ದತ್ತ ಈಸ್ ಬ್ಯಾಕ್.. ಶ್ರೀರಸ್ತು ಶುಭಮಸ್ತುಗೆ ಬಂತು ಗತ್ತು – 3 ತಿಂಗಳು ನಾಪತ್ತೆಯಾಗಿದ್ದೇಕೆ?
ಶ್ರೀರಸ್ತು ಶುಭಮಸ್ತು ಸೀರಿಯಲ್ ಸದ್ಯ ರೋಚಕ ಘಟ್ಟ ತಲುಪಿದೆ. ತುಳಸಿ ಮಾಧವನ ಮಕ್ಕಳು ಒಂದಾಗಿದ್ದಾರೆ. ಅವರಿಬ್ಬರನ್ನ ಅಪ್ಪ ಅಮ್ಮ ಅಂತಾ ಒಪ್ಪಿಕೊಂಡಿದ್ದಾರೆ. ಹ್ಯಾಪಿ ಎಂಡಿಂಗ್ ಹತ್ರ ಬಂತಲ್ಲ.. ಇನ್ನೇನು ಕೆಲವೇ ದಿನಗಳಲ್ಲಿ ಸೀರಿಯಲ್ ಮುಗಿಯುತ್ತೆ ಅಂತಾ ವೀಕ್ಷಕರು ಲೆಕ್ಕಾಚಾರ ಹಾಕಿಕೊಂಡಿದ್ರು.. ಸೀರಿಯಲ್ ಮುಗಿಯುತ್ತೆ ಅಂತಾ ಅಂದ್ಕೊಂಡಿದ್ದ ವೀಕ್ಷಕರಿಗೆ ಡೈರೆಕ್ಟರ್ ಚಮಕ್ ಕೊಟ್ಟಿದ್ದಾರೆ.. ಇದು ಅಂತ್ಯ ಅಲ್ಲ ಆರಂಭ.. ಅಭಿ ಪಿಚ್ಚರ್ ಬಾಕಿಹೇ ಅಂತಾ ಸೀರಿಯಲ್ ಗೆ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ.. ತೀರ್ಥಯಾತ್ರೆಗೆ ಹೋಗಿದ್ದ ದತ್ತ ತಾತನ ಎಂಟ್ರಿಯಾಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಮುತ್ತಿನ ಟಾಸ್ಕ್ – ಕಿಸ್ಸಿಂಗ್ ವೇಳೆ ಫ್ರಸ್ಟ್ರೇಟ್ ಆದ ಧನರಾಜ್
ಶ್ರೀರಸ್ತು ಶುಭಮಸ್ತು ಸೀರಿಯಲ್ ನ ಅತಿ ಮುಖ್ಯವಾದ ಪಾತ್ರಗಳಲ್ಲಿ ದತ್ತ ತಾತನ ಪಾತ್ರ ಕೂಡ. ತುಳಸಿಗೆ ಒಳ್ಳೆಯ ಮಾವನಾಗಿ, ಸ್ವಲ್ಪ ಕಠಿಣ ಎನಿಸಿದರೂ ಯಾವಾಗ್ಲೂ ಎಲ್ಲರಿಗೂ ಒಳ್ಳೆಯದನ್ನೆ ಬಯಸುವ ದತ್ತ ತಾತ ಅಂದ್ರೆ ವೀಕ್ಷಕರಿಗೂ ಅಚ್ಚುಮೆಚ್ಚು. ತುಳಸಿ, ಮದುವೆಯಿಂದ ಹಿಡಿದು, ಎಲ್ಲರ ಜೀವನ ಸರಿ ಮಾಡುವವರೆಗೆ ಎಲ್ಲದರಲ್ಲೂ ದತ್ತ ತಾತನದ್ದೇ ಮೇಲು ಗೈ. ಮಾತು ಒರಟಾದ್ರೂ ಚಿನ್ನದಂತಹ ಮನಸ್ಸು.. ಮನಸಿಗೆ ತೋಚಿದ್ದನ್ನ ಹೇಳೇ ಬಿಡುವ ದತ್ತ ತಾತನ ಡೈಲಾಗ್ಸ್‌ಗೆ ವೀಕ್ಷಕರು ಫುಲ್ ಫಿದಾ ಆಗಿದ್ದಾರೆ.. ಅಭಿಗೆ ಉತ್ತರಕುಮಾರ, ಅವಿಗೆ ಮುಂಗೋಪಿ, ಪೂರ್ಣಿಯನ್ನು ಗಿರ್ ಗಿಟ್ಲೆ, ಮೊಮ್ಮಗನನ್ನು ದಂಡಪಿಂಡ, ಸೊಸೆಗೆ ಸೋಗಲಾಡಿ ಎಂದು ಹೆಸರಿಟ್ಟಿದ್ದಾರೆ. ಇನ್ನು ಮೊಮ್ಮಗಳು ಓಡಿ ಹೋಗಿ ಮದುವೆಯಾದಳು ಎಂಬ ಕಾರಣಕ್ಕೆ ಅವಳನ್ನು ಓಡಿ ಹೋದವಳೇ ಎಂದೇ ಮಾತನಾಡಿಸುವ ತಾತನ ನಡವಳಿಕೆ ನಿಜ ಜೀವನದಲ್ಲಿ ಇರಿಟೇಟ್ ಆದರೂ, ಧಾರಾವಾಹಿಯಲ್ಲಿ ಎಲ್ಲರಿಗೂ ಇಷ್ಟವಾಗಿದೆ. ಆದ್ರೆ ವೀಕ್ಷಕರಿಗೆ ಅಚ್ಚುಮೆಚ್ಚಾಗಿದ್ದ ದತ್ತ ತಾತ ಏಕಾಏಕಿ ತಾನು ತೀರ್ಥಯಾತ್ರೆಗೆ ಹೊರಡೋದಾಗಿ ಹೇಳಿದ್ರು.. ಅದಾದ್ಮೇಲೆ ಸೀರಿಯಲ್ ನಲ್ಲಿ ಕಾಣಿಸಿಕೊಂಡಿರ್ಲಿಲ್ಲ.. ಬಳಿಕ ಏರ್‌ಪೋರ್ಟ್‌ನಲ್ಲಿ ದತ್ತ ತಾತ ಪಾತ್ರಧಾರಿ ವೆಂಕಟರಾವ್ ಕಾಣಿಸಿಕೊಂಡಿದ್ರು. ಈ ವೇಳೆ ಏರ್ ಇಂಡಿಯಾ ವಿಮಾನದ ಸಿಬ್ಬಂದಿಗಳು ಗೌರವ ಸಲ್ಲಿಸಿದ್ರು. ಆಗಲೇ ಗೊತ್ತಾಗಿದ್ದು ದತ್ತದಾತ ವಿದೇಶಕ್ಕೆ ತೆರಳುತ್ತಿದ್ದಾರೆ ಅಂತ..
ಹೌದು, ವೆಂಕಟರಾವ್ ಮಗ ಅಮೆರಿಕಾದಲ್ಲಿ ನೆಲೆಸಿದ್ದಾರೆ.. ಹೀಗಾಗಿ ದತ್ತತಾತ ಮಗ, ಮೊಮ್ಮಕ್ಕಳ ಜೊತೆ ಸಮಯ ಕಳಿಬೇಕು ಅಂತ ಅಮೆರಿಕಾಗೆ ಹೊಗಿದ್ರು.. ಕಳೆದ ಮೂರು ತಿಂಗಳಿನಿಂದ ಅಲ್ಲೇ ಇದ್ರು.. ಏಕಾಏಕಿ ದತ್ತ ತಾತ ತೀರ್ಥ ಯಾತ್ರೆಗೆ ಹೋಗೋದನ್ನ ಸೀರಿಯಲ್ ನಲ್ಲಿ ತೋರಿಸಿದ್ದನ ನೋಡಿ ವೆಂಕಟ್ ರಾವ್ ನಟನೆಗೆ ಗುಡ್‌ಬೈ ಹೇಳಿದ್ರಾ ಅನ್ನೋ ಅನುಮಾನ ಕಾಡತೊಡಗಿತ್ತು.. ಯಾಕಂದ್ರೆ ಮೊದಲಿನಿಂದಲೂ ದತ್ತ ತಾತನಿಗೆ ವಯಸ್ಸಾಯ್ತು ಇನ್ನು ಹೆಚ್ಚು ದಿನ ಆಕ್ಟಿಂಗ್ ಮಾಡೋದೆ ಇಲ್ಲ ಅಂತಾನೆ ಜನ ಮಾತಾಡಿಕೊಂಡಿದ್ರು.. ಆದ್ರೀಗ ಮೂರು ತಿಂಗಳಿನಿಂದ ಕಾಣಿಸಿಕೊಳ್ಳದ ದತ್ತ ತಾತ ಏಕಾಏಕಿ ಎಂಟ್ರಿ ಕೊಟ್ಟಿದ್ದಾರೆ.
