ಭಾರತದ ಬ್ಯಾಟಿಂಗ್ ಅಟ್ಟರ್ ಫ್ಲ್ಯಾಪ್! – ಇಡೀ ಟೀಂ ಚೇಂಜ್ ಮಾಡ್ಬೇಕಾ?

ಭಾರತದ ಬ್ಯಾಟಿಂಗ್ ಅಟ್ಟರ್ ಫ್ಲ್ಯಾಪ್! – ಇಡೀ ಟೀಂ ಚೇಂಜ್ ಮಾಡ್ಬೇಕಾ?

ಅಂತೂ ಇಂತೂ ಟೀಂ ಇಂಡಿಯಾ ಮ್ಯಾನೇಜ್​ಮೆಂಟ್ ಸಿಡ್ನಿ ಪಂದ್ಯಕ್ಕೂ ಮುನ್ನವೇ ಮೇಜರ್ ಡಿಸಿಷನ್ ತಗೊಂಡಿದೆ. ಕ್ಯಾಪ್ಟನ್, ಪ್ಲೇಯರ್ ಆಗಿ ಫೇಲ್ಯೂರ್ ಆಗಿದ್ದ ರೋಹಿತ್ ಶರ್ಮಾಗೆ ಪ್ಲೇಯಿಂಗ್ 11ನಿಂದಲೇ ಗೇಟ್ ಪಾಸ್ ನೀಡಿದೆ. ಜಸ್ಪ್ರೀತ್ ಬುಮ್ರಾ ಕ್ಯಾಪ್ಟನ್ಸಿಯಲ್ಲಿ ಕಣಕ್ಕಿಳಿದ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ತು. ಬಟ್ ಒನ್ಸ್ ಅಗೇನ್ ಅದೇ ಡಿಸಪಾಯಿಂಟ್​ಮೆಂಟ್. ಭಾರತದ ಬ್ಯಾಟಿಂಗ್ ಲೈನಪ್ ಮತ್ತೊಮ್ಮೆ ಅಟ್ಟರ್ ಫ್ಲ್ಯಾಪ್ ಆಗಿದ್ದು, ಪೆವಿಲಿಯನ್ ಪರೇಡ್ ನಡೆಸಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ಆಟಗಾರರು ಮಾಡಿಕೊಂಡಂತ ಎಡವಟ್ಟುಗಳ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ದತ್ತ ಈಸ್‌ ಬ್ಯಾಕ್‌.. ಶ್ರೀರಸ್ತು ಶುಭಮಸ್ತುಗೆ ಬಂತು ಗತ್ತು – 3 ತಿಂಗಳು ನಾಪತ್ತೆಯಾಗಿದ್ದೇಕೆ?

ಅದೇನು ಆಸ್ಟ್ರೇಲಿಯಾದವ್ರು ಬೌಲಿಂಗ್ ಚೆನ್ನಾಗಿ ಮಾಡ್ತಿದ್ದಾರೋ ಅಥವಾ ನಮ್ಮ ಬ್ಯಾಟರ್ಸ್ ಆಡೋದನ್ನ ಮರೆತಿದ್ದಾರೋ ಗೊತ್ತಿಲ್ಲ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಮ್ಯಾಚ್​ಗಳನ್ನ ನೋಡ್ತಾ ಇದ್ರೆ ತುಂಬಾ ಜನ್ರಿಗೆ ಈ ಡೌಟ್ ಅಂತೂ ಬಂದಿರುತ್ತೆ. ಒಬೊಬ್ಬ ಬೌಲರ್ ಬಂದಾಗ್ಲೂ ಥರಗೆಲೆಗಳ ಥರ ನಮ್ಮವ್ರ ವಿಕೆಟ್ ಉದ್ರೋಗ್ತಿದೆ. ಆಸ್ಟ್ರೇಲಿಯಾದ ಬೌಲರ್ಸ್ ಹೊಡೆಯುವಷ್ಟು ರನ್​ಗಳನ್ನೂ ಕೂಡ ನಮ್ಮ ಟಾಪ್ ಆರ್ಡರ್ ಬ್ಯಾಟರ್ಸ್ ಸ್ಕೋರ್ ಮಾಡೋಕೆ ಆಗ್ತಿಲ್ಲ. ಬೇಡದೇ ಇರೋ ಶಾಟ್​ಗಳನ್ನ ಆಡೋಕೆ ಹೋಗಿ ಈಸಿಯಾಗಿ ಔಟಾಗ್ತಿದ್ದಾರೆ. ಅದ್ರಲ್ಲೂ ವಿರಾಟ್ ಕೊಹ್ಲಿಯಂತೂ ಕಳೆದ 6 ಇನ್ನಿಂಗ್ಸ್ ಗಳಲ್ಲಿ ಸೇಮ್ ಟು ಸೇಮ್ ಒಂದೇ ಥರ ವಿಕೆಟ್ ಕೊಟ್ಟಿದ್ದಾರೆ.

ರೋಹಿತ್ & ಆಕಾಶ್ ಡ್ರಾಪ್.. ಗಿಲ್ & ಕೃಷ್ಣ ಎಂಟ್ರಿ!

