‘ಪೂರ್ವಾಂಚಲಿ’ ವೋಟ್ ಯಾರಿಗೆ? – ದೆಹಲಿಯಲ್ಲಿ ‘ರಾಗಾ’ ಬದಲಾಗಿದ್ದೇಕೆ?
ಸಿಎಂ ಅತಿಶಿ ಟಾರ್ಗೆಟ್ ಆದ್ರಾ?

‘ಪೂರ್ವಾಂಚಲಿ’ ವೋಟ್ ಯಾರಿಗೆ?  – ದೆಹಲಿಯಲ್ಲಿ ‘ರಾಗಾ’ ಬದಲಾಗಿದ್ದೇಕೆ?ಸಿಎಂ ಅತಿಶಿ ಟಾರ್ಗೆಟ್ ಆದ್ರಾ?

ದೆಹಲಿ ವಿಧಾನಸಭೆ ಚುನಾವಣೆ-2025ರ ಫಲಿತಾಂಶ ಕುತೂಹಲ ಮೂಡಿಸಿದೆ. ಈ ಚುನಾವಣೆ ಆಮ್‌ ಆದ್ಮಿ ಪಕ್ಷಕ್ಕೆ ಬಹುದೊಡ್ಡ ಸವಾಲಾಗಿದೆ. 2015, 2020ರಲ್ಲಿ ಗೆಲುವು ಸಾಧಿಸಿರುವ ಆಪ್‌ ಈ ಚುನಾವಣೆಯಲ್ಲಿಯೂ ಗೆದ್ದು, ಹ್ಯಾಟ್ರಿಕ್ ಬಾರಿಸುವ ಜೋಷ್‌ನಲ್ಲಿದೆ. ಮಾಜಿ ಮುಖ್ಯಮಂತ್ರಿ, ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ಪಕ್ಷ ಚುನಾವಣೆ ಎದುರಿಸುತ್ತಿದೆ. ಚುನಾವಣೆಯಲ್ಲಿ ಎಎಪಿ ಪಕ್ಷಕ್ಕೆ ಬಿಜೆಪಿ, ಕಾಂಗ್ರೆಸ್ ಸಮಾನ ಎದುರಾಳಿಗಳು. ಬಿಜೆಪಿ ಕೂಡ ಈ ಭಾರಿ ದೆಹಲಿ ಗದ್ದುಗೆಯನ್ನ ನಾವೇ ಹಿಡಿಬೇಕು ಸಾಕಷ್ಟು ಸರ್ಕಸ್ ಮಾಡುತ್ತಿವೆ. ಕೇಜ್ರಿವಾಲ್ ಗ್ಯಾರಂಟಿ ಇಟ್ಕೊಂಡು ಅಖಾಡಕ್ಕೆ ಇಳಿದ್ರೆ, ಬಿಜೆಪಿ ಮತ್ತು ಕಾಂಗ್ರೆಸ್ ಆರೋಪ ಮಾಡುತ್ತಾ ಜನರಿಂದ ವೋಟ್ ಪಡೆಯೋಕೆ ಮುಂದಾಗಿವೆ.   ದೆಹಲಿ ವಿಧಾನಸಭಾ ಎಲೆಕ್ಷನ್ ಸಾಕಷ್ಟು ಹುರುಪಿನಿಂದ ನಡೆಯುತ್ತಿದ್ದು, 3 ಪಕ್ಷಗಳು ಕೂಡ ಈ ಎಲೆಕ್ಷನ್‌ನನ್ನ ಪ್ರತಿಷ್ಠೆಯಾಗಿ ತೆೆಗೆದುಕೊಂಡಿವೆ. ಇಲ್ಲಿ ಒಂದಿಷ್ಟು ಸಮುದಾಯದ ವೋಟ್‌ಗಳು ಎಲೆಕ್ಷನ್ ರಿಸಲ್ಟ್‌ ಮೇಲೆ ಸಾಕಷ್ಟು ಪ್ರಭಾವನ್ನ ಬೀರಲಿದೆ.

ಇದನ್ನೂ ಓದಿ: ಮತ್ತೆ ಪಾಕಿಸ್ತಾನವಾಗುತ್ತಾ ಬಾಂಗ್ಲಾ ?ವೀಸಾ ರಿಲೀಫ್ ಹಿಂದಿದ್ಯಾ ನರಿ ಲೆಕ್ಕ?

