ಭಾರತದಲ್ಲಷ್ಟೇ ಪ್ರಿನ್ಸ್.. ಜೈಸ್ವಾಲ್ ಮುಂದೆ ಗಿಲ್ ಡಲ್ – ವಿದೇಶಿ ನೆಲದಲ್ಲಿ ಪಲ್ಟಿ ಯಾಕೆ?

ಟೀಂ ಇಂಡಿಯಾದಲ್ಲಿ ಈಗಂತೂ ಯಂಗ್ ಪ್ಲೇಯರ್ಸ್ ದಂಡೇ ಇದೆ. ಒಂದೊಂದು ಸ್ಲಾಟ್ಗೂ ಮೂರ್ನಾಲ್ಕು ಆಟಗಾರರ ರೇಸ್ ಇದೆ. ಅದ್ರಲ್ಲೂ ಓಪನಿಂಗ್ ಸ್ಲಾಟ್ನಲ್ಲಿ ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ನಡುವೆ ಯಾರು ಬೆಸ್ಟ್ ಅನ್ನೋ ಟಾಪಿಕ್ ಬರ್ತಾನೆ ಇರುತ್ತೆ. ಮೊದ್ಲೆಲ್ಲಾ ಗಿಲ್ ಯಂಗ್ ಗನ್, ಫ್ಯೂಚರ್ ಕ್ಯಾಪ್ಟನ್ ಅಂತೆಲ್ಲಾ ಕರೀತಿದ್ರು. ಬಟ್ ಈಗ ಗಿಲ್ಗಿಂತ ಜೈಸ್ವಾಲ್ ಓಕೆ ಎನ್ನುವಂತಾಗಿದೆ. ಯಾಕಂದ್ರೆ ಶುಭ್ಮನ್ ಗಿಲ್ ಭಾರತದಲ್ಲಿ ಅಬ್ಬರಿಸಿದ್ರೂ ಕೂಡ ವಿದೇಶದಲ್ಲಿ ಠುಸ್ ಪಟಾಕಿಯಾಗಿದ್ದಾರೆ.
ಇದನ್ನೂ ಓದಿ : ಟೀಂ ಹಾಳು ಮಾಡಿದ್ದೇ BCCI – ಸಚಿನ್ ಗಿದ್ದ ಶ್ರದ್ಧೆ ರೋಹಿತ್, ಕೊಹ್ಲಿ, ರಾಹುಲ್ ಗೆ ಇಲ್ವಾ?
ಕ್ರಿಕೆಟ್ ಅಂಗಳದಲ್ಲಿ ಸಂಚಲನ ಸೃಷ್ಟಿಸ್ತಿದ್ದ ಗಿಲ್ ಈಗ ಕಳಪೆ ಫಾರ್ಮ್ನಿಂದ ಒದ್ದಾಡ್ತಿದ್ದಾರೆ. 2020/21 ರಲ್ಲಿ ಆಸ್ಟ್ರೇಲಿಯಾದಲ್ಲಿ ಚೊಚ್ಚಲ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಗಿಲ್, ಅಂದಿನಿಂದ ಏಷ್ಯಾದ ಹೊರಗೆ ರನ್ ಗಳಿಸಲು ಹೆಣಗಾಡುತ್ತಿದ್ದಾರೆ, 18 ಇನ್ನಿಂಗ್ಸ್‌ಗಳಲ್ಲಿ ಕೇವಲ 17.64 ಸರಾಸರಿ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು ಒಮ್ಮೆಯೂ 40 ರನ್‌ಗಳ ಗಡಿ ದಾಟಿಲ್ಲ. 2024/25ರ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ 13, 20, 1, 28, ಮತ್ತು 31 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ. ಆದ್ರೆ ಅಹದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗಿಲ್ ಅವರ ಬ್ಯಾಟಿಂಗ್ ಸರಾಸರಿ ಅದ್ಭುತವಾಗಿದೆ. ಅಂದರೆ 2021 ರಿಂದ 2024 ರವರೆಗೆ ಗಿಲ್ ಅಹಮದಾಬಾದ್ನಲ್ಲಿ 19 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಕಲೆಹಾಕಿರುವುದು ಬರೋಬ್ಬರಿ 1079 ರನ್ಗಳು. ಅಲ್ಲದೆ 4 ಶತಕಗಳನ್ನು ಸಹ ಬಾರಿಸಿದ್ದಾರೆ. ಅಹದಾಬಾದ್ನಲ್ಲಿ ಆಡಿದ ಕಳೆದ 19 ಪಂದ್ಯಗಳಲ್ಲಿ 71.93 ಸರಾಸರಿಯಲ್ಲಿ ರನ್ ಕಲೆಹಾಕಿರುವ ಶುಭ್ಮನ್ ಗಿಲ್, ಏಷ್ಯಾದ ಹೊರಗೆ 18 ಇನಿಂಗ್ಸ್ಗಳಿಂದ ಗಳಿಸಿದ್ದು 300+ ರನ್ಗಳು ಮಾತ್ರ. ಅದು ಸಹ ಕೇವಲ 17.64 ರ ಸರಾಸರಿಯಲ್ಲಿ. ಹೀಗಾಗಿಯೇ ಅಹದಾಬಾದ್ನ ಪ್ರಿನ್ಸ್ ವಿದೇಶದಲ್ಲಿ ಠುಸ್ ಎನ್ನುವಂತಾಗಿದೆ.
