6 ತಿಂಗಳ ಹಿಂದೆ ಎಚ್ಚರಿಕೆ – ನಿರ್ಲಕ್ಷಿಸಿದ್ದಕ್ಕೆ ಹಾಲಿವುಡ್ ಬೂದಿ
ಅಮೆರಿಕದ ಮಹಾ ದೌರ್ಬಲ್ಯ ಬಯಲು

6 ತಿಂಗಳ ಹಿಂದೆ ಎಚ್ಚರಿಕೆ – ನಿರ್ಲಕ್ಷಿಸಿದ್ದಕ್ಕೆ ಹಾಲಿವುಡ್ ಬೂದಿಅಮೆರಿಕದ ಮಹಾ ದೌರ್ಬಲ್ಯ ಬಯಲು

ಅಮೆರಿಕದ ಕ್ಯಾಲಿಫೋರ್ನಿಯಾ ಪ್ರಾಂತ್ಯದಲ್ಲಿರುವ ಲಾಸ್ ಏಂಜಲೀಸ್‌ನಲ್ಲಿ ಬೆಂಕಿ ನರ್ತನ ಮಾಡುತ್ತಿದೆ. ಈ ಭೀಕರ ಕಾಡಿಚ್ಚಿನಲ್ಲಿ 11ಕ್ಕೂ ಹೆಚ್ಚುಮಂದಿ ಸಾವನ್ನಪ್ಪಿದ್ದಾರೆ. 16,000 ಎಕರೆ ಭೂಮಿ ದಹನವಾಗಿದೆ. 1,000ಕ್ಕೂ ಹೆಚ್ಚು ಮನೆ-ಕಟ್ಟಡಗಳು ಸುಟ್ಟುಹೋಗಿವೆ. ಹತ್ತಾರು ಸಾವಿರ ಮಂದಿ ಆಸ್ತಿ ಪಾಸ್ತಿ ಕಳೆದುಕೊಂಡಿದ್ದಾರೆ. ಹಾಲಿವುಡ್ ನಟ-ನಟಿಯರು, ಸಂಗೀಕಾರರು ಹಾಗೂ ಇತರ ಸೆಲೆಬ್ರಿಟಿಗಳು ಬದುಕುಳಿದರೆ ಸಾಕೆಂದು ಮನೆ ತೊರೆದು ಓಡಿಹೋಗಿದ್ದಾರೆ. ಕೋಟಿ ಕೋಟಿ ಇದ್ದವರು ಜೀವಕ್ಕಾಗಿ ಹಂಬಲಿಸುತ್ತಿದ್ದಾರೆ.

