ಹಿಟ್ ಮ್ಯಾನ್ ಉತ್ತರಾಧಿಕಾರಿಯಾಗ್ತಾರಾ ಬುಮ್ರಾ – ರೇಸ್ ನಲ್ಲಿ ಕೆಎಲ್ & ಪಂತ್ ಎಂಟ್ರಿ

ಆಸಿಸ್ ಸರಣಿಯಲ್ಲಿ ಅಟ್ಟರ್ ಫ್ಲ್ಯಾಪ್ ಪ್ರದರ್ಶನ ನೀಡಿ ಸಿಡ್ನಿ ಪಂದ್ಯದಿಂದ ಹೊರಬಿದ್ದಿರೋ ರೋಹಿತ್ ಶರ್ಮಾ ಪಂದ್ಯದ ಬಳಿಕ ನಿವೃತ್ತಿ ಘೋಷಣೆ ಮಾಡ್ಬೋದು ಅನ್ನೋ ಸುದ್ದಿ ಟ್ರೆಂಡಿಂಗ್ನಲ್ಲಿದೆ. ಕಳಪೆ ಫಾರ್ಮ್ನಿಂದ ಒದ್ದಾಡ್ತಿರೋ ರೋಹಿತ್ಗೆ ಕಮ್ ಬ್ಯಾಕ್ ಮಾಡೋದೂ ಕೂಡ ಕಷ್ಟ ಆಗ್ತಿದೆ. ಹೀಗಾಗಿ ಆಸಿಸ್ ಸಿರೀಸ್ ಬೆನ್ನಲ್ಲೇ ನಿವೃತ್ತಿ ಘೋಷಿಸಿದ್ರೆ ಉತ್ತರಾಧಿಕಾರಿ ಯಾರು ಅನ್ನೋ ಚರ್ಚೆ ಕೂಡ ಶುರುವಾಗಿದೆ. ರೋಹಿತ್ ಇನ್ಮುಂದೆ ರೆಡ್ ಬಾಲ್ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ರೆ ನೆಕ್ಸ್ಟ್ ಕ್ಯಾಪ್ಟನ್ ಯಾರು ಅನ್ನೋ ಚರ್ಚೆ ಶುರುವಾಗಿದೆ. ಈ ಲಿಸ್ಟ್ನಲ್ಲಿ ಮೂವರು ಆಟಗಾರರು ಇದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಪ್ರಸ್ತುತ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಶುಕ್ರವಾರದಿಂದ ಸಿಡ್ನಿಯಲ್ಲಿ ಶುರುವಾಗಿರುವ ಅಂತಿಮ ಟೆಸ್ಟ್ನಲ್ಲಿ ಭಾರತ ಗೆಲ್ಲಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಅದಕ್ಕೂ ಮುನ್ನವೇ ರೋಹಿ್ತ ಶರ್ಮಾ ಪ್ಲೇಯಿಂಗ್ 11ನಿಂದ ಹೊರಗುಳಿದಿದ್ದಾರೆ. ಹೀಗಾಗಿ ಪಂದ್ಯ ಮುಗಿದ ಬೆನ್ನಲ್ಲೇ ರೋಹಿತ್ ಶರ್ಮಾ ನಿವೃತ್ತಿ ಘೋಷಣೆ ಮಾಡೋ ಚಾನ್ಸಸ್ ಜಾಸ್ತಿ ಇದೆ. ಮಾಜಿ ಕ್ರಿಕೆಟಿಗರು ಕೂಡ ಇದನ್ನೇ ಹೇಳ್ತಿದ್ದಾರೆ. ಸದ್ಯ ಟೀಂ ಇಂಡಿಯಾದಲ್ಲಿ ಬೆಸ್ಟ್ ಪ್ಲೇಯರ್ ಅಂದ್ರೆ ಅದು ಜಸ್ಪ್ರೀತ್ ಬುಮ್ರಾ ಮಾತ್ರ. ತಮ್ಮ ಆಟದಲ್ಲಿ ಯಾವತ್ತೂ ಕೂಡ ಅಭಿಮಾನಿಗಳಿಗೆ ನಿರಾಸೆ ಮೂಡಿಸಿಲ್ಲ. ಸದ್ಯ ಆಸಿಸ್ ಸರಣಿಗೆ ವೈಸ್ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ರು. ಬಟ್ ಪರ್ತ್ ನಲ್ಲಿ ನಡೆದ ಮೊದಲ ಟೆಸ್ಟ್ ಗೆ ರೋಹಿತ್ ಶರ್ಮಾ ಲಭ್ಯ ಇರಲಿಲ್ಲ. ಹೀಗಾಗಿ ಕ್ಯಾಪ್ಟನ್ ಆಗಿ ಮುನ್ನಡೆಸಿದ್ದ ಜಸ್ಪ್ರೀತ್ ಬುಮ್ರಾ ತಂಡವನ್ನ ಗೆಲ್ಲಿಸಿಕೊಟ್ಟಿದ್ರು. ಅಲ್ದೇ ಸಿಡ್ನಿಯಲ್ಲಿ ನಡೆಯುತ್ತಿರೋ ಪಂದ್ಯದಿಂದ ರೋಹಿತ್ ಶರ್ಮಾ ಹೊರಬಿದ್ದಿದ್ದು ಬುಮ್ರಾನೇ ಕ್ಯಾಪ್ಟನ್ ಆಗಿದ್ದಾರೆ. ಸೋ ಮುಂದೆ ರೋಹಿತ್ ನಿವೃತ್ತಿ ಪಡೆದ್ರೆ ಬುಮ್ರಾಗೇ ನಾಯಕತ್ವ ಸಿಗೋ ಎಲ್ಲಾ ಲಕ್ಷಣಗಳಿವೆ. ಆದರೆ, ಬುಮ್ರಾ ಆಗಾಗ್ಗೆ ಗಾಯಗೊಂಡು ತಂಡದಿಂದ ಹೊರಬೀಳುವ ಸಾಧ್ಯತೆ ಇರುವುದರಿಂದ ಟೆಸ್ಟ್ ನಾಯಕತ್ವವನ್ನು ಬಿಸಿಸಿಐ ನೀಡುತ್ತಾ ಇಲ್ವೋ ಅನ್ನೋ ಅನುಮಾನವೂ ಇದೆ.
