ಕಾಮೆಂಟರಿ ಮಾಡುತ್ತಿದ್ದಾಗ ಕಾಣಿಸಿಕೊಂಡ ಎದೆನೋವು , ಆಸ್ಪತ್ರೆ ಸೇರಿದ ರಿಕಿ ಪಾಂಟಿಂಗ್
ಆಸ್ಟ್ರೇಲಿಯಾದ ಮಾಜಿ ನಾಯಕ ಹಾಗೂ ಬ್ಯಾಟ್ಸ್‌ಮನ್ ರಿಕಿ ಪಾಂಟಿಂಗ್ ಗೆ ಕಾಮೆಂಟರಿ ಮಾಡುವ ವೇಳೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಪರ್ತ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದ ವೇಳೆ ರಿಕಿ ಪಾಂಟಿಂಗ್ ಕಾಮೆಂಟರಿ ಮಾಡುತ್ತಿದ್ದರು. ಆಸ್ಪತ್ರೆ ಮೂಲಗಳಿಂದ ಮಾಹಿತಿ ದೊರಕಿದ್ದು, ಪಾಂಟಿಂಗ್ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಏಕದಿನ ಸರಣಿಗಾಗಿ ಢಾಕಾದಲ್ಲಿ ಟೀಮ್ ಇಂಡಿಯಾ ಆಟಗಾರರಿಂದ ಅಭ್ಯಾಸ
ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಪರ್ತ್ ಟೆಸ್ಟ್‌ನಲ್ಲಿ ರಿಕಿ ಪಾಂಟಿಂಗ್ ಕಾಮೆಂಟರಿ ಮಾಡುತ್ತಿದ್ದರು. ಪಂದ್ಯದ ಊಟದ ವಿರಾಮದ ವೇಳೆ ಪಾಂಟಿಂಗ್ಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಪಾಂಟಿಂಗ್, ಎದೆ ನೋವು ಬರುತ್ತಿದೆ ಆಸ್ಪತ್ರೆಗೆ ಹೋಗಬೇಕೆಂದು ಜೊತೆಯಲ್ಲಿ ಕಾಮೆಂಟರಿ ಮಾಡುತ್ತಿದ್ದವರ ಬಳಿ ಹೇಳಿಕೊಂಡಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ವೈದ್ಯಕೀಯ ತಂಡ ರಿಕಿ ಪಾಂಟಿಂಗ್ರನ್ನು ಆಸ್ಪತ್ರೆಗೆ ಕರೆದೊಯ್ಯುವ ಸಿದ್ಧತೆ ಮಾಡಿದೆ. ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಪಾಂಟಿಂಗ್ ಅನಾರೋಗ್ಯದ ಬಗ್ಗೆ ಮಾಹಿತಿ ನೀಡಿದ ವೈದ್ಯರು, ಪಾಂಟಿಂಗ್ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.