ಗರ್ಭಿಣಿ ತುಳಸಿಗೆ ಹೊಟ್ಟೆ ಬಂದಿಲ್ವಾ? – ಪ್ರೆಗ್ನೆಂಟ್ ಡ್ರಾಮಾ ಬೇಕಿತ್ತಾ?
ಶ್ರೀರಸ್ತು ಶುಭಮಸ್ತು ಎಂಡ್?
ಶ್ರೀರಸ್ತು ಶುಭಮಸ್ತು ಸೀರಿಯಲ್.. ಕನ್ನಡ ಸೀರಿಯಲ್ ಗಳಲ್ಲಿ ಹೆಚ್ಚು ಸೌಂಡ್ ಮಾಡಿದ ಧಾರಾವಾಹಿ ಅಂದ್ರೆ ತಪ್ಪಾಗಲ್ಲ.. ವಿಭಿನ್ನ ಸ್ಟೋರಿ ಮೂಲಕ ತೆರೆಗೆ ಬಂದ ಈ ಸೀರಿಯಲ್ ವೀಕ್ಷಕರಿಗೆ ಅಚ್ಚುಮೆಚ್ಚಾಗಿತ್ತು.. ತುಳಸಿ ಮಾಧವನ ಪ್ರೀತಿಗೆ ಸೀರಿಯಲ್ ಪ್ರೇಮಿಗಳು ಫಿದಾ ಆಗಿದ್ರು.. ಆದ್ರೆ ಯಾವಾಗ ತುಳಸಿ ಗರ್ಭಿಣಿ ಅನ್ನೋ ಟ್ವಿಸ್ಟ್ ಸೀರಿಯಲ್ ನಲ್ಲಿ ತಂದ್ರೋ ಆವಾಗ ಸೀರಿಯಲ್ ವೀಕ್ಷಕರು ಕೆಂಡಾಮಂಡಲ ಆಗಿದ್ರು.. ಈ ಸೀರಿಯಲ್ ನಿಂದ ಸಮಾಜಕ್ಕೆ ಏನ್ ಸಂದೇಶ ಸಿಗ್ತಿದೆ ಅನ್ನೊ ಕಮೆಂಟ್ಸ್ ಕೂಡ ಬಂದಿತ್ತು.. ಆದ್ರೆ ವೀಕ್ಷಕರ ಪ್ರಶ್ನೆಗೆ ಡೈರೆಕ್ಟರ್ ಸೀರಿಯಲ್‌ನಲ್ಲೇ ಉತ್ತರ ಕೊಟ್ಟಿದ್ರು.. ಸದಾ ಸೈಲೆಂಟ್ ಆಗಿದ್ದ ತುಳಸಿ.. ಈಗ.. ಅದೂ ಗರ್ಭಿಣಿಯಾಗಿದ್ದಾಗಲೇ ಫೈಟರ್ ಆಗಿದ್ದಾಳೆ.. ತುಳಸಿ ಫೈಟಿಂಗ್ ಬಗ್ಗೆ ಈಗ ಭಾರಿ ಚರ್ಚೆಯಾಗ್ತಿದೆ.. ಅಷ್ಟೇ ಅಲ್ಲ.. ಶ್ರೀರಸ್ತು ಶುಭಮಸ್ತು ಸೀರಿಯಲ್ ಮುಗಿಯುತ್ತಾ ಅನ್ನೋ ಅನುಮಾನ ಕೂಡ ಶುರುವಾಗಿದೆ..
