ಜಗತ್ತನ್ನೇ ಗೆದ್ದ ಕುಳ್ಳ ಕ್ಯಾಪ್ಟನ್ – ಸೌತ್ ಆಫ್ರಿಕಾ ಹೀರೋ ಟೆಂಬಾ ಬವುಮಾ

ಸೌತ್ ಆಫ್ರಿಕಾ ಕ್ರಿಕೆಟ್ ತಂಡ ಇತ್ತೀಚೆಗೆ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಐಸಿಸಿ ಟಿ-20 ವಿಶ್ವಕಪ್ ಫಿನಾಲೆ ಫೈನಲ್ ತಲುಪಿದ್ದ ಟೀಂ ಈಗ ವಿಶ್ವಟೆಸ್ಟ್ ಚಾಂಪಿಯನ್ಶಿಪ್ಗೂ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇದು ಇಡೀ ಟೀಂ ಎಫರ್ಟ್ ಆದ್ರೂ ಕೂಡ ತಂಡದ ನಾಯಕ ಟೆಂಬಾ ಬವುಮಾ ಮಾತ್ರ ಹೀರೋ ಆಗಿ ಕಾಣ್ತಿದ್ದಾರೆ. 2023ರ ಏಕದಿನ ವಿಶ್ವಕಪ್ನ ಸೆಮಿಫೈನಲ್ನಲ್ಲಿ ಸೋಲು ಕಂಡ ಬಳಿಕ ಟೆಂಬಾ ನಾಯಕತ್ವ ಬಿಡಬೇಕು ಅಂತಾ ಕ್ರಿಕೆಟ್ ತಜ್ಞರು ಟೀಕೆ ಮಾಡಿದ್ರು. ಬಟ್ ಈಗ ಅವ್ರೆಲ್ಲಾ ಅತ್ಯುತ್ತಮ ನಾಯಕ ಅಂತಾ ಪ್ರಶಂಸೆ ಮಾಡ್ತಿದ್ದಾರೆ. ಯಾಕಂದ್ರೆ 2023-25ರ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್‌ಗೆ ದಕ್ಷಿಣ ಆಫ್ರಿಕಾ ಪ್ರವೇಶಿಸುವಲ್ಲಿ ಟೆಂಬಾ ಅವರ ಪಾತ್ರ ತುಂಬಾನೇ ಇಂಪಾರ್ಟೆಂಟ್ ಆಗಿತ್ತು.
ಇದನ್ನೂ ಓದಿ : ಇಂಗ್ಲೆಂಡ್ ಸರಣಿಗಿಲ್ಲ KL ರಾಹುಲ್ – ಚಾಂಪಿಯನ್ಸ್ ಟ್ರೋಫಿಗೆ ಸೆಲೆಕ್ಟ್ ಆಗಲ್ವಾ?