ಸಿಡ್ನಿಯಲ್ಲಿ ಆರಂಭವಾಗಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಲಾಸ್ಟ್ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾರನ್ನ ಕೂಬಿಡಲಾಗಿದೆ. ರೋಹಿತ್ ಬದಲಿಗೆ ಶುಭ್‌ಮನ್ ಗಿಲ್ ಪ್ಲೇಯಿಂಗ್ ಇಲೆವೆನ್ನಿನಲ್ಲಿದ್ದಾರೆ ಮತ್ತು ಜಸ್ಪ್ರೀತ್ ಬುಮ್ರಾ ತಂಡದ ನಾಯಕತ್ವ ವಹಿಸಿದ್ದಾರೆ. ಆಕಾಶ್ ದೀಪ್ ಬದಲಿಗೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರಿಗೆ ಅವಕಾಶ ದೊರೆತಿದೆ. ಸೋ ಬುಮ್ರಾ ಕ್ಯಾಪ್ಟನ್ಸಿಯಲ್ಲಿ ಟೀಂ ಗೆಲ್ಲಬಹುದು ಅನ್ನೋ ನಿರೀಕ್ಷೆ ಇಟ್ಟುಕೊಳ್ಳುವಾಗ್ಲೇ ಟೀಂ ಇಂಡಿಯಾ ಬ್ಯಾಟರ್ಸ್ ಮತ್ತೆ ಫೇಲ್ಯೂರ್ ಅನುಭವಿಸಿದ್ದಾರೆ. ಓಪನರ್ ಯಶಸ್ವಿ ಜೈಸ್ವಾಲ್ ರಿಂದ ಹಿಡಿದು ಆಲ್ ರೌಂಡರ್ಸ್ ವರೆಗೂ ಯಾರೊಬ್ಬರೂ ಕ್ರೀಸ್ ಕಚ್ಚಿ ನಿಂತು ಆಡುವ ಯತ್ನವನ್ನೇ ಮಾಡ್ಲಿಲ್ಲ.

ತಂಡಕ್ಕೆ ನೆರವಾಗದ ಟಾಪ್ 3 ಬ್ಯಾಟರ್ಸ್!

ರೋಹಿತ್ ಶರ್ಮಾ ತಂಡದಲ್ಲಿ ಇಲ್ಲದ ಕಾರಣ ಯಶಸ್ವಿ ಜೈಸ್ವಾಲ್ ಜೊತೆ ಕೆಎಲ್ ರಾಹುಲ್ ಓಪನರ್ ಆಗಿ ಕಣಕ್ಕಿಳಿದಿದ್ರು. ಬಟ್ ರಾಹುಲ್ ಗೆ ಇವತ್ತಿನ ಪಂದ್ಯದಲ್ಲೂ ಆಡೋಕೆ ಆಗ್ಲಿಲ್ಲ. ಇದಕ್ಕೆ ಒನ್ ಆಫ್ ದಿ ರೀಸನ್ ಮ್ಯಾನೇಜ್​ಮೆಂಟ್ ನ ಫೂಲಿಶ್​ನೆಸ್. ಮೊದಲ ಮೂರು ಪಂದ್ಯಗಳಲ್ಲಿ ಓಪನರ್ ಆಗಿ ನಾಲ್ಕನೇ ಪಂದ್ಯದಲ್ಲಿ 3ನೇ ಸ್ಲಾಟ್​ನಲ್ಲಿ ಕಣಕ್ಕಿಳಿಸಿದ್ರು. ಇದೀಗ 5ನೇ ಪಂದ್ಯಕ್ಕೆ ಮತ್ತೆ ಓಪನರ್ ಆಗಿ ಇಳಿಸಿದ್ದು ರಾಹುಲ್​ಗೆ ಹಿನ್ನಡೆಯಾಯ್ತು. ಇದೇ ಕಾರಣಕ್ಕೋ ಏನೋ ಕೇವಲ 4 ರನ್ ಗಳಿಸಿ ಅವರು ಪೆವಿಲಿಯನ್​ ಹಾದಿ ಹಿಡಿದರು. ಸ್ಟಾರ್ಕ್ ಎಸೆತದಲ್ಲಿ ಸ್ಯಾಮ್​ಗೆ ಕ್ಯಾಚ್ ಕೊಟ್ಟು ಹೋದ್ರು. ಇನ್ನು ನಾಲ್ಕನೇ ಟೆಸ್ಟ್‌ನಲ್ಲಿ ಭರ್ಜರಿ ಬ್ಯಾಟ್​ ಮಾಡಿದ್ದ ಯಶಸ್ವಿ ಜೈಸ್ವಾಲ್ ಕೂಡ ಈಸಿಯಾಗಿ ಔಟಾದ್ರು. ಬೋಲ್ಯಾಂಡ್ ಬೌಲಿಂಗ್‌ನಲ್ಲಿ ವೆಬ್‌ಸ್ಟರ್‌ಗೆ ಕ್ಯಾಚಿತ್ತರು. ಇತ್ತ  ರೋಹಿತ್ ಶರ್ಮಾ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ಶುಭಮನ್ ಗಿಲ್ ಕೂಡ ನಿರಾಸೆ ಮೂಡಿಸಿದರು. 64 ಎಸೆತಗಳಲ್ಲಿ 20 ರನ್ ಗಳಿಸಿ ಕ್ಯಾಚ್ ಕೊಟ್ರು.

Shwetha M

Leave a Reply

Your email address will not be published. Required fields are marked *