   ‘ಪೂರ್ವಾಂಚಲಿ’ ವೋಟ್ ಯಾರಿಗೆ?  

ಪೂರ್ವಾಂಚಲಿಗಳ ವೋಟ್ ಯಾರಿಗೆ ಅನ್ನೋ ಪ್ರಶ್ನೆಗಳು ಈಗ ದೆಹಲಿ ಅಂಗಳಲ್ಲಿ ಸದ್ದು ಮಾಡ್ತಿದೆ. ಅರವಿಂದ್ ಕೇಜ್ರಿವಾಲ್‌ ಅವರ ಒಂದು ಹೇಳಿಕೆ ಅವರ ವೋಟ್‌ನ ದಿಕ್ಕನ್ನ ಬದಲಾಗಿಸಿದೆ. ಅಂದಹಾಗೇ ಕೆಲ ದಿನಗಳ ಹಿಂದೆ ಪೂರ್ವಾಂಚಲಿಗಳ ಕುರಿತು ಕೇಜ್ರವಾಲ್ ನೀಡಿರುವ ಹೇಳಿಕೆಯು ದೆಹಲಿ ವಿಧಾನಸಭಾ ಚುನಾವಣಾ ಕಣದಲ್ಲಿ ಕೋಲಾಹಲ ಎಬ್ಬಿಸಿದೆ. ಈ ವಿಷಯವನ್ನೇ ಪ್ರಮುಖ ಚುನಾವಣಾ ವಿಷಯವನ್ನಾಗಿಸಿಕೊಂಡು ಬಿಜೆಪಿ ಮತ ಕ್ರೋಡೀಕರಣಕ್ಕೆ ಕಸರತ್ತು ನಡೆಸಿದೆ. ಪೂರ್ವಾಂಚಲ ಪ್ರದೇಶವು ಉತ್ತರ ಪ್ರದೇಶ ಹಾಗೂ ಬಿಹಾರದ ಕೆಲವು ಭಾಗಗಳನ್ನು ಒಳಗೊಂಡಿದೆ. ದೆಹಲಿಯ ಒಟ್ಟು ಮತದಾರರಲ್ಲಿ ಪೂರ್ವಾಂಚಲಿಗಳ ಸಂಖ್ಯೆ ಶೇ 25ರಷ್ಟಿದೆ. ಕಡು ಬಡತನದಿಂದ ಬಳಲಿ ಉದ್ಯೋಗ ಅರಸಿ ಇಲ್ಲಿಗೆ ವಲಸೆ ಬಂದವರು ಇವರು. ತರಕಾರಿ ಮಾರುತ್ತಾ, ಆಟೊ ಓಡಿಸುತ್ತಾ, ಕೂಲಿ ಕೆಲಸ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದಾರೆ. ದೆಹಲಿಯ ಕೊಳೆಗೇರಿಗಳಲ್ಲಿ ಇವರು ಗಣನೀಯ ಸಂಖ್ಯೆಯಲ್ಲಿ ಇದ್ದಾರೆ. ಇವರ ತಿಂಗಳ ದುಡಿಮೆ ₹10 ಸಾವಿರದಿಂದ ₹15 ಸಾವಿರದಷ್ಟು.  ಆಪ್  ಸರ್ಕಾರದ ಉಚಿತ ಹಾಗೂ ಕಲ್ಯಾಣ ಯೋಜನೆಗಳಿಂದ ಹೆಚ್ಚು ಅನುಕೂಲ ಪಡೆದವರು ಇವರು. 2015 ಹಾಗೂ 2020ರ ವಿಧಾನಸಭಾ ಚುನಾವಣೆಗಳಲ್ಲಿ ಎಎಪಿಯ ಅಭೂತಪೂರ್ವ ಗೆಲುವಿನಲ್ಲಿ ಇವರ ಮತದ ಪಾಲು ದೊಡ್ಡದು. ಎಎಪಿಯ ಸಾಂಪ್ರದಾಯಿಕ ಮತದಾರರ ಮನ ಗೆಲ್ಲಲು ಬಿಜೆಪಿ ಕಳೆದ ಆರು ತಿಂಗಳಿಂದ ಅನೇಕ ಕಾರ್ಯಕ್ರಮಗಳನ್ನು ನಡೆಸಿತ್ತು.

