ಮುಸ್ಲಿಂ ರಾಷ್ಟ್ರಗಳಿಂದ ಕುಂಭಮೇಳದ ಬಗ್ಗೆ Google ಸರ್ಚ್
ಟಾಪ್ -1 ನಲ್ಲಿ ಶತ್ರುರಾಷ್ಟ್ರ ಪಾಕ್!
ಪ್ರಯಾಗ್ ರಾಜ್ ನಲ್ಲಿ ಮಹಾ ಕುಂಭ ಮೇಳದ ಸಂಭ್ರಮ ಮೇಳೈಸಿದೆ. ಇಡೀ ವಿಶ್ವವೇ ಕುಂಭ ಮೇಳವನ್ನು ಕುತೂಹಲದಿಂದ ವೀಕ್ಷಣೆ ಮಾಡ್ತಿದೆ. ಕೇವಲ ಹಿಂದೂಗಳು ಮಾತ್ರವಲ್ಲ ಮುಸ್ಲೀಂ ದೇಶಗಳಿಗೂ ಈ ಬಗ್ಗೆ ಆಸಕ್ತಿ ಹೆಚ್ಚಿದೆ. ಅದು ಯಾವ ಉದ್ದೇಶಕ್ಕೂ ಗೊತ್ತಿಲ್ಲ.. ಈ ಮಹಾ ಕುಂಭ ಮೇಳ ಕೇವಲ ಭಾರತೀಯ ಕಾರ್ಯಕ್ರಮವಾಗಿ ಉಳಿದಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹಾ ಕುಂಭ ಮೇಳ ಸುದ್ದಿ ಮಾಡ್ತಿದೆ. ವಿದೇಶಗಳಲ್ಲಿ ಸನಾತನ ಸಂಸ್ಕೃತಿ ಮತ್ತು ಭಾರತೀಯ ಸಂಪ್ರದಾಯಗಳ ಬಗ್ಗೆ ಚರ್ಚೆ ಹುಟ್ಟು ಹಾಕಿದೆ. ಇಡೀ ವಿಶ್ವವೇ, ಮಹಾ ಕುಂಭ ಮೇಳವನ್ನು ಕುತೂಹಲದಿಂದ ವೀಕ್ಷಣೆ ಮಾಡ್ತಿದೆ. ಅದ್ರಲ್ಲೂ ಮುಸ್ಮಿಂ ರಾಷ್ಟ್ರಗಳು ಈ ಬಗ್ಗೆ ಹೆಚ್ಚು ಕುತೂಹಲನ್ನ ತೋರಿಸುತ್ತಿದ್ದು, ಅಚ್ಚರಿಗೆ ಕಾರಣವಾಗಿದೆ.
ಇದನ್ನೂ ಓದಿ: ಪುಟಿನ್‌ಗೆ ಮೋದಿ ಸರ್ಕಾರ ಎಚ್ಚರಿಕೆ – ಯುದ್ಧ ಭೂಮಿಗೆ ನೂಕಿದ ಬ್ರೋಕರ್‌ಗಳು
ಟಾಪ್ -1 ನಲ್ಲಿ ಶತ್ರುರಾಷ್ಟ್ರ ಪಾಕ್!
2025 ರ ಮಹಾ ಕುಂಭ ಮೇಳಕ್ಕೆ ವಿಶ್ವದ ಮೂಲೆ ಮೂಲೆಯಿಂದ ಜನರು ಹರಿದು ಬರ್ತಿದ್ದಾರೆ. ದಿನಕ್ಕೆ 2-3 ಕೋಟಿ ಜನ ಪ್ರಯಾಗ್‌ರಾಜ್ ನಲ್ಲಿ ಮಹಾ ಕುಂಭಮೇಳದಲ್ಲಿ ಸೇರುತ್ತಿದ್ದಾರೆ. ಈ ಮಧ್ಯೆ ಮಹಾ ಕುಂಭ ಮೇಳದ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಯಾವ ದೇಶ ಮಹಾ ಕುಂಭ ಮೇಳದ ಬಗ್ಗೆ ಹೆಚ್ಚು ಹುಡುಕಾಟ ನಡೆಸಿದೆ ಎಂಬ ಸಮೀಕ್ಷೆಗೆ ಉತ್ತರ ಸಿಕ್ಕಿದ್ದು, ಇದು ಎಲ್ಲರನ್ನು ಅಚ್ಚರಿಗೊಳಿಸಿದೆ. ಸನಾತನ, ಹಿಂದೂ ಸಂಸ್ಕೃತಿಯನ್ನು ಅತಿ ಹೆಚ್ಚು ಆಸಕ್ತಿಯಿಂದ ನೋಡ್ತಿರುವ ರಾಷ್ಟ್ರವೆಂದ್ರೆ ಪಾಕಿಸ್ತಾನ. ಅನೇಕ ಇಸ್ಲಾಮಿಕ್ ರಾಷ್ಟ್ರಗಳಲ್ಲೂ ಈ ಕಾರ್ಯಕ್ರಮದ ಬಗ್ಗೆ ಆಳವಾದ ಆಸಕ್ತಿ ಕಂಡುಬರುತ್ತಿದೆ.
