BBK 11ರ ವಿನ್ನರ್​ ಅನೌನ್ಸ್!‌ – ರನ್ನರ್‌ ವಿಕ್ಕಿ.. ವಿನ್ನರ್‌ ಯಾರು?  
ವಿಕಿಪಿಡಿಯಾಗೆ ಮೊದಲೇ ಗೊತ್ತಾಯ್ತಾ?

BBK 11ರ ವಿನ್ನರ್​ ಅನೌನ್ಸ್!‌ – ರನ್ನರ್‌ ವಿಕ್ಕಿ.. ವಿನ್ನರ್‌ ಯಾರು?  ವಿಕಿಪಿಡಿಯಾಗೆ ಮೊದಲೇ ಗೊತ್ತಾಯ್ತಾ?

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ನ ಗ್ರ್ಯಾಂಡ್‌ ಫಿನಾಲೆಗೆ ಕೌಂಟ್‌ಡೌನ್‌ ಶುರುವಾಗಿದೆ. ಈ ವಾರ ಮಿಡ್‌ ವೀಕ್‌ ಎಲಿಮಿನೇಷನ್‌ ಇದೆ ಅಂತಾ ಬಿಗ್‌ ಬಾಸ್‌ ಕೂಡ ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಇದೀಗ ಯಾರಿಗೆ ದೊಡ್ಮನೆಯಿಂದ ಗೇಟ್‌ ಪಾಸ್‌? ಯಾರಿಗೆ ವಿನ್ನರ್‌ ಪಟ್ಟ ಸಿಗ್ಬೋದು? ಯಾರು ಕಪ್‌ ಗೆಲ್ಲೋದಿಕ್ಕೆ ಅರ್ಹರು ಅಂತಾ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ನಡಿತಿದೆ. ಈ ಹೊತ್ತಲ್ಲೇ ಬಿಗ್ ಬಾಸ್‌ ವಿನ್ನರ್‌ ಮತ್ತು ರನ್ನರ್‌ ಯಾರು ಅನ್ನೋ ವಿಚಾರ ಲೀಕ್‌ ಆಗಿದೆ. ವಿಕಿಪಿಡಿಯಾದಲ್ಲಿ ಕೂಡ ವಿನ್ನರ್‌ ರನ್ನರ್‌ ಅನ್ನೋದನ್ನ ಹಾಕಿಕೊಂಡಿದೆ.. ಗ್ರಾಂಡ್‌ ಫಿನಾಲೆ ಮೊದಲೇ ವಿಕಿಪಿಡಿಯಾ ವಿನ್ನರ್‌ ಅನ್ನ ಘೋಷಿಸಿದ್ದು ಯಾಕೆ? ಮೊದಲೇ ಎಲ್ಲವೂ ಫಿಕ್ಸ್‌ ಆಗಿದ್ಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಹಿರಿಯ ನಟ ಸರಿಗಮ ವಿಜಿ ನಿಧನ- ಅನಾರೋಗ್ಯದಿಂದ ಮೃತಪಟ್ಟ ಕಲಾವಿದ

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಭಾರಿ ಕುತೂಹಲ ಮೂಡಿಸಿದೆ.. ಫಿನಾಲೆಗೆ ಹತ್ತಿರವಾಗ್ತಿದ್ದಂತೆ ಪ್ರಬಲ ಸ್ಪರ್ಧಿಗಳೇ ದೊಡ್ಮನೆಯಿಂದ ಹೊರ ಹೋಗ್ತಿದ್ದಾರೆ. ಕಳೆದ ವಾರ ಫೈರ್‌ಬ್ರ್ಯಾಂಡ್‌ ಚೈತ್ರಾ ಕುಂದಾಪುರ ಬಿಗ್‌ ಬಾಸ್‌ ಎಲಿಮಿನೇಟ್‌ ಆಗಿದ್ರು.. ಇದರ ನಡುವೆಯೇ, ವಿನ್ನರ್​ ಆಕಾಂಕ್ಷಿಗಳಲ್ಲಿ ಒಬ್ಬರಾಗಿರುವ ಹನುಮಂತುಗೆ ಫಿನಾಲೆಗೆ ನೇರವಾಗಿ ಟಿಕೆಟ್​ ಸಿಕ್ಕಿದೆ. ಈ ವಾರ ಮಿಡ್‌ ವೀಕ್‌ ಎಲಿಮಿನೇಷನ್‌ ನಡೆಯಲಿದ್ದು, ದೊಡ್ಮನೆಯಿಂದ ಯಾರಿಗೆ ಗೇಟ್‌ ಪಾಸ್‌ ಸಿಗಲಿದೆ? ಯಾರು ನೇರವಾಗಿ ಫಿನಾಲೆಗೆ ಟಿಕೆಟ್‌ ಪಡೆಯಲಿದ್ದಾರೆ ಅಂತಾ ವೀಕ್ಷಕರು ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಈ ಹೊತ್ತಲ್ಲೇ ಬಿಗ್‌ ಬಾಸ್‌ ಸೀಸನ್‌ ವಿನ್ನರ್‌ ಯಾರು ಅನ್ನೋದು ಲೀಕ್‌ ಆಗಿದೆ. ಇನ್ನ ವಿಕಿಪಿಡಿಯಾ ಹಾಕಿಕೊಂಡಿದೆ.