ಇದನ್ನೂ ಓದಿ : 7 ಇನ್ನಿಂಗ್ಸ್.. ವಿರಾಟ್ ಕೊಹ್ಲಿ ಅದೇರಾಗ ಅದೇ ಹಾಡು! – ಸತತ ಏಟು ತಿಂದು ವಿಕೆಟ್ ಕೈ ಚೆಲ್ಲಿದ ಪಂತ್!
ಇನ್ನು ಬುಮ್ರಾರನ್ನು ಫುಲ್ ಟೈಂ ಕ್ಯಾಪ್ಟನ್ ಮಾಡೋಕೆ ಬಿಸಿಸಿಐ ಕೂಡ ಹಿಂದೆ ಮುಂದೆ ನೋಡ್ತಿದೆ. ಯಾಕಂದ್ರೆ ಬುಮ್ರಾ ಟೀಂ ಇಂಡಿಯಾ ಪಾಲಿಗೆ ಬ್ರಹ್ಮಾಸ್ತ್ರ ಇದ್ದಂತೆ. ತೀರಾ ಅಗತ್ಯ ಇದ್ದಾಗಷ್ಟೇ ಅವ್ರನ್ನ ತಂಡಕ್ಕೆ ಇಳಿಸೋದು. ಸೋ ಫುಲ್ ಟೈಂ ಕ್ಯಾಪ್ಟನ್ ಮಾಡಿದ್ರೆ ಎಲ್ಲಾ ಪಂದ್ಯಗಳನ್ನೂ ಆಡ್ಬೇಕಾಗುತ್ತೆ. ಹೀಗೆ ಆಡುವಾಗ ಗಾಯಗೊಂಡ್ರೆ ಅಥವಾ ರೆಸ್ಟ್ ಸಿಗದೇ ಇದ್ರೆ ಅದು ತಂಡಕ್ಕೇ ಲಾಸ್. ಹೀಗಾಗಿ ಬುಮ್ರಾ ಅವರನ್ನು ಟೆಸ್ಟ್ ತಂಡದ ನಾಯಕನನ್ನಾಗಿ ಮಾತ್ರ ಘೋಷಿಸಬಹುದು. ಒಂದು ವೇಳೆ ಬೌಲರ್ಗೆ ನಾಯಕತ್ವ ಕೊಡುವುದು ಬೇಡ ಎಂದು ನಿರ್ಧಾರವಾದರೆ ರಾಹುಲ್ ಅಥವಾ ಪಂತ್ ಇಬ್ಬರಲ್ಲಿ ಒಬ್ಬರು ನಾಯಕನಾಗಬಹುದು. ಬಟ್ ಬುಮ್ರಾ ಟೆಸ್ಟ್ ಕ್ಯಾಪ್ಟನ್ಸಿ ಬಿಟ್ಟುಕೊಡೋದು ಕಷ್ಟ ಇದೆ.
ಟೆಸ್ ಮ್ಯಾಚ್ ಗಳಂತೆ ಏಕದಿನ ಪಂದ್ಯಗಳಿಗೂ ಹೊಸ ನಾಯಕನನ್ನು ಹುಡುಕುವ ಸಾಧ್ಯತೆ ಇದೆ. ರೋಹಿತ್ ಇನ್ನೂ ಏಕದಿನ ಪಂದ್ಯಗಳಿಂದ ನಿವೃತ್ತಿ ಪಡೆದಿಲ್ಲ. ಹೀಗಾಗಿ ಅವರು ಚಾಂಪಿಯನ್ಸ್ ಟ್ರೋಫಿವರೆಗೆ ಆಡಬಹುದು. ಳಿಕ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ ಮತ್ತು ರಿಷಬ್ ಪಂತ್ ಅವರಲ್ಲಿ ಒಬ್ಬರಿಗೆ ಏಕದಿನ ನಾಯಕತ್ವ ನೀಡುವ ಸಾಧ್ಯತೆ ಇದೆ. ಈಗಾಗಲೇ ಸೂರ್ಯಕುಮಾರ್ ಯಾದವ್ ನಾಯಕನಾಗಿ ಟಿ20ಯಲ್ಲಿಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಸೂರ್ಯ ಏಕದಿನ ಮಾದರಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ.
