ಅಜ್ಜಿ ಕೈಯಲ್ಲಿ ಜಯಂತ್‌ ರಹಸ್ಯ..  ಸತ್ಯ ತಿಳಿದ ಜಾನು ಬಿಟ್ಟು ಹೋಗ್ತಾಳಾ? -ಸೈಕೋಪತಿ ಪ್ಲ್ಯಾನ್‌ ಉಲ್ಟಾ!

ಅಜ್ಜಿ ಕೈಯಲ್ಲಿ ಜಯಂತ್‌ ರಹಸ್ಯ..  ಸತ್ಯ ತಿಳಿದ ಜಾನು ಬಿಟ್ಟು ಹೋಗ್ತಾಳಾ? -ಸೈಕೋಪತಿ ಪ್ಲ್ಯಾನ್‌ ಉಲ್ಟಾ!

ಜಾಹ್ನವಿ ಫ್ರೆಂಡ್ಸ್‌ ಆಯ್ತು.. ವಾಚ್‌ ಮ್ಯಾನ್ ಆಯ್ತು..‌ ಈಗ ಸೈಕೋ ಜಯಂತ್‌ ಜಾನು ಅಜ್ಜಿ ಜೀವಕ್ಕೆ ಕಂಟಕ ಆಗಿದ್ದಾನೆ.. ಇದೀಗ ಸೈಕೋಪತಿ ಹುಚ್ಚಾಟಕ್ಕೆ ಸೀರಿಯಲ್‌ ನೋಡ್ತಿರೋ ವೀಕ್ಷಕರಿಗೂ ಹುಚ್ಚು ಹಿಡಿತಿದೆ. ಲಕ್ಷ್ಮೀ ನಿವಾಸ ಸೀರಿಯಲ್‌ ನಲ್ಲಿ ಈಗ  ಜಾಹ್ನವಿ ಅಜ್ಜಿಗೆ ಜಯಂತ್‌ ಸತ್ಯ ಗೊತ್ತಾಗಿದೆ. ಜಯಂತ್‌ ಒಳ್ಳೆಯವನಲ್ಲ.. ಸತ್ಯ ಜಾಹ್ನವಿಗೆ ಹೇಳೇ ಹೇಳ್ತೀನಿ ಅಂತಾ ಅಜ್ಜಿ ಆತನ ಮುಂದೆ ಹೇಳಿದ್ಲು.. ಈ ಸೀನ್‌ ನೋಡಿದ ಕೂಡ್ಲೇ ವೀಕ್ಷಕರು ಅಜ್ಜಿ ಬಗ್ಗೆ ಭವಿಷ್ಯ ನುಡಿದಿದ್ರು.. ಅಜ್ಜಿ ಚಾಪ್ಟರ್‌ ಕ್ಲೋಸ್‌ ಅಂತಾನೂ ಹೇಳಿದ್ರು.. ಸೀರಿಯಲ್‌ ನಲ್ಲಿ ಆಗಿದ್ದೂ ಅದೇ.. ಸತ್ಯ ಹೇಳಲು ಹೊರಟ ಅಜ್ಜಿಯ ಕುತ್ತಿಗೆ ಹಿಡಿದ್ದಾನೆ.. ಆದ್ರೆ ಜಯಂತ್‌ ಗ್ರಹಚಾರಕ್ಕೆ ಅಜ್ಜಿಗೆ ಈಗ ಎಚ್ಚರವಾಗಿದೆ. ಜಯಂತ್‌ ಪ್ಲ್ಯಾನ್‌ ಕೂಡ ಟುಸ್‌ ಆಗಿದೆ.. ಹಾಗಾದ್ರೆ ಜಯಂತ್‌ ಮುಂದೇನು ಮಾಡ್ತಾನೆ.. ಸತ್ಯ ಗೊತ್ತಾದ ಜಾಹ್ನವಿ ಗಂಡನನ್ನು ಬಿಟ್ಟು ಹೋಗ್ತಾಳಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ತಾಲಿಬಾನ್ ಬೆನ್ನಿಗೆ ನಿಂತಿದ್ಯಾ ಭಾರತ? ದುಬೈ ಚರ್ಚೆ ಡಿಟೈಲ್ಸ್!

