ಕುಂಭ ಮೇಳಕ್ಕೆ ಜನವೋ ಜನ! 45 ದಿನ 45 ಕೋಟಿ ಭಕ್ತರು!
ಯೋಗಿ ಸರ್ಕಾರಕ್ಕೆ ಹಣದ ಸುರಿಮಳೆ
ಮಹಾ ಕುಂಭಮೇಳ. ಸದ್ಯ ಭಾರತದಲ್ಲಿ ನಡೆಯುತ್ತಿರುವ ವಿಶ್ವದ ಅತೀ ದೊಡ್ಡ ಜಾತ್ರೆ.. ಪುಣ್ಯ ಕುಂಭ ಸ್ನಾನವನ್ನ ಮಾಡಿ ಪಾವನರಾಗಬೇಕು ಅಂತ ಜನ ತುದಿಗಾಲಲ್ಲಿ ನಿಂತಿದ್ದಾರೆ. ಮೊದಲ ದಿನವೇ ಪ್ರಯಾಗ್ ರಾಜ್ನ ಪವಿತ್ರ ಗಂಗಾ, ಯಮುನಾ, ಸರಸ್ವತಿ ತ್ರಿವೇಣಿ ಸಂಗಮದಲ್ಲಿ ಒಂದೂವರೆ ಕೋಟಿಗೂ ಹೆಚ್ಚು ಜನ ಮಿಂದೆದ್ದಿದ್ದಾರೆ. ಹಾಗೇ ಎರಡನೇ ದಿನ ಕೂಡ ಸಾಕಷ್ಟು ಜನ ಸೇರಿದ್ದಾರೆ. ಮಹಾ ಕುಂಭ ಮೇಳದಲ್ಲಿ ಈ ಬಾರಿ 45 ಕೋಟಿಗೂ ಹೆಚ್ಚು ಜನ ಭಾಗವಹಿಸುವ ಅಂದಾಜು ಇದೆ. ಮೊದಲ ದಿನವೇ ಒಂದೂವರೆ ಕೋಟಿ ಜನ ಪವಿತ್ರ ಸ್ನಾನ ಮಾಡಿದ್ದಾರೆ ಅಂತ ಹೇಳಲಾಗ್ತಿದೆ. ಇದನ್ನ ನೋಡಿದ್ರೆ 45 ಕೋಟಿಯಲ್ಲ ಈ ಸಂಖ್ಯೆ 50 ಕೋಟಿ ದಾಟಿದ್ರೂ ಅಚ್ಚರಿ ಪಡಬೇಕಿಲ್ಲ.
ಇದನ್ನೂ ಓದಿ: 790 ದಿನ.. ಶಮಿ ಈಸ್ ಬ್ಯಾಕ್ – ಭಾರತಕ್ಕೆ ಸ್ವಿಂಗ್ ಬೌಲಿಂಗ್ ಬ್ರಹ್ಮಾಸ್ತ್ರ
ಒಂದೂವರೆ ಕೋಟಿ ಜನರಿಂದ ಪುಣ್ಯಸ್ನಾನ
ಮೊದಲ ದಿನವೇ ಒಂದೂವರೆ ಕೋಟಿ ಜನರು ಪವಿತ್ರ ಗಂಗಾ ಸ್ನಾನ ಮಾಡಿದ್ದಾರೆ. ಗಂಗಾ, ಯಮುನಾ ಮತ್ತು ಇತಿಹಾಸದಲ್ಲಿ ಹುದುಗಿ ಹೋಗಿರುವ ಸರಸ್ವತಿ ನದಿಗಳು ಸಂಗಮಗೊಳ್ಳುವ ತಾಣವೇ ಪ್ರಯಾಗರಾಜ್ .. ಈ ಬಾರಿಯ ಕುಂಭ ಮೇಳದ ಘೋಷವಾಕ್ಯ ಪವಿತ್ರ ಗಂಗಾ ಸ್ನಾನವೇ ಸಕಲ ಪಾಪಗಳಿಗೆ ಪರಿಹಾರ, ಮೋಕ್ಷಕ್ಕೆ ಸಾಧನ ಎಂದು ನಂಬಿಕೆ.. ಅಚ್ಚರಿಯಂದ್ರೆ, 45 ದಿನಗಳ ಉತ್ಸವದಲ್ಲಿ ಭಾರತ ದೇಶದ ಉದ್ದಗಲ ಮತ್ತು ವಿದೇಶಗಳಿಂದ ಸುಮಾರು 40 ಕೋಟಿ ಜನರು ಪಾಲ್ಗೊಳ್ಳಲಿದ್ದಾರೆ ಎನ್ನುವ ನಿರೀಕ್ಷೆಯಿದೆ. ಮೊದಲ ದಿನವೇ ಒಂದೂವರೆ ಕೋಟಿ ಜನರು ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟ್ವಿಟ್ ಮಾಡಿದ್ದಾರೆ.
