ಶ್ರೇಷ್ಠಾ ಕೆನ್ನೆಗೆ ಬಾರಿಸಿದ ತಾಂಡವ್‌ – ಗಂಡನ ಒಲಿಸಿಕೊಳ್ತಾಳಾ ಭಾಗ್ಯ?
ಕುಸುಮಾ ಪ್ಲ್ಯಾನ್‌ ವರ್ಕ್‌ ಆಯ್ತಾ?

ಶ್ರೇಷ್ಠಾ ಕೆನ್ನೆಗೆ ಬಾರಿಸಿದ ತಾಂಡವ್‌ – ಗಂಡನ ಒಲಿಸಿಕೊಳ್ತಾಳಾ ಭಾಗ್ಯ?ಕುಸುಮಾ ಪ್ಲ್ಯಾನ್‌ ವರ್ಕ್‌ ಆಯ್ತಾ?

ತಾಂಡವ್‌ ಮನೆಗೆ ಬಂದ ಶ್ರೇಷ್ಠಾಗೆ ಸದ್ಯ ನೆಮ್ಮದಿಯೇ ಇಲ್ಲ ಅನ್ನೋ ತರ ಆಗಿದೆ. ಯಾಕಂದ್ರೆ ಸೊಸೆ ಸೊಸೆ ಅಂತಾ ಹೇಳ್ಕೊಂಡು ಕುಸುಮಾ ಕೊಡೋ ಕಾಟಕ್ಕೆ ಆಕೆ ಸುಸ್ತಾಗಿ ಹೋಗಿದ್ದಾಳೆ. ಇದೀಗ ಕುಸುಮಾ, ಭಾಗ್ಯ ಪ್ಲ್ಯಾನ್‌ ವರ್ಕೌಟ್‌ ಆದಂತೆ ಕಾಣ್ತಿದೆ.. ತಾಂಡವ್‌ ಶ್ರೇಷ್ಠಾಗೆ ಕಪಾಳಮೋಕ್ಷ ಮಾಡಿದ್ದಾನೆ.. ಶ್ರೇಷ್ಠಾ ಮೇಲೆ ಸಿಟ್ಟಾದ ತಾಂಡವ್‌ ಈಗ ಆಕೆಯನ್ನ ಮನೆಯಿಂದ ಹೊರ ಹಾಕ್ತಾನಾ? ಆತನ ಮುಂದಿನ ನಡೆ ಏನು ಅನ್ನೋದು ವೀಕ್ಷಕರಲ್ಲಿ ಮೂಡಿದೆ.

ಇದನ್ನೂ ಓದಿ: 790 ದಿನ.. ಶಮಿ ಈಸ್ ಬ್ಯಾಕ್ – ಭಾರತಕ್ಕೆ ಸ್ವಿಂಗ್ ಬೌಲಿಂಗ್ ಬ್ರಹ್ಮಾಸ್ತ್ರ

ಭಾಗ್ಯಲಕ್ಷ್ಮೀ ಸೀರಿಯಲ್‌ ಸದ್ಯ ರೋಚಕ ತಿರುವು ಪಡೆದುಕೊಂಡಿದೆ. ಶ್ರೇಷ್ಠಾ ಏನೇನೋ ಡ್ರಾಮಾ ಮಾಡಿ ತಾಂಡವ್‌ ಮನೆಗೆ ಸೇರಿದ್ದಾಳೆ.. ಕುಸುಮಾ ಕೂಡ ಸೊಸೆ ಪಟ್ಟ ಕೊಟ್ಟು ಆಕೆಯನ್ನ ಮನೆಗೆ ಸೇರಿಸಿಕೊಂಡಿದ್ದಾಳೆ. ಸೊಸೆ ಪಟ್ಟ ಸಿಕ್ಕಿದೆ. ಇನ್ನು ತಾಂಡವ್‌ ಜೊತೆ ಆರಾಮವಾಗಿ ಇರ್ಬೋದು ಅಂತಾ ಕನಸು ಕಂಡಿದ್ದ ಶ್ರೇಷ್ಠಾಗೆ ಕುಸುಮಾ ಸರಿಯಾಗೇ ಚಮಕ್‌ ಕೊಟ್ಟಿದ್ದಾಳೆ. ಒಂದು ನಿಮಿಷವೂ ಸುಮ್ಮನೆ ಕೂರಲು ಬಿಡದೇ ಮನೆ ಕೆಲಸ ಮಾಡಿಸಿದ್ದಾಳೆ. ಇದ್ರಿಂದ ಸುಸ್ತಾದ ಶ್ರೇಷ್ಠಾ ಮನೆ ಕೆಲಸದವಳನ್ನ ಕರ್ಕೊಂಡು ಬಂದಿದ್ದಾಳೆ.. ಇದೀಗ ಆಕೆಯೂ ಶ್ರೇಷ್ಠಾಗೆ ಉಲ್ಟಾ ಹೊಡೆದಿದ್ದಾಳೆ.