ಸೌತ್ ಆಫ್ರಿಕಾ ತಂಡದ ಇತ್ತೀಚಿನ ಬೆಸ್ಟ್ ಪರ್ಫಾಮೆನ್ಸ್ ಹಿಂದೆ ಟೆಂಬಾ ಬವುಮಾ ಅವರ ಪಾತ್ರ ದೊಡ್ಡದಿದೆ. ಬವುಮಾ ಅವರ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ಒಂಬತ್ತು ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಈ ಪೈಕಿ 8ರಲ್ಲಿ ಗೆದ್ದು ಬೀಗಿದೆ. ಇನ್ನೊಂದು ಪಂದ್ಯ ಡ್ರಾಗೊಂಡಿದೆ. ಅಂದ್ರೆ ಇಲ್ಲಿ ಒಂದೂ ಪಂದ್ಯಗಳಲ್ಲೂ ಸೋಲನ್ನ ಕಂಡಿಲ್ಲ. ತಂಡವನ್ನ ಯಶಸ್ವಿಯಾಗಿ ಮುನ್ನಡೆಸೋದ್ರ ಜೊತೆಗೆ ಟೆಂಬಾ ವೈಯಕ್ತಿಕವಾಗಿಯೂ ಮಿಂಚಿದ್ದಾರೆ. ತಮ್ಮ ನಾಯಕತ್ವದಲ್ಲಿ ಆಡಿದ 9 ಪಂದ್ಯಗಳಲ್ಲಿ 8 ಗೆಲುವಿನೊಂದಿಗೆ ಟೆಸ್ಟ್‌ನಲ್ಲಿ ಅತಿ ಕಡಿಮೆ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿ ಹೆಚ್ಚು ಗೆಲುವು ಸಾಧಿಸಿದ ನಾಯಕರ ಪಟ್ಟಿಗೆ ಸೇರಿದ್ದಾರೆ. ಆಸ್ಟ್ರೇಲಿಯಾದ ವಾರ್ವಿಕ್ ಆರ್ಮ್‌ಸ್ಟ್ರಾಂಗ್ ಮತ್ತು ಇಂಗ್ಲೆಂಡ್‌ನ ಪರ್ಸಿ ಚಾಪ್‌ಮನ್ ಕೂಡ 8 ಪಂದ್ಯಗಳನ್ನು ಗೆದ್ದಿದ್ದಾರೆ. ಆಸ್ಟ್ರೇಲಿಯಾದ ಲಿಂಡ್ಸೆ ಹ್ಯಾಸೆಟ್ ಕೂಡ 9 ಪಂದ್ಯಗಳನ್ನಾಡಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಫೆಬ್ರವರಿ 1951 ರಲ್ಲಿ ಹ್ಯಾಸೆಟ್ ನಾಯಕನಾಗಿ ಕೊನೆಯ ಬಾರಿ ಈ ಸಾಧನೆ ಮಾಡಿದ್ದರು. ಇದೀಗ 74 ವರ್ಷಗಳಲ್ಲಿ ಯಾವ ನಾಯಕನೂ ಮಾಡಲಾಗದ ಕೆಲಸವನ್ನು ಬವುಮಾ ಮಾಡಿದ್ದಾರೆ. ಇನ್ನು ಆರ್ಮ್‌ಸ್ಟ್ರಾಂಗ್ ಜುಲೈ 1921 ರಲ್ಲಿ ಮತ್ತು ಚಾಪ್ಮನ್ ಫೆಬ್ರವರಿ 1929 ರಲ್ಲಿ ಈ ಸಾಧನೆಗೆ ಪಾತ್ರರಾಗಿದ್ದರು.
ಮೂರ್ತಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು ಅಂತಾರಲ್ಲ ಆ ಸಾಲಿಗೆ ಸೇರಿದವ್ರು ಈ ಟೆಂಬಾ. ಕ್ರೀಸ್ನಲ್ಲಿ, ಕ್ರೀಡಾಂಗಣದಲ್ಲಿ ನಿಂತ್ರ ಜೊತೆಗಿದ್ದವರ ಮುಂದೆ ತುಂಬಾ ಚಿಕ್ಕವರಾಗಿ ಕಾಣೋ ಟೆಂಬಾ ಆಟ ಅಂತಾ ಬಂದ್ರೆ ಅಜಾನುಬಾಹು ಆಗಿ ಬಿಡ್ತಾರೆ. ಬ್ಯಾಟಿಂಗ್ನಲ್ಲಂತೂ ಅವ್ರ ಅದ್ಭುತ ಆಟ ನೋಡೋದೇ ಚೆಂದ. ಬವುಮಾ ದಕ್ಷಿಣ ಆಫ್ರಿಕಾದ ನಾಯಕರಾಗಿ 9 ಪಂದ್ಯಗಳಲ್ಲಿ 3 ಶತಕ ಮತ್ತು 4 ಅರ್ಧಶತಕಗಳೊಂದಿಗೆ 57.78ರ ಸರಾಸರಿಯಲ್ಲಿ 809 ರನ್ ಗಳಿಸಿದ್ದಾರೆ. ಈ ಬಾರಿ ದಕ್ಷಿಣ ಆಫ್ರಿಕಾವನ್ನು ಮೊದಲ ಬಾರಿಗೆ WTC ಫೈನಲ್‌ಗೆ ಕರೆದೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಡಬ್ಲ್ಯುಟಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಪಸ್ಟ್ ಪ್ಲೇಸ್ನಲ್ಲಿರೋದೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್. ಹಾಗೇ ಐಸಿಸಿ ಶ್ರೇಯಾಂಕದಲ್ಲಿ ದಕ್ಷಿಣ ಆಫ್ರಿಕಾ ಬಹಳ ದಿನಗಳ ನಂತರ ಎರಡನೇ ಸ್ಥಾನಕ್ಕೆ ತಲುಪಿದೆ. ಬವುಮಾ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಇನ್ನು ಕಳೆದ 10 ಪಂದ್ಯಗಳಲ್ಲಿ ಬವುಮಾ ಪ್ರದರ್ಶನ.