ಮೊದಲ ದಿನವೇ ಲಕ್ಷಾಂತರ ಸಂಖ್ಯೆಯಲ್ಲಿ ನಾಗಾ ಸಾಧುಗಳು, ಅಘೋರಿಗಳು ಗಂಗಾ ಸ್ನಾನಕ್ಕೆ ಮುಗಿಬಿದ್ದಿದ್ರು. .ಪ್ರಯಾಗರಾಜ್ ವರೆಗೂ ನಡೆದುಕೊಂಡೇ ಬರುವ ಈ ಸಾಧುಗಳು ಇಷ್ಟು ದಿನ ಎಲ್ಲಿದ್ದರೋ ಎನ್ನುವಂತೆ ದಿಢೀರ್ ಆಗಿ ಪ್ರತ್ಯಕ್ಷಗೊಂಡಿದ್ದಾರೆ. ನದಿಯ ದಂಡೆಯಲ್ಲಿ ಪ್ರಯಾಗರಾಜ್ ಪಟ್ಟಣದ ಗಲ್ಲಿಗಳಲ್ಲಿ ಎಲ್ಲಿ ನೋಡಿದರೂ, ಅಘೋರಿಗಳದ್ದೇ ದರ್ಶನವಾಗುತ್ತಿದೆ. ಭಾರತದ ಒಟ್ಟು ಜನಸಂಖ್ಯೆ 146 ಕೋಟಿಯಾದರೆ, ಕುಂಭ ಮೇಳದಲ್ಲಿ 40 ಕೋಟಿ ಜನರು ಸೇರುತ್ತಾರಂತೆ. ಅಂದರೆ, ಅಮೆರಿಕ 35 ಕೋಟಿ ಹಾಗೂ ಪಾಕಿಸ್ತಾನ 35 ಕೋಟಿ ಜನಸಂಖ್ಯೆ ಗಿಂತಲೂ ಹೆಚ್ಚು. ಇದೇ ಕಾರಣಕ್ಕೆ ಕುಂಭ ಮೇಳ ಎಂದರೆ ಮಿನಿ ಭಾರತದ ದರ್ಶನ ಎನ್ನುವ ಅರ್ಥ ಬಂದಿದೆ.
2 ಲಕ್ಷ ಕೋಟಿ ರೂಪಾಯಿಯ ವಹಿವಾಟು
ಜನವರಿ 13ರಿಂದ ಫೆಬ್ರವರಿ 26ರವರೆಗೆ 45 ದಿನಗಳ ಕಾಲ ನಡೆಯೋ ಮಹಾ ಕುಂಭ ಮೇಳದಲ್ಲಿ ಒಂದು ಅಂದಾಜಿನ ಪ್ರಕಾರ ಬರೋಬ್ಬರಿ 2 ಲಕ್ಷ ಕೋಟಿ ರೂಪಾಯಿಯ ವಹಿವಾಟು ನಡೆಯುತ್ತೆ ಅಂತ ಹೇಳಲಾಗ್ತಿದೆ. ಕುಂಭ ಮೇಳದ ಆಯೋಜನೆ, ಮೇಳಕ್ಕೆ ಬಂದು ಹೋಗುವ ಜನರಿಗಾಗಿ ಮೂಲ ಸೌಕರ್ಯ ಒದಗಿಸಲು ಉತ್ತರಪ್ರದೇಶ ಸರ್ಕಾರವೇ ಬರೋಬ್ಬರಿ 7 ಸಾವಿರ ಕೋಟಿ ಮೌಲ್ಯದ ಯೋಜನೆಗಳನ್ನ ರೂಪಿಸಿದೆ. ಕುಂಭ ಮೇಳಕ್ಕಾಗಿಯೇ ತಾತ್ಕಾಲಿಕ ಊರನ್ನೇ ಸೃಷ್ಟಿಸಲಾಗಿದ್ದು, ಇದಕ್ಕೆ 76ನೇ ಡಿಸ್ಟ್ರಿಕ್ಟ್ ಅಂತ ನಾಮಕರಣ ಮಾಡಿದ್ದಾರೆ. ಯಾತ್ರಾರ್ಥಿಗಳಿಗೆ ಉಳಿದುಕೊಳ್ಳೋದಕ್ಕೆ ತಾತ್ಕಾಲಿಕ ಟೆಂಟ್ ವ್ಯವಸ್ಥೆ, ಜನರ ಸುಲಭ ಸಂಚಾರಕ್ಕೆ ಅಗತ್ಯ ಸಾರ್ವಜನಿಕ ಸಾರಿಗೆ ವ್ಯವಸ್ಥೆ, ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆ, ಊಟದ ವ್ಯವಸ್ಥೆ ಹೀಗೆ ಎಲ್ಲಾ ಮೂಲ ಸೌಕರ್ಯಗಳನ್ನ ಒದಗಿಸಲಾಗ್ತಿದೆ.