ಹೌದು, ಮನೆ ಕೆಲಸ ಸರೊಯಾಗಿ ಆದ್ರೆ ನಾನು ಕೆಲಸಕ್ಕೆ ಹೋಗಬಹುದು ಎಂಬ ಕಾರಣಕ್ಕೆ ಶ್ರೇಷ್ಠಾ, ಕೆಲಸ ಮಾಡಲು ಕೆಲಸದವಳನ್ನು ಕರ್ಕೊಂಡು ಬಂದಿದ್ದಾಳೆ. ಆದ್ರೆ ಮನೆ ಕೆಲಸ ಮಾಡೋ ಬದಲು ಮನೆಯವರಿಗೇ ಅವಾಸ್‌ ಹಾಕ್ತಾಳೆ.. ಕೆಲಸ ಮಾಡುವ ಬದಲು ಆರಾಮವಾಗಿ ಕುಳಿತು ಟಿವಿ ನೋಡುತ್ತಾಳೆ. ಮನೆ ನನ್ನದೇ ಎಂಬುವಂತೆ ವರ್ತಿಸುತ್ತಾಳೆ. ಅದನ್ನು ಕೇಳಲು ಬಂದ ಕುಸುಮಾಗೆ ಗೌರವ ಕೊಡದೆ ಬಾಯಿಗೆ ಬಂದಂತೆ ಮಾತನಾಡುತ್ತಾಳೆ. ತನಗೆ ಹೊಡೆದ ಕುಸುಮಾಳನ್ನು ತಳ್ಳುತ್ತಾಳೆ.. ಈ ವಿಚಾರವನ್ನು ತಾಂಡವ್‌ಗೆ ಹೇಳಲು ಕುಸುಮಾ ಪ್ರಯತ್ನಿಸುತ್ತಾಳೆ. ಆದ್ರೆ ಶ್ರೇಷ್ಠಾ ಇದನ್ನ ತಪ್ಪಿಸುತ್ತಾ ಬಂದಿದ್ದಾಳೆ.. ಕೊನೆಗೆ ಕುಸುಮಾ ನೇರವಾಗಿ ತಾಂಡವ್‌ ಬಾಸ್‌ ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ..

ವಿಚಾರ ತಿಳಿದ ತಾಂಡವ್‌ ಮನೆಯಲ್ಲೇನೋ ಆಗಿದೆ ಎಂದು ತಾಂಡವ್ ಅಮ್ಮನಿಗೆ ಕಾಲ್ ಮಾಡುತ್ತಾನೆ. ಕುಸುಮಾ, ನಡೆದ ವಿಷಯವನ್ನು ತಾಂಡವ್‌ಗೆ ಹೇಳುತ್ತಾಳೆ. ಇದನ್ನು ಹೇಳೋಕೆ ಕಾಲ್ ಮಾಡಿದ್ಯಾ ಎಂದು ತಾಂಡವ್ ನಿರ್ಲಕ್ಷ್ಯವಾಗಿ ಮಾತನಾಡುತ್ತಾನೆ. ನಿಮ್ಮ ಅಪ್ಪನಿಗೆ ಆಕ್ಸಿಡೆಂಟ್ ಆದಾಗ ಭಾಗ್ಯಾಗೆ ಅಷ್ಟು ಬೈದೆ, ಈಗ ಆ ಶ್ರೇಷ್ಠಾಳಿಂದ ನನಗೆ ಅವಮಾನವಾಗಿದೆ, ಏನೂ ಹೇಳುವುದಿಲ್ಲವಾ ಎಂದು ಕೇಳುತ್ತಾಳೆ. ಇನ್ನು ಕೆಲಸದವಳು ಫೇಸ್‌ಬುಕ್ ಲೈವ್ ಬಂದು ನನಗೆ ಈ ಮನೆಯವರಿಂದ ಅನ್ಯಾಯವಾಗುತ್ತಿದೆ ಎಂದು ಹೇಳುತ್ತಾಳೆ. ಅಷ್ಟರಲ್ಲಿ ಶ್ರೇಷ್ಠಾ ಬಂದು ಆ ಫೋನ್ ಕಿತ್ತುಕೊಂಡಿದ್ದಾಳೆ. ಲೈವ್ ಮಾಡಲು ನಿನಗೆ ಯಾರು ಹೇಳಿದ್ದು ಎಂದು ಕೇಳುತ್ತಾಳೆ. ಇದೆಲ್ಲವೂ ನಿನ್ನಿಂದಲೇ ಆಗಿದ್ದು, ಮನೆ ಕೆಲಸ ಮಾಡೋಕೆ ಇವಳನ್ನು ಕರೆದುಕೊಂಡು ಬಾ ಎಂದು ಯಾರು ಹೇಳಿದ್ದು ಎಂದು ಮನೆಯವರೆಲ್ಲಾ ಹೇಳಿದ್ದಾರೆ.. ಈ ಮನೆಗೆ ಸಹಾಯವಾಗಲಿ ಎಂದು ನಾನು ಕರೆದುಕೊಂಡು ಬಂದೆ, ಅದನ್ನು ಉಳಿಸಿಕೊಳ್ಳುವ ಯೋಗ್ಯತೆ ನಿಮಗಿಲ್ಲ. ಮನೆ ಕೆಲಸದವಳನ್ನೆ ಕಾಣದ ನಿಮ್ಮಂಥ ಮಿಡ್ಸ್ ಕ್ಲಾಸ್ ಮನೆಗೆ ಹೈ ಫೈ ಜೀವನ ಕೊಡಲು ಪ್ರಯತ್ನಿಸುತ್ತಿದ್ದೇನೆ ಎಂದು ಶ್ರೇಷ್ಠಾ ಹೇಳುತ್ತಾಳೆ.. ಅಷ್ಟರಲ್ಲಿ ತಾಂಡವ್ ಬಂದು ಶ್ರೇಷ್ಠಾ ಕೆನ್ನೆಗೆ ಬಾರಿಸುತ್ತಾನೆ. ನಮ್ಮ ಮನೆಯವರ ಬಗ್ಗೆ ಈ ರೀತಿ ಮಾತನಾಡಲು ನಿನಗೆ ಎಷ್ಟು ಧೈರ್ಯ ಎನ್ನುತ್ತಾನೆ. ತಾಂಡವ್ ಈ ರೀತಿ ಶ್ರೇಷ್ಠಾಗೆ ಹೊಡೆಯುವುದನ್ನು ನೋಡಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಇನ್ನು ಮುಂದೆ ತಾಂಡವ್‌ ಬದಲಾಗುತ್ತಾನೆ ಎಂದು ಎಲ್ಲರೂ ಅಂದುಕೊಳ್ತಾರೆ.. ಆದ್ರೆ ತಾಂಡವ್‌ ಈಗ ಮನೆಯವರಿಗೆ ಶಾಕ್‌ ಕೊಟ್ಟಿದ್ದಾನೆ.. ಶ್ರೇಷ್ಠಾ ಜೊತೆ ಮನೆ ಬಿಟ್ಟು ಹೋಗಲು ನಿರ್ಧಾರ ಮಾಡಿದ್ದಾನೆ. ಇದೀಗ ಕುಸುಮಾ ಭಾಗ್ಯ ಮುಂದೇನು ಮಾಡ್ತಾರೆ.. ತಾಂಡವ್‌ ನನ್ನು ಮನೆಯಲ್ಲೇ ಉಳಿಸಿಕೊಳ್ತಾರಾ ಅಂತ ಕಾದುನೋಡ್ಬೇಕು.

Shwetha M

Leave a Reply

Your email address will not be published. Required fields are marked *