ವಿಶೇಷವೆಂದರೆ, ಬಿಜೆಪಿ ರಾಜ್ಯ ಘಟಕದಲ್ಲಿ ಪೂರ್ವಾಂಚಲಿ ಮೋರ್ಚಾವೂ ಇದೆ. ವಲಸಿಗರ ಮತಗಳನ್ನು ಸೆಳೆಯುವ ಉದ್ದೇಶದಿಂದ ಚತ್ ಪೂಜೆಯ ಸಂದರ್ಭದಲ್ಲಿ ಎಎಪಿ ಹಾಗೂ ಬಿಜೆಪಿ ನಾಯಕರು ಅನೇಕ ಬಗೆಯ ನೆರವುಗಳನ್ನು ನೀಡಿದ್ದರು. ಚತ್ ಪೂಜೆಗೆ ದೆಹಲಿ ಸರ್ಕಾರ ರಜೆ ನೀಡಿತ್ತು. ಪೂಜೆ ನಡೆಸಲು ಅನೇಕ ವ್ಯವಸ್ಥೆಗಳನ್ನು ಮಾಡಿತ್ತು. ಹೀಗಿರುವಾಗ ತಾವು ಸ್ಪರ್ಧಿಸುತ್ತಿರುವ ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಡಿಸೆಂಬರ್ 15ರಿಂದ ಜನವರಿ 8ರ ನಡುವಿನಲ್ಲಿ 13 ಸಾವಿರ ಮತದಾರರನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಕೇಜ್ರವಾಲ್ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ‘ಉತ್ತರ ಪ್ರದೇಶ ಹಾಗೂ ಬಿಹಾರದ ನಕಲಿ ಮತದಾರರನ್ನು ನೋಂದಾಯಿಸಲಾಗಿದೆ. ಚುನಾವಣಾ ಫಲಿತಾಂಶ ಏರುಪೇರು ಮಾಡಲು ಬಿಜೆಪಿ ಈ ಕುತಂತ್ರ ನಡೆಸಿದೆ’ ಎಂದೂ ಆರೋಪಿಸಿದ್ದರು. ಇದರ ಬೆನ್ನಲ್ಲೇ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಪಕ್ಷದ ನಾಯಕರು ಕೇಜ್ರವಾಲ್‌ ವಿರುದ್ಧ ಮುಗಿಬಿದ್ದರು. ‘ಉತ್ತರ ಪ್ರದೇಶ ಹಾಗೂ ಬಿಹಾರದ ಜನರನ್ನು ಕೇಜ್ರವಾಲ್‌ ಅವಮಾನಿಸಿದ್ದಾರೆ’ ಎಂದೂ ಬಿಜೆಪಿ ನಾಯಕರು ಕಿಡಿ ಕಾರಿದ್ದರು. ಬಿಜೆಪಿ ಕಾರ್ಯಕರ್ತರು ಕೇಜ್ರವಾಲ್ ನಿವಾಸದ ಬಳಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದರು.  ಇದರಿಂದ ಎಚ್ಚೆತ್ತ ಕೇಜ್ರವಾಲ್, ತಮ್ಮ ಹೇಳಿಕೆಯಿಂದ ಆಗಿರುವ ಹಾನಿಯನ್ನು ಕಡಿಮೆ ಮಾಡುವ ಪ್ರಯತ್ನ ನಡೆಸಿದ್ದರು. ಪೂರ್ವಾಂಚಲಿಗಳು ವಾಸಿಸುವ ಕೊಳೆಗೇರಿಗಳ ಅಭಿವೃದ್ಧಿಗೆ ತಮ್ಮ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದ್ದರು.. ಹೀಗಾಗಿ ಕೇಜ್ರಿವಾಲ್ ಹೇಳಿಕೆಯನ್ನ ಬಿಜೆಪಿ ದಾಳವಾಗಿ ಬಳಸಿಕೊಂಡಿದೆ.. ಹೀಗಾಗಿ ಈ ಬಾಗಿ ಈ ಮತಗಳು ಡಿವೈಡ್ ಆಗೋ ಸಾಧ್ಯತೆ ಹೆಚ್ಚಿದೆ.   ರಾಜಧಾನಿಯ ಕೊಳೆಗೇರಿಗಳ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿನ ಚುನಾವಣಾ ಱಲಿಗಳಲ್ಲಿ ಪ್ರಸ್ತಾಪಿಸಿದ್ದರು. ಕೊಳೆಗೇರಿಗಳ ನಿವಾಸಿಗಳಿಗೆ ತಮ್ಮ ಸರ್ಕಾರ ಹಕ್ಕುಪತ್ರ ನೀಡಲಿದೆ ಎಂದೂ ಹೇಳಿದ್ದರು. ಹೀಗಾಗಿ ಈ ವೋಟ್‌ಗಳು ಬಿಜೆಪಿ ಕಡೆಗೆ ವಾಲ ಬಹುದು..