ಕಳೆದ ನಾಲ್ಕು ವರ್ಷಗಳಿಂದಲೂ ಟೀಂ ಇಂಡಿಯಾ ಪರ ಆಡ್ತಿರುವ ಶುಭ್ಮನ್ ಗಿಲ್ ಮೊದಲ ಬಾರಿಗೆ ಏಕದಿನ ಕ್ರಿಕೆಟ್ ಮೂಲಕ ಭಾರತ ತಂಡದ ಪರ ಡೆಬ್ಯೂ ಮಾಡಿದ್ರು. 2019ರ ಜನವರಿ 31ರಂದು ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಕಣಕ್ಕಿಳಿದಿದ್ರು. ಇನ್ನು 2020ರ ಡಿಸೆಂಬರ್ 26ರಂದು ಭಾರತದ ಪರ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ರು. 2023ರ ಜನವರಿ 3ರಂದು ಶ್ರೀಲಂಕಾ ವಿರುದ್ಧ ವಾಂಖೇಡೆಯಲ್ಲಿ ಟಿ-20ಐ ಕ್ರಿಕೆಟ್ಗೂ ಕಾಲಿಟ್ಟಿದ್ರು. ಸದ್ಯ ಟೀಂ ಇಂಡಿಯಾ ಪರ ಮೂರೂ ಸ್ವರೂಪಗಳಲ್ಲೂ ಆಡ್ತಿದ್ದಾರೆ. ಈವರೆಗೂ 32 ಟೆಸ್ಟ್ ಪಂದ್ಯಗಳಲ್ಲಿ 59 ಇನ್ನಿಂಗ್ಸ್‌ಗಳಲ್ಲಿ ಕಣಕ್ಕಿಳಿದು 1893 ರನ್ ಕಲೆ ಹಾಕಿದ್ದಾರೆ. ಇದ್ರಲ್ಲಿ 5 ಸೆಂಚುರಿಗಳಿವೆ. 47 ಏಕದಿನ ಪಂದ್ಯಗಳಲ್ಲಿ 2328 ರನ್ ಕಲೆ ಹಾಕಿದ್ದಾರೆ. 21 ಟಿ-20ಐ ಪಂದ್ಯಗಳನ್ನ ಆಡಿದ್ದು 578 ರನ್ ಬಾರಿಸಿದ್ದಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಗಿಲ್ ಪ್ರದರ್ಶನ ತೀರಾ ಕಳಪೆ ಅನ್ನಿಸ್ತಿದೆ. ಹೀಗಾಗೇ ಗಿಲ್ಗಿಂತ ಜೈಸ್ವಾಲ್ ಬೆಸ್ಟ್ ಅಂತಾ ಕ್ರಿಕೆಟ್ ಎಕ್ಸ್ಪರ್ಟ್ಸ್ ಕೂಡ ಹೇಳ್ತಿದ್ದಾರೆ. ಅದಕ್ಕೆ ಕಾರಣ ಜೈಸ್ವಾಲ್ ಪರ್ಫಾಮೆನ್ಸ್.
2023ರ ಜುಲೈ 12ರಂದು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಮ್ಯಾಚ್ನಲ್ಲಿ ಲೆಫ್ಟ್ ಹ್ಯಾಂಡ್ ಬ್ಯಾಟರ್ ಯಶಸ್ವಿ ಜೈಸ್ವಾಲ್ ಟೀಂ ಇಂಡಿಯಾ ಪರ ಪದಾರ್ಪಣೆ ಮಾಡಿದ್ರು. ಹಾಗೇ 2023ರ ಆಗಸ್ಟ್ 8ರಂದು ಅದೇ ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಪಂದ್ಯದಲ್ಲಿ ಮೊದಲ ಬಾರಿಗೆ ಚುಟುಕು ಫಾರ್ಮೆಟ್ಗೆ ಕಣಕ್ಕಿಳಿದಿದ್ರು. ಬಟ್ ಈವರೆಗೂ ಏಕದಿನ ಸರಣಿಯಲ್ಲಿ ಭಾರತದ ಪರ ಕಣಕ್ಕಿಳಿಯೋ ಅವಕಾಶ ಸಿಕ್ಕಿಲ್ಲ. ಕಳೆದ ಒಂದೂವರೆ ವರ್ಷಗಳ ಅವಧಿಯಲ್ಲಿ ಭಾರತದ ಪರ 19 ಟೆಸ್ಟ್ ಪಂದ್ಯಗಳನ್ನ ಆಡಿರುವ ಜೈಸ್ವಾಲ್ 36 ಇನ್ನಿಂಗ್ಸ್ ಗಳಿಂದ 1798 ರನ್ ಕಲೆ ಹಾಕಿದ್ದಾರೆ. ಇದ್ರಲ್ಲಿ 214 ರನ್ ಗಳಿಸಿ ನಾಟೌಟ್ ಆಗಿರೋದೇ ಹೈಯೆಸ್ಟ್ ಸ್ಕೋರ್. ಹಾಗೇ 4 ಶತಕಗಳೂ ಕೂಡ ಇವೆ. ಇನ್ನು 23 ಟಿ-20ಐ ಪಂದ್ಯಗಳಲ್ಲಿ 723 ರನ್ ಬಾರಿಸಿದ್ದಾರೆ.