ಲಕ್ಷ್ಮೀ ನಿವಾಸ ಸೀರಿಯಲ್‌ ಸದ್ಯ ರೋಚಕ ತಿರುವು ಪಡೆದುಕೊಂಡಿದೆ. ಜಾಹ್ನವಿ ತಾಯಿ ಆಗ್ತಿದ್ದಂತೆ ಸೈಲೆಂಟ್‌ ಆಗಿದ್ದ ಸೈಕೋ ಜಯಂತ್‌.. ಮತ್ತೆ ತನ್ನ ಹುಚ್ಚಾಟ ಶುರು ಮಾಡ್ಕೊಂಡಿದ್ದಾನೆ.  ವೆಂಕಿ ಹಾಗೂ ಜಯಂತ್ ಮಧ್ಯೆ ಹಳೇ ನಂಟು ಇದೆ. ವೆಂಕಿಗೆ ಮಾತು ಬಾರದೇ ಇರಲು ಜಯಂತ್‌ ಕಾರಣ ಅಂತಾ ತೋರಿಸಲಾಗಿದೆ. ಇದೇ ವಿಚಾರ ಜಯಂತ್‌ ಹಾಗೂ ಆತನ ಗೆಳೆಯನ ಜೊತೆ ಚರ್ಚೆ ಆಗುತ್ತೆ.. ಎಲ್ಲಾ ವಿಚಾರಗಳನ್ನು ಜಾಹ್ನವಿ ಬಳಿ ಹೇಳಿಬಿಡು. ಇಲ್ಲವಾದರೆ ನೀನು ಖಂಡಿತವಾಗಿಯೂ ಜಾಹ್ನವಿಯನ್ನು ಕಳೆದುಕೊಂಡು ಬಿಡುತ್ತೀಯಾ ಎಂದು ಹೇಳಿದ್ದಾನೆ.  ಆದರೆ, ಜಯಂತ್‌ ಗೆಳೆಯನ ಮಾತನ್ನು ಕೇಳದೆ ಆತನನ್ನು ಮನೆಯಿಂದ ಹೊರ ಹಾಕ್ತಾನೆ. ಇದೆಲ್ಲವನ್ನ ಅಜ್ಜಿ ಗುಟ್ಟಾಗಿ ಕೇಳಿಸಿಕೊಂಡಿದ್ದಾಳೆ. ಅಷ್ಟೇ ಅಲ್ಲ ನೀನು ಕೆಟ್ಟವನು.. ಇದನ್ನ ಜಾಹ್ನವಿಗೆ ಹೇಳ್ತೀನಿ ಅಂತಾ ತಿಳಿಸಿದ ಕೂಡ್ಲೇ, ಜಯಂತ್‌ ಮತ್ತೆ ತನ್ನ ಸೈಕೋ ಅವತಾರ ತಾಳಿದ್ದಾನೆ..  ಹಿರಿ ಜೀವ.. ತನ್ನ ಅಜ್ಜಿ ಅಂತಾ ಹಿಂದೆ ಮುಂದೆ ನೋಡದೇ ಜಯಂತ್‌ ಅಜ್ಜಿಯನ್ನ ಸಾಯಿಸಲು ಹೊರಟಿದ್ದ.. ಅಜ್ಜಿ ಬೀಳುತ್ತಿದ್ದಂತೆ ಅಜ್ಜಿಯ ಪ್ರಾಣ ಪಕ್ಷಿ ಹಾರಿ ಹೋಯ್ತು ಅಂತಾ ಅಲ್ಲಿಂದ ಜಯಂತ್  ಪರಾರಿಯಾಗಿರುತ್ತಾನೆ.

ಅಜ್ಜಿ ಬದುಕೋದಿಲ್ಲ ಅಂತಾ ಜಯಂತ್ ಅಂದುಕೊಂಡಿದ್ದ ಆದರೆ, ಜಯಂತ್ ಅಂದುಕೊಂಡಿದ್ದು ಒಂದು. ಅಲ್ಲಿ ಆದದ್ದು ಇನ್ನೊಂದು. ಅಜ್ಜಿ ಬದುಕುವುದೇ ಇಲ್ಲ ಎಂದುಕೊಂಡಿದ್ದ ಜಯಂತ್‌ಗೆ ಶಾಕ್ ಆಗಿದೆ. ಅಜ್ಜಿಗೆ ಪ್ರಜ್ಞೆ ಬಂದಿದೆ. ಹೌದು.. ಅಜ್ಜಿಗೆ ಯಾವಾಗ ಹುಷಾರ್‌ ಆಗ್ತಾರೆ ಅಂತಾ ಡಾಕ್ಟರ್ ಬಳಿ ಕೇಳಿದ ಕೂಡ್ಲೇ, ಡಾಕ್ಟರ್‌  ಅಜ್ಜಿಗೆ ಪ್ರಜ್ಞೆ ಬಂದಿದೆ ಎಂದು ಹೇಳಿದ್ದಾರೆ. ಅವರು ಬಹಳಷ್ಟು ರಿಕವರಿ ಆಗಿದ್ದಾರೆ ಎಂದು ತಿಳಿದು ಮನೆ ಮಂದಿ ಖುಷಿ ಪಡುತ್ತಾರೆ. ಅಜ್ಜಿಯನ್ನು ನೋಡಲು ಎಲ್ಲರೂ ಓಡೋಡಿ ವಾರ್ಡ್‌ಗೆ ಹೋಗುತ್ತಾರೆ. ಅಜ್ಜಿ ಒಮ್ಮೆಲೆ ಎಲ್ಲರ ಮುಖ ನೋಡಿ “ಜಯಂತ್ ಒಳ್ಳೆಯವನಲ್ಲ. ಒಳ್ಳೆತನದ ಮುಖವಾಡ ತೊಟ್ಟ ರಾಕ್ಷಸ. ಆತನೇ ನನ್ನನ್ನು ಕೊಲ್ಲಲು ಪ್ರಯತ್ನ ಪಟ್ಟ. ಆತ ಒಳ್ಳೆಯವನಲ್ಲ” ಎಂದು ಹೇಳಿದಾಗ ಎಲ್ಲರಿಗೆ ಬಹಳ ಶಾಕ್ ಆಗುತ್ತೆ. ಜಯಂತ್‌ಗೆ ಬಹಳ ಭಯ ಆಗುತ್ತೆ. ಮನೆ ಮಂದಿಯೆಲ್ಲ ಜಯಂತ್‌ನತ್ತ ಚಿತ್ತ ಹರಿಸುತ್ತಾರೆ. ಇದನ್ನ ನೋಡಿದ ವೀಕ್ಷಕರು ಇದು ಜಯಂತ್‌ ಕನಸು ಅಂತಾ ಕಾಮೆಂಟ್‌ ಮಾಡಿದ್ರು..