ಸರ್ಕಾರಕ್ಕೆ ಕೋಟಿ ಕೋಟಿ ಆದಾಯ
ಪ್ರಯಾಗ್ ರಾಜ್ಗೆ ಬರುವ ಯಾತ್ರಿಕರ ರೈಲು, ಬಸ್, ಫ್ಲೈಟ್ ಟಿಕೆಟ್ ವೆಚ್ಚದಿಂದಲೇ ಸರ್ಕಾರಕ್ಕೆ ಕೋಟಿ ಕೋಟಿ ಆದಾಯ ಬರುವ ನಿರೀಕ್ಷೆ ಇದೆ. ಇದಲ್ಲದೆ, ಹೈ ಎಂಡ್ ಹೋಟೆಲ್ಗಳು, ಹೋಮ್ ಸ್ಟೇಗಳನ್ನ ನದಿ ತಟದಲ್ಲೇ ನಿರ್ಮಿಸಲಾಗಿದ್ದು, ಅಲ್ಲಿ ಒಂದು ದಿನದ ಬಾಡಿಗೆಯೇ ಸುಮಾರು 80 ಸಾವಿರ ರೂಪಾಯಿ. ಇದರಿಂದಲೂ ಸರ್ಕಾರ ಕೋಟಿಗಳಲ್ಲಿ ಆದಾಯ ಪಡೆಯುವ ನಿರೀಕ್ಷೆ ಇದೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿರುವ ಪ್ರಕಾರ ಸುಮಾರು 2 ಲಕ್ಷ ಕೋಟಿ ರೂಪಾಯಿಯ ವ್ಯವಹಾರ, ವ್ಯಾಪಾರ ವಹಿವಾಟು ಈ 45 ದಿನಗಳಲ್ಲೇ ನಡೆಯುವ ಅಂದಾಜಿದ್ದು, ಸರ್ಕಾರದ ಬೊಕ್ಕಸಕ್ಕೆ ಕನಿಷ್ಠವೆಂದರೂ 25 ಸಾವಿರ ಕೋಟಿ ರೂಪಾಯಿ ಆದಾಯ ಬರುವ ನಿರೀಕ್ಷೆ ಇದೆ. ಅಲ್ಲಿ ನಡೆಯುವ ವ್ಯಾಪಾರ, ವಹಿವಾಟು, ಅದರಿಂದ ಸರ್ಕಾರಕ್ಕೆ ಬರೋ ಆದಾಯವೂ ಅಂದಾಜಿಗಿಂತಲೂ ಹೆಚ್ಚೇ ಆಗಬಹುದು.
ಕೆಎಂಎಫ್ ನಿಂದ ಒಂದು ಕೋಟಿ ಟೀ ವಿತರಣೆ
ಕರ್ನಾಟಕದ ಕೆಎಂಎಫ್ ವತಿಯಿಂದ ಪ್ರಯಾಗರಾಜ್ ನಲ್ಲಿ ಒಂದು ಕೋಟಿ ಚಹಾ ವಿತರಣೆಗೆ ಸಿದ್ಧತೆ ನಡೆದಿದೆ. ಇದಕ್ಕಾಗಿ 10 ಸ್ಟಾಲ್ ಗಳನ್ನು ತೆರೆಯಲಾಗಿದ್ದು, ಟೀ ಕೆಫೆ ಜೊತೆಗೆ ಪಾಲುದಾರಿಕೆ ಪಡೆದುಕೊಂಡಿದೆ. ಒಂದೇ ಕಡೆ ಒಂದು ಕೋಟಿಗೂ ಹೆಚ್ಚು ಟೀ ಕಪ್ ವಿತರಣೆ ಮಾಡುವ ಮೂಲಕ ಗಿನ್ನೆಸ್ ರೆಕಾರ್ಡ್ ಮಾಡುವ ಗುರಿಯನ್ನೂ ಕೆಎಂಎಫ್ ಹೊಂದಿದೆ.
ಗೂಗಲ್‌ನಲ್ಲಿ ಕುಂಭ ಮೇಳಕ್ಕೆ ಗುಲಾಬಿ ದಳಗಳ ಸುರಿಮಳೆ
ನೀವು ಗೂಗಲ್ ಸರ್ಚ್ ಬಾಕ್ಸ್‌ನಲ್ಲಿ ಕುಂಭ ಮೇಳ ಎಂದು ಟೈಪ್ ಮಾಡಿ, ಸರ್ಚ್ ಮಾಡಿ.. ಆಮೇಲೆ ಅಲ್ಲೊಂದು ಚಿತ್ರ ಬರುತ್ತೆ.. ಅದ್ರ ಮೇಲೆ ಕ್ಲಿಕ್ ಮಾಡಿದರೆ ತಕ್ಷಣ ನಿಮ್ಮ ಸ್ಕ್ರೀನ್ ಮೇಲೆ ಗುಲಾಬಿ ದಳಗಳು ಸುರಿಯುತ್ತಿರುವುದನ್ನು ನೀವು ಕಾಣುತ್ತೀರಿ. ಕುಂಭಮೇಳ ಅಧ್ಯಾತ್ಮಿಕ ವೈಭವವನ್ನು ಸಾರುವ ಕಾರ್ಯಕ್ರಮ.. ಸುಮಾರು 45 ಕೋಟಿ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಹಾಗಾಗಿಯೇ ಗೂಗಲ್ ಕೂಡ ಮಹಾ ಕುಂಭಮೇಳಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದು, ಹೂವುಗಳ ಮಳೆ ಸುರಿಸುತ್ತಿವೆ. ಒ