ಟೀಂ ಇಂಡಿಯಾದಲ್ಲೊ ಮೊದ್ಲಿಂದಲೂ ಕೂಡ ಆಲ್ಮೋಸ್ಟ್ ಟಾಪ್ ಆರ್ಡರ್ ಬ್ಯಾಟರ್ಸ್ ಕ್ಯಾಪ್ಟನ್ ಆಗ್ತಾರೆ. ಬಟ್ ರೇರ್ ಎನ್ನುವಂತೆ ಬೌಲರ್ಸ್ ಗೆ ಅವಕಾಶ ಸಿಗೋದು ಕಮ್ಮಿ. ಈ ಹಿಂದೆ ಟೀಂ ಇಂಡಿಯಾದ ಕ್ಯಾಪ್ಟನ್ ಆಗಿದ್ದ ದಿಗ್ಗಜ ಆಟಗಾರ ಕಪಿಲ್ ದೇವ್ ಹಾಗೇ ಅನಿಲ್ ಕುಂಬ್ಲೆ ಕ್ಯಾಪ್ಟನ್ ಆಗಿದ್ರು. ಕಪಿಲ್ ದೇವ್ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ 687 ವಿಕೆಟ್ಗಳನ್ನು ಪಡೆದ ದಾಖಲೆಯನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೆ, ಕಪಿಲ್ ದೇವ್ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಒಟ್ಟು 9031 ರನ್ ಗಳಿಸಿದ್ದರು. ಅಚ್ಚರಿ ಅಂದ್ರೆ ಕಪಿಲ್ ದೇವ್ ಅವರು ತಮ್ಮ ಇಡೀ ಟೆಸ್ಟ್ ವೃತ್ತಿಜೀವನದಲ್ಲಿ ಇದುವರೆಗೆ ರನ್ ಔಟ್ ಆಗಿರಲಿಲ್ಲ. ಹಾಗೇ ಗೂಗ್ಲಿ ಸ್ಪೆಷಲಿಸ್ಟ್ ಸ್ಪಿನ್ನರ್ ಅನಿಲ್ ಕುಂಬ್ಳೆ ಕೂಡ ಭಾರತವನ್ನ ಮುನ್ನಡೆಸಿದ್ದಾರೆ. ಜಂಬೋ ಅಂತಾ ಕರೆಸಿಕೊಳ್ಳೋ ಕುಂಬ್ಳೆ ಫೆಬ್ರುವರೀ 1999ರಲ್ಲಿ ಪಾಕಿಸ್ತಾನದ ವಿರುದ್ದ ದೆಹಲಿಯಲ್ಲಿ ಒಂದು ಇನ್ನಿಂಗ್ಸ್ನಲ್ಲಿ 10 ವಿಕೆಟ್ ಪಡೆದು ದಾಖಲೆ ಬರೆದಿದ್ರು. ಕುಂಬ್ಳೆ ಕ್ಯಾಪ್ಟನ್ ಆಗಿದ್ದಾಗ ಟೀಮ್ನಲ್ಲಿ ಅಗ್ರೆಶನ್ ಇತ್ತು. ಇಬ್ಬ ಬೌಲರ್ ಆಗಿ ಎದುರಾಳಿ ಬ್ಯಾಟರ್ ಗಳ ಬಗ್ಗೆ ಗೊತ್ತಿತ್ತು. ಹೀಗಾಗಿ ಆಟದಲ್ಲಿ ಮೇಲುಗೈ ಸಾಧಿಸುತ್ತಿದ್ರು. ಹೀಗಾಗಿ ಕಪಿಲ್ ದೇವ್, ಕುಂಬ್ಳೆಯಂತೆ ಬುಮ್ರಾ ಕೂಡ ಬೆಸ್ಟ್ ಕ್ಯಾಪ್ಟನ್ ಆಗಿ ಪ್ರೂವ್ ಮಾಡಬಹುದು. ಆಸ್ಟ್ರೇಲಿಯಾ ಪ್ರವಾಸದಲ್ಲಿ ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾದ ಬೆನ್ನೆಲುಬಾಗಿ ನಿಂತಿದ್ದಾರೆ. ಇದುವರೆಗೆ ಆಡಿರುವ 9 ಇನ್ನಿಂಗ್ಸ್ ಗಳಲ್ಲಿ 31 ವಿಕೆಟ್ಗಳನ್ನು ತಮ್ಮ ಹೆಸರಿನಲ್ಲಿ ಪಡೆದಿದ್ದಾರೆ.

ನೋಡಿರಿ

