುತ್ತಿದ್ದಾರಾ?
ಈ ವಿದ್ಯಾರ್ಥಿಗಳು ಕಾಲೇಜುಗಳಿಗೆ ಹೋಗಿಲ್ಲ. ಆದ್ರೆ ಈ ವಿದ್ಯಾರ್ಥಿಗಳು ಕೆನಡಾದಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಅಲ್ಲಿನ ಶಾಶ್ವತ ನಿವಾಸಿಗಳಾಗುವ ಕನಸು ಕಾಣುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮಾಜಿ ಫೆಡರಲ್ ಅರ್ಥಶಾಸ್ತ್ರಜ್ಞ ಮತ್ತು ವಲಸೆ ಸಮಸ್ಯೆಗಳ ಪರಿಣಿತರಾದ ಹೆನ್ರಿ ಲೋಟಿನ್ ಅವರು, ಹೆಚ್ಚಿನ ವಿದ್ಯಾರ್ಥಿಗಳು ಯುಎಸ್ ಗಡಿಯನ್ನು ದಾಟುತ್ತಿಲ್ಲ, ಆದರೆ ಕೆನಡಾದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಕೆನಡಾದಲ್ಲಿ ಶಾಶ್ವತವಾಗಿ ನೆಲೆಸುವುದು ಇದರ ಹಿಂದಿನ ಉದ್ದೇಶವಾಗಿರಬಹುದು ಎನ್ನಲಾಗಿದೆ. ಅಲ್ಲೇ ಏನಾದ್ರೂ ಕೆಲಸ ಮಾಡಿಕೊಂಡು ಇರುವುದು ಇವರ ಉದ್ದೇಶವಾಗಿದೆ.
ಕೆನಡಾದಿಂದ ಅಮೆರಿಕಕ್ಕೆ ಯಾಕೆ ಹೋಗ್ತಾರೆ?
ಸಾಕಷ್ಟು ಜನ ಕೆನಡಾಕ್ಕೆ ಹೋಗುವುದು ಅಲ್ಲಿಂದ ಅಮೆರಿಕಕ್ಕೆ ಆಕ್ರಮವಾಗಿ ಹೋಗಬಹುದು ಅನ್ನೋ ಕಾರಣಕ್ಕೆ. ಹೇಗಾದ್ರೂ ಕಷ್ಟ ಬಿದ್ದು ಗಡಿ ದಾಟಿದ್ರೆ ಅಮೆರಿಕಕ್ಕೆ ಹೋದ್ರೆ ಜೀವನ ಸೆಟಲ್ ಆಗುತ್ತೆ.. ಹೀಗಾಗಿ ಸಾಕಷ್ಟು ಜನ ಅಕ್ರಮವಾಗಿ ಅಮೆರಿಕವನ್ನ ಪ್ರವೇಶ ಮಾಡೋಕೆ ಟ್ರೈ ಮಾಡ್ತಾರೆ. ಈ ಹಿಂದೆ ಅಮೆರಿಕಕ್ಕೆ ಅಕ್ರಮವಾಗಿ ಹೋಗೋಕೆ ಯತ್ನಿಸಿ, ಸೇಂಟ್ ಲಾರೆನ್ಸ್ ನದಿಯಲ್ಲಿ ಸಾವನ್ನಪ್ಪಿದ್ದಾರೆ. ಕ್ವಿಬೆಕ್‌ನ ಜವುಗು ಪ್ರದೇಶದಲ್ಲಿ ದೋಣಿ ಮಗುಚಿ ಸಾವನ್ನಪ್ಪಿದ ಪ್ರಕರಣಗಳು ನಡೆದಿವೆ, ನಡೆಯುತ್ತಾ ಇರುತ್ತೆ. ಈ ಈ ಪ್ರದೇಶದಲ್ಲಿ ಕಳ್ಳಸಾಗಣೆ ಜಾಲ ಆಕ್ಟಿವ್ ಆಗಿದ್ದು, ಹಣ ಪಡೆದು ಅವರನ್ನ ಅಮೆರಿಕಕ್ಕೆ ಕಳುಹಿಸುವುದು ಇವರ ಕೆಲಸವಾಗಿದೆ. ಇಲ್ಲಿ ಮೋಸ ಕೂಡ ಹೋಗ್ತಾರೆ. ಹೀಗಾಗಿ ಅಮೆರಿಕ್ಕೆ ಹೋಗುವ ಆಸೆ ಹೊತ್ತು ಹೋಗುವ ಸಾಕಷ್ಟು ವಿದ್ಯಾರ್ಥಿಗಳು ಗಡಿಯಲ್ಲಿ ಪ್ರಾಣವನ್ನ ಕಳೆದುಕೊಳ್ಳುತ್ತಿದ್ದಾರೆ. ಮತ್ತೊಂದಿಷ್ಟು ಜನ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇನ್ನು ಭಾರತೀಯ ವಿದ್ಯಾರ್ಥಿಗಳ ಗೈರುಹಾಜರಿಯ ಪ್ರಕರಣವು ಭಾರತದ ಜಾರಿ ನಿರ್ದೇಶನಾಲಯದ ಗಮನವನ್ನು ಸೆಳೆದಿದೆ. ಕೆನಡಾದಿಂದ ಯುಎಸ್‌ಗೆ ಭಾರತೀಯರನ್ನು ಕಳ್ಳಸಾಗಣೆ ಮಾಡುವ ಮನಿ ಲಾಂಡರಿಂಗ್ ಪ್ರಕರಣದ ತನಿಖೆ ನಡೆಸುತ್ತಿದೆ. ಕೆನಡಾ-ಯುಎಸ್ ಗಡಿಯನ್ನು ಅಕ್ರಮವಾಗಿ ದಾಟಲು ಪ್ರಯತ್ನಿಸುತ್ತಿದ್ದಾಗ ತೀವ್ರ ಚಳಿಯಿಂದ ಸಾವನ್ನಪ್ಪುವರ ಸಂಖ್ಯೆ ಕೂಡ ಹೆಚ್ಚಾಗುತ್ತಿದ್ದು, ಈ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ.