ದತ್ತ ತಾತ ಈಗ ತುಳಸಿ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.. ಅಷ್ಟೇ ಅಲ್ಲ ಮುದ್ದಿನ ಸೊಸೆಗೆ ಕಾಟಕೊಡ್ತಿರೋ ಶಾರ್ವರಿಗೂ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.. ತುಳಸಿಯನ್ನ ಮಾಧವನ ಮಕ್ಕಳು ಅಮ್ಮ ಅಂತಾ ಒಪ್ಪಿಕೊಂಡಿದ್ದಾರೆ. ಆದ್ರೆ ಶಾರ್ವರಿಗೆ ಇದನ್ನ ಸಹಿಸಿಕೊಳ್ಳಲು ಆಗ್ತಿಲ್ಲ.. ಹೀಗಾಗಿ ಮನೆಯವರನ್ನೆಲ್ಲಾ ನಿನ್ನ ಮೇಲೆ ಎತ್ತಿಕಟ್ಲಾ ಎಂದ ಶಾರ್ವರಿಗೆ ತುಳಸಿ ಸರಿಯಾಗೇ ತಿರುಗೇಟು ಕೊಟ್ಟಿದ್ದಾಳೆ. ಭಯ ಅನ್ನೋದು ಬಾಯಲ್ಲಿ ಎಂತೆಂತಾ ಮಾತು ತರಿಸುತ್ತೆ ಅಂತಾ ಹೇಳಿದ್ದಾಳೆ.. ಇದಕ್ಕೆ ಸಿಟ್ಟಾದ ಶಾರ್ವರಿ ಮನೆಯವರು ನನ್ನ ಮಾತನ್ನ ನಂಬಿದಾಗ ನಿನ್ನ ಜೊತೆ ಯಾರು ಇರಲ್ಲ.. ಎಂದು ಹೇಳಿದಾಗ.. ದತ್ತ ಇದ್ದಾನೆ ಅಂತಾ ದತ್ತತಾತ ಸೂಪರ್ ಎಂಟ್ರಿ ಕೊಟ್ಟಿದ್ದಾರೆ. ನಿನ್ನ ಕುತಂತ್ರ ಏನಾದ್ರೂ ತೋರ್ಸಿದ್ರೆ ದತ್ತ ಸುಮ್ನಿರಲ್ಲ ಅಂತಾ ಖಡಕ್ ವಾರ್ನ್ ಮಾಡಿದ್ದಾರೆ.
ದತ್ತ ತಾತ ಸೀರಿಯಲ್ ಗೆ ಎಂಟ್ರಿ ಕೊಡ್ತಿದ್ದಂತೆ ಸೀರಿಯಲ್ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ದತ್ತ ಈಸ್ ಬ್ಯಾಕ್.. ವೆರಿ ವೆರಿ ಹ್ಯಾಪಿ.. ದತ್ತ ಬಂದರೆಂದರೆ ಶ್ರೀರಸ್ತು ಶುಭಮಸ್ತುವಿಗೆ ಮತ್ತೆ ಕಳೆ ಬರುತ್ತದೆ ಎಂದೇ ಅರ್ಥ. ಖುಷಿ ಆಯ್ತು. ಕತೆಯನ್ನು ರಬ್ಬರ್ ತರ ಎಳೆದು, ತೌಡು ಕುಟ್ಟಿ ಕುಟ್ಟಿ…ವೀಕ್ಷಕರಿಗೆ ಜಿಗುಪ್ಸೆ ಹುಟ್ಟುವಂತೆ ಮಾಡುವ ಬದಲು, ಶಾರ್ವರಿಯನ್ನು ಜೈಲಿಗೆ ಹಾಕಲಿ. ತುಳಸಿ, ಪೂರ್ಣಿ, ಸಿರಿ, ದೀಪಿಕಾ ಎಲ್ಲರಿಗೂ ಮಕ್ಕಳಾಗಲಿ. ಕೊನೆಗೊಂದು ಬಾರಿ ಮಾಧವನ ಒಗ್ಗರಣೆ ಡಬ್ಬಿ ಕಾರ್ಯಕ್ರಮ, ಮಾಧವ ಕೆಫೆ ಮತ್ತು ಬಜಾಜ್ ಸ್ಕೂಟರ್ ಸವಾರಿ ತೋರಿಸಿ ಬಿಡಲಿ ಅಂತಾ ಹೇಳಿದ್ದಾರೆ.