ಕ್ಯಾಲಿಫೋರ್ನಿಯಾ ಮತ್ತು ಲಾಸ್ ಏಂಜಲೀಸ್‌ಗಳಲ್ಲಿ ಕಾಡ್ತಿಚ್ಚು ಸಂಭವಿಸುತ್ತಿರುವುದು ಇದೇ ಮೊದಲಲ್ಲ. ಪ್ರತಿ ವರ್ಷವೂ ಇಂತಹ ಕಾಡ್ತಿಚ್ಚಿನ ಘಟನೆಗಳು ನಡೆಯುತ್ತಲೇ ಇವೆ. ಕ್ಯಾಲಿಪೋರ್ನಿಯಾ ಪ್ರದೇಶದಲ್ಲಿ ಕಾಡ್ಲಿಚ್ಚು ಪ್ರತಿವರ್ಷ ಸಂಭವಿಸುತ್ತಿರುವುದಕ್ಕೆ ನಾನಾ ಕಾರಣಗಳಿವೆ. ಅವುಗಳಲ್ಲಿ ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಯೂ ಒಂದು. ಜಾಗತಿಕ ತಾಪಮಾನ ಗಣನೀಯವಾಗಿ ಹೆಚ್ಚುತ್ತಿದೆ. ಬಿಸಿ ಗಾಳಿ ಬೀಸಲಾರಂಭಿಸಿದೆ. ಎಲ್-ನೀನೊ ಮತ್ತೆ-ಮತ್ತೆ ಎದುರಾಗುತ್ತಿದೆ. ಪರಿಣಾಮ, ಬಿಸಿಲು ಹೆಚ್ಚಾಗಿದೆ. ಇದು ಅರಣ್ಯ ಪ್ರದೇಶಗಳಲ್ಲಿ ಮತ್ತಷ್ಟು ಶಾಖವನ್ನು ಹೆಚ್ಚಿಸುತ್ತಿದೆ. ಹಸಿರುಮನೆ ಹೊರ ಸೂಸುಕಿವೆ ಮತ್ತು ತಾಪಮಾನದ ಏರಿಕೆಯಿಂದಾಗಿ ಕಾಡ್ತಿಚ್ಚುಗಳು ಸಂಭವಿಸುತ್ತಿವೆ.ತಾಪಮಾನ ಹೆಚ್ಚಳದಿಂದಾಗಿ ಅರಣ್ಯ ಪ್ರದೇಶದಲ್ಲಿ ಶುಷ್ಕತೆ ಕಡಿಮೆಯಾಗಿ ಒಣ ಪರಿಸ್ಥಿತಿಯು ಹೆಚ್ಚುತ್ತಿದೆ. ಈ ವರ್ಷ ಚಳಿ ಕಡಿಮೆಯಿದ್ದು, ಧಗೆಯ ವಾತಾವರಣ ಹೆಚ್ಚುತ್ತಿದೆ. ಪರಿಣಾಮವಾಗಿ ಜನವರಿಯಿಂದಲೇ ಹೆಚ್ಚು ಬಿಸಿಲು ಕಾಣಿಸಿಕೊಳ್ಳುತ್ತಿದೆ. ಭೂಮಿಯು ಬಿಸಿಯಾಗುತ್ತಿದೆ. ಕಾಡ್ಗಿಚ್ಚುಗಳ ಆತಂಕವನ್ನು ಹೆಚ್ಚಿಸಿದೆ. ಬಿಸಿಲಿನ ನಡುವೆ ಬೀಸುತ್ತಿರುವ ಬಿಸಿ ಗಾಳಿಯು ಬೆಂಕಿಯನ್ನು ಮತ್ತಷ್ಟು ವೇಗವಾಗಿ ಹಬ್ಬಿಸುತ್ತಿದೆ. ಕ್ಯಾಲಿಫೋರ್ನಿಯಾದಲ್ಲಿ  ಈ ವರ್ಷ ಬೇಸಿಗೆ ಮತ್ತಷ್ಟು ಹೆಚ್ಚಗಿದೆ. ಮಳೆ ಕೊರತೆಯೂ ಎದುರಾಗಿದೆ. ಮಳೆಯ ಕೊರತೆಯಿಂದಾಗಿ ಭೂಮಿಯು ಒಣಗಿದೆ ಮತ್ತು ಬಿಸಿಲಿನಿಂದ ಸುಡುತ್ತಿದೆ. ಬಿಸಿಲಿನ ತಾಪಕ್ಕೆ ಬೆಂಕಿ ಹೊತ್ತಿಕೊಳ್ಳುತ್ತಿವೆ.

ಡೀಪ್ ಪ್ರೈ ರಿಸರ್ಚ್ ವರದಿಯ ಪ್ರಕಾರ, ಅಮೆರಿಕದ ಪ್ರತಿಯೊಂದು ಭಾಗದಲ್ಲೂ ತೀವ್ರವಾದ ಬೆಂಕಿಯ ಹವಾಮಾನ ಪರಿಸ್ಥಿತಿಗಳು ಹೆಚ್ಚುವ ಸಾಧ್ಯತೆಗಳಿವೆ. ಉತ್ತರ ಡಕೋಟಾ ಮತ್ತು ಮಿನ್ನೇಸೋಟದ ಭಾಗಗಳಂತಹ ಕೆಲವು ಪ್ರದೇಶಗಳು ಮಾತ್ರ ಬೆಂಕಿ ಅಪಾಯದಿಂದ ತಪ್ಪಿಸಿಕೊಳ್ಳಬಹುದು. ಆದರೆ, ಕ್ಯಾಲಿಫೋರ್ನಿಯಾ ಸೇರಿದಂತೆ ಹೆಚ್ಚಿನ ಪ್ರದೇಶಗಳು ಕಾಡ್ತಿಚ್ಚುಗಳನ್ನು ಎದುರಿಸುತ್ತವೆ ಎಂದು ಹೇಳಿದೆ. ಕಾಡಂಚಿನ ಗ್ರಾಮಗಳಲ್ಲಿ ಬೆಂಕಿ ಬೀಳುತ್ತಿರುವುದರಿಂದ ನಮ್ಮ ಜನ ಕಾಡನ್ನ ನಾಶ ಮಾಡೋದಕ್ಕೂ ಹಿಂದೆ ಮುಂದೆ ನೋಡಲ್ಲ.

