ತೆಂಡೂಲ್ಕರ್ TO ಸೆಂಟ್ರಲ್ ಮಿನಿಸ್ಟರ್ -ಸುಶೀಲ ಮೀನಾಗೆ ಕೇಂದ್ರ ಸಚಿವರ ಅಭಯ
ಸುಶೀಲ ಮೀನಾ. ರಾಜಸ್ತಾನದ ಈ 12 ವರ್ಷದ ಹುಡುಗಿ ಬೌಲಿಂಗ್ ಬಗ್ಗೆ ಹಿಂದಿನ ಎಪಿಸೋಡ್ನಲ್ಲಿ ಒಂದಷ್ಟು ಮಾಹಿತಿಯನ್ನ ನೀಡಿದ್ದೆ. ಇದೀಗ ಅದೇ ಬಾಲಕಿ ಬದುಕಿನಲ್ಲಿ ಆಗಿರುವಂಥ ಒಂದಷ್ಟು ಬದಲಾವಣೆಗಳ ಬಗ್ಗೆ ಇವತ್ತಿನ ಎಪಿಸೋಡ್ನಲ್ಲಿ ಹೇಳ್ತೇನೆ. ಜಹೀರ್ ಖಾನ್ ಅಂದ್ರೆ ಒಂದ್ ಕಾಲದಲ್ಲಿ ಯುವ ಕ್ರಿಕೆಟಿಗರಿಗೆ ಸ್ಪೂರ್ತಿ. ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯಂತೂ ಜಹೀರ್ ಖಾನ್ ಬೌಲಿಂಗ್ ವಿಭಾಗದ ಸಚಿನ್ ತೆಂಡೂಲ್ಕರ್ ಇದ್ದಂತೆ ಅಂತಾ ಜಹೀರ್ ಸ್ಟ್ರೆಂಥ್ ಬಗ್ಗೆ ಗುಣಗಾನ ಮಾಡಿದ್ದರು. ಥೇಟ್ ಜಹೀರ್ ಖಾನ್ ರೀತಿಯೇ ಬೌಲಿಂಗ್ ಮಾಡಿದ ಹಳ್ಳಿ ಹುಡುಗಿ ದೇಶದ ಗಮನ ಸೆಳೆದಿದ್ದಾಳೆ. ಸುಶೀಲ ಮೀನಾಗೆ ಸ್ವತಃ ಕ್ರೀಡಾಸಚಿವರೇ ಕ್ಲೀನ್ ಬೌಲ್ಡ್ ಆಗಿದ್ದಾರೆ. ಸುಶೀಲಾ ಮೀನಾ ಬಗ್ಗೆ ಇಂಪಾರ್ಟೆಂಟ್ ಡಿಸಿಶನ್ಗೆ ಬಂದಿದ್ದಾರೆ.
ಇದನ್ನೂ ಓದಿ : ಚಾಂಪಿಯನ್ಸ್ ಟ್ರೋಫಿಯಲ್ಲಿ ಬಹಿಷ್ಕಾರ – ಪಾಕ್ ಜೊತೆಗೆ ಯಾರೆಲ್ಲಾ ಟಾರ್ಗೆಟ್?
ಅಪ್ಪಟ ಗ್ರಾಮೀಣ ಪ್ರತಿಭೆ. ಅದು ಕೂಡಾ ಥೇಟ್ ಎಡಗೈ ವೇಗಿ ಜಹೀರ್ ಖಾನ್ ರೀತಿಯೇ ಬೌಲಿಂಗ್. ರಾಜಸ್ಥಾನ ಮೂಲದ ಈ ಪುಟ್ಟ ಹುಡುಗಿ, ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಜಹೀರ್ ಖಾನ್ ಅವರಂತೆ ಬೌಲಿಂಗ್ ಮಾಡುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಸುಶೀಲಾ ಮೀನಾ ಬೌಲಿಂಗ್ ಮಾಡುವ ಶೈಲಿಗೆ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಕೂಡಾ ಬೆರಗಾಗಿದ್ದರು. ಸುಶೀಲ್ ಮೀನಾ ಬೌಲಿಂಗ್ ವಿಡಿಯೋವನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈಕೆಯ ಬೌಲಿಂಗ್ ಜಹೀರ್ ಖಾನ್ ಅವರ ಬೌಲಿಂಗ್ ಶೈಲಿಯನ್ನು ಹೋಲುವಂತಿದೆ ಎಂದು ಕ್ಯಾಪ್ಶನ್ ನೀಡಿದ್ದರು. ಜೊತೆಗೆ ಈ ವಿಡಿಯೋವನ್ನ ಎಡಗೈ ವೇಗಿ ಜಹೀರ್ ಖಾನ್ಗೂ ಟ್ಯಾಗ್ ಮಾಡಿದ್ದರು. ಜಹೀರ್ ಖಾನ್ ಕೂಡಾ ಸುಶೀಲಾ ಮೀನಾ ಬೌಲಿಂಗ್ ಸ್ಟೈಲ್ ಮೆಚ್ಚಿಕೊಂಡಿದ್ದರು.
