ಬಿಗ್ ಬಾಸ್‌ನ ರಾಧಾ – ಕೃಷ್ಣ ತ್ರಿವ್ಯಾ! – ಮನದಾಳ ಮಾತು ಹಂಚಿಕೊಂಡ ತ್ರಿವಿಕ್ರಮ್ ತಾಯಿ!
ಬಿಗ್ ಬಾಸ್ ಕನ್ನಡ ಸೀಸನ್ 11 ಕೊನೆಯ ಹಂತಕ್ಕೆ ಬಂದಿದೆ. ಇದೀಗ ಹೊಸ ವರ್ಷದ ಹೊಸ್ತಿಲಲ್ಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸರ್‌ಪ್ರೈಸ್ ನೀಡಿದ್ದಾರೆ. ಇದೀಗ ಇಬ್ಬರು ಸ್ಪರ್ಧಿಗಳ ತಾಯಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ISRO – ಸ್ಪಾಡೆಕ್ಸ್ ಮಿಷನ್ ಯಶಸ್ವಿ ಉಡಾವಣೆ
ಬಿಗ್ ಬಾಸ್ ಸ್ಪರ್ಧಿಗಳಿಗೆ ವಿಶೇಷ ಟಾಸ್ಟ್ ನೀಡಿದ್ರು.. ಈ ಟಾಸ್ಕ್ ಅನ್ನು 10 ನಿಮಿಷದಲ್ಲಿ ಪೂರ್ಣಗೊಳಿಸಿದ್ರೆ ಅಮ್ಮನನ್ನು ಭೇಟಿ ಮಾಡಬಹುದು ಎಂದು ಬಿಗ್ ಬಾಸ್ ಹೇಳಿದ್ದರು. ಅದರಂತೆ ಮನೆಯಲ್ಲಿ ತ್ರಿವಿಕ್ರಮ್ ಗೆ, ಪಜಲ್ (ಒಂದು ಚಿತ್ರವನ್ನು ಜೋಡಿಸುವುದು) ಟಾಸ್ಕ್ ನೀಡಿದ್ರು. ಟಾಸ್ಕ್ ಶುರುವಾಗುತ್ತಿದ್ದಂತೆ ಮೇನ್ ಡೋರ್ ಓಪನ್ ಆಗಿದೆ. ಮುಖ್ಯ ಬಾಗಿಲಿನಿಂದ ತ್ರಿವಿಕ್ರಮ್ ಅವರ ತಾಯಿ ಮನೆಯೊಳಗೆ ಬಂದಿದ್ದಾರೆ. ಆದ್ರೆ 10 ನಿಮಿಷದಲ್ಲಿ ತ್ರಿವಿಕ್ರಮ್ ಪಜಲ್ ಜೋಡಿಸುವಲ್ಲಿ ವಿಫಲವಾಗಿದ್ದಾರೆ. ಹೀಗಾಗಿ ತಾಯಿಯ ಬಳಿ ಮಾತನಾಡಲು ಆಗದೇ ಕಣ್ಣೀರು ಹಾಕಿದ್ದಾರೆ.
ಇನ್ನು ದೊಡ್ಮನೆಯಲ್ಲಿ ತ್ರಿವಿಕ್ರಮ್ ತಾಯಿಯ ಆಶೀರ್ವಾದವನ್ನು ಎಲ್ಲ ಸ್ಪರ್ಧಿಗಳು ಪಡೆದರು. ಭವ್ಯ, ತ್ರಿವಿಕ್ರಮ್ ಅವರ ತಾಯಿಯನ್ನು ತಬ್ಬಿಕೊಂಡು ಸಂತಸ ಪಟ್ಟರು. ಬಳಿಕ ಸೋಫಾ ಮೇಲೆ ಕುಳಿತು ಇಬ್ಬರು ಮಾತನಾಡುವಾಗ, ನನ್ನ ಮಗನ ತಾಯಿಯಾಗಿ, ಫ್ರೆಂಡ್ ಆಗಿ ಎಲ್ಲ ತರದಲ್ಲೂ ಇಬ್ಬರು ಚೆನ್ನಾಗಿದ್ದೀರಿ. ರಾಧಕೃಷ್ಣನ ಥರ ಇದೀರಿ ಎಂದು ತ್ರಿವಿಕ್ರಮ್ ತಾಯಿ, ಭವ್ಯಗೆ ಹೇಳಿದ್ದಾರೆ. ಇದರಿಂದ ಭವ್ಯ ಫುಲ್ ಖುಷಿಯಾಗಿದ್ದಾರೆ.
ಇನ್ನು ಅಮ್ಮ ಮನೆಯಿಂದ ಹೊರ ಹೋಗುವಾಗ ತ್ರಿವಿಕ್ರಮ್ ಅವರು ಇನ್ನು 10 ನಿಮಿಷ ಅನುಮತಿ ಕೊಡುವಂತೆ ಮನವಿ ಮಾಡಿದರು. ಆದರೆ ಇದಕ್ಕೆ ಬಿಗ್ ಬಾಸ್ ಅನುಮತಿಸದೇ ಇದ್ದಿದ್ದರಿಂದ ತಾಯಿ ಮನೆಯಿಂದ ಹೊರ ಹೋಗಿದ್ದಾರೆ. ಆಗ ತ್ರಿವಿಕ್ರಮ್ ಕಣ್ಣೀರು ಹಾಕಿದ್ದಾರೆ. ಇದು ಅಲ್ಲದೇ ಬಿಗ್ ಬಾಸ್ ಮನೆಗೆ ಭವ್ಯ ಅವರ ತಾಯಿ ಕೂಡ ಬಂದಿದ್ದರು.