ಇದೀಗ ಮತ್ತೊಂದು ಪ್ರೋಮೋದಲ್ಲಿ ಜಯಂತ್‌ ಪ್ರಜ್ಞೆ ಇಲ್ಲದೇ ಮಲಗಿದ್ದ ಅಜ್ಜಿಯ ಜೀವ ತೆಗೆಯಲು ಆಸ್ಪತ್ರೆಯಲ್ಲೇ ಜಯಂತ್‌ ಸಂಚು ಮಾಡ್ತಾನೆ.. ಆಗ ಸಿದ್ದೇಗೌಡ್ರು ಅಲ್ಲಿಗೆ ಬಂದಿದ್ದಾರೆ. ಇದೀಗ ಜಯಂತ್‌ ನ ಕೃತ್ಯ ಸಿದ್ದೇಗೌಡ್ರಿಗೆ ಗೊತ್ತಾಯ್ತಾ ಅನ್ನೋ ಅನುಮಾನ ಎಲ್ಲರನ್ನ ಕಾಡ್ತಿದೆ.. ಆದ್ರೆ ಸೀರಿಯಲ್‌ ನೋಡಿದ ವೀಕ್ಷಕರು ಅಸಮಧಾನ ಹೊರ ಹಾಕಿದ್ದಾರೆ.. ಮನೆಯಲ್ಲಿ ಸಣ್ಣ ಮಕ್ಕಳು ಸೀರಿಯಲ್‌ ನೋಡ್ತಿರ್ತಾರೆ.. ಜಯಂತ್‌ ವರ್ತನೆ ಮಕ್ಕಳ ಮೇಲೆ ತುಂಬಾ ಪರಿಣಾಮ ಬೀಳುತ್ತೆ.. ಅಷ್ಟೇ ಅಲ್ಲ.. ಅದನ್ನ ಅನುಕರಣೆ ಮಾಡಿದ್ರೆ ಹೇಗೆ?  ಮುಂದೆ ಏನಾದ್ರೂ ಅನಾಹುತ ಆದ್ರೆ ಯಾರು ಜವಬ್ದಾರರು ಅಂತಾ ವೀಕ್ಷಕರು ಕೇಳ್ತಿದ್ದಾರೆ.. ಇನ್ನೂ ಕೆಲವರು ಈ ಜಯಂತ್ ನ ಅಸಲಿ ಮುಖ ಎಲ್ಲರಿಗೂ ಗೊತ್ತಾಗ್ಲಿ.. ಇನ್ನೆಷ್ಟು ತಾಳ್ಮೆ ಪರೀಕ್ಷೆ ಮಾಡ್ತೀರಾ.. ಆ ದಡ್ಡಿ ಜಾಹ್ನವಿ ದು ಬರೀ ಗೋಳೇ ಆಯ್ತು.. ಆಕೆಗೆ ಒಮ್ಮೆ ಸತ್ಯ ಗೊತ್ತಾಗ್ಲಿ.. ಜಯಂತ್‌ ನ ಬಿಟ್ಟು ಹೋಗ್ಲಿ ಅಂತಾ ಕಾಮೆಂಟ್‌ ಮಾಡ್ತಿದ್ದಾರೆ.

Shwetha M

Leave a Reply

Your email address will not be published. Required fields are marked *