ಇದೀಗ ಸುಶೀಲ್ ಮೀನಾ ಲಕ್ಕೇ ಚೇಂಜ್ ಆಗಿದೆ. ಕ್ರಿಕೆಟ್ ದೇವರ ವರದಿಂದಾಗಿ ಸಾಕಷ್ಟು ಪ್ರಚಾರ ಪಡೆದ ಸುಶೀಲ್ ಮೀನಾ ಪ್ರತಿಭೆಯ ವಿಡಿಯೋ ಸೀದಾ ದೆಹಲಿಯ ಕ್ರೀಡಾ ಸಚಿವಾಲಯದವರೆಗೂ ಹೋಗಿ ತಲುಪಿದೆ. ಕೇಂದ್ರ ಕ್ರೀಡಾಸಚಿವ ಹಾಗೂ ಒಲಿಂಪಿಕ್ ಪದಕ ವಿಜೇತ ರಾಜವರ್ಧನ್ ಸಿಂಗ್ ರಾಥೋಡ್ ಕೂಡಾ ಸುಶೀಲ ಮೀನಾ ಬೌಲಿಂಗ್ ಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ. ಸ್ವತಃ ರಾಜವರ್ಧನ್ ಸಿಂಗ್ ರಾಥೋಡ್ ಅವರೇ ತಮ್ಮ ಅಧಿಕೃತ ಟ್ವಿಟರ್(ಎಕ್ಸ್) ಖಾತೆಯಲ್ಲಿ ವಿಡಿಯೋವಂದನ್ನು ಹಂಚಿಕೊಂಡಿದ್ದಾರೆ. ಸುಶೀಲ್ ಮೀನಾ ಪ್ರತಿಭೆಯನ್ನ ಮೆಚ್ಚಿಕೊಂಡ ರಾಜಸ್ಥಾನ ಕ್ರಿಕೆಟ್ ಸಂಸ್ಥೆ ಈಕೆಯ ಪರ ನಿಂತಿದೆ. ಹಳ್ಳಿ ಹುಡುಗಿಯ ಸಂಪೂರ್ಣ ಶಿಕ್ಷಣ ಹಾಗೂ ಕ್ರಿಕೆಟ್ ಟ್ರೈನಿಂಗ್ ಜವಾಬ್ದಾರಿಯ ಹೊಣೆಯನ್ನು ಹೊತ್ತುಕೊಳ್ಳುವುದಾಗಿ ರಾಜಸ್ಥಾನ ಕ್ರಿಕೆಟ್ ಸಂಸ್ಥೆ ಅಧಿಕೃತವಾಗಿ ಘೋಷಿಸಿದೆ. ರಾಜವರ್ಧನ್ ಸಿಂಗ್ ಅವರ ಸಮ್ಮುಖದಲ್ಲೇ ಸುಶೀಲಾ ಮೀನಾ ಹಾಗೂ ಮತ್ತವರ ಪೋಷಕರನ್ನು ರಾಜಸ್ಥಾನ ಕ್ರಿಕೆಟ್ ಸಂಸ್ಥೆ ಸನ್ಮಾನಿಸಿದೆ. ಇನ್ನು ಇದೇ ಸಂದರ್ಭದಲ್ಲಿ ರಾಜವರ್ಧನ್ ಸಿಂಗ್ ರಾಥೋಡ್ ಅವರು ಸುಶೀಲಾ ಮೀನಾ ಅವರಿಗೆ ಕ್ರಿಕೆಟ್ ಕಿಟ್ ಉಡುಗೊರೆಯಾಗಿ ನೀಡಿದರು. ಸುಶೀಲಾ ಮೀನಾ ಅವರು ಕಳೆದ ಮೂರು ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದಾರೆ.