ಪಂದ್ಯದ ಆರಂಭಕ್ಕೂ ಮೊದಲೇ ಶಮಿ ಔಟ್
ಟೀಮ್ ಇಂಡಿಯಾ ಸೇರಿಕೊಂಡ ಉಮ್ರಾನ್ ಮಲಿಕ್

ಪಂದ್ಯದ ಆರಂಭಕ್ಕೂ ಮೊದಲೇ ಶಮಿ ಔಟ್ಟೀಮ್ ಇಂಡಿಯಾ ಸೇರಿಕೊಂಡ ಉಮ್ರಾನ್ ಮಲಿಕ್

ಏಕದಿನ ಸರಣಿಗಾಗಿ ಬಾಂಗ್ಲಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಆಟಗಾರರಿಗೆ ಮೊದಲ ಪಂದ್ಯಕ್ಕೂ ಮೊದಲೇ ಆಘಾತ ಉಂಟಾಗಿದೆ. ತಂಡದ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಾದ ಮೊಹಮ್ಮದ್ ಶಮಿ ಇಂಜುರಿಯಿಂದಾಗಿ ಈ ಸರಣಿಯಿಂದ ಹೊರಗುಳಿದಿದ್ದಾರೆ. ಇವರ ಬದಲು ಯುವ ವೇಗಿ ಜಮ್ಮು ಎಕ್ಸ್‌ ಪ್ರೆಸ್ ಉಮ್ರಾನ್ ಮಲಿಕ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ಬಿಸಿಸಿಐ ಹೇಳಿದೆ.

ಇದನ್ನೂ ಓದಿ:  ಏಕದಿನ ಸರಣಿಗಾಗಿ ಢಾಕಾದಲ್ಲಿ ಟೀಮ್ ಇಂಡಿಯಾ ಆಟಗಾರರಿಂದ ಅಭ್ಯಾಸ

ಈ ಸರಣಿಯ ಮೊದಲ ಪಂದ್ಯ ಡಿಸೆಂಬರ್ 4, ಭಾನುವಾರದಂದು ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮೊದಲು ಟೀಮ್ ಇಂಡಿಯಾ ದೊಡ್ಡ ಹಿನ್ನಡೆ ಅನುಭವಿಸಿದೆ. ತಂಡದ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಾದ ಮೊಹಮ್ಮದ್ ಶಮಿ ಇಂಜುರಿಯಿಂದಾಗಿ ಈ ಸರಣಿಯಿಂದ ಹೊರಗುಳಿದಿದ್ದಾರೆ. ಶಮಿ ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಆಡಿದ್ದರು. ನಂತರ ವಿಶ್ರಾಂತಿ ಪಡೆದಿದ್ದ ಶಮಿ, ನ್ಯೂಜಿಲೆಂಡ್ ಪ್ರವಾಸಕ್ಕೂ ಹೋಗಿರಲಿಲ್ಲ. ಹೀಗಾಗಿ ಅವರನ್ನು ಬಾಂಗ್ಲಾದೇಶ ಸರಣಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಈಗ ಗಾಯದಿಂದಾಗಿ ಶಮಿ ಮತ್ತೊಮ್ಮೆ ತಂಡದಿಂದ ಹೊರಗುಳಿಯಲ್ಲಿದ್ದಾರೆ. ಜಸ್ಪ್ರಿತ್ ಬುಮ್ರಾ ಅನುಪಸ್ಥಿತಿಯಲ್ಲಿದ್ದ ತಂಡಕ್ಕೆ ಶಮಿ ಕೂಡಾ ಹೊರನಡೆದಿರುವುದು ಸ್ವಲ್ಪ ಮಟ್ಟಿನ ಹಿನ್ನಡೆಯಾಗಿದೆ. ಆದರೆ, ವಿಶ್ವ ಕ್ರಿಕೆಟ್‌ನಲ್ಲಿ ತನ್ನ ವೇಗದಿಂದಲೇ ಮನೆ ಮಾತಾಗಿರುವ ಉಮ್ರಾನ್ ಮಲಿಕ್ ಇತ್ತೀಚೆಗೆ ನ್ಯೂಜಿಲೆಂಡ್‌sನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ಇವರ ಆಯ್ಕೆಯಿಂದ ಬೌಲಿಂಗ್ ಬಲ ಹೆಚ್ಚಾಗಲಿದೆ.

suddiyaana