ವಿದ್ಯಾರ್ಥಿಗಳು ಕೆನಡಾದ ಹಾದಿ ಹಿಡಿಯುತ್ತಿರುವುದೇಕೆ?
ಎಲ್ಲರಿಗೂ ಒಂದು ಪ್ರಶ್ನೆ ಸಹಜವಾಗಿ ಕಾಡುತ್ತೆ. ಕ್ಕೆ ಯಾಕೆ ಭಾರತೀಯರು ಕೆನಡಾಕ್ಕೆ ಹೋಗ್ತಾರೆ ಅನ್ನೋದು. ಕೆನಡಾದಲ್ಲಿ ಪ್ರಪಂಚದಲ್ಲೇ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂದೇನೂ ಇಲ್ಲ. ವಿಸಾ ಸುಲಭ, ಕಾಯಂ ನಿವಾಸ ಮತ್ತು ಪೌರತ್ವ ತುಂಬಾ ಸಲೀಸು, ಅಮೆರಿಕದ ಗಡಿಯನ್ನ ಸುಲಭವಾಗಿ ದಾಟಬಹುದು ಅನ್ನೋ ಕಾರಣಕ್ಕೆ ಗೆ ಜಗದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಬರುತ್ತಾರಷ್ಟೇ. ಪ್ರತಿವರ್ಷ ಕೇವಲ ಭಾರತವೊಂದರಿಂದಲೇ 50 ಸಾವಿರ ವಿದ್ಯಾರ್ಥಿಗಳು ಉನ್ನತ ವ್ಯಾಸಂಗದ ಹೆಸರಲ್ಲಿ ಕೆನಡಾಕ್ಕೆ ಹೋಗ್ತಾರೆ..ಕೆನಡಾದಲ್ಲಿ ನೆಲೆಸಿರುವ ಒಟ್ಟು 5.5 ಲಕ್ಷ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಪೈಕಿ 2.26 ಲಕ್ಷ ವಿದ್ಯಾರ್ಥಿಗಳು ಭಾರತೀಯರು. ಅಂದರೆ, ಈ ಪ್ರಮಾಣ ಶೇ 40ರಷ್ಟಿದೆ. ವಿದ್ಯಾರ್ಥಿ ವೀಸಾಗಳಲ್ಲಿ 2-3 ಲಕ್ಷ ಭಾರತೀಯರು ಕೆನಡಾದಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿಂದ ಯುಎಸ್‌ಎಗೆ ಅಕ್ರಮವಾಗಿ ಹೋಗೋಕೆ ಟ್ರೈ ಮಾಡ್ತಾನೆ ಇರ್ತಾರೆ. ಇದ್ರಲ್ಲಿ ಹೆಚ್ಚಿನವರು ನಾರ್ಥ್ ಇಂಡಿಯನ್ಸ್ ಇದ್ದಾರೆ.
ಯುವಕ – ಯುವತಿಯರೇ ಟಾರ್ಗೆಟ್
ಇನ್ನು ಯುವತಿಯರನ್ನು ಮಾತ್ರವಲ್ಲದೆ, ಯುವಕರನ್ನೂ ಸಹ ಕೆನಡಾದಲ್ಲಿ ಕಳ್ಳಸಾಗಣೆ ಮಾಡಲಾಗುತ್ತಿದೆ. ಸುಲಭವಾಗಿ ಪರಿಚಯವಾಗುವಂಥ, ಹೇಳಲು ಕೇಳಲು ಯಾರೂ ಇಲ್ಲದಂಥ ಯುವಕ – ಯುವತಿಯನ್ನೇ ಮೊದಲು ಟಾರ್ಗೆಟ್ ಮಾಡಲಾಗುತ್ತದೆ. ಬ್ರಾಪ್ಟನ್ ನಗರದಲ್ಲಿರುವ ದೊಡ್ಡ ಶ್ರೀಮಂತರು, ಭೂ ಮಾಲೀಕರು, ಪ್ರೇಮಕ್ಕಾಗಿ ಹಾತೊರೆಯುವಂಥವರು, ಇಂಥ ಯುವಕರು, ಯುವತಿಯನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಓದಲು ಬರುವ ವಿದ್ಯಾರ್ಥಿಗಳನ್ನು ಮಾತ್ರವಲ್ಲದೆ, ವಿದೇಶಗಳಲ್ಲಿರುವ ಹಲವಾರು ಯುವಕ – ಯುವತಿಯರಿಗೆ ಉತ್ತಮ ಉದ್ಯೋಗದ ಭರವಸೆಯನ್ನೂ ಸಹ ಆನ್ ಲೈನ್ ಮೂಲಕ ನೀಡಿ ಅವರನ್ನು ಆಕರ್ಷಿಸಿ ಅವರನ್ನು ಕೆನಡಾದಲ್ಲಿ ವೇಶ್ಯಾವೃತ್ತಿಗೋ ಅಥವಾ ಮಾನವ ಕಳ್ಳಸಾಗಣೆಗೋ ಬಳಸಲಾಗುತ್ತದೆ ಅನ್ನೋ ಬಗ್ಗೆ ಈ ಹಿಂದೆ ಕೂಡ ವರದಿ ಆಗಿತ್ತು.