ಬಿಗ್ ಬಾಸ್ ಮನೆಯಲ್ಲಿ ಮುತ್ತಿನ ಟಾಸ್ಕ್ – ಕಿಸ್ಸಿಂಗ್ ವೇಳೆ ಫ್ರಸ್ಟ್ರೇಟ್ ಆದ ಧನರಾಜ್
ಬಿಗ್ ಬಾಸ್ ಮನೆಯಲ್ಲಿ ಕಳೆದ ಮೂರು ದಿನಗಳಿಂದ ಫ್ಯಾಮಿಲಿ ರೌಂಡ್ ನಡೆಯುತ್ತಿತ್ತು. ಸ್ಪರ್ಧಿಗಳು ಅವರ ಕುಟುಂಬದೊಂದಿಗೆ ಸಮಯ ಕಳೆದಿದ್ರು. ಇದೀಗ ದೊಡ್ಮನೆಯಲ್ಲಿ ಮತ್ತೆ ಟಾಸ್ಕ್ ಶುರುವಾಗಿದೆ. ಅದೂ ಕಿಸ್ಸಿಂಗ್ ಟಾಸ್ಕ್.. ಈ ವೇಳೆ ಧನರಾಜ್ ಫ್ರಸ್ಟ್ರೇಷನ್ ಅಂತಾ ಕೂಗಾಡಿದ್ದಾರೆ.
ಇದನ್ನೂ ಓದಿ: ಡಿಸಿಎಂ ಡಿಕೆಶಿ ವಿದೇಶದಲ್ಲಿರುವಾಗಲೇ ಆಪ್ತ ಸಚಿವರೊಂದಿಗೆ ಸಿಎಂ ಸಿದ್ಧರಾಮಯ್ಯ ಡಿನ್ನರ್ ಮೀಟಿಂಗ್!
ಬಿಗ್ ಬಾಸ್ ಮನೆಯಲ್ಲಿ ಈಗ ಕೇವಲ 9 ಮಂದಿ ಇದ್ದಾರೆ. ಇದರಲ್ಲಿ ಈ ವಾರ ಹೊರಗಡೆ ಬರುವವರು ಯಾರು ಎಂಬುದು ಕುತೂಹಲ ಇದೆ. ಇದರ ನಡುವೆ ಬಿಗ್ಬಾಸ್ ಮನೆಯಲ್ಲಿ ಕಿಸ್ ಕೊಡುವ ಟಾಸ್ಕ್ ಕೊಡಲಾಗಿದೆ. ಕ್ಯಾಪ್ಟನ್ ಆಗಿರುವ ಭವ್ಯ ಮಧ್ಯೆದಲ್ಲಿ ನಿಂತು ಟಾಸ್ಕ್ ಅನ್ನು ಗಮನಿಸುತ್ತಿದ್ದಾರೆ. ತ್ರಿವಿಕ್ರಮ್- ಚೈತ್ರಾ, ಗೌತಮಿ- ಧನರಾಜ್, ಮಂಜು- ಹನುಮಂತು ಹೀಗೆ ಇಬ್ಬಿಬ್ಬರ ಟೀಮ್ ಮಾಡಲಾಗಿದೆ. ಮೂವರು ಕೋಲಿನಿಂದ ಲಿಫ್ಟ್ಸ್ಟಿಕ್ ಅನ್ನು ಚೈತ್ರಾ, ಧನರಾಜ್ ಹಾಗೂ ಹನುಮಂತು ತುಟಿಗೆ ಹಚ್ಚಬೇಕು. ತಕ್ಷಣ ಈ ಮೂವರು ಓಡಿ ಹೋಗಿ ವೈಟ್ ಬೋರ್ಡ್ ಮೇಲೆ ಕಿಸ್ ಕೊಡಬೇಕು. ಯಾರು ಹೆಚ್ಚು ಕಿಸ್ ಕೊಡುತ್ತಾರೋ ಅವರೇ ಇದರಲ್ಲಿ ಗೆಲುವು ಸಾಧಿಸುವವರು ಎಂದು ಹೇಳಬಹುದು.
ಈ ರೀತಿ ಟಾಸ್ಕ್ ಆಡುವಾಗ ಧನರಾಜ್ಗೆ ರಜತ್ ಕರೆಕ್ಟ್ ಆಗಿ ಕಿಸ್ಗಳು ಬರುತ್ತಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಸಖತ್ ಕಾಮಿಡಿಯಾಗಿ ಉತ್ತರಿಸಿದ ಧನು, ಮೂರು ತಿಂಗಳು ಆಯಿತಾಲ್ಲ, ಕರೆಕ್ಟ್ ಆಗಿ ಬರುತ್ತಿಲ್ಲ ಎಂದಿದ್ದಾರೆ. ಇದಾದ ಮೇಲೆ ಮುತ್ತು ಕೊಡುವುದಿಲ್ವಾ ನನಗೆ, ನೀವು ಕೊಡುತ್ತೀರಾ ಎಂದು ಧನು, ಚೈತ್ರಾರನ್ನ ಓಡಿಸಿಕೊಂಡು ಹೋಗಿದ್ದಾರೆ. ಈ ವೇಳೆ ಚೈತ್ರಾ ತಂಗಿ ಸೇರಿ ಎಲ್ಲ ಸ್ಪರ್ಧಿಗಳು ಕೂಡ ಕುಳಿತಲ್ಲೇ ನಕ್ಕಿದ್ದಾರೆ.
ಇನ್ನು ಈ ಟಾಸ್ಕ್ನಲ್ಲಿ ಧನರಾಜ್, ಹನುಂತು ಗೆಲುವು ಸಾಧಿಸಿರಬಹುದೆಂದು ವಿಡಿಯೋದಲ್ಲಿ ಕಾಣುತ್ತೆ. ಈ ವೇಳೆ ಧನರಾಜ್, ಹನುಮಂತುನ ಹಿಡಿದು ಕಿಸ್ ಕೊಡಲು ಹೋಗಿ ತಬ್ಬಿಕೊಂಡಿದ್ದಾರೆ. ಕಿಸ್ ಕೊಡುವ ಟಾಸ್ಕ್ನಲ್ಲಿ ರಜತ್ ಅವರು ಎಲ್ಲ ಸ್ಪರ್ಧಿಗಳನ್ನು ಕಿಚಾಯಿಸಿ, ತಮಾಷೆ ಮಾಡಿದ್ದಾರೆ. ಚೈತ್ರಾ, ಧನು, ಹನುಮಂತು ಅವರ ತಂದೆ, ತಾಯಿರಿಗೂ ಕೂಡ ರಜತ್ ಕಾಮಿಡಿ ಮಾಡಿದ್ದಾರೆ. ಅಷ್ಟೇ ಅಲ್ಲ ಧನು ಫ್ರಸ್ಟ್ರೇಷನ್ ಅಂತಾ ಕೂಗಾಡಿದ್ದಾರೆ.