ಹೌದು.. ಗ್ರ್ಯಾಂಡ್‌ ಫಿನಾಲೆಗೆ ಕೆಲವೇ ಕೆಲವು ದಿನಗಳ ಬಾಕಿ ಇರುವಾಗಲೇ ವಿಕಿಪಿಡಿಯಾ ದೊಡ್ಡ ಎಡವಟ್ಟು ಮಾಡಿಕೊಂಡಿದೆ. ಗ್ರ್ಯಾಂಡ್‌ ಫಿನಾಲೆಗೂ ಮುನ್ನವೇ ವಿನ್ನರ್‌ ಯಾರು ಅಂತಾ ಅನೌನ್ಸ್‌ ಮಾಡಿದೆ. ಹನುಮಂತ ವಿನ್ನರ್‌, ತ್ರಿವಿಕ್ರಮ್‌ ರನ್ನರ್‌ ಅಂತಾ ಘೋಷಣೆ ಮಾಡಿದೆ.

ಏನೇ ವಿಷಯ ಇರಲಿ.. ಯಾವುದೇ ಡೌಟ್​ ಇರಲಿ.. ಸಾಮಾನ್ಯವಾಗಿ ಎಲ್ಲರೂ ಮೊದಲು ಮಾಡೋ ಕೆಲ್ಸ ಅಂದ್ರೆ ಗೂಗಲ್​, ವಿಕಿಪಿಡಿಯಾದಲ್ಲಿ ಹುಡ್ಕೋದು.. ವಿಕಿಪಿಡಿಯಾದಲ್ಲಿರೋ information ಯಾವತ್ತೂ ಸರಿಯಾಗೇ ಇರುತ್ತೆ ಅಂತಾ ಅದ್ರಿಂದಾನೆ ಬೇಕಾಗಿರೋ information ಕಲೆಕ್ಟ್‌ ಮಾಡ್ತಾ.. ಆದ್ರೀಗ ಈ ವಿಕಿಪಿಡಿಯಾನೇ ಎಡವಟ್ಟು ಮಾಡಿಕೊಂಡಿದೆ. ವಿಕಿಪಿಡಿಯಾ ತಪ್ಪು ಮಾಹಿತಿ ಹಂಚಿಕೊಂಡಿದೆ. ಇದನ್ನ ನೋಡಿದ ವಿಕಿಪಿಡಿಯಾ ಬಳಕೆದಾರರು ಶಾಕ್‌ ಆಗಿದ್ದಾರೆ. ಇದ್ರ ಫೋಟೋ ವೈರಲ್‌ ಆದ ಬೆನ್ನಲ್ಲೇ ವಿಕಿಪಿಡಿಯಾ ಎಚ್ಚೆತ್ತುಕೊಂಡಿದೆ. ತಪ್ಪನ್ನ ಸರಿಪಡಿಸಿಕೊಂಡಿದೆ. ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ವಿನ್ನರ್‌ ಹನುಮಂತು ಹಾಗೂ ರನ್ನರ್‌ ತ್ರಿವಿಕ್ರಮ್‌ ಎಂದು ಬರೆದಿದ್ದನ್ನು TBA ಅಂತಾ ಬರೆದುಕೊಂಡಿದೆ..  TBA ಅಂದ್ರೆ “to be announced” ಅಂದರೆ ಇನ್ನೂ ಘೋಷಣೆಯಾಗಬೇಕಿದೆಯಷ್ಟೇ ಎಂದು ಕರೆಕ್ಷನ್​ ಮಾಡಿಕೊಂಡಿದೆ. ಆದರೆ ಹಳೆಯ ಸ್ಕ್ರೀನ್​ಷಾಟ್​ ವೈರಲ್​ ಆಗುತ್ತಿದ್ದು, ಇದೇ ನಿಜವಾಗಲಿ ಎಂದು ಹನುಮಂತನ ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಹೌದು ಬಿಗ್‌ ಬಾಸ್‌ ಸೀಸನ್ 11ಗೆ ವೈಲ್ಡ್‌ ಕಾರ್ಡ್‌ ಮೂಲಕ ಎಂಟ್ರಿ ಕೊಟ್ಟ ಹನುಮಂತ ವೈಲ್ಡ್‌ ಆಗೇ ಆಟ ಆಡ್ತಿದ್ದಾರೆ..  