7 ಇನ್ನಿಂಗ್ಸ್.. ವಿರಾಟ್ ಕೊಹ್ಲಿ ಅದೇರಾಗ ಅದೇ ಹಾಡು! – ಸತತ ಏಟು ತಿಂದು ವಿಕೆಟ್ ಕೈ ಚೆಲ್ಲಿದ ಪಂತ್!
ಆಸ್ಟ್ರೇಲಿಯಾ ಸರಣಿಯಲ್ಲಿ ವಿರಾಟ್ ಕೊಹ್ಲಿಯವ್ರ ಫ್ಲ್ಯಾಪ್ ಶೋ ಇವತ್ತಿನ ಪಂದ್ಯದಲ್ಲೂ ಕಂಟಿನ್ಯೂ ಆಗಿದೆ. ವಿಪರ್ಯಾಸ ಅಂದ್ರೆ ಸಿರೀಸ್ನ ಅಷ್ಟೂ ಇನ್ನಿಂಗ್ಸ್ಗಳಲ್ಲಿ ಒಂದೇ ರೀತಿ ವಿಕೆಟ್ ಒಪ್ಪಿಸಿದ್ದಾರೆ. ಅದೇ ರಾಗ ಅದೇ ಹಾಡು ಎಂಬಂತೆ ಕೊಹ್ಲಿ ಔಟ್ ಸೈಡ್ ಆಫ್ ದ ಸ್ಟಂಪ್ ಎಸೆತಗಳನ್ನ ಕೆಣಕಿ ವಿಕೆಟ್ ನೀಡಿದ್ದಾರೆ. ಕಳಪೆ ಫಾರ್ಮ್ನಿಂದ ಒದ್ದಾಡ್ತಿರೋ ಕೊಹ್ಲಿ ತಮ್ಮದೇ ಮಿಸ್ಟೇಕ್ಸ್ನಿಂದ ವಿಕೆಟ್ ಕಳೆದುಕೊಂಡಿದ್ದಾರೆ. ಸಿಡ್ನಿ ಮೈದಾನದಲ್ಲಿ ನಾಲ್ಕನೇ ಸ್ಲಾಟ್ನಲ್ಲಿ ಕಣಕ್ಕಿಳಿದ ಕೊಹ್ಲಿ ತಾಳ್ಮೆಯ ಆಟವಾಡಿ 69 ಎಸೆತಗಳಲ್ಲಿ 17 ರನ್ ರನ್ಗಳಿಸಿದರು. ಆದರೆ ಇಂದೂ ಕೂಡ ಆಫ್ ಸ್ಟಂಪ್ ಹೊರ ಹೋಗುತ್ತಿದ್ದ ಎಸೆತವನ್ನು ಕೆಣಕಿ ವಿಕೆಟ್ ಕೈಚೆಲ್ಲಿದ್ರು. ಌಕ್ಚುಲಿ ಇವತ್ತಿನ ಮ್ಯಾಚಲ್ಲಿ ಕೊಹ್ಲಿ ಡಕ್ಔಟ್ ಆಗ್ಬೇಕಿತ್ತು. ಬಟ್ ನೆಲಕ್ಕೆ ಚೆಂಡು ತಾಗಿದ್ದರಿಂದ ಜೀವದಾನ ಸಿಕ್ಕಿತ್ತು. ಆ ಜೀವದಾನವನ್ನೂ ಯುಟಿಲೈಸ್ ಮಾಡಿಕೊಳ್ಳುವಲ್ಲಿ ಎಡವಿದ್ರು.
ಇದನ್ನೂ ಓದಿ: ದತ್ತ ಈಸ್ ಬ್ಯಾಕ್.. ಶ್ರೀರಸ್ತು ಶುಭಮಸ್ತುಗೆ ಬಂತು ಗತ್ತು – 3 ತಿಂಗಳು ನಾಪತ್ತೆಯಾಗಿದ್ದೇಕೆ?
ಸತತ ಏಟು ತಿಂದು ವಿಕೆಟ್ ಕೈ ಚೆಲ್ಲಿದ ಪಂತ್!