ಎದುರಾಳಿ ತಂಡ ಪಂದ್ಯ 1st ಇನ್ನಿಂಗ್ಸ್ 2nd ಇನ್ನಿಂಗ್ಸ್
ಆಸ್ಟ್ರೇಲಿಯಾ ಮೂರನೇ ಟೆಸ್ಟ್ 35 (74) 17 (42)
ವೆಸ್ಟ್ ಇಂಡೀಸ್ ಮೊದಲ ಟೆಸ್ಟ್ 0 (2) 0 (1)
ವೆಸ್ಟ್ ಇಂಡೀಸ್ ಎರಡನೇ ಟೆಸ್ಟ್ 28 (64) 172 (280)
ಭಾರತ ಮೊದಲ ಟೆಸ್ಟ್ 0 (0)
ವೆಸ್ಟ್ ಇಂಡೀಸ್ ಮೊದಲ ಟೆಸ್ಟ್ 86 (182) 15 (17)
ವೆಸ್ಟ್ ಇಂಡೀಸ್ ಎರಡನೇ ಟೆಸ್ಟ್ 0 (2) 4 (18)
ಶ್ರೀಲಂಕಾ ಮೊದಲ ಟೆಸ್ಟ್ 70 (117) 113 (228)
ಶ್ರೀಲಂಕಾ ಎರಡನೇ ಟೆಸ್ಟ್ 78 (109) 66 (116)
ಪಾಕಿಸ್ತಾನ ಮೊದಲ ಟೆಸ್ಟ್ 31 (74) 40 (78)
ಪಾಕಿಸ್ತಾನ ಎರಡನೇ ಟೆಸ್ಟ್ 106 (179)
ಹೀಗೆ ಬವುಮಾ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ಸತತ ಏಳು ಟೆಸ್ಟ್ ಪಂದ್ಯಗಳನ್ನು ಗೆದ್ದಿತ್ತು. ಅದಕ್ಕಿಂತ ಇಂಟ್ರೆಸ್ಟಿಂಗ್ ಅಂದ್ರೆ ಸತತ ಮೂರು ಸರಣಿಗಳನ್ನು 2-0 ಅಂತರದಿಂದ ಗೆದ್ದುಕೊಂಡಿದೆ. ಬವುಮಾ ತಮ್ಮ ವೃತ್ತಿಜೀವನದಲ್ಲಿ 63 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 38 ರ ಸರಾಸರಿಯಲ್ಲಿ 3606 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಶತಕಗಳು ಮತ್ತು 24 ಅರ್ಧ ಶತಕಗಳು ಸೇರಿವೆ. ಇತ್ತೀಚೆಗೆ ಪಾಕಿಸ್ತಾನದ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲೂ ಅದ್ಭುತ ಪ್ರದರ್ಶನದ ಮೂಲಕ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್‌ಗೆ ಲಗ್ಗೆ ಇಟ್ಟಿದೆ.