ಆತ ಮುಗ್ದ.. ಅವನಿಗೆ ಏನು ಗೊತ್ತಿಲ್ಲ ಅಂತಾ ವ್ಯಂಗ್ಯ ಮಾಡ್ತಿದ್ದರಿಗೆ ತಮ್ಮ ಆಟದ ಮೂಲಕವೇ ಹನುಮಂತ ಉತ್ತರ ಕೊಟ್ಟಿದ್ದಾರೆ. ಇನ್ನು ಹನುಮಂತ ಮೇಲೆ ಎಲ್ಲರಿಗೂ ಪ್ರೀತಿ ತುಸು ಹೆಚ್ಚೇ ಎಂದು ಹೇಳಬಹುದು.  ಯಾಕಂದ್ರೆ ಸಹ ಸ್ಪರ್ಧಿಗಳೊಂದಿಗೆ ಜಗಳಕ್ಕೆ ಹೋಗಲ್ಲ.. ಯಾರೊಂದಿಗೂ ದ್ವೇಷ ಕಟ್ಟಿಕೊಂಡಿಲ್ಲ.. ಎಲ್ಲರ ಜೊತೆ ಪ್ರೀತಿ-ವಿಶ್ವಾಸದಿಂದಲೇ ಇದ್ದಾರೆ. ಇನ್ನು ಹನು ಧನು ಜೋಡಿಯೂ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಒಂದು ಟ್ರೆಂಡ್‌ ಸೆಟ್‌ ಮಾಡಿಬಿಟ್ಟಿದೆ. ಇವರಿಬ್ಬರ ಸ್ನೇಹಕ್ಕೆ ವೀಕ್ಷಕರು ಫಿದಾ ಆಗಿದ್ದಾರೆ..

ಇನ್ನು ಟಾಸ್ಕ್‌ ವಿಚಾರಕ್ಕೆ ಬಂದ್ರೆ ಹನುಮಂತ 100 ಪರ್ಸೆಂಟ್‌ ಎಫರ್ಟ್‌ ಹಾಕ್ತಾರೆ..  ಆಲ್‌ಮೋಸ್ಟ್‌ ಎಲ್ಲಾ ಟಾಸ್ಕ್​ಗಳಲ್ಲೂ ಹನುಮಂತ ಚೆನ್ನಾಗೇ ಆಟ ಆಡಿದ್ದಾರೆ.. ಫಿನಾಲೆ ಟಿಕೆಟ್‌ ಟಾಸ್ಕ್‌ನಲ್ಲೂ ಕೇವಲ 2 ನಿಮಿಷ 27 ಸೆಕೆಂಡ್​ಗಳಲ್ಲಿ ಆಟ ಮುಗಿಸಿ ವಿನ್​ ಆಗಿದ್ರು.. ಇದೀಗ ಹನುಮಂತ ಸೀಸನ್‌ 11 ನ ವಿನ್ನರ್‌ ಆಗೋದ್ರಲ್ಲಿ ಯಾವುದೇ ಡೌಟ್‌ ಇಲ್ಲ ಅಂತಾ ವೀಕ್ಷಕರು ಹೇಳ್ತಿದ್ದಾರೆ.. ವಿಕಿಪಿಡಿಯಾದಲ್ಲಿ ಹಾಕಿರೋ ಸುದ್ದಿ ನಿಜವಾಗ್ಲಿಅಂತ ಹನುಮಂತ ಫ್ಯಾನ್ಸ್‌ ಹೇಳ್ತಿದ್ದಾರೆ..

Shwetha M

Leave a Reply

Your email address will not be published. Required fields are marked *