ಗೂಗಲ್ ಟ್ರೆಂಡ್ಸ್ ಡೇಟಾ ಪ್ರಕಾರ, 2025 ರ ಮಹಾ ಕುಂಭ ಮೇಳದ ಬಗ್ಗೆ ಅತಿ ಹೆಚ್ಚು ಹುಡುಕಾಟ ನಡೆಸಿದ ದೇಶ ಪಾಕಿಸ್ತಾನ. ಭಾರತದ ನೆರೆಯ ಹಾಗೂ ಶತ್ರು ದೇಶವೆಂದೇ ಕರೆಯಲ್ಪಡುವ ಪಾಕಿಸ್ತಾನದ ಜನರು, ಭವ್ಯ ಕಾರ್ಯಕ್ರಮ, ಅಲ್ಲಿನ ಜನಸಂಖ್ಯೆ ಸೇರಿದಂತೆ ಮಹಾ ಕುಂಭ ಮೇಳಕ್ಕೆ ಸಂಬಂಧಿಸಿದ ಆಧ್ಯಾತ್ಮಿಕ ಅಂಶಗಳ ಬಗ್ಗೆ ಆಳವಾದ ಆಸಕ್ತಿ ತೋರುತ್ತಿದ್ದಾರೆ.ಅದ್ರ ಬಗ್ಗೆ ಸರ್ಚ್ ಮಾಡುತ್ತಿದ್ದಾರೆ.
ಮೊದಲ ಸ್ಥಾನದಲ್ಲಿ ಪಾಕಿಸ್ತಾನವಿದ್ರೆ ನಂತರದ ನಾಲ್ಕೈದು ಸ್ಥಾನವನ್ನು ಮುಸ್ಲಿಂ ದೇಶಗಳು ಪಡೆದಿರೋದು ಮತ್ತಷ್ಟು ಅಚ್ಚರಿ ಹುಟ್ಟಿಸಿದೆ. ಕತಾರ್, ಯುಎಇ ಮತ್ತು ಬಹ್ರೇನ್‌ನಂತಹ ಇಸ್ಲಾಮಿಕ್ ರಾಷ್ಟ್ರಗಳು ಮಹಾ ಕುಂಭ ಮೇಳದ ಬಗ್ಗೆ ತೀವ್ರ ಆಸಕ್ತಿ ತೋರುತ್ತಿವೆ. ನೇಪಾಳ, ಸಿಂಗಾಪುರ, ಆಸ್ಟ್ರೇಲಿಯಾ, ಕೆನಡಾ, ಐರ್ಲೆಂಡ್, ಬ್ರಿಟನ್, ಥೈಲ್ಯಾಂಡ್ ಮತ್ತು ಅಮೆರಿಕದಂತಹ ದೇಶಗಳ ಜನರು ಕೂಡ ಗೂಗಲ್ ನಲ್ಲಿ ಮಹಾ ಕುಂಭ ಮೇಳದ ಬಗ್ಗೆ ಮಾಹಿತಿ ಹುಡುಕುತ್ತಿದ್ದಾರೆ.
ಮಹಾ ಕುಂಭಮೇಳದ ಕಡೆಗೆ ವಿದೇಶಿ ಭಕ್ತರ ಆಕರ್ಷಣೆ ವೇಗವಾಗಿ ಹೆಚ್ಚುತ್ತಿದೆ. ಬ್ರೆಜಿಲ್, ಜರ್ಮನಿ, ಜಪಾನ್, ಇಂಗ್ಲೆಂಡ್, ಅಮೆರಿಕ ಮತ್ತು ಸ್ಪೇನ್‌ನಂತಹ ದೇಶಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಪ್ರಯಾಗ್‌ರಾಜ್‌ಗೆ ಹರಿದು ಬರ್ತಿದ್ದಾರೆ. ಸಂಗಮದಲ್ಲಿ ಸ್ನಾನ ಮಾಡುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಆನಂದಿಸುತ್ತಿದ್ದಾರೆ.
ಪಾಕಿಸ್ತಾನ ಮತ್ತು ಇತರ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಮಹಾ ಕುಂಭ ಮೇಳದ ಬಗ್ಗೆ ಹೆಚ್ಚುತ್ತಿರುವ ಆಸಕ್ತಿ ನೋಡಿದ್ರೆ ಈ ಕಾರ್ಯಕ್ರಮ ಧರ್ಮ, ಜಾತಿ ಮತ್ತು ದೇಶಗಳ ಗಡಿಗಳನ್ನು ಮೀರಿದೆ ಎಂಬುದು ಸ್ಪಷ್ಟವಾಗುತ್ತಿದೆ. 2025 ರ ಮಹಾ ಕುಂಭ ಮೇಳವು ಭಾರತದ ಹೆಮ್ಮೆಯಷ್ಟೇ ಅಲ್ಲ, ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಸಂದೇಶವನ್ನು ಪ್ರಪಂಚದಾದ್ಯಂತ ಹರಡಲು ಸಹಕಾರಿಯಾಗಿದೆ. ಆದ್ರೆ ಮುಸ್ಮಿಂ ರಾಷ್ಟ್ರಗಳ ಸರ್ಚಿಂಗ್ ಹಿಂದೆ ಬೇರೆ ಯಾವುದೇ ಕಾರಣ ಇರದಿರಲಿ ಅಷ್ಟೇ..