ಇನ್ನು ಸತತ ವೈಫಲ್ಯದಿಂದ ಬಳಲ್ತಿರೋ ರಿಷಭ್ ಪಂತ್ ಇವತ್ತಿನ ಆಟದಲ್ಲಿ ಕೊಂಚ ಭರವಸೆ ಮೂಡಿಸಿದ್ರು. ಬ್ಯಾಕ್ ಟು ಬ್ಯಾಕ್ ವಿಕೆಟ್ ನಡುವೆ ದಿಟ್ಟ ಹೋರಾಟ ನಡೆಸಿದ್ರು. ಆದ್ರೆ ಎರಡು ಸಲ ಪಂತ್ ಗೆ ಚೆಂಡು ಬಿದ್ದು ಗಾಯಗೊಂಡದ್ರು. ಒಂದು ಸಲ ಬಾಲ್ ಪಂತ್ ಕೈಗೆ ಬಿದ್ರೆ ಇನ್ನೊಂದು ಸಲ ಹೆಲ್ಮೆಟ್ ಗೆ ಬಡಿಯಿತು. ನೋವು ತಾಳಲಾರದೇ ಪಂತ್ ಕುಂಟುತ್ತಾ ನಡೆದ್ರು. ಆದ್ರೆ ಕೊನೆಗೂ ಪಂತ್ ಆಟಕ್ಕೆ ಆಸಿಸ್ ವೇಗಿ ಸ್ಕಾಟ್ ಬೋಲ್ಯಾಂಡ್ ತೆರೆ ಎಳೆದ್ರು. 98 ಎಸೆತಗಳಲ್ಲಿ 40 ರನ್ ಗಳಿಸಿದ್ದ ಪಂತ್ 56ನೇ ಓವರ್ನಲ್ಲಿ ಬೊಲ್ಯಾಂಡ್ ಎಸೆದ 4ನೇ ಎಸೆತದಲ್ಲಿ ಅನವಶ್ಯಕ ಶಾಟ್ಗೆ ಕೈ ಹಾಕಿ ಕಮಿನ್ಸ್ಗೆ ಕ್ಯಾಚ್ ನೀಡಿದರು. ಬಳಿಕ ಬಂದ ನಿತೀಶ್ ರೆಡ್ಡಿ ಕೂಡ ಬೊಲ್ಯಾಂಡ್ನ 6ನೇ ಎಸೆತದಲ್ಲೇ ಸ್ಮಿತ್ಗೆ ಕ್ಯಾಚ್ ನೀಡಿ ಡಕ್ಔಟ್ ಆದ್ರು.
ಇನ್ನು ಜಡೇಜಾ 26 ರನ್ ಗಳಿಸಿದ್ರೆ ವಾಷಿಂಗ್ ಟನ್ ಸುಂದರ್ 14 ರನ್ ಬಾರಿಸಿದ್ರು. ಪ್ಲೇಯಿಂಗ್ 11ನಲ್ಲಿ ಚಾನ್ಸ್ ಪಡೆದಿದ್ದ ಪ್ರಸಿದ್ಧ್ ಕೃಷ್ಣ 3 ರನ್ಗಳಿಗೆ ಸುಸ್ತಾದ್ರು. ಬೌಲಿಂಗ್ನಲ್ಲೂ ಆಸಿಸ್ ಬ್ಯಾಟರ್ಸ್ ನ ಕಾಡುವ ಬುಮ್ರಾ 22 ರನ್ ಸಿಡಿಸಿ ಹೋರಾಡಿದ್ರು. ಸಿರಾಜ್ 3 ರನ್ ಬಾರಿಸಿದ್ರು. ಹೀಗೆ ಟೀಂ ಇಂಡಿಯಾ 185 ರನ್ ಕಲೆಹಾಕುವಷ್ಟ್ರಲ್ಲೇ ಆಲೌಟ್ ಆಯ್ತು. ಇನ್ನು ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾಗೂ ಆರಂಭದಲ್ಲೇ ಜಸ್ಪ್ರೀತ್ ಬುಮ್ರಾ ಆಘಾತ ನೀಡಿದ್ರು. ಉಸ್ಮಾನ್ ಖ್ವಾಜಾ 2 ರನ್ ಗಳಿಸಿ ಪೆವಿಲಿಯನ್ ಸೇರಿದ್ರು. ಒಟ್ನಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಕಂಪ್ಲೀಟ್ ಫ್ಲ್ಯಾಪ್ ಆಗ್ತಿದೆ. ಇವ್ರ ಪ್ರದರ್ಶನ ನೋಡ್ತಿದ್ರೆ ರೋಹಿತ್ ಶರ್ಮಾರನ್ನ ಮಾತ್ರ ಬೆಂಚ್ ಕಾಯಿಸೋದಲ್ಲ. ಇಡೀ ಟೀಂ ಚೇಂಜ್ ಮಾಡ್ಬೇಕಾ ಅನ್ನೋ ಪ್ರಶ್ನೆ ಹುಟ್ಕೊಂಡಿದೆ.