ಸಿಎಂ ಅತಿಶಿ ಟಾರ್ಗೆಟ್ ಆದ್ರಾ?

ಇನ್ನೂ ,ಸಿಎಂ ಅತಿಶಿ ಟಾರ್ಗೆಟ್ ಆದ್ರಾ ಅನ್ನೋ ಪ್ರಶ್ನೆ ಎದ್ದಿದೆ. ಆಮ್ ಆದ್ಮಿ ಪಕ್ಷ ಮತ್ತು ಮುಖ್ಯಮಂತ್ರಿ ಅತಿಶಿ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಹಿಂದೆ ಬಿಜೆಪಿ ಮುಖಂಡ ಹಾಗೂ ನವದೆಹಲಿ ಅಭ್ಯರ್ಥಿ ಪ್ರವೇಶ್ ವರ್ಮಾ ಅವರ ದೂರು ಕೂಡ ಪೊಲೀಸರಿಗೆ ತಲುಪಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಚಿತ್ರಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಎಎಪಿ ವಿರುದ್ಧ ಬಿಜೆಪಿ ದೂರು ದಾಖಲಿಸಿದೆ . ದೆಹಲಿಯ ನಾರ್ತ್ ಅವೆನ್ಯೂ ಪೊಲೀಸ್ ಠಾಣೆಯಲ್ಲಿ ಈ ದೂರು ದಾಖಲಾಗಿದೆ. ಚುನಾವಣಾ ಪ್ರಚಾರದ ಭಾಗವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ ಚಿತ್ರಗಳು ಮತ್ತು ವೀಡಿಯೊಗಳಲ್ಲಿ AI ತಂತ್ರಜ್ಞಾನವನ್ನು ಬಳಸಲಾಗಿದೆ ಎಂದು ಆರೋಪಿಸಲಾಗಿದೆ. ಹಾಗೇ   ಅತಿಶಿ ಸರ್ಕಾರಿ ವಾಹನವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆಂದು ಅತಿಶಿ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.

ದೆಹಲಿಯಲ್ಲಿ ‘ರಾಗಾ’ ಬದಲಾಗಿದ್ದೇಕೆ?

ದೆಹಲಿ ಎಲೆಕ್ಷನ್ ಱಲಿ ವೇಳೆ ರಾಹುಲ್ ಗಾಂಧಿ ಮೋದಿ ಮತ್ತು ಕೇಜ್ರಿವಾಲ್ ಒಂದೇ ಎಂದು ಹೇಳಿದ್ದಾರೆ. ಹಣದುಬ್ಬರವನ್ನು ಕಡಿಮೆ ಮಾಡುವ ಭರವಸೆಗಳನ್ನು ಈಡೇರಿಸುವಲ್ಲಿ ಮೋದಿ- ಕೇಜ್ರಿವಾಲ್ ಈ ಇಬ್ಬರೂ ನಾಯಕರು ವಿಫಲರಾಗಿದ್ದಾರೆ. ಅವರು ಬಡವರನ್ನು ಇನ್ನಷ್ಟು ಬಡವರನ್ನಾಗಿ ಮಾಡುತ್ತಾರೆ ಮತ್ತು ಶ್ರೀಮಂತರು ಶ್ರೀಮಂತರಾಗುತ್ತಲೇ ಇರುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಮೋದಿಯನ್ನ ಸೋಲಿಸೋಕೆ ಸಂಸತ್ ಎಲೆಕ್ಷನ್‌ನಲ್ಲಿ ಒಂದಾಗಿದ್ದ ರಾಹುಲ್ ಮತ್ತು ಕೇಜ್ರಿವಾಲ್ , ಈಗ ಕೇಜ್ರಿವಾಲ್ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.

 

 

Kishor KV

Leave a Reply

Your email address will not be published. Required fields are marked *