ಇದನ್ನೂ ಓದಿ: ಮನಮೋಹನ್ ಸಿಂಗ್ ಸ್ಮಾರಕ ನಿರ್ಮಾಣ – ಭೂಮಿ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ
ಶ್ರೀರಸ್ತು ಶುಭಮಸ್ತು ಸೀರಿಯಲ್ ಮಹಾ ತಿರುವು ಪಡೆದುಕೊಂಡಿದೆ. ಮನೆಯವರ ವಿರೋಧದ ನಡುವೆಯೂ ತುಳಸಿ ಹಾಗೂ ಮಾಧವ ಮದುವೆ ಆಗಿದ್ರು.. ತುಳಸಿ ಮನೆಗೆ ಕಾಲಿಡ್ತಿದ್ದಂತೆ ಮನೆಯವರ ಮನಸ್ಸು ಬದಲಾಗುತ್ತಾ ಬಂತು.. ಮಾಧವನ ಮುಖ ಕಂಡ್ರೆ ಕೆಂಡಕಾರ್ತಿದ್ದ ಮಕ್ಕಳು ಕೂಡ ಈಗ ಆತನನ್ನ ಅಪ್ಪ ಅಂತಾ ಒಪ್ಪಿಕೊಂಡಿದ್ದಾರೆ. ಇನ್ನು ಮಾಧವನ ಮನೆಗೆ ಸೊಸೆಯಾಗಿ ಬಂದ ಬಳಿಕ ತುಳಸಿ ಕೂಡ ಕಂಪ್ಲೀಟ್ ಚೇಂಜ್ ಆಗಿದ್ದಾಳೆ.. ತುಳಸಿ ಈಗ ಮೊದಲಿನ ತುಳಸಿಯಾಗಿ ಉಳಿದಿಲ್ಲ. ಆಕೆ ಇಂಗ್ಲಿಷ್ ಕಲಿತಿದ್ದಾಳೆ, ಕಾರ್ ಡ್ರೈವಿಂಗ್, ಡಾನ್ಸ್ ಎಲ್ಲವನ್ನೂ ಕಲಿತಿದ್ದಾಳೆ. ಅಷ್ಟೇ ಅಲ್ಲ.. ಅಜ್ಜಿ ಅಂತಾ ಕರೆಸಿಕೊಳ್ಳೋ ವಯಸ್ಸಲ್ಲಿ ಆಕೆ ಗರ್ಭಿಣಿಯಾಗಿದ್ದಾಳೆ.. ಸೀರಿಯಲ್ ನಲ್ಲಿ ಪ್ರೆಗ್ನೆಂಟ್ ಟ್ವಿಸ್ಟ್ ನೋಡಿ ವೀಕ್ಷಕರು ಫುಲ್ ಶಾಕ್ ಆಗಿದ್ರು.. ಅಷ್ಟೇ ಅಲ್ಲ ಈ ಸೀರಿಯಲ್ ನ ಇಲ್ಲಿಗೇ ನಿಲ್ಲಿಸಿ ಬಿಡಿ.. ಈ ಸೀರಿಯಲ್ ನಲ್ಲಿ ಸಮಾಜಕ್ಕೆ ಏನು ಸಂದೇಶ ನೀಡ್ತಿದ್ದೀರಾ ಅಂತಾ ಪ್ರಶ್ನೆ ಮಾಡಿದ್ರು.. ಕೆಟ್ಟ ಕೆಟ್ಟ ಪದಗಳನ್ನ ಬಳಸಿ ವೀಕ್ಷಕರು ಕಮೆಂಟ್ ಹಾಕಿದ್ರು.. ಆದ್ರೆ ಡೈರೆಕ್ಟರ್ ವೀಕ್ಷಕರ ಪ್ರಶ್ನೆಗಳಿಗೆ ಸೀರಿಯಲ್ ನನ್ನೇ ಉತ್ತರ ನೀಡಿದ್ರು.. ಈ ವಯಸ್ಸಲ್ಲಿ ಮಗು ಮಾಡಿಕೊಂಡ್ರೆ ಏನೆಲ್ಲಾ ತೊಂದರೆ ಆಗುತ್ತೆ.. ಅನ್ನೋದನ್ನ ವಿವರಿಸಿ ಹೇಳಿದ್ರು.. ಈ ವೇಳೆ ತುಳಸಿ ತನ್ನ ಜೀವಕ್ಕೆ ಅಪಾಯ ಆದ್ರೂ ಪರವಾಗಿಲ್ಲ ತಾನು ಮಗು ಹೆರುತ್ತೇನೆ.. ಮಗುವನ್ನ ಪೂರ್ಣಿ ಮಡಿಲಿಗೆ ಹಾಕೋದಾಗಿ ಹೇಳಿದ್ಲು.. ಇಷ್ಟೆಲ್ಲಾ ಡ್ರಾಮ ಆಗಿ ಕೆಲವು ತಿಂಗಳುಗಳೇ ಕಳೆದಿದೆ.. ಸೀಮಂತ ಶಾಸ್ತ್ರ ಕೂಡ ಮಾಡಿದ್ದಾರೆ.. ಆದ್ರೆ ಮಗು ಹೆರೋ ಟೈಮ್ ಹತ್ರ ಬಂದ್ರೂ ತುಳಸಿ ಹೊಟ್ಟೆ ಮಾತ್ರ ಮುಂದೆ ಬಂದಿಲ್ಲ.. ಅಷ್ಟೇ ತಾನು ಗರ್ಭಿಣಿ ಅನ್ನೋದನ್ನೇ ಮರೆತು ಫೈಟ್ ಮಾಡಿದ್ದಾಳೆ..
ಹೌದು.. ಅಭಿ ಮೇಲೆ ರೌಡಿಯ ಅಟ್ಯಾಕ್ ಆಗುತ್ತೆ.. ಈ ವೇಳೆ ಅಭಿಯ ರಕ್ಷಣೆಗೆ ತುಳಸಿ ರೆಬಲ್ ಎಂಟ್ರಿ ಕೊಟ್ಟಿದ್ದಾಳೆ.. ಮಗನನ್ನ ಉಳಿಸಲು ರೌಡಿಗಳ ಜೊತೆ ಫುಲ್ ಫೈಟ್ ಮಾಡಿದ್ದಾಳೆ.. ಆದ್ರೆ ಮಗನನ್ನ ಉಳಿಸಿಕೊಳ್ಳುವ ಭರದಲ್ಲಿ ತನ್ನ ಹೊಟ್ಟೆಯಲ್ಲಿ ಮಗು ಇದೆ ಅನ್ನೋದನ್ನೇ ಆಕೆ ಮರೆತಿದ್ದಾಳೆ.. ಇದೀಗ ತುಳಸಿ ಫೈಟ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಆಗ್ತಿದೆ. ತುಳಸಿ ಗರ್ಭಿಣಿ ಅನ್ನೋದನ್ನ ಡೈರೆಕ್ಟರ್ ಮರೆತು ಬಿಟ್ಟಿದ್ದಾರೆ.. ತುಳಸಿ ನಾ ಹೊಗಳುವ ಸಲುವಾಗಿ ತಪ್ಪು ಡೈರೆಕ್ಷನ್ ಮಾಡಬಾರದು ಎಂದು ಕೆಲವರು ಹೇಳಿದ್ದಾರೆ.. ಇನ್ನೂ ಕೆಲವರು ಗರ್ಭಿಣಿಯರು ಆಕ್ಷನ್ ಹೀರೋಯಿನ್‌ಗಳಾದ್ರೆ ಹೇಗೆ? ಬೇರೆ ಮಹಿಳೆಯರು ಈ ರೀತಿ ಮಾಡಿದರೆ ತೊಂದರೆ ಆಗಲ್ವಾ? ಜನಗಳಿಗೆ ಒಳ್ಳೆಯ ಸಂದೇಶ ಕೊಡಿ.. ಮಾಹಿತಿ ಇರೋ ದೃಶ್ಯ ಚಿತ್ರಿಕರಿಸಿ ಎಂದು ಹೇಳಿದ್ದಾರೆ. ಮತ್ತೆ ಕೆಲವರು ಮಗು ಹೊಟ್ಟೆಯಲ್ಲಿ ಇದ್ರೂ, ಇನ್ನೊಬ್ಬ ಮಗುವಿನ ವೇದನೆಯಿಂದಾಗಿ ಆಕೆಗೆ ಹೊಟ್ಟೆಯಲ್ಲಿ ಮಗು ಇರೋದು ನೆನಪಾಗಿಲ್ಲ ಅಷ್ಟೇ.. ಅದ್ಕೆ ತಾನೇ ತಾಯೀ ದೇವರ ಸ್ವರೂಪ ಅನ್ನೋದು ಅಂತಾ ಕಮೆಂಟ್ ಮಾಡಿದ್ದಾರೆ.
ಇನ್ನು ಶ್ರೀರಸ್ತು ಶುಭಮಸ್ತು ಸೀರಿಯಲ್ ಮುಗಿಯುತ್ತಾ ಅನ್ನೋ ಅನುಮಾನ ಕೂಡ ವೀಕ್ಷಕರನ್ನ ಕಾಡುತ್ತಿದೆ.. ಯಾಕಂದ್ರೆ ಸೀರಿಯಲ್ ನಲ್ಲಿ ಶಾರ್ವರಿ ಕುತಂತ್ರ ತುಳಸಿಗೆ ಗೊತ್ತಾಗಿ ಆಕೆ ವಿರುದ್ಧ ಸಮರ ಸಾರುತ್ತಿದ್ದಾಳೆ.. ಮತ್ತೊಂದ್ಕಡೆ ಮಾಧವನ ಮಕ್ಕಳು ಆತನನ್ನ ಹಾಗೂ ತುಳಸಿಯನ್ನ ತಂದೆ ತಾಯಿ ಅಂತಾ ಒಪ್ಪಿಕೊಂಡಿದ್ದಾರೆ.. ಇನ್ನು ಸಂಧ್ಯಾ ಕೂಡ ಒಳ್ಳೆಯವಳಾಗಿದ್ದಾಳೆ.. ಸಮರ್ಥ್ ಗೆ ತುಳಸಿ ಮೇಲಿನ ಸಿಟ್ಟು ಹೋಗಿದೆ.. ಇದೀಗ ತುಳಸಿ ಮಗು ಹೆರುವುದೊಂದೇ ಬಾಕಿ.. ಹೀಗಾಗಿ ಆದಷ್ಟು ಬೇಗ ಸೀರಿಯಲ್ ಮುಕ್ತಾಯ ಆಗುತ್ತೆ ಅಂತಾ ಹೇಳಲಾಗ್ತಿದೆ..