ಕಳೆದ 15 ವರ್ಷಗಳಲ್ಲಿ ವಿನಾಶಕಾರಿ ಕಾಡ್ತಿಚ್ಚಿನಿಂದ ಅಮೆರಿಕವು 18.9 ಶತಕೋಟಿ ಡಾಲರ್‌ನಷ್ಟು ನಷ್ಟ ಅನುಭವಿಸಿದೆ. ಹೀಗಿದ್ದರೂ, ಅಲ್ಲಿನ ಸರ್ಕಾರಗಳು ಎಚ್ಚೆತ್ತುಕೊಂಡಿಲ್ಲ. ಪರಿಣಾಮ, ಇದೀಗ ಮತ್ತೊಂದು ಕಾಡ್ತಿಚ್ಚು ಎದುರಾಗಿದೆ. ಆ ಕಾಡ್ತಿಚ್ಚು ಸುಮಾರು 1 ಲಕ್ಷ ಜನರ ಬದುಕನ್ನು ಅತಂತ್ರಗೊಳಿಸಿದೆ.   ಇಷ್ಟೊಂದು ಭಯಾನಕವಾದಿ ಕಾಡ್ಲಿಚ್ಚುಗಳನ್ನು ಅಮೆರಿಕಾ ಸುಮಾರು 30 ವರ್ಷಗಳಿಂದ ನಿರಂತರವಾಗಿ ಎದುರಿಸುತ್ತಿದೆ. ಆದರೂ, ಅಲ್ಲಿನ ಸರ್ಕಾರಗಳು ಗಂಭೀರವಾಗಿಲ್ಲ. ಕಾಡಿಚ್ಚನ್ನು ನಿಯಂತ್ರಿಸಲು ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ವಿಶ್ವದ ದೊಡ್ಡನ ಕೈಯಲ್ಲಿ ಬೆಂಕಿಯನ್ನ ಹತೋಟಿಗೆ ತರೋಕೆ ಆಗಿಲ್ಲ.. ಇಷ್ಟೆಲ್ಲಾ ಡೆವಲಪ್ ಆದ್ರೂ ಬೆಂಕಿ ಮುಂದೆ ನಮ್ಮ ಆಟ ನಡೆಯಲ್ಲ ಅನ್ನೋದು ಈ ಘಟನೆಯಿಂದ ಗೊತ್ತಾಗುತ್ತೆ.

6 ತಿಂಗಳ ಹಿಂದೆ ಎಚ್ಚರಿಕೆ

6 ತಿಂಗಳ ಹಿಂದೆ ಈ ಬಗ್ಗೆ ಎಚ್ಚರಿಕೆಯನ್ನ ನೀಡಲಾಗಿತ್ತು.. 6 ತಿಗಂಳ  ಹಿಂದೆ ಅಮೆರಿಕ ಹವಾಮಾನ ತಜ್ಞ ಜೋಡ್ ರೋಗನ್ ಕ್ಯಾಲಿಫೋರ್ನಿಯಾಗೆ ಅತೀಯಾದ ಗಾಳಿಯಿಂದ ಬೆಂಕಿ ಬೀಳುತ್ತೆ ಎಂದಿದ್ರು.. 6 ತಿಂಗಳ ಹಿಂದೆಯೇ ಎಚ್ಚರಿಕೆ ನೀಡಿದ್ರೂ ಅಮೆರಿಕ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಅವತ್ತು ಹವಾಮಾನ ತಜ್ಞರು ಹೇಳಿದ ಮಾತನ್ನ ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಮುಂಜಾಗ್ರತ ಕ್ರಮವನ್ನ ಕೈಗೊಂಡಿದ್ರೆ ಇವತ್ತು ಈ ಸ್ಥಿತಿ ಬರುತ್ತಿರಲಿಲ್ಲ..  ಒಟ್ನಲ್ಲಿ ಪರಿಸರ ರಕ್ಷಣೆಗೆ ಅಮೆರಿಕ ಮಾತ್ರವಲ್ಲ, ಇಡೀ ಜಗತ್ತು ಎಚ್ಚೆತ್ತುಕೊಳ್ಳಬೇಕಿದೆ. ತಾಪಮಾನ ನಿಯಂತ್ರಣಕ್ಕೆ ಮುಂದಾಗಬೇಕಿದೆ.  ನಾವು ಬೆಂಕಿಯೊಂದಿಗೆ ಆಟವಾಡುತ್ತಿದ್ದೇವೆ; ಆದರೆ, ಹೆಚ್ಚು ಆಟವಾಡಲು ಸಾಧ್ಯವಿಲ್ಲ. ನಮಗೆ ಸಮಯ ಮೀರಿದೆ.  ಲಾಸ್ ಏಂಜಲೀಸ್ನಲ್ಲಿ ಎದುರಾಗುತ್ತಿರುವ ಬೃಹತ್ ಕಾಚ್ಚುಗಳು ಇಡೀ ಜಗತ್ತನ್ನು ಆವರಿಸುವುದಕ್ಕೆ ಹೆಚ್ಚು ಸಮಯ ಬೇಕಿಲ್ಲ.  .

 

 

Kishor KV

Leave a Reply

Your